ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂನಲ್ಲಿ 2,377 ವಿದ್ಯಾರ್ಥಿಗಳಿಗೆ ಉಚಿತ ಜಾಯಿನಿಂಗ್ ಕಿಟ್‌ ವಿತರಣೆ

Sri Sathya Sai Lokaseva Gurukulam: ರಾಜ್ಯದ 20 ಜಿಲ್ಲೆಗಳಲ್ಲಿ ಉಚಿತ ವಸತಿ ಸಹಿತ ಶಿಕ್ಷಣ ನೀಡುತ್ತಿರುವ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂಗೆ ಹೊಸದಾಗಿ ಸೇರ್ಪಡೆಯಾದ ಹಾಗೂ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ‌2,377 ವಿದ್ಯಾರ್ಥಿಗಳಿಗೆ ‘ಜಾಯಿನಿಂಗ್ ಕಿಟ್‌ʼ ಗಳನ್ನು ವಿತರಿಸಲಾಯಿತು.

ಸತ್ಯಸಾಯಿ ಲೋಕಸೇವಾ ಗುರುಕುಲಂಗೆ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಜಾಯಿನಿಂಗ್‌ ಕಿಟ್‌ ವಿತರಣೆ.

ಬೆಂಗಳೂರು, ಮೇ 15: ರಾಜ್ಯದ 20 ಜಿಲ್ಲೆಗಳಲ್ಲಿ ಉಚಿತ ವಸತಿ ಸಹಿತ ಶಿಕ್ಷಣ ನೀಡುತ್ತಿರುವ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂಗೆ ಹೊಸದಾಗಿ ಸೇರ್ಪಡೆಯಾದ ಹಾಗೂ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ‌2,377 ವಿದ್ಯಾರ್ಥಿಗಳಿಗೆ ‘ಜಾಯಿನಿಂಗ್ ಕಿಟ್‌ʼ ಗಳನ್ನು ವಿತರಿಸಲಾಯಿತು. ರಾಜ್ಯದ 20 ಜಿಲ್ಲೆಗಳ 24 ಕ್ಯಾಂಪಸ್‌ಗಳು ಹಾಗೂ ತೆಲಂಗಾಣ ಮತ್ತು ತಮಿಳುನಾಡಿನ ಮೂರು ಕ್ಯಾಂಪಸ್‌ಗಳಲ್ಲಿ ಒಟ್ಟು 2,377 ಕಿಟ್‌ಗಳನ್ನು ಶುಕ್ರವಾರ ವಿತರಿಸಲಾಯಿತು.

ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಕ್ಯಾಂಪಸ್‌ನಲ್ಲಿ ಅತಿ ಹೆಚ್ಚು 250 ಕಿಟ್‌ಗಳನ್ನು ವಿತರಿಸಲಾಗಿದ್ದು, ಮಂಡ್ಯದಲ್ಲಿ 213, ಜಯಪುರದಲ್ಲಿ 212, ಕಲಬುರಗಿಯಲ್ಲಿ 172 ಹಾಗೂ ಹಾಸನದಲ್ಲಿ 126 ಕಿಟ್‌ಗಳನ್ನು ಹಂಚಲಾಗಿದೆ. ಬಾಗಲಕೋಟೆ, ಬೆಳಗಾವಿ, ಕಾರವಾರ, ಮೈಸೂರು, ತುಮಕೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ಕ್ಯಾಂಪಸ್‌ಗಳಲ್ಲೂ ವಿದ್ಯಾರ್ಥಿಗಳಿಗೆ ತಲಾ 21000 ರೂ ಮೌಲ್ಯದ ಕಿಟ್‌ಗಳನ್ನು ವಿತರಿಸಲಾಯಿತು.

ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂನಲ್ಲಿ 6ನೇ ತರಗತಿಯಿಂದ ಡಾಕ್ಟರೇಟ್‌ವರೆಗೆ, ಎಂಬಿಬಿಎಸ್‌ ಸೇರಿ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಪ್ರವೇಶ ಪರೀಕ್ಷೆಯ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 177 ವಿದ್ಯಾರ್ಥಿನಿಯರು ಹಾಗೂ 349 ವಿದ್ಯಾರ್ಥಿಗಳು ಸೇರಿ ಒಟ್ಟು 526 ಮಕ್ಕಳು 6ನೇ ತರಗತಿಗೆ ಸೇರ್ಪಡೆಯಾಗಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಸಾರ್ಥಕತೆ: ಎಸ್ಸೆಸ್ಸೆಲ್ಸಿಯಲ್ಲಿ 624 ಅಂಕ ಗಳಿಸಿದ ವಿದ್ಯಾರ್ಥಿನಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅಭಿನಂದನೆ

ಒಂದು ಕಿಟ್‌: 48 ಅಗತ್ಯ ವಸ್ತುಗಳು

ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಕಿಟ್‌ನಲ್ಲಿ ಐದು ಜೋಡಿ ಶಾಲಾ ಸಮವಸ್ತ್ರ, ಟಿ–ಶರ್ಟ್‌, ಟ್ರಾಲಿ ಬ್ಯಾಗ್‌, ಸ್ವೆಟರ್‌, ಬ್ಲಾಂಕೆಟ್‌ ಸೇರಿದಂತೆ ಹಾಸ್ಟೆಲ್‌ ಜೀವನಕ್ಕೆ ಅಗತ್ಯವಾದ ಒಟ್ಟು 48 ವಸ್ತುಗಳಿವೆ. ಒಂದು ಕಿಟ್‌ನ ಮೌಲ್ಯ ₹21,200 ಆಗಿದ್ದು, ಎಲ್ಲ ಕ್ಯಾಂಪಸ್‌ಗಳಲ್ಲಿ ವಿತರಿಸಲಾದ ಕಿಟ್‌ಗಳ ಒಟ್ಟು ಮೌಲ್ಯ ಸುಮಾರು ₹5 ಕೋಟಿ ಎಂದು ಸಂಸ್ಥೆ ತಿಳಿಸಿದೆ.