ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru robbery: ಬೆಂಗಳೂರಿನಲ್ಲಿ ಶಾಕಿಂಗ್‌ ಘಟನೆ; ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರಗಳ್ಳತನಕ್ಕೆ ಯತ್ನ, ಖದೀಮನಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ!

ಬೆಂಗಳೂರಿನಲ್ಲಿ ದೊಮ್ಮಲೂರಿನಲ್ಲಿ ಹಾಡಹಗಲೇ ಕಚೇರಿಯೊಂದಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಚಿನ್ನ ನೀಡುವಂತೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಚಿನ್ನ ನೀಡಲು ನಿರಾಕರಿಸಿದರೆ ಕತ್ತು ಸೀಳುವುದಾಗಿ ಯುವತಿಗೆ ಬೆದರಿಕೆ ಹಾಕಿದ ಆರೋಪಿಯನ್ನು ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಂಗಳೂರು: ಹಾಡಹಗಲೇ ಕಚೇರಿಯೊಂದಕ್ಕೆ ನುಗ್ಗಿದ ವ್ಯಕ್ತಿಯೊಬ್ಬ, ಯುವತಿ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ನೀಡುವಂತೆ ಬೆದರಿಕೆ ಹಾಕಿರುವ ಶಾಕಿಂಗ್‌ ಘಟನೆ (Bengaluru robbery) ಬೆಂಗಳೂರಿನ ದೊಮ್ಮಲೂರಿನ 100 ಅಡಿ ರಸ್ತೆಯಲ್ಲಿ ನಡೆದಿದೆ. ಚಿನ್ನದ ಸರ ಕೊಡದಿದ್ದರೆ ಕತ್ತು ಸೀಳುವುದಾಗಿ ಖದೀಮ ಬೆದರಿಸಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವಾರಣ ನಿರ್ಮಾಣವಾಗಿತ್ತು.

ಕಚೇರಿಗೆ ನುಗ್ಗಿದ ಆರೋಪಿ ಪ್ರಭುರಾಜ್ ಎಂಬಾತ ಯುವತಿಗೆ ಚಾಕು ತೋರಿಸಿ ಚಿನ್ನದ ಸರ ನೀಡುವಂತೆ ಒತ್ತಾಯಿಸಿದ್ದಾನೆ. ಅಲ್ಲದೆ, ಯವತಿಯನ್ನು ಕುತ್ತಿಗೆಗೆ ಚಾಕು ಹಿಡಿದು ಕಚೇರಿಯಿಂದ ಹೊರಗಡೆ ಕರೆದುಕೊಂಡು ಬಂದಿದ್ದು, ಕತ್ತು ಸೀಳುವುದಾಗಿ ಬೆದರಿಕೆ ಹಾಕಿದ್ದಾನೆ. ಕಚೇರಿಯಲ್ಲಿದ್ದ ಸಿಬ್ಬಂದಿ ಈ ಘಟನೆಯಿಂದ ಆತಂಕಗೊಂಡು ಜಮಾಯಿಸಿದ್ದಾರೆ.



ಬತ್ತಿಕೊಪ್ಪದಲ್ಲಿ ಅಮಾನವೀಯ ಕೃತ್ಯ; ಮೂವರು ಯುವಕರನ್ನು ಅರೆಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ!

ಬಳಿಕ ಸ್ಥಳೀಯರು ಹಾಗೂ ಕಚೇರಿ ಸಿಬ್ಬಂದಿ ಸೇರಿಕೊಂಡು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ನಂತರ ಆತನನ್ನು ಇಂದಿರಾನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಇಂದಿರಾನಗರ ಪೊಲೀಸರು ಆರೋಪಿ ಪ್ರಭುರಾಜ್‌ನನ್ನು ಬಂಧಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.