ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

State Level Best Teacher Award 2026: ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 31 ಶಿಕ್ಷಕರ ಆಯ್ಕೆ; ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ

Teacher's Day 2026: ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢ ಶಾಲಾ ವಿಭಾಗದಿಂದ 11 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಮುಖ್ಯ ಶಿಕ್ಷಕರಿಗೆ ಸರ್ಕಾರದ ಆದೇಶದ ಅನುಸಾರ ತಲಾ 25,000 ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: 2026-27ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ (State Level Best Teacher Award 2026) ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢ ಶಾಲಾ ವಿಭಾಗದಿಂದ ಒಬ್ಬರು ವಿಶೇಷ ಶಿಕ್ಷಕ ಸೇರಿ 11 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪ್ರಾಥಮಿಕ) ಸರ್ಕಾರದ ಅಧೀನ ಕಾರ್ಯದರ್ಶಿ ವಿದ್ಯಾ ಎಚ್. ಪೈ ಅವರು ಅಧಿಸೂಚನೆ ಹೊರಡಿಸಿದ್ದಾರೆ.

ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಈ ಪುರಸ್ಕೃತರ ಪಟ್ಟಿಯಲ್ಲಿನ ಮಹಿಳಾ ಶಿಕ್ಷಕರುಗಳಿಗೆ ಅಕ್ಷರ ಮಾತೆ ʼಸಾವಿತ್ರಿಬಾಯಿ ಫುಲೆʼ ಅವರ ಹೆಸರಿನಲ್ಲಿ ಸೆ.5ರಂದು ನಡೆಯುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಂದು (Teacher's Day 2026) ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಮುಖ್ಯ ಶಿಕ್ಷಕರಿಗೆ ಸರ್ಕಾರದ ಆದೇಶದ ಅನುಸಾರ ತಲಾ 25,000 ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

ಪ್ರಾಥಮಿಕ ಶಾಲಾ ಶಿಕ್ಷಕರು (ಹೆಸರು ಮತ್ತು ಶಾಲೆ):

  1. ಸಿ. ಉಮಾ: ಶಿಕ್ಷಕರು, ಸರ್ಕಾರಿ ಶಾಲೆ, ಕಿರಿಯ ಪ್ರಾಥಮಿಕ ಕೆಂಪತಿಮ್ಮನಹಳ್ಳಿ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ
  2. ಬಸಪ್ಪ ಪರಪ್ಪ ಪಾಟೀಲ: ಶಿಕ್ಷಕರು, ಕೆ.ಎಚ್.ಪಿ.ಎಸ್. ಹಲ್ಲೂರು ಕ್ರಾಸ್, ಮೂಡಲಗಿ ಶೈಕ್ಷಣಿಕ ವಲಯ, ಚಿಕ್ಕೋಡಿ ಜಿಲ್ಲೆ
  3. ಅಶೋಕ: ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
  4. ಸುರೇಶ.ಕೆ: ಶಿಕ್ಷಕರು, ಕಿರಿಯ ಪ್ರಾಥಮಿಕ ಶಾಲೆ, ದೇವದುರ್ಗ ತಾಲೂಕು, ಸರ್ಕಾರಿ ಗುಂಡೇರದೊಡ್ಡಿ, ರಾಯಚೂರು ಜಿಲ್ಲೆ
  5. ಹಣಮಂತ ಕಲ್ಲಪ್ಪ ಕಾತರಕಿ: ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಂಗಲಗುತ್ತಿ, ವಿಜಯಪುರ ಗ್ರಾಮಾಂತರ ತಾಲೂಕು, ವಿಜಯಪುರ ಜಿಲ್ಲೆ
  6. ಉಷಾ ವಿ.ನಾಯಕ: ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊನ್ನಾವರ, ನಂ.1, ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ
  7. ಮಸ್ತಾನ್ ವಲಿ: ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗುಟ್ಟಹಳ್ಳಿ. ಚಿಂತಾಮಣಿ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ.
  8. ಪ್ರಭಾವತಿ ಬಾಳಪ್ಪಾ ಹಾಲೆನ್ನವರ: ಮುಖ್ಯ ಶಿಕ್ಷಕರು, ಮರಾಠಿ ಹಿರಿಯ ಪ್ರಾಥಮಿಕ ಶಾಲೆ, ಜಾಫರವಾಡಿ, ಕಡೋಲಿ ಬೆಳಗಾವಿ ಗ್ರಾಮಾಂತರ ತಾಲೂಕು, ಬೆಳಗಾವಿ ಜಿಲ್ಲೆ
  9. ಸರೋಜಮ್ಮ: ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸತ್ತೇಗಾಲ ಅಗ್ರಹಾರ, ಕೊಳ್ಳೇಗಾಲ ತಾಲೂಕು. ಚಾಮರಾಜನಗರ ಜಿಲ್ಲೆ.
  10. ನಿಂಗಪ್ಪಾ: ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಂಜಬಬಲಾದ, ಆಳಂದ ತಾಲೂಕು, ಕಲಬುರಗಿ
  11. ರತ್ನಮ್ಮ.ಎನ್.ಎಂ: ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಂಬತ್ತಹಳ್ಳಿ, ಬೆಂಗಳೂರು ದಕ್ಷಿಣ ವಲಯ-3, ಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆ.
  12. ನೇಮಣ್ಣ ಬಮ್ಮಣ್ಣ ಜಮಖಂಡಿ: ಶಿಕ್ಷಕರು, ಶ್ರೀ ಜಿನಸೇನ ಚಾರ್ಯ ಹಿರಿಯ ಪ್ರಾಥಮಿಕ ಶಾಲೆ, ತೇರದಾಳ, ಜಮಖಂಡಿ ತಾಲೂಕು, ಬಾಗಲಕೋಟೆ ಜಿಲ್ಲೆ
  13. ರಾಮಚಂದ್ರ ಈ ನಾಯ್ಕ: ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಣಪತಿಗಲ್ಲಿ, ಯಲ್ಲಾಪುರ ತಾಲೂಕು, ಶಿರಸಿ ಶೈಕ್ಷಣಿಕ ಜಿಲ್ಲೆ
  14. ಮಾಲಿನಿ.ಎಂ: ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುದಿಗೌಡನಹನಹಟ್ಟಿ, ಕೊರಟಗೆರೆ ತಾಲೂಕು, ಮಧುಗಿರಿ ಶೈಕ್ಷಣಿಕ ಜಿಲ್ಲೆ.
  15. ಕುಮಾರನಾಯ್ಕ.ಬಿ.ಡಿ.: ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚಿಕ್ಕಮಾಗಡಿ ತಾಂಡ, ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ
  16. ಕೃಷ್ಣಮೂರ್ತಿ ಕೆ.ಎಸ್: ಶಿಕ್ಷಕರು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಗೃಹಲಕ್ಷ್ಮೀ ಬಡಾವಣೆ, ಬೆಂಗಳೂರು ಉತ್ತರ ವಲಯ-1. ಬೆಂಗಳೂರು ಉತ್ತರ ಜಿಲ್ಲೆ
  17. ಮಲ್ಲಿಕಾರ್ಜುನ ಬಡಿಗೇರ: ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸದಾಶಿವಪುರ, ಹೊನ್ನಾಳಿ ತಾಲೂಕು, ದಾವಣಗೆರೆ ಜಿಲ್ಲೆ.
  18. ಪ್ರೇಮಕುಮಾ‌ರ್ ವಿ.ಎಸ್. ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಗ್ಗೆರೆ, ತುರುವೇಕೆರೆ ತಾಲೂಕು, ತುಮಕೂರು ಜಿಲ್ಲೆ
  19. ದುರಗಪ್ಪ.ಎಚ್: ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಕೊಂಚಿಗೇರಿ, ಸಿರಗುಪ್ಪ ತಾಲೂಕು, ಬಳ್ಳಾರಿ ಜಿಲ್ಲೆ.
  20. ಮೈಲಾರಪ್ಪ ಬೂದಿಹಾಳ: ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹನವಾಳ, ಗಂಗಾವತಿ ತಾಲೂಕು, ಕೊಪ್ಪಳ ಜಿಲ್ಲೆ

ಪ್ರೌಢ ಶಾಲಾ ಶಿಕ್ಷಕರು:

  1. ಬಿರಾದಾರ ಸಿದ್ದಪ್ಪ ವೀರಭದ್ರಪ್ಪ: ಸಹ ಶಿಕ್ಷಕರು ಗ್ರೇಡ್-11, ಸರ್ಕಾರಿ ಪ್ರೌಢ ಶಾಲೆ, ಚಿಬ್ಬಲಗೇರಿ, ಹಳಿಯಾಳ ತಾಲೂಕು, ಶಿರಸಿ ಶೈಕ್ಷಣಿಕ ಜಿಲ್ಲೆ
  2. ಶೈನಾಕುಮಾರಿ. ಎಂ: ಸಹ ಶಿಕ್ಷಕರು, ಗ್ರೇಡ್-11, ಕರ್ನಾಟಕ ಪಬ್ಲಿಕ್ ಶಾಲೆ. (ಪ್ರೌಢ ಶಾಲಾ ವಿಭಾಗ), ಜೀವನ್ ಭೀಮಾನಗರ, ಬೆಂಗಳೂರು ದಕ್ಷಿಣ ವಲಯ-4, ಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆ
  3. ಕುಬೇರನಾಯ್ಕ.ಬಿ: ಸಹ ಶಿಕ್ಷಕರು ಗ್ರೇಡ್-11, ಸರ್ಕಾರಿ ಪ್ರೌಢ ಶಾಲೆ, ತಮ್ಮಡಿಹಳ್ಳಿ, ಶಿವಮೊಗ್ಗ ತಾಲೂಕು ಮತ್ತು ಜಿಲ್ಲೆ
  4. ನೀಲಕಂಠ ಗಾವಂಕರ್: ಮುಖ್ಯ ಶಿಕ್ಷಕರು, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ದೇವನಹಳ್ಳಿ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ
  5. ವಿ.ವೆಂಕಟೇಶ: ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಗೂಳೂರು, ಬಾಗೇಪಲ್ಲಿ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ
  6. ಮಮತಾ ಆ‌ರ್. ನಾಯ್ಕ: ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಗನಾಶಿನಿ ಉನ್ನತೀಕರಿಸಿದ ಆರ್‌ಎಂಎಸ್‌ಎ ಶಾಲೆ, ಕುಮಟ ತಾಲೂಕು, ಉತ್ತರ ಕನ್ನಡ ಜಿಲ್ಲೆ
  7. ರೋಶನ್ ಅಲೆಗ್ಸಾಂಡರ್ ಪಿಂಟೊ: ಸಹ ಶಿಕ್ಷಕರು, ಗ್ರೇಡ್-11, ಕಾರ್ಮಲ್ ಹೈಸ್ಕೂಲ್. ಮೋದನಕಾಪು. ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
  8. ಜಯಶೀಲ: ದೈಹಿಕ ಶಿಕ್ಷಕರು-ಗ್ರೇಡ್-1, ಸರ್ಕಾರಿ ಆದರ್ಶ ವಿದ್ಯಾಲಯ, ಮೈಸೂರು ದಕ್ಷಿಣ ತಾಲೂಕು ಮತ್ತು ಮೈಸೂರು ಜಿಲ್ಲೆ
  9. ಮಥಾಯಿ.ಟಿ: ಸಹ ಶಿಕ್ಷಕರು, ಗ್ರೇಡ್-11, ಸರ್ಕಾರಿ ಪ್ರೌಢ ಶಾಲೆ, ಮುತ್ತಿನಕೊಪ್ಪ, ನರಸಿಂಹರಾಜಪುರ ತಾಲೂಕು, ಚಿಕ್ಕಮಗಳೂರು ಜಿಲ್ಲೆ
  10. ಜಯಪ್ಪ ಕೆ.ಟಿ: ಸಹ ಶಿಕ್ಷಕರು, ಗ್ರೇಡ್-11, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಉನ್ನತೀಕರಣ ಶಾಲೆ) ನಿಟ್ಟುವಳ್ಳಿ. ಆರ್.ಎಂ.ಎಸ್.ಎ, ದಾವಣಗೆರೆ ತಾಲೂಕು ಮತ್ತು ಜಿಲ್ಲೆ
  11. ಆನಂದ ಮಾದೇವ ಝಂಡೆ: ವಿಶೇಷ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಟಕ್ಕಲಕಿ, ವಿಜಯಪುರ ಗ್ರಾಮಾಂತರ ತಾಲೂಕು ಮತ್ತು ವಿಜಯಪುರ ಜಿಲ್ಲೆ

KEA Recruitment: ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ; 4,744 ಹುದ್ದೆಗಳ ನೇಮಕಾತಿಗೆ ಕೆಇಎ ಸಿದ್ಧತೆ, ಇದೇ ತಿಂಗಳಲ್ಲಿ ಅಧಿಸೂಚನೆ!