ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲಾಯಲ್ಟಿ ಯೋಜನೆಯ ಒಂದು ಹೊಸ ಅಧ್ಯಾಯ ಆರಂಭ

ಮೊದಲ ಟ್ರಾವೆಲ್- ರಿಟೇಲ್ ಲಾಯಲ್ಟಿ ಸಂಯೋಜನೆಯ ಮೂಲಕ ದೇಶದ ಅತಿದೊಡ್ಡ ಇ- ಕಾಮರ್ಸ್ ಸಂಸ್ಥೆ ಮತ್ತು ಜಾಗತಿಕ ಆತಿಥ್ಯ ಸಂಸ್ಥೆ ಪರಸ್ಪರ ಜೊತೆಗೂಡಿವೆ. ಸದಸ್ಯರು ಈ ಮೂಲಕ ಈಗ ಆಕರ್ಷಕ ರಿವಾರ್ಡ್ ಗಳನ್ನು ಗಳಿಸಬಹುದು ಮತ್ತು ಅದನ್ನು ಫ್ಲಿಪ್‌ ಕಾರ್ಟ್‌ನ ಶಾಪಿಂಗ್ ವ್ಯವಸ್ಥೆ ಮತ್ತು ಮ್ಯಾರಿಯಟ್ ಬೊನ್‌ವಾಯ್‌ ನ ಜಾಗತಿಕ ಟ್ರಾವೆಲ್ ಪ್ರೋಗ್ರಾಂನಲ್ಲಿ ಬಳಕೆ ಮಾಡಿಕೊಳ್ಳ ಬಹುದು.

ಲಾಯಲ್ಟಿ ಯೋಜನೆಯ ಒಂದು ಹೊಸ ಅಧ್ಯಾಯ ಆರಂಭ

Ashok Nayak Ashok Nayak Aug 22, 2025 8:10 PM

ಲಾಯಲ್ಟಿ ಯೋಜನೆಯ ಒಂದು ಹೊಸ ಅಧ್ಯಾಯ ಆರಂಭ: ಭಾರತೀಯ ಗ್ರಾಹಕರಿಗೆ ಅತ್ಯುತ್ತಮ ಪ್ರಯೋಜನ ಮತ್ತು ಆಹ್ಲಾದಕರ ಅನುಭವ ಒದಗಿಸಲು ಮಹತ್ವದ ಪಾಲುದಾರಿಕೆ ಮಾಡಿಕೊಂಡ ಮ್ಯಾರಿಯಟ್ ಬೊನ್‌ವಾಯ್ ಮತ್ತು ಫ್ಲಿಪ್‌ಕಾರ್ಟ್

ಭಾರತದ ಮ್ಯಾರಿಯಟ್ ಇಂಟರ್‌ ನ್ಯಾಷನಲ್‌ ಸಂಸ್ಥೆಯ ಪ್ರಶಸ್ತಿ- ವಿಜೇತ ಪ್ರಯಾಣ ಸಂಸ್ಥೆಯಾಗಿ ರುವ ಮ್ಯಾರಿಯಟ್ ಬೊನ್‌ವಾಯ್ ಮತ್ತು ದೇಶದ ಅತ್ಯಂತ ಆಕರ್ಷಕ ರಿವಾರ್ಡ್ ಗಳನ್ನು ಒದಗಿಸುವ ಲಾಯಲ್ಟಿ ಪ್ರೋಗ್ರಾಂ ಆದ ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್ಸ್ ಇದೀಗ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಮೂಲಕ ಭಾರತದಲ್ಲಿ ಉದ್ಯಮದಲ್ಲಿಯೇ ಮೊದಲ ಬಾರಿಗೆ ಎರಡು ಲಾಯಲ್ಟಿ ಯೋಜನೆಗಳನ್ನು ಸಂಯೋಜನೆ ಮಾಡಿಕೊಂಡಿರುವುದಾಗಿ ಘೋಷಿಸಿದೆ.

ಈ ಸಹಭಾಗಿತ್ವದ ಮೂಲಕ ಮ್ಯಾರಿಯಟ್ ಬೊನ್‌ವಾಯ್‌ ನ ಜಾಗತಿಕ ಮಟ್ಟದ ರಿವಾರ್ಡ್ ವ್ಯವಸ್ಥೆ ಮತ್ತು ಫ್ಲಿಪ್‌ಕಾರ್ಟ್‌ ನ ಸೂಪರ್‌ಕಾಯಿನ್ಸ್‌ ರಿವಾರ್ಡ್ ಯೋಜನೆಯನ್ನು ಜೊತೆಗೂಡಿಸ ಲಾಗುತ್ತದೆ. ಸೂಪರ್ ಕಾಯಿನ್ಸ್ ರಿವಾರ್ಡ್ ಯೋಜನೆಯು ಸದಸ್ಯರಿಗೆ ಹೆಚ್ಚು ಉಳಿತಾಯ ಗಳಿಸಲು, ಸ್ಮಾರ್ಟ್‌ ಆಗಿ ಬಳಕೆ ಮಾಡಲು ಮತ್ತು ಪ್ರತಿಫಲಗಳನ್ನು ತ್ವರಿತವಾಗಿ ತೆಗೆದುಕೊಳ್ಳಲು ಅನುವು ಮಾಡಿ ಕೊಡುವ ಅತ್ಯುತ್ತಮ ವ್ಯವಸ್ಥೆ ಆಗಿರುವ ಫ್ಲಿಪ್‌ಕಾರ್ಟ್ ಪ್ಲಸ್ ಲಾಯಲ್ಟಿ ಯೋಜನೆಯ ಕೇಂದ್ರಭಾಗವಾಗಿದೆ. ಇದು “ನಿಮ್ಮ ಕಾರ್ಟ್ ನಿಮ್ಮನ್ನು ಬೇರೆ ಬೇರೆ ಸ್ಥಳಗಳಿಗೆ ಕೊಂಡೊಯ್ಯುತ್ತದೆ” ಎಂಬ ಘೋಷವಾಕ್ಯದ ಆಧಾರದ ಮೇಲೆ ರೂಪಿತಗೊಂಡಿರುವ ಭಾರತ ದಲ್ಲಿನ ಮೊದಲ ಸಹಯೋಗವಾಗಿದ್ದು, ಲಕ್ಷಾಂತರ ಸದಸ್ಯರಿಗೆ ಫ್ಲಿಪ್‌ ಕಾರ್ಟ್ ಸೂಪರ್‌ಕಾಯಿನ್ಸ್ ಮತ್ತು ಮ್ಯಾರಿಯಟ್ ಬೊನ್‌ವಾಯ್ ಪಾಯಿಂಟ್‌ಗಳನ್ನು ಗಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಸುಲಭವಾಗಿ ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: Ratan Tata: ನಿಗೂಢ ವ್ಯಕ್ತಿಗೆ ರತನ್‌ ಟಾಟಾ ವಿಲ್!‌ 500 ಕೋಟಿ ರುಪಾಯಿ ಕೊಟ್ಟರೇ?

ಈ ಮೂಲಕ ದೈನಂದಿನ ಶಾಪಿಂಗ್ ಕಾರ್ಟ್‌ ಮೇಲೆ ಉಚಿತ ಹೋಟೆಲ್ ಸ್ಟೇ, ಸೂಟ್ ಅಪ್‌ ಗ್ರೇಡ್‌ಗಳು ಮತ್ತು ಜಾಗತಿಕ ಮಟ್ಟದಲ್ಲಿ ಮರೆಯಲಾಗದ ಪ್ರವಾಸ ಮಾಡುವವರೆಗೆ ಹಲವಾರು ರಿವಾರ್ಡ್ ಗಳನ್ನು ಅಥವಾ ಪ್ರಯೋಜನಗಳನ್ನು ಒದಗಿಸುತ್ತದೆ.

ಮ್ಯಾರಿಯಟ್ ಬೊನ್‌ವಾಯ್ ಮತ್ತು ಫ್ಲಿಪ್‌ಕಾರ್ಟ್‌ನ ಪಾಲುದಾರಿಕೆಯು ಭಾರತದ ಗ್ರಾಹಕರಿಗೆ ಎರಡೂ ವಿಭಾಗಗಳ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುತ್ತದೆ. ಶಾಪಿಂಗ್, ಗಳಿಕೆ ಮತ್ತು ಪ್ರಯಾಣವನ್ನು ಎಂದಿಗಿಂತಲೂ ಸುಲಭಗೊಳಿಸುತ್ತದೆ, ದೈನಂದಿನ ವಹಿವಾಟುಗಳನ್ನು ಮರೆಯ ಲಾಗದ ಅನುಭವಗಳಾಗಿ ಪರಿವರ್ತಿಸುತ್ತದೆ.

ಎರಡೂ ಖಾತೆಗಳನ್ನು ಲಿಂಕ್ ಮಾಡುವ ಮೂಲಕ, ಸದಸ್ಯರು ವಿಶೇಷ ಮ್ಯಾರಿಯಟ್ ಬೊನ್‌ ವಾಯ್ ಸದಸ್ಯರ ಪ್ರಯೋಜನಗಳನ್ನು ಆನಂದಿಸಬಹುದು, ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಿ ದಾಗ ಮ್ಯಾರಿಯಟ್ ಬೊನ್‌ವಾಯ್ ಪಾಯಿಂಟ್‌ಗಳನ್ನು ಗಳಿಸಬಹುದು ಮತ್ತು ಕ್ಲಿಯರ್‌ಟ್ರಿಪ್ ಮತ್ತು ಫ್ಲಿಪ್‌ಕಾರ್ಟ್ ಟ್ರಾವೆಲ್‌ನಲ್ಲಿ ಉತ್ತಮ ಉಡುಗೊರೆಗಳನ್ನು ಪಡೆಯಬಹುದು. ಈ ಕುರಿತು ಮಾತನಾಡಿರುವ ಮ್ಯಾರಿಯಟ್ ಇಂಟರ್‌ನ್ಯಾಷನಲ್ ಏಷಿಯಾ ಪೆಸಿಫಿಕ್ (ಚೀನಾ ಹೊರತುಪಡಿಸಿ) ವಿಭಾಗದ ಚೀಫ್ ಬಿಸಿನೆಸ್ ಆಫೀಸರ್ ಜಾನ್ ಟೂಮೆ ಅವ ರು, “ಈ ಸಹಭಾಗಿತ್ವವು ಭಾರತದಲ್ಲಿನ ನಮ್ಮ ಮ್ಯಾರಿಯಟ್ ಬೊನ್‌ವಾಯ್ ಸದಸ್ಯರಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸಲು ಒಂದು ಮಹತ್ವದ ಹೆಜ್ಜೆಯಾಗಿದೆ.

ಫ್ಲಿಪ್‌ಕಾರ್ಟ್‌ ನಂತಹ ಸ್ಥಳೀಯ ಮಹತ್ವದ ಸಂಸ್ಥೆಯ ಜೊತೆ ಒಗ್ಗೂಡುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಪ್ರಯಾಣ ಮತ್ತು ದೈನಂದಿನ ಪ್ರತಿಫಲಗಳ ಪ್ರಯೋಜನಗಳನ್ನು ಆನಂದಿಸಲು ಸುಲಭ ಮಾರ್ಗ ಒದಗಿಸುತ್ತಿದ್ದೇವೆ. ಭಾರತದ 40ಕ್ಕೂ ಹೆಚ್ಚು ನಗರಗಳಲ್ಲಿ 159 ಹೋಟೆಲ್‌ ಗಳನ್ನು ಹೊಂದಿರುವ ನಮ್ಮ ಜಾಗತಿಕ ಟ್ರಾವೆಲ್ ಪ್ರೋಗ್ರಾಂ ಅನ್ನು ಫ್ಲಿಪ್‌ಕಾರ್ಟ್‌ ನ ಬಳಕೆದಾರರಿಗೆ ಒದಗಿಸುವುದಕ್ಕೆ ಸಂತೋಷ ಪಡುತ್ತೇವೆ. ಅವರಿಗೆ ನಮ್ಮ ವಿವಿಧ ಪ್ರಯೋಜನಗಳು ಮತ್ತು ವಿಶೇಷ ಮ್ಯಾರಿಯಟ್ ಬೊನ್‌ವಾಯ್ ಮೊಮೆಂಟ್ ಅನುಭವಗಳನ್ನು ಒದಗಿಸುತ್ತಿದ್ದೇವೆ. ಮುಂಬರುವ ತಿಂಗಳುಗಳಲ್ಲಿ, ಈ ಪಾಲುದಾರಿಕೆಯನ್ನು ಅಂತರರಾಷ್ಟ್ರೀಯ ತಾಣಗಳು ಮತ್ತು ನಮ್ಮ ವಿಶಾಲ ವಾದ ಹೋಟೆಲ್‌ ಗಳ ವಿಭಾಗಗಳಿಗೆ ವಿಸ್ತರಿಸಲು ಎದುರುನೋಡುತ್ತಿದ್ದೇವೆ, ಮತ್ತು ಆ ಮೂಲಕ ನಮ್ಮ ಸದಸ್ಯರ ಪ್ರಯಾಣ ಅನುಭವಗಳನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತೇವೆ” ಎಂದು ಹೇಳಿದ್ದಾರೆ.

ಮ್ಯಾರಿಯಟ್ ಇಂಟರ್‌ನ್ಯಾಷನಲ್ ದಕ್ಷಿಣ ಏಷಿಯಾ ರೀಜನಲ್ ವೈಸ್ ಪ್ರೆಸಿಡೆಂಟ್ ರಂಜು ಅಲೆಕ್ಸ್ ಅವರು , “ಈ ಸಹಭಾಗಿತ್ವವು ನಮ್ಮ ಸದಸ್ಯರಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸುವುದಲ್ಲದೆ ಭಾರತದ ಅದ್ಭುತ ಪ್ರಯಾಣ ವಿಭಾಗದ ಅಭಿವೃದ್ಧಿ ಅವಕಾಶವನ್ನು ಬಳಸಿಕೊಳ್ಳಲು ಎರಡೂ ಬ್ರಾಂಡ್‌ ಗಳಿಗೂ ಅನುವು ಮಾಡುಕೊಡುತ್ತದೆ. ರಜಾ ಪ್ರವಾಸಗಳಿಂದ ಹಿಡಿದು ದೈನಂದಿನ ಖರೀದಿಗಳವರೆಗೆ ಸದಸ್ಯರು ಈಗ ತಮ್ಮ ಜೀವನಶೈಲಿಗೆ ಸುಲಭವಾಗಿ ಹೊಂದಿಕೊಳ್ಳುವ ಕ್ರಾಸ್- ಪ್ಲಾಟ್‌ಫಾರ್ಮ್ ರಿವಾರ್ಡ್ ಗಳನ್ನು ಪಡೆಯಬಹುದು.

ಇದು ಕೇವಲ ಪಾಯಿಂಟ್‌ ಗಳನ್ನು ಗಳಿಸುವ ಬಗ್ಗೆ ಮಾತ್ರವೇ ಅಲ್ಲ, ಇದು ಪ್ರತಿ ಕ್ಷಣ, ಖರೀದಿ ಮತ್ತು ಅನುಭವವನ್ನು ಮೌಲ್ಯಯುತವಾಗಿಸುವ ಗ್ರಾಹಕರೇ ಮೊದಲು ವಿಧಾನದ ಫಲವಾಗಿದೆ” ಎಂದು ಹೇಳಿದರು. ಫ್ಲಿಪ್‌ಕಾರ್ಟ್ ಟ್ರಾವೆಲ್ ಮುಖ್ಯಸ್ಥರಾದ ಮಂಜರಿ ಸಿಂಘಾಲ್ ಅವರು, “ಹಲವು ವರ್ಷಗಳಿಂದ ನಮ್ಮ ಗ್ರಾಹಕರ ಜೀವನಕ್ಕೆ ಅತ್ಯುತ್ತಮ ಮೌಲ್ಯವನ್ನು ನೀಡುವ ಅನುಭವಗಳನ್ನು ಒದಗಿಸುವ ಕಡೆಗೆ ನಾವು ಗಮನಹರಿಸಿದ್ದೇವೆ ಮತ್ತು ಸೂಪರ್‌ಕಾಯಿನ್ಸ್‌ ಅನ್ನು ಭಾರತದ ಅತ್ಯಂತ ರಿವಾರ್ಡಿಂಗ್ ಮತ್ತು ಒಳಗೊಳ್ಳುವ ಲಾಯಲ್ಟಿ ಪ್ರೋಗ್ರಾಂಗಳಲ್ಲಿ ಒಂದಾಗಿ ರೂಪಿಸಿರುವುದಕ್ಕೆ ಹೆಮ್ಮೆಪಡುತ್ತೇವೆ. ಈ ಪಾಲುದಾರಿಕೆಯ ಸಂದರ್ಭದಲ್ಲಿ, ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್ಸ್ ಮತ್ತು ಮ್ಯಾರಿಯಟ್ ಬೊನ್‌ವಾಯ್ ಪಾಯಿಂಟ್‌ಗಳನ್ನು ಒಟ್ಟಿಗೆ ತರುವುದರಿಂದ ನಾವು ಕೇವಲ ವಹಿವಾಟಿಗಳಿಗೆ ಮಾತ್ರ ರಿವಾರ್ಡ್ ನೀಡುತ್ತಿಲ್ಲ, ಬದಲಿಗೆ ಶಾಪಿಂಗ್, ಪ್ರಯಾಣ ಮತ್ತು ಸ್ಟೇ ಅವಕಾಶ ಒದಗಿಸುವ ಮೂಲಕ ಜೀವನಶೈಲಿಯನ್ನು ಶ್ರೀಮಂತಗೊಳಿಸುತ್ತಿದ್ದೇವೆ. ಈ ಸಹಕಾರವು ಸಂಪೂರ್ಣವಾಗಿ ಏಕೀಕೃತ, ಕ್ರಾಸ್-ಕ್ಯಾಟಗರಿ ರಿವಾರ್ಡ್ ವ್ಯವಸ್ಥೆ ಸೃಷ್ಟಿಸುವ ನಮ್ಮ ಉದ್ದೇಶ ವನ್ನು ಬಲಪಡಿಸುತ್ತದೆ.

ಫ್ಲಿಪ್‌ಕಾರ್ಟ್‌ ನಲ್ಲಿ ಶಾಪಿಂಗ್, ಮ್ಯಾರಿಯಟ್ ಹೋಟೆಲ್ ವಾಸವನ್ನು ಬುಕ್ ಮಾಡುವುದು ಅಥವಾ ಫ್ಲಿಪ್‌ಕಾರ್ಟ್ ಟ್ರಾವೆಲ್ ಅಥವಾ ಕ್ಲಿಯರ್‌ಟ್ರಿಪ್‌ನಲ್ಲಿ ಪ್ರವಾಸವನ್ನು ಯೋಜಿಸುವ ಮೂಲಕ ಗ್ರಾಹಕರು ಈಗ ಹೆಚ್ಚು ಅರ್ಥಪೂರ್ಣ ರೀತಿಯಲ್ಲಿ ಪ್ರತಿಫಲಗಳನ್ನು ಗಳಿಸಬಹುದು ಮತ್ತು ರಿಡೀಮ್ ಮಾಡಿಕೊಳ್ಳಬಹುದು” ಎಂದು ಹೇಳಿದರು.

ಈ ಪಾಲುದಾರಿಕೆಯ ಪ್ರಮುಖ ಪ್ರಯೋಜನಗಳು:

ಮ್ಯಾರಿಯಟ್ ಬೊನ್‌ವಾಯ್ ಸದಸ್ಯರು ಫ್ಲಿಪ್‌ಕಾರ್ಟ್‌ನ ಮಾರ್ಕೆಟ್‌ಪ್ಲೇಸ್‌ನಲ್ಲಿ ಮ್ಯಾರಿಯಟ್ ಬೊನ್‌ವಾಯ್ ಪಾಯಿಂಟ್‌ಗಳನ್ನು ಗಳಿಸಬಹುದು.

ಗ್ರಾಹಕರು ಎರಡೂ ಪ್ಲಾಟ್‌ಫಾರ್ಮ್‌ಗಳ ರಿಜಿಸ್ಟರ್ಡ್ ಸದಸ್ಯರಾಗಿರಬೇಕು ಮತ್ತು ಪ್ರಯೋಜನ ಗಳನ್ನು ಪಡೆಯಲು ತಮ್ಮ ಖಾತೆಗಳನ್ನು ಲಿಂಕ್ ಮಾಡಬೇಕು.

ಖಾತೆಗಳನ್ನು ಲಿಂಕ್ ಮಾಡಿರುವ ಜಂಟಿ ಗ್ರಾಹಕರು ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್ಸ್‌ ಅನ್ನು ಮ್ಯಾರಿಯಟ್ ಬೊನ್‌ವಾಯ್ ಪಾಯಿಂಟ್‌ಗಳಿಗೆ ವರ್ಗಾಯಿಸಬಹುದು ಮತ್ತು marriot.comನಲ್ಲಿ ಹೋಟೆಲ್‌ಗಳನ್ನು ಬುಕ್ ಮಾಡಲು ಅವುಗಳನ್ನು ಬಳಕೆ ಮಾಡಿಕೊಳ್ಳಬಹುದು.

ಸದಸ್ಯರು ಮ್ಯಾರಿಯಟ್ ಬೊನ್‌ವಾಯ್ ಪಾಯಿಂಟ್‌ ಗಳನ್ನು ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್ಸ್‌ ಗೆ ವಿನಿಮಯ ಮಾಡಿಕೊಳ್ಳಬಹುದು ಮತ್ತು 2 ಮ್ಯಾರಿಯಟ್ ಬೊನ್‌ವಾಯ್ ಪಾಯಿಂಟ್‌ಗಳಿಗೆ 1 ಸೂಪರ್‌ಕಾಯಿನ್ ಮತ್ತು 2 ಸೂಪರ್‌ಕಾಯಿನ್‌ಗಳಿಗೆ 1 ಮ್ಯಾರಿಯಟ್ ಬೊನ್‌ವಾಯ್ ಪಾಯಿಂಟ್‌ ನ ವಿನಿಮಯ ದರದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್‌ಗಾಗಿ ರಿಡೀಮ್ ಮಾಡಿಕೊಳ್ಳಬಹುದು.

ಮ್ಯಾರಿಯಟ್ ಬೊನ್‌ವಾಯ್ ಸದಸ್ಯರ ಪ್ರಯೋಜನಗಳು ಫ್ಲಿಪ್‌ಕಾರ್ಟ್ ಸದಸ್ಯರಿಗೆ ನೇರವಾಗಿ ಪ್ಲಾಟ್‌ಫಾರ್ಮ್ (ಎಫ್‌ಕೆ ಟ್ರಾವೆಲ್), ಕೆಟಗರಿ ಪುಟ, ಸೂಪರ್‌ಕಾಯಿನ್ ಝೋನ್ ಮತ್ತು ಅಕೌಂಟ್ ಸೆಕ್ಷನ್ ಮೂಲಕ ಸುಲಭವಾಗಿ ಲಭ್ಯವಿವೆ.

ಈ ಪಾಲುದಾರಿಕೆಯು ಮ್ಯಾರಿಯಟ್ ಬೊನ್‌ವಾಯ್‌ನ ಮೌಲ್ಯವನ್ನು ಹೋಟೆಲ್ ವಾಸದಾಚೆಗೆ ವಿಸ್ತರಿಸುತ್ತಿದ್ದು, ದೈನಂದಿನ ಜೀವನಕ್ಕೆ ನೆರವಾಗುವ ಪ್ರಯೋಜನಗಳನ್ನೂ ಒದಗಿಸುತ್ತದೆ.