ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru Viral Video: ಮಲಗಿದ್ದ ಮಕ್ಕಳ ನಡುವೆ ಕಾಣಿಸಿಕೊಂಡ ಬೃಹತ್‌ ನಾಗರಹಾವು; ಬೆಚ್ಚಿಬಿದ್ದ ಪೋಷಕರು!

ಬೆಂಗಳೂರಿನ ಯಲಹಂಕ ತಾಲೂಕಿನ ಹೆಸರಘಟ್ಟದ ತೋಟಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಮಕ್ಕಳ ನಡುವೆ ರಗ್ಗಿನೊಳಗೆ ಬೆಚ್ಚಗೆ ಅಡಗಿ ಕುಳಿತಿದ್ದ 5 ಅಡಿ ಉದ್ದದ ಅಪಾಯಕಾರಿ ನಾಗರಹಾವನ್ನು ಕಂಡು ಹೆತ್ತವರು ಬೆಚ್ಚಿ ಬಿದ್ದಿದ್ದಾರೆ. ನಂತರ ಉರಗ ತಜ್ಞ ಆಗಮಿಸಿ, ಮಕ್ಕಳನ್ನು ರಕ್ಷಿಸಿ, ಹಾವನ್ನು ಸೆರೆ ಹಿಡಿದಿದ್ದಾರೆ.

ಬೆಂಗಳೂರು: ಮನೆಯಲ್ಲಿ ಮಲಗಿದ್ದ ಮಕ್ಕಳ ನಡುವೆ ಬೃಹತ್‌ ನಾಗರಹಾವು (Cobra) ಕಾಣಿಸಿಕೊಂಡು ಆತಂಕ ಮೂಡಿಸಿದ ಘಟನೆ ಯಲಹಂಕ ತಾಲೂಕಿನ ಹೆಸರಘಟ್ಟದ ತೋಟಗೆರೆ ಗ್ರಾಮದಲ್ಲಿ ನಡೆದಿದೆ. ರಗ್ಗಿನೊಳಗೆ ಬೆಚ್ಚಗೆ ಅಡಗಿ ಕುಳಿತಿದ್ದ 5 ಅಡಿ ಉದ್ದದ ಅಪಾಯಕಾರಿ ನಾಗರಹಾವನ್ನು ಕಂಡು ಹೆತ್ತವರು ಬೆಚ್ಚಿ ಬಿದ್ದಿದ್ದಾರೆ. ಆದರೆ, ಉರಗ ತಜ್ಞ ಪ್ರಶಾಂತ್ ಅವರು ಹಾವನ್ನು ಸೆರೆ ಹಿಡಿದು, ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Bengaluru Viral Video) ಆಗಿದೆ.

ತೋಟಗೆರೆ ಗ್ರಾಮದಲ್ಲಿ ಜುಲೈ 2 ರಾತ್ರಿ 10:50ರ ಸಮಯದಲ್ಲಿ ಮನೆಯೊಂದರಲ್ಲಿ ನಾಗರಹಾವು ಸೇರಿಕೊಂಡಿತ್ತು. ಹಾವು ಮಂಚದ ಕೆಳಗೋ, ಪಾತ್ರೆಗಳ ನಡುವೆಯೋ, ಚೀಲಗಳ ನಡುವೆ ಸೇರಿಕೊಂಡಿದ್ದರೆ ಪೋಷಕರು ಧೈರ್ಯವಾಗಿರುತ್ತಿದ್ದರು. ಆದರೆ ಮಲಗಿದ್ದ ಮಕ್ಕಳಿಬ್ಬರ ನಡುವೆ ನಾಗರ ಹಾವು ಸೇರಿಕೊಂಡಿತ್ತು. ಇದರಿಂದ ಪೋಷಕರು ಆತಂಕಗೊಂಡಿದ್ದರು.

'ಭಾರತೀಯರು ಮಾನಸಿಕವಾಗಿ ಬಡವರು’: ಬೆಂಗಳೂರಿನ ರೆಸ್ಟೊರೆಂಟ್‌ನಲ್ಲಿ ಫ್ರೀ ಊಟಕ್ಕೆ ಮುಗಿಬಿದ್ದ ಜನರ ವಿಡಿಯೋ ವೈರಲ್‌



ರಗ್ಗಿನೊಳಗೆ ಅಡಗಿದ ನಾಗರ ಹಾವನ್ನು ನೋಡಿ ಪೋಷಕರು ಹೆದರಿ ಹೋಗಿದ್ದರು. ಅಪಾಯಕಾರಿ ಹಾವು ಇದಾಗಿದ್ದರಿಂದ ಮಕ್ಕಳ ರಕ್ಷಣೆ ಮಾಡುವ ವೇಳೆ ಎಲ್ಲಿ ಕಚ್ಚಿ ಬಿಡುತ್ತದೋ ಎಂಬ ಭಯದಲ್ಲಿ ಪೋಷಕರಿದ್ದರು. ಆದರೆ, ಉರಗ ತಜ್ಞ ಪ್ರಶಾಂತ್ ಅವರು ಮಕ್ಕಳ ಪ್ರಾಣ ರಕ್ಷಣೆ ಮಾಡುವ ಜೊತೆಗೆ ಹಾವನ್ನೂ ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.