'ಹೆಲ್ತ್ ಕೇರ್ ಸಮಾವೇಶ 2025'
ಸಮಾವೇಶದಲ್ಲಿ ರೋಗಿಗಳಿಗೆ ಆರೈಕೆ ಮತ್ತು ಆರೋಗ್ಯ ಸೇವೆ ಒದಗಿಸುವ ಅತ್ಯಾಧುನಿಕ ಆವಿಷ್ಕಾರಗಳ ಕುರಿತು ಚರ್ಚೆ ನಡೆಸಲಾಯಿತು. ಪ್ರತಿನಿಧಿಗಳು ತಜ್ಞರ ಒಳನೋಟ ಪಡೆದರು ಮತ್ತು ನೆಟ್ ವರ್ಕಿಂಗ್ ಅವಕಾಶ ಗಳಿಸಿದರು.
ಬೆಂಗಳೂರು: ಹೆಲ್ತ್ ಅಂಡ್ ವೆಲ್ ನೆಸ್ ಕಂಪನಿ ಆಗಿರುವ ಹ್ಯಾಪಿಯೆಸ್ಟ್ ಹೆಲ್ತ್ ಇಂದು ಬೆಂಗಳೂರಿ ನಲ್ಲಿ ‘ಟೆಕ್ನಾಲಜಿ ಆಂಡ್ ಇನ್ನೋವೇಶನ್ ಇನ್ ಹೆಲ್ತ್ ಕೇರ್ ಸಮ್ಮಿಟ್ 2025’ ಅನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಹ್ಯಾಪಿಯೆಸ್ಟ್ ಮೈಂಡ್ಸ್ ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಶ್ರೀ ಅಶೋಕ್ ಸೂತ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಮಾವೇಶದಲ್ಲಿ ಆರೋಗ್ಯ ಸೇವಾ ಕ್ಷೇತ್ರ ಮತ್ತು ಉದ್ಯಮ ಕ್ಷೇತ್ರದ ತಜ್ಞರು ಭಾಗವಹಿಸಿ ಆರೋಗ್ಯ ಸೇವಾ ಕ್ಷೇತ್ರದ ನೂತನ ತಂತ್ರಜ್ಞಾನಗಳ ಕುರಿತು ಚರ್ಚೆ ನಡೆಸಿದರು. 400ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್ ಮತ್ತು ಟೆಲಿಮೆಡಿಸಿನ್ ಸೇರಿದಂತೆ ಆರೋಗ್ಯ ಸೇವಾ ಕ್ಷೇತ್ರದ ಭವಿಷ್ಯವನ್ನು ರೂಪಿಸುವ ಪ್ರಮುಖ ವಿಷಯಗಳ ಕುರಿತು ಗೋಷ್ಠಿಗಳು ನಡೆದುವು. ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ಉದ್ಯಮವು ಹೇಗೆ ಬೆಳೆಯುತ್ತಿದೆ ಎಂಬುದರ ಕುರಿತು ಸಂವಹನ ನಡೆಯಿತು. ತಂತ್ರಜ್ಞಾನಗಳು ಒದಗಿಸಬಹುದಾದ ಅವಕಾಶಗಳ ಕುರಿತು ಒಳನೋಟಪೂರ್ವಕ ಮಾತುಕತೆ ನಡೆಯಿತು. ಜೊತೆಗೆ ಭಾಗವಹಿಸಿದ ಪ್ರತಿನಿಧಿಗಳು ಉದ್ಯಮದ ನಾಯಕರು ಮತ್ತು ತಂತ್ರಜ್ಞಾನ ಕ್ಷೇತ್ರದ ನವೋದ್ಯಮಿಗಳೊಂದಿಗೆ ನೆಟ್ ವರ್ಕಿಂಗ್ ಅವಕಾಶ ಗಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹ್ಯಾಪಿಯೆಸ್ಟ್ ಮೈಂಡ್ಸ್ ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಶ್ರೀ ಅಶೋಕ್ ಸೂತ ಅವರು ವಿವಿಧ ರೀತಿಯ ಹೆಲ್ತ್ ಕೇರ್ ಮಾಡ್ಯೂಲ್‌ಗಳು, ಹೊಸತನ, ಉದ್ಯಮದ ಅಡ್ಡಿ ಆತಂಕಗಳು ಇತ್ಯಾದಿ ವಿಚಾರಗಳ ಕುರಿತು ತಿಳಿಸಿದರು. ಈ ಸಂದರ್ಭದಲ್ಲಿ ಅವರು, “ಸ್ಪೇಷಿ ಯಲ್ ಓಮಿಕ್ಸ್ ತಂತ್ರಜ್ಞಾನಗಳ ಬಳಕೆ, ರೋಗಿಗಳ ಬಯಾಪ್ಸಿಗಳಿಂದ ದೊರೆಯುವ ದೊಡ್ಡ ಪ್ರಮಾಣದ ಡೇಟಾ ಸೆಟ್ ಗಳು ಮತ್ತು ಎಐ ಮಾದರಿಗಳ ಸಾಮರ್ಥ್ಯ ಹೆಚ್ಚಳ ಈ ಮೂರು ವಿಚಾರ ಗಳು ಸಂಯೋಜಿತಗೊಳ್ಳುತ್ತಿರುವುದನ್ನು ನಾವು ಇತ್ತೀಚೆಗೆ ಗಮನಿಸುತ್ತಿದ್ದೇವೆ. ಇವುಗಳು ಮುಂದೆ ಇನ್ನಷ್ಟು ಶಕ್ತಿಯುತ ಮತ್ತು ಅತ್ಯಾಧುನಿಕವಾಗುತ್ತವೆ. ಈ ಮೂರು ಶಕ್ತಿಗಳು ಸೇರಿಕೊಂಡು ಹೊಸ ಆವಿಷ್ಕಾರಗಳ ಸೃಷ್ಟಿಗೆ ಕಾರಣವಾಗುತ್ತವೆ" ಎಂದು ಹೇಳಿದರು.
'ಎಐ & ಟೆಕ್ ಇನ್ ಹೆಲ್ತ್ ಕೇರ್: ಈಸ್ ಅಡಾಪ್ಷನ್ ಹ್ಯಾಪನಿಂಗ್ ಫಾಸ್ಟ್?' ಎಂಬ ವಿಚಾರದ ಕುರಿತು ಮೊದಲ ಗೋಷ್ಠಿ ನಡೆಯಿತು. ಈ ಗೋಷ್ಠಿಯನ್ನು ಹ್ಯಾಪಿಯೆಸ್ಟ್ ಹೆಲ್ತ್, ಹೆಲ್ತ್ ಕೇರ್ ಸರ್ವಿಸಸ್ ನ ಅಧ್ಯಕ್ಷ ಮತ್ತು ಸಿಇಓ ಡಾ ಶ್ರೀನಿವಾಸನ್ ನಾರಾಯಣ ಅವರು ನಿರ್ವಹಿಸಿದರು. 5ಸಿ ನೆಟ್ ವರ್ಕ್ ಸ್ಥಾಪಕ ಮತ್ತು ಸಿಇಓ ಶ್ರೀ ಕಲ್ಯಾಣ್ ಶಿವಶೈಲಂ ಗೋಷ್ಠಿಯ ನೇತೃತ್ವ ವಹಿಸಿದ್ದರು. ಆಂಕೋಸ್ಟೆಮ್ ಡಯಾಗ್ನೋಸ್ಟಿಕ್ಸ್ ನ ಸಂಸ್ಥಾಪಕ ಮತ್ತು ಸಿಇಓ ಡಾ ಮಂಜಿರಿ ಬಾಕ್ರೆ ಮತ್ತು ಸೈಕ್ಲೋಪ್ಸ್ ಮೆಡ್ ಟೆಕ್ ನ ಸಹ-ಸ್ಥಾಪಕ ಮತ್ತು ಸಿಇಓ ಶ್ರೀ ನಿರಂಜನ್ ಸುಬ್ಬರಾವ್ ಗೋಷ್ಠಿಯಲ್ಲಿದ್ದರು.
ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಕನ್ಸಲ್ಟೆಂಟ್ ಡಾ ಹರ್ಷವರ್ಧನ್ ರಾವ್ ಬಿ ಅವರು , ‘ಎಐ ಆಂಡ್ ಇಟ್ಸ್ ಅಪ್ಲಿಕೇಷನ್ಸ್ ಇನ್ ಹೆಲ್ತ್ ಕೇರ್ ಆಂಡ್ ಇನ್ ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಇನ್ ಯುವರ್ ಪ್ರಾಕ್ಟೀಸ್’ ಎಂಬ ವಿಷಯ ದ ಗೋಷ್ಠಿಯಲ್ಲಿ ಮಾತನಾಡಿ, “ನಾವು ಎಐ ಕುರಿತು ಮಾತನಾಡುವಾಗ ಗಮನಿಸುವ ವಿಚಾರವೆಂದರೆ ಎಐ ರೋಗಿಗಳೊಂದಿಗೆ ನಾವು ಹೊಂದಿರುವ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು. ಬಹುತೇಕ ಉತ್ತಮ ಫಲಿತಾಂಶಗಳು ನಾವು ರೋಗಿಯೊಂದಿಗೆ ಹೊಂದಿ ರುವ ಅತ್ಯುತ್ತಮ ಸಂಬಂಧವನ್ನು ಆಧರಿಸಿಯೇ ದೊರಕಿವೆ. ಬಹುತೇಕ ಔಷಧ ಪ್ರಕ್ರಿಯೆಯಗಳಲ್ಲಿ ಪ್ಲೇಸಿಬೋ ಎಫೆಕ್ಟ್ ಪರಿಣಾಮ ಬೀರುತ್ತದೆ. ರೋಗಿಯು ವೈದ್ಯರು ಮತ್ತು ಔಷಧವನ್ನು ನಂಬದಿದ್ದರೆ ಫಲಿತಾಂಶಗಳು ಅಷ್ಟೊಂದು ಉತ್ತಮ ಆಗಿರುವುದಿಲ್ಲ. ಹಾಗಂತ ಔಷಧಿಗಳು ಮಾಡುವ ಕೆಲಸವ ನ್ನೇನೂ ಅದು ಕಡಿಮೆ ಮಾಡುವುದಿಲ್ಲ. ನಾವು ಈ ಹಂತದಲ್ಲಿ ಎಐ ಬಳಸುವಾಗ ಪ್ಲೇಸಿಬೊ ಎಫೆಕ್ಟ್ ಉಂಟಾಗುತ್ತದೆಯೇ ಎಂಬುದನ್ನು ಗಮನಿಸಬೇಕಾಗಿದೆ. ಮತ್ತು ಸಂವಹನ ಕಡಿಮೆಗೊಳಿಸಿದರೆ ಅದು ರೋಗಿಗಳ ಆರೈಕೆಯ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬುದನ್ನು ತಿಳಿಯಬೇಕಾಗಿದೆ" ಎಂದು ಹೇಳಿದರು.
'ಹಾಸ್ಪಿಟಲ್ಸ್ ಆಫ್ ಟುಮಾರೋ' ಗೋಷ್ಠಿಯಲ್ಲಿ ಸೀಮೆನ್ಸ್ ಹೆಲ್ತ್ ನೀರ್ಸ್ ನ ಅಂಗಸಂಸ್ಥೆಯಾದ ಸಿಟಿಎಸ್‌ಐ ಸೌತ್ ಏಷ್ಯಾದ ಸಿಟಿಓ ಶ್ರೀ ಹನುಮಾನ್ ಜಯರಾಮ್, ನಾರಾಯಣ ಹೆಲ್ತ್ ನ ಗ್ರೂಪ್ ಸಿಐಒ ಶ್ರೀ ಕುಮಾರ್ ಕೆವಿ ಮತ್ತು ಹ್ಯಾಪಿಯೆಸ್ಟ್ ಮೈಂಡ್ಸ್ ನ ಹೆಲ್ತ್ ಕೇರ್ ಮತ್ತು ಲೈಫ್ ಸೈನ್ಸಸ್ ವಿಭಾಗದ ಐಜಿ ಹೆಡ್, ವಿಪಿ ಶ್ರೀ ಶ್ರೀನಿವಾಸ್ ಅಯ್ಯಂಗಾರ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕುಮಾರ್ ಕೆವಿ ಅವರು “ವಿಶೇಷವಾಗಿ ಮುಂದಿನ ಐದು- ಹತ್ತು ವರ್ಷಗಳು ತಂತ್ರಜ್ಞಾನದ ದೃಷ್ಟಿಕೋನದಿಂದ ಬಹಳ ಮುಖ್ಯವಾದ ಅವಧಿ. ಈ ಅವಧಿ ಯಲ್ಲಿ ಆರೋಗ್ಯ ಸೇವಾ ಕ್ಷೇತ್ರದಲ್ಲಿರುವವರು ಉತ್ತಮ ಸೇವೆಯನ್ನು ಒದಗಿಸಲು, ಜೀವಗಳನ್ನು ಉಳಿಸಲು ಮತ್ತು ಅತ್ಯುತ್ತಮ ಫಲಿತಾಂಶಗಳನ್ನು ನೀಡಲು ಅಗತ್ಯವಿರುವ ಎಲ್ಲಾ ಸಾಧನಗಳನ್ನು ಹೊಂದಿರಬೇಕಾಗುವ ಅವಧಿಯಾಗಬಹುದಾಗಿದೆ. ವ್ಯವಹಾರ ಮಾದರಿಯನ್ನು ಪರಿವರ್ತಿಸಲು ಬೇಕಾದ ಸೂಕ್ತವಾದ ಕಾರ್ಯಪಡೆಯನ್ನು ಹೊಂದುವುದು ಮತ್ತು ಡಿಜಿಟಲ್ ರೂಪಾಂತರವನ್ನು ಅಳವಡಿಸಿಕೊಳ್ಳುವುದರ ಹೊರತಾಗಿ ಸೂಕ್ತ ತಂತ್ರಜ್ಞಾನವನ್ನು ಹೊಂದುವುದು ದೊಡ್ಡ ಸವಾ ಲಾಗಲಿದೆ" ಎಂದು ಹೇಳಿದರು.
ಹ್ಯಾಪಿಯೆಸ್ಟ್ ಮೈಂಡ್ಸ್ ನ ಜನರೇಟಿವ್ ಎಐ ಬಿಸಿನೆಸ್ ವಿಭಾಗದ ಸಿಇಓ ಶ್ರೀ.ಶ್ರೀಧರ್ ಮಂಥ ಅವರು ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು, “ಎಐ ಮಾದರಿಗಳ ಆಧಾರದ ಮೇಲೆ ಡೇಟಾವನ್ನು ಗಮನಿಸುತ್ತಾ ಮಾಡೆಲ್ ಗಳಿಗೆ ತರಬೇತಿ ನೀಡುವುದು ಈಗ ತುಂಬಾ ಸುಲಭ ಅನ್ನಿಸಬಹುದು. ಆದರೆ ಅದು ಅಷ್ಟು ಸುಲಭವಲ್ಲ, ಏಕೆಂದರೆ ಎಲ್ಲಾ ಡೇಟಾ ಮೌಲ್ಯ ಯುತವಾಗಿರುವುದಿಲ್ಲ. ನಮಗೆ ದೊರೆಯುವ ಡೇಟಾದಲ್ಲಿ ಸಾಕಷ್ಟು ಅಸಮರ್ಪಕ ವಿಷಯಗಳಿವೆ. ಆದ್ದರಿಂದ ಮಾದರಿಗೆ ತರಬೇತಿ ನೀಡಲು ನಾವು ಸಾಕಷ್ಟು ಗುಣಮಟ್ಟದ ಡೇಟಾವನ್ನು ಹೊಂದಿ ದ್ದರೆ, ನಾವು ಕನಿಷ್ಠ ಶೇ.90 ಗುಣಮಟ್ಟ ಪಡೆಯಬಹುದು" ಎಂದು ಹೇಳಿದರು.
ಹ್ಯಾಪಿಯೆಸ್ಟ್ ಹೆಲ್ತ್ ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಶ್ರೀ ಆಶಿಶ್ ಪ್ರತಾಪ್ ಸಿಂಗ್ ಅವರು, “‘ಈ ಸಮಾವೇಶದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸುವುದರ ಜೊತೆಗೆ ಅವುಗಳ ಕುರಿತು ಚರ್ಚಿಸುವ ಉದ್ದೇಶವನ್ನು ಹೊಂದಿದ್ದೆವು. ಜೊತೆಗೆ ನಾವು ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿ ಸುವ ಉದ್ದೇಶ ಹೊಂದಿದ್ದೆವು. ವಿಶೇಷವಾಗಿ ಈ ಮೂಲಕ ರೋಗಿಗಳ ಆರೈಕೆಯಲ್ಲಿ ಕ್ರಾಂತಿ ಯನ್ನುಂಟು ಮಾಡಲು ಮತ್ತು ಆರೋಗ್ಯ ಸೇವಾ ಕ್ಷೇತ್ರವನ್ನು ಪರಿವರ್ತಿಸಲು ಬೇಕಾದ ಕ್ರಿಯಾಶೀಲ ಒಳನೋಟಗಳು ಮತ್ತು ಸಹಯೋಗಗಳನ್ನು ಸಾಧ್ಯವಾಗಿಸುವ ಗುರಿಯನ್ನು ಹೊಂದಿದ್ದೆವು" ಎಂದು ಹೇಳಿದರು.