ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಒಂದೆಡೆ ಕರುಳಿನ ಕುಡಿ... ಮತ್ತೊಂದೆಡೆ ಕರ್ತವ್ಯದ ಕೂಗು! ಈ ತಾಯಿಯ ವಿಡಿಯೊ ಫುಲ್‌ ವೈರಲ್‌

Balancing Act of Working Mothers: ಮಹಿಳೆಯೊಬ್ಬರು ಬೀದಿ ವ್ಯಾಪಾರ ಮಾಡುತ್ತಿರುವ ಹೃದಯಸ್ಪರ್ಶಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಮಹಿಳೆಯೊಬ್ಬರು ರೊಟ್ಟಿ ತಯಾರಿಸುತ್ತಾ ತನ್ನ ಮಗುವನ್ನು ನೋಡಿಕೊಂಡಿದ್ದಾರೆ. ಈ ವಿಡಿಯೊ ನೆಟ್ಟಿಗರ ಗಮನಸೆಳೆದಿದೆ.

ಭಾರೀ ವೈರಲಾಗ್ತಿದೆ ಈ ಹೃದಯಸ್ಪರ್ಶಿ ವಿಡಿಯೊ!

-

Priyanka P Priyanka P Sep 18, 2025 7:38 PM

ಹೈದರಾಬಾದ್: ಉದ್ಯೋಗ ಮಾಡುವ ತಾಯಂದಿರು ತಮ್ಮ ಮಕ್ಕಳ ಪಾಲನೆ ಮಾಡುತ್ತಾ, ಕೆಲಸ ಮಾಡುತ್ತಾ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಇಂತಹ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ (social media) ಆಗಾಗ ವೈರಲ್ ಆಗುತ್ತಿರುತ್ತವೆ. ದುಡಿಯುವ ಮಹಿಳೆಯರು ಎದುರಿಸುವ ಸವಾಲುಗಳು ಮತ್ತು ತ್ಯಾಗಗಳನ್ನು ಇಂತಹ ವಿಡಿಯೊಗಳು ಎತ್ತಿ ತೋರಿಸುತ್ತವೆ. ತಾಯಂದಿರ ಧೈರ್ಯ, ದೃಢನಿಶ್ಚಯ ಮತ್ತು ಸಾಮರ್ಥ್ಯಗಳು ಹೃದಯಸ್ಪರ್ಶಿಯಾಗಿದೆ. ಇದೀಗ ಮಹಿಳೆಯೊಬ್ಬರು ಬೀದಿ ವ್ಯಾಪಾರ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಇದರಲ್ಲಿ ಮಹಿಳೆಯೊಬ್ಬರು ರೊಟ್ಟಿ ತಯಾರಿಸುತ್ತಾ ತನ್ನ ಮಗುವನ್ನು ನೋಡಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ರಸ್ತೆ ಬದಿಯ ಸಣ್ಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಚಪಾತಿ ತಯಾರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಅವರು ತಮ್ಮ ಮಗುವನ್ನು ಒಂದು ತೋಳಿನಲ್ಲಿ ಹಿಡಿದುಕೊಂಡು ಊಟ ತಯಾರಿಸುತ್ತಿರುವುದು ಬಳಕೆದಾರರ ಗಮನಸೆಳೆದಿದೆ. ಜೀವನೋಪಾಯ ಮತ್ತು ತಾಯ್ತನದ ಜವಾಬ್ದಾರಿಗಳನ್ನು ಏಕಕಾಲದಲ್ಲಿ ನಿರ್ವಹಿಸುವಲ್ಲಿ ಅವರ ದೃಢಸಂಕಲ್ಪವನ್ನು ಎತ್ತಿ ತೋರಿಸುತ್ತದೆ. ಶೀರ್ಷಿಕೆಯ ಪ್ರಕಾರ, ಆ ಮಹಿಳೆ ತೆಲಂಗಾಣದ ಹೈದರಾಬಾದ್‌ನವರು ಎಂದು ತಿಳಿದುಬಂದಿದೆ.

ವಿಡಿಯೊ ವೀಕ್ಷಿಸಿ:

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಕಾಮೆಂಟ್ ವಿಭಾಗದಲ್ಲಿ ಹೃದಯಸ್ಪರ್ಶಿ ಪ್ರತಿಕ್ರಿಯೆಗಳಿಂದ ತುಂಬಿ ತುಳುಕಿದೆ. ಹಲವಾರು ಬಳಕೆದಾರರು ಆ ಮಹಿಳೆಯ ಪ್ರಯತ್ನವನ್ನು ಶ್ಲಾಘಿಸಿದರು. ನಾನು ಅವಳ ಮಗುವನ್ನು ಸ್ವಲ್ಪ ಸಮಯದವರೆಗೆ ಹಿಡಿದುಕೊಳ್ಳಲು ಅಥವಾ ಸ್ವಲ್ಪ ಸಮಯದವರೆಗೆ ಮಗುವಿನೊಂದಿಗೆ ಕುಳಿತುಕೊಳ್ಳುತ್ತೇನೆ. ಇದರಿಂದ ಆಕೆಗೆ ರೊಟ್ಟಿ ತಯಾರಿಸಲು ಸ್ವಲ್ಪ ಸಹಾಯ ಮಾಡಲು ಬಯಸುತ್ತೇನೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು. ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಅದಕ್ಕಾಗಿಯೇ ಅವನು ತಾಯಂದಿರನ್ನು ಸೃಷ್ಟಿಸಿದನು ಎಂದು ಮಗದೊಬ್ಬರು ಹೇಳಿದರು.

ನಾನು ಪ್ರತಿದಿನ ನನ್ನ ಮಗುವನ್ನು ಒಂದು ಕೈಯಲ್ಲಿ ಹಿಡಿದುಕೊಂಡು ನನ್ನ ದೈನಂದಿನ ಊಟವನ್ನು ಬೇಯಿಸುತ್ತೇನೆ. ಆದರೆ ಆಕೆಗೆ ದುಡಿಯುವ ಜವಾಬ್ದಾರಿಯೂ ಇದೆ. ನೋವಿನ ವಿಭಿನ್ನ ಹಂತಗಳು ಎಂದು ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ನೀವು ತಾಯಿಯಲ್ಲ, ನೀವು ದೇವರು ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು, ತಾಯಿ ಈ ಜಗತ್ತಿನ ಅತಿದೊಡ್ಡ ಯೋಧ ಎಂದು ಹಂಚಿಕೊಂಡಿದ್ದಾರೆ. ಈ ಮಹಿಳೆಯರು ನಿಜವಾದ ಯೋಧರು. ಅವರು ಒಂದೇ ಸಮಯದಲ್ಲಿ ಬಹು ಕೆಲಸಗಳನ್ನು ನಿಭಾಯಿಸಬಲ್ಲರು, ದೂರು ನೀಡುವುದಿಲ್ಲ ಎಂದು ವ್ಯಕ್ತಿಯೊಬ್ಬರು ಹಂಚಿಕೊಂಡರು.

ಈ ರೀತಿಯ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಆರ್‌ಪಿಎಸ್‌ಎಫ್ ಕಾನ್ಸ್‌ಟೇಬಲ್ ಒಬ್ಬರು ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವಾಗ ಒಂದು ಕೈಯಲ್ಲಿ ಲಾಠಿ ಹಿಡಿದು, ಇನ್ನೊಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡಿದ್ದ ವಿಡಿಯೊ ವೈರಲ್ ಆಗಿತ್ತು.

ಇದನ್ನೂ ಓದಿ: Viral Video: ಭಾರತೀಯ ಪತಿಯನ್ನು ಹುಡುಕುತ್ತಿದ್ದೇನೆ; ಟೈಮ್ಸ್ ಸ್ಕ್ವೇರ್‌ನಲ್ಲಿ ಭಿತ್ತಿಪತ್ರ ಹಿಡಿದು ನಿಂತ ಅಮೆರಿಕದ ಮಹಿಳೆ: ವಿಡಿಯೊ ವೈರಲ್