ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trump dropped India visit : ಮೋದಿ ಜತೆಗಿನ ಉದ್ವಿಗ್ನತೆ: ಭಾರತ ಭೇಟಿ ಕೈಬಿಟ್ಟ ಟ್ರಂಪ್‌!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೂ.17ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ಮಾತನಾಡಿದಾಗ ನವೆಂಬರ್‌ನಲ್ಲಿ ಕ್ವಾಡ್‌ ಶೃಂಗಕ್ಕಾಗಿ ಭಾರತಕ್ಕೆ ಬರುವೆ ಎಂದಿದ್ದರು. ಆದರೆ ಸಂಬಂಧ ಹಳಸಿದ ಕಾರಣ ಭಾರತ ಭೇಟಿ ಕೈಬಿಟ್ಟಿದ್ದಾರೆ ಎಂದು ನ್ಯೈಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಭಾರತ ಭೇಟಿ ಕೈಬಿಟ್ಟ ಡೊನಾಲ್ಡ್ ಟ್ರಂಪ್‌!

-

Abhilash BC Abhilash BC Aug 31, 2025 10:29 AM

ವಾಷಿಂಗ್ಟನ್‌: ಈ ವರ್ಷದ ಕೊನೆಯಲ್ಲಿ ಕ್ವಾಡ್ ಶೃಂಗಸಭೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌(Trump dropped India visit) ಭಾರತಕ್ಕೆ ಭೇಟಿ ನೀಡುವ ಯೋಜನೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದಾರೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆದರೆ, ಈ ಬಗ್ಗೆ ಶ್ವೇತಭವನದಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.

ದಿ ನೊಬೆಲ್‌ ಪ್ರೈಸ್‌ ಆ್ಯಂಡ್ ಎ ಟೆಸ್ಟಿ ಫೋನ್‌ ಕಾಲ್‌–ಹೌ ದ ಟ್ರಂಪ್‌–ಮೋದಿ ರಿಲೇಶನ್‌ಷಿಪ್‌ ಅನ್‌ರಾವೆಲ್ಡ್‌’ ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಕಳೆದ ಕೆಲವು ತಿಂಗಳಿನಿಂದ ಅಮೆರಿಕ ಮತ್ತು ಭಾರತ ನಡುವೆ ಹದಗೆಡುವುತ್ತಿರುವ ದ್ವಿಪಕ್ಷೀಯ ಸಂಬಂಧದ ಬಗ್ಗೆ ಈ ವರದಿ ವಿವರಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೂ.17ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ಮಾತನಾಡಿದಾಗ ನವೆಂಬರ್‌ನಲ್ಲಿ ಕ್ವಾಡ್‌ ಶೃಂಗಕ್ಕಾಗಿ ಭಾರತಕ್ಕೆ ಬರುವೆ ಎಂದಿದ್ದರು. ಆದರೆ ಸಂಬಂಧ ಹಳಸಿದ ಕಾರಣ ಭಾರತ ಭೇಟಿ ಕೈಬಿಟ್ಟಿದ್ದಾರೆ ಎಂದು ನ್ಯೈಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಡೊನಾಲ್ಡ್ ಟ್ರಂಪ್‌ ಹಾಗೂ ನರೇಂದ್ರ ಮೋದಿ ಅವರ ಸಂಬಂಧ ಹಳಸಲು ಟ್ರಂಪ್ ಅವರ ನೊಬೆಲ್‌ ಶಾಂತಿ ಪ್ರಶಸ್ತಿಯ ಆಸೆಯೇ ಕಾರಣ ಎಂಬ ಅಂಶ ಬಹಿರಂಗವಾಗಿದೆ. ‘ಕೆನಡಾದಲ್ಲಿ ನಡೆದ ಜಿ7 ಶೃಂಗದ ಬಳಿಕ ಮೋದಿ ಹಾಗೂ ಟ್ರಂಪ್‌ ನಡುವೆ ಜೂ.17ರಂದು ಫೋನ್‌ ಸಂಭಾಷಣೆ ನಡೆದಿತ್ತು. ಆಗ ‘ಭಾರತ-ಪಾಕ್‌ ಯುದ್ಧ ನಿಲ್ಲಿಸಲು ನಾನು ಕಾರಣ’ ಎಂದು ಟ್ರಂಪ್‌ ಹೇಳಿದ್ದರು. ಹಾಗೂ ಪಾಕಿಸ್ತಾನ ಈ ಬಗ್ಗೆ ತಮ್ಮನ್ನು ನೊಬೆಲ್‌ ಶಾಂತಿ ಪ್ರಶಸ್ತಿಗೆ ನಾಮಾಂಕನ ಮಾಡಿದೆ ಎಂದಿದ್ದರು. ಇದಕ್ಕೆ ಮೋದಿ ಒಪ್ಪಲಿಲ್ಲ. ‘ಕದನವಿರಾಮ ದ್ವಿಪಕ್ಷೀಯ ಒಪ್ಪಂದ’ ಎಂದು ಹೇಳಿದರು ಹಾಗೂ ಪಾಕ್‌ನಂತೆ ನೊಬೆಲ್‌ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಹಿಂಜರಿದರು. ಇದು ಉಭಯ ನಾಯಕರ ಸಂಬಂಧ ಹಳಸಲು ನಾಂದಿ ಹಾಡಿತು’ ಎಂದು ವರದಿ ಹೇಳಿದೆ.

ಇದನ್ನೂ ಓದಿ Stock Market: ಟ್ರಂಪ್‌ ಟಾರಿಫ್‌ ಮುಂದೂಡಿಕೆ, ಟೆಕ್ಸ್‌ಟೈಲ್‌ ಷೇರುಗಳಿಗೆ ಶುಕ್ರದೆಸೆ! ಬಾಂಗ್ಲಾಗೆ ಬಿತ್ತು ಟ್ರಂಪ್‌ ಟ್ಯಾಕ್ಸ್‌