ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

⁠Union Budget 2026: ಕೇಂದ್ರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಬಜೆಟ್‌: ಬಿ.ಎಸ್‌. ಯಡಿಯೂರಪ್ಪ

B. S. Yediyurappa: ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಘೋಷಣೆಯಂತೆ ಈ ಕೇಂದ್ರ ಬಜೆಟ್‌ ಎಲ್ಲರಿಗೂ ಹತ್ತಿರವಾಗಿದೆ. ಈ ಬಜೆಟ್‌ ನೋಡಿದರೆ ಭಾರತದ ಸಾರ್ವಭೌಮತ್ವ ಎತ್ತಿಹಿಡಿಯುವಲ್ಲಿ ಸಫಲವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ.

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 9ನೇ ಬಾರಿ ಐತಿಹಾಸಿಕ ಬಜೆಟ್‌ ಮಂಡಿಸಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿ ಒಳಗೊಂಡ ಬಜೆಟ್‌ ಇದಾಗಿದೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಘೋಷಣೆಯಂತೆ ಬಜೆಟ್‌ ಎಲ್ಲರಿಗೂ ಹತ್ತಿರವಾಗಿದೆ. ಈ ಬಜೆಟ್‌ ನೋಡಿದರೆ ಭಾರತದ ಸಾರ್ವಭೌಮತ್ವ ಎತ್ತಿಹಿಡಿಯುವಲ್ಲಿ ಸಫಲವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, 53.5 ಲಕ್ಷ ಕೋಟಿ ಗಾತ್ರದ ಬಜೆಟ್‌ ಮಂಡಿಸಲಾಗಿದೆ. ದೇಶದ ಪುರಾತನ ಸ್ಥಳಗಳನ್ನು ಅಭಿವೃದ್ಧಿಗೊಳಿಸಲು ಈ ಬಜೆಟ್‌ ಹೆಚ್ಚು ಮಹತ್ವ ನೀಡಿದೆ. ಕರ್ನಾಟಕಕ್ಕೆ ರೈಲ್ವೆ ಸ್ಟೇಷನ್ ಕಾರಿಡಾರ್‌ ಘೋಷಣೆ ಮಾಡಲಾಗಿದೆ. ಕಳೆದ 10 ವರ್ಷಗಳಿಂದ ದೇಶದಲ್ಲಿ 25 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ರೈತರ ಆದಾಯ ದ್ವಿಗುಣಕ್ಕೆ ಒತ್ತು ನೀಡಲಾಗಿದೆ ಎಂದರು.

ಇನ್ನು 500 ಜಲಾಶಯಗಳು ಮತ್ತು ಅಮೃತ್‌ ಸರೋವರಗಳ ಸಮಗ್ರ ಅಭಿವೃದ್ಧಿ ಮೂಲಕ ಮೀನುಗಾರಿಕೆ ಕ್ಷೇತ್ರವನ್ನು ಬಲಪಡಿಸುವುದು, ಪಶುಸಂಗೋಪನೆ ಕ್ಷೇತ್ರದಲ್ಲಿ ಉದ್ಯಮಶೀಲನೆ ಅಭಿವೃದ್ಧಿ ಮೂಲಕ ಉದ್ಯೋಗಾವಕಾಶ ಒದಗಿಸುವುದು, ತೆಂಗು ಬೆಳೆಗೆ ಪ್ರೋತ್ಸಾಹ ಯೋಜನೆಯಡಿ ತೆಂಗು ಉತ್ಪಾದನೆ ಹೆಚ್ಚಳ ಹಾಗೂ 1 ಕೋಟಿ ರೈತರು ಸೇರಿ 3 ಕೋಟಿ ಜನರಿಗೆ ನೆರವು ನೀಡುವುದು, ಭಾರತೀಯ ಗೋಡಂಬಿ ಮತ್ತೊ ಕೋಕೋವನ್ನು 2030ರ ವೇಳೆ ಪ್ರೀಮಿಯಂ ಗ್ಲೋಬಲ್‌ ಬ್ರ್ಯಾಂಡ್‌ ಆಗಿ ರೂಪಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸುದ್ದಿಗೋಷ್ಠಿ ವಿಡಿಯೊ



ರಾಜ್ಯ ಸರ್ಕಾರದ ಸಹಯೋಗದಲ್ಲಿ ಭಾರತೀಯ ಶ್ರೀಗಂಧದ ವೈಭವವನ್ನು ಪುನಃಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಸೇರಿ ಪ್ರಮುಖ ನಗರಗಳನು ಜೋಡಿಸಲು‌ 7 ಹೈ ಸ್ಪೀಡ್‌ ರೈಲು ಯೋಜನೆ, ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳಿಗೆ 1.4 ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮಹಿಳೆಯರಿಗೆ ಶಿ ಮಾರ್ಟ್‌ ಯೋಜನೆ ಮಾಡಲಾಗಿದೆ. ಶ್ರೀಗಂಧ, ತೆಂಗು, ಕೋಕೋ ಬೆಳೆ ಉತ್ಪಾದನೆಗೆ ವಿಶೇಷ ಯೋಜನೆ, ಇದು ತುಮಕೂರು, ಮಂಗಳೂರು, ಉಡುಪಿ, ಕಾರವಾರಕ್ಕೆ ಉಪಯೋಗವಾಗುತ್ತದೆ.

"ಸಂಪೂರ್ಣವಾಗಿ ನೀರಸ" ; 2026 ರ ಕೇಂದ್ರ ಬಜೆಟ್‌ಗೆ ವಿರೋಧ ಪಕ್ಷದ ಪ್ರತಿಕ್ರಿಯೆ ಏನು?

ಟೆಕ್ಸ್‌ಟೈಲ್‌ ಅಭಿವೃದ್ಧಿಗೆ ರಾಷ್ಟ್ರೀಯ ನೀತಿ, ಜವಳಿ ಕ್ಷೇತ್ರಕ್ಕೆ ಉತ್ತೇಜನ, ಎಂಎಸ್‌ಎಂಇ ಕ್ಷೇತ್ರಕ್ಕೆ 10,000 ಕೋಟಿ ಬಿಡುಗಡೆ, ಬಂಡವಾಳ ವೆಚ್ಚ 11.2 ಲಕ್ಷ ಕೋಟಿಯಿಂದ 12.2 ಲಕ್ಷ ಕೋಟಿಗೆ ಹೆಚ್ಚಳ, 2 ಮತ್ತು 3 ಟಯರ್ ಸಿಟಿಗಳ ಅಭಿವೃದ್ಧಿಗೆ 5000 ಕೋಟಿ, ಕರಾವಳಿಯಲ್ಲಿ ಮೌಂಟನ್‌ ಟ್ರಕ್ಕಿಂಕ್‌ ಯೋಜನೆ, ಪ್ರತಿ ಜಿಲ್ಲೆಗೆ ಮಹಿಳಾ ವಸತಿ ನಿಲಯ ಸ್ಥಾಪನೆ, 17 ಕ್ಯಾನ್ಸರ್‌ ಔಷಧಗಳಿಗೆ ಕಸ್ಟಮ್ಸ್‌ ಸುಂಕದಿಂದ ವಿನಾಯಿತಿ ನೀಡಲಾಗಿದೆ ಎಂದು ಮಾಹಿತಿ