ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

ಜೈಲಾಧಿಕಾರಿಗಳು ಕೋರ್ಟ್ ಆದೇಶ ಪಾಲಿಸದ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ದರ್ಶನ್ ಸಲ್ಲಿಸಿದ್ದಾರೆ. ಕೋರ್ಟಿಗೆ ಜೈಲು ಅಧೀಕ್ಷಕ ಸುರೇಶ್ ಖುದ್ದು ಹಾಜರಾಗಿ ಸಂಪೂರ್ಣ ವರದಿ ಸಲ್ಲಿಸಿದರು. ಕ್ವಾರಂಟೈನ್ ಸೆಲ್‌ನಿಂದ ಬ್ಯಾರಕ್‌ಗೆ ಸ್ಥಳಾಂತರಿಸಲು ನಟ ದರ್ಶನ್ ಕೋರಿದ್ದಾರೆ. ವಾಕ್ ಮಾಡಲು ಕಡಿಮೆ ಸಮಯ ಜಾಗ ನೀಡಿದ್ದಾರೆ. ಜೈಲಾಧಿಕಾರಿಗಳು ಕೋರ್ಟ್ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿದ್ದಾರೆ.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renuka swamy murder case) ಪ್ರಕರಣದಲ್ಲಿ ದೋಷಿಯಾಗಿ ಜೈಲಿನಲ್ಲಿರುವ ನಟ ದರ್ಶನ್‌ (Actor Darshan) ಅವರ ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯ (Sessions court) ಅಕ್ಟೋಬರ್ 9ಕ್ಕೆ ಆದೇಶ ಕಾಯ್ದಿರಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಗೆ ಬೇಕಾಗಿರುವ ವಸ್ತುಗಳನ್ನು ನೀಡದ ಜೈಲಿನ ಅಧಿಕಾರಿಗಳ ವಿರುದ್ಧ ದರ್ಶನ್‌ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನಟ ದರ್ಶನ್ ಪರ ವಕೀಲ ಹಾಗೂ ಸರ್ಕಾರದ ಪರ ವಕೀಲರ ಸುದೀರ್ಘ ವಾದ ಪ್ರತಿವಾದದ ಬಳಿಕ ಕೋರ್ಟ್ ಅಕ್ಟೋಬರ್ 9ಕ್ಕೆ ಆದೇಶ ಕಾಯ್ದಿರಿಸಿತು.

ಜೈಲಾಧಿಕಾರಿಗಳು ಕೋರ್ಟ್ ಆದೇಶ ಪಾಲಿಸದ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ದರ್ಶನ್ ಸಲ್ಲಿಸಿದ್ದಾರೆ. ಕೋರ್ಟಿಗೆ ಜೈಲು ಅಧೀಕ್ಷಕ ಸುರೇಶ್ ಖುದ್ದು ಹಾಜರಾಗಿ ಸಂಪೂರ್ಣ ವರದಿ ಸಲ್ಲಿಸಿದರು. ಕ್ವಾರಂಟೈನ್ ಸೆಲ್‌ನಿಂದ ಬ್ಯಾರಕ್‌ಗೆ ಸ್ಥಳಾಂತರಿಸಲು ನಟ ದರ್ಶನ್ ಕೋರಿದ್ದಾರೆ. ವಾಕ್ ಮಾಡಲು ಕಡಿಮೆ ಸಮಯ ಜಾಗ ನೀಡಿದ್ದಾರೆ. ಜೈಲಾಧಿಕಾರಿಗಳು ಕೋರ್ಟ್ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿದ್ದಾರೆ.

ಇನ್ನು ಜೈಲಿನಲ್ಲಿ ಹೆಚ್ಚುವರಿ ಹಾಸಿಗೆ ದಿಂಬು ನೀಡದ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಆರಂಭವಾಯಿತು. ಜೈಲು ಅಧಿಕಾರಿಗಳ ಪರವಾಗಿ ಎಸ್‍ಪಿಪಿ ಪ್ರಸನ್ನಕುಮಾರ್ ವಾದ ಆರಂಭಿಸಿದರು. ಜೈಲು ಕೈಪಿಡಿಯಂತೆ ಕ್ರಮ ಕೈಗೊಳ್ಳಲಾಗಿದೆ. ಟೆಲಿಫೋನ್ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಸಹ ಮಾಡಲಾಗಿದೆ. ಚಾದರ್, ಹಾಸಿಗೆ ದಿಂಬು ಕೊಡಲಾಗಿದೆ. ಪಲ್ಲಂಗ ಕೇಳಿದರೆ ಕೊಡಲು ಅವಕಾಶ ಇಲ್ಲ. ಓಡಾಡಲು ಅವಕಾಶ ಕೇಳಿದರು, ಅದನ್ನು ಸಹ ಕೊಟ್ಟಿದ್ದೇವೆ. ಎಷ್ಟು ಜಾಗವಿದೆಯೋ ಅಲ್ಲಿ ಅವಕಾಶ ಕೊಟ್ಟಿದ್ದೇವೆ ಎಂದು ವಾದಿಸಿದರು.

ಆರೋಪಿ ದರ್ಶನ್ ಪರ ವಕೀಲ ಸುನಿಲ್ ವಾದ ಮಂಡಿಸಿದರು. ಜೈಲಾಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ಅರ್ಥವಾಗಿಲ್ಲ. ಅಧಿಕಾರಿಗಳಿಗೆ ಇಂಗ್ಲಿಷ್ ಬರುತ್ತಿಲ್ಲವೆಂದು ಕಾಣುತ್ತದೆ. ಕೋರ್ಟ್ ಆದೇಶದ ಪ್ರತಿಯನ್ನು ಎಸೆದಿದ್ದಾರೆ. ಅವರು ಚಿನ್ನದ ಮಂಚವೇನೂ ಕೇಳಿಲ್ಲ. ಚೆಂಬು ಲೋಟ ಚಾಪೆ ಕೊಟ್ಟಿದ್ದಾರೆ. ಕಾರ್ಪೆಟ್ ಚಾದರ್ ಮೊದಲೇ ಕೊಟ್ಟಿದ್ದರು. ಕಂಬಳಿ ಮಾತ್ರ ಕೋರ್ಟ್ ಆದೇಶದ ಬಳಿಕ ಕೊಟ್ಟಿದ್ದಾರೆ. ಬ್ಯಾರಕ್ ಒಳಗೆ ಮಾತ್ರ ಅರ್ಧ ಗಂಟೆ ಓಡಾಡಲು ಬಿಟ್ಟಿದ್ದಾರೆ. ಹೊರಗಡೆ ಓಡಾಡಲು ಬಿಟ್ಟಿಲ್ಲ ಎಂದು ವಾದಿಸಿದರು.

ಈ ವೇಳೆ, ಜೈಲು ಅಧಿಕಾರಿಗಳಿಗೆ ಆರೋಪಿಗಳ ರಕ್ಷಣೆಯ ಹೊಣೆ ಇದೆ, ಅದನ್ನು ಅವರು ಪರಿಗಣಿಸಬೇಕಲ್ಲವೇ ಎಂದು ಜಡ್ಜ್ ಕೇಳಿದರು. ದರ್ಶನ್‌ಗೆ ಪ್ರತ್ಯೇಕ ರಿಜಿಸ್ಟರ್ ಇಟ್ಟಿದ್ದಾರೆ. ಯಾರು ನೋಡಲು ಬರುತ್ತಾರೆ ಎಂದು ನಮೂದಿಸಬೇಕಿದೆ ಎಂದು ಆರೋಪಿ ಪರ ವಕೀಲ ಸುನಿಲ್ ತಿಳಿಸಿದರು. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಹೊಣೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಅವರು ಕ್ರಮ ಕೈಗೊಳ್ಳಬಹುದು ಎಂದು ಜಡ್ಜ್ ತಿಳಿಸಿದರು.

ದರ್ಶನ್‌ರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇಟ್ಟಿದ್ದಾರೆ. ಬೇರೆ ಯಾರಿಗೂ ಈ ರೀತಿ ಕ್ವಾರಂಟೈನ್ ಸೆಲ್‌ನಲ್ಲಿ ಇಟ್ಟಿಲ್ಲ. ದರ್ಶನ್ ಗೆ ಮಾತ್ರ ಯಾಕೆ ಕ್ವಾರಂಟೈನ್ ಸೆಲ್? ಕಾನೂನು ಎಲ್ಲರಿಗೂ ಒಂದೇ. ಸೆಲೆಬ್ರಿಟಿ ರಕ್ಷಣೆಗೆ ಕ್ರಮ ಎಂದೆಲ್ಲಾ ಹೇಳುತ್ತಿದ್ದಾರೆ. ಆದರೆ ಉಗ್ರರನ್ನು ಇರಿಸುವ ಸೆಲ್‌ನಲ್ಲಿ ಇಟ್ಟಿದ್ದಾರೆ. ಯಾವ ಕೈದಿಗೆ ಯಾವ ಸೆಲ್ ನೀಡಬೇಕು ಎಂದು ಕೈಪಿಡಿಯಲ್ಲಿದೆ. ಕೇಂದ್ರ ಸರ್ಕಾರದ ಜೈಲು ಕೈಪಿಡಿಯನ್ನು ಸಹ ಜೈಲಾಧಿಕಾರಿಗಳು ಪಾಲಿಸುತ್ತಿಲ್ಲ. ಉತ್ತಮ ಆಹಾರ ಹಾಸಿಗೆ ನೀರಿಗೆ ಅವಕಾಶ ಇರಬೇಕು. ಹೊರಜಗತ್ತಿನ ಸಂಪರ್ಕವೂ ಕೈದಿಗಳಿಗಿರಬೇಕು. ಈ ಮಾರ್ಗಸೂಚಿಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ದರ್ಶನ್ ಪರ ವಕೀಲ ಸುನಿಲ್ ವಾದಿಸಿದರು.

ರೇಪಿಸ್ಟ್ ಉಮೇಶ್ ರೆಡ್ಡಿಗೆ ಕಲರ್ ಟಿವಿ ನೀಡಿದ್ದಾರೆ. ಆದರೆ ದರ್ಶನ್‌ಗೆ ಯಾವ ಸವಲತ್ತೂ ನೀಡಿಲ್ಲ. ರೇಪಿಸ್ಟ್‌ಗೆ ನೀಡುತ್ತಿರುವ ವ್ಯವಸ್ಥೆಯೂ ಇವರಿಗೆ ಏಕೆ ಇಲ್ಲ? ಇದಕ್ಕೆ ಬೇಕಾದರೆ ದಾಖಲೆ ಒದಗಿಸುತ್ತೇವೆ ಎಂದು ಸುನಿಲ್‌ ವಾದಿಸಿದರು.

ಕ್ವಾರಂಟೈನ್ ಸೆಲ್‌ನಲ್ಲಿ ಇಡಲು ಅವಕಾಶವಿದೆ. ಕ್ವಾರಂಟೈನ್ ಸೆಲ್ ಕೂಡ ಜೇಲಿನ ಒಂದು ಭಾಗವೇ. ಜೈಲಿನ ಆಡಳಿತಕ್ಕೆ ಅನುಕೂಲವಾಗುವಂತೆ ಕೈದಿಯನ್ನು ಸೆಲ್‌ನಲ್ಲಿ ಇರಿಸಲಾಗುತ್ತದೆ. ಆರೋಪಿ ದರ್ಶನ್ ವಿಚಾರಣಾ ಕೈದಿ. ಜೈಲಿನಲ್ಲಿ ಎಲ್ಲಿ ಬೇಕಾದರೂ ಇಡಬಹುದು ಎಂದು ಜೈಲು ಅಧೀಕ್ಷಕರ ಪರವಾಗಿ ಪ್ರಸನ್ನ ಕುಮಾರ್ ವಾದ ಮಂಡಿಸಿದರು.

ಕರ್ನಾಟಕ ಜೈಲು ನಿಯಮದಲ್ಲಿ ವಿಶೇಷ, ಸಾಮಾನ್ಯ ಎಂಬ ಎರಡು ವರ್ಗಗಳಿವೆ. ಅಪರಾಧಿಗಳಿಗೆ ಮಾತ್ರ ಎ, ಬಿ, ಸಿ ಎಂಬ ವರ್ಗೀಕರಣವಿದೆ. ಕೈದಿಗಳಿರುವ ಭದ್ರತಾ ರಿಸ್ಕ್ ಗಳನ್ನ ಗಮನಿಸಿ ಸೆಲ್‌ಗಳನ್ನು ನೀಡಲಾಗುತ್ತದೆ. ಈ ಹಿಂದೆ ಜೈಲಿನಲ್ಲಿದ್ದಾಗ ಸೌಲಭ್ಯ ದುರುಪಯೋಗ ಮಾಡಿದ್ದಾರೆ. ಇತರೆ ಕಾರಣಗಳಿಗೆ ಪ್ರತ್ಯೇಕವಾದ ಸೆಲ್‌ನಲ್ಲಿ ಇಡಲು ಅವಕಾಶವಿದೆ ಎಂದು ಸರ್ಕಾರದ ಪರವಾಗಿ ಪ್ರಸನ್ನ ಕುಮಾರ್ ವಾದಿಸಿದರು.

ಜೈಲಿನಲ್ಲಿದ್ದಾಗ ಅಪರಾಧ ಎಸಗಿದ್ದರೆ ಮಾತ್ರ ಹೀಗೆ ಮಾಡಬಹುದು. ಆಗಲೂ ಕೇವಲ ಎರಡು ತಿಂಗಳಷ್ಟೇ ಪ್ರತ್ಯೇಕವಾಗಿಡಬಹುದು. ಸಿಗರೇಟ್ ಸೇದಿ, ಕಾಫಿ ಕುಡಿದರೂ ಎರಡು ತಿಂಗಳು ಮಾತ್ರ ಇಡಬಹುದು. ಬೇರೆ ವಿಐಪಿ ಕೈದಿಗಳಿಗೆ ವಿಶೇಷ ಸವಲತ್ತು ನೀಡಿದ್ದಾರೆ. ದರ್ಶನ್‌ರನ್ನು ಬೇರೆ ಬ್ಯಾರಕ್‌ಗೆ ವರ್ಗಾಯಿಸಲು ಹೆದರುತ್ತಿದ್ದಾರೆ. ಜೈಲು ಅಧಿಕಾರಿಗಳ ವಿರುದ್ಧವೇ ಹಿಂದೆ ಎಫ್ಐಆರ್ ಸಹ ದಾಖಲಾಗಿದೆ. ಫೋಟೋ ಲೀಕ್ ಆದರೆ ಅವರಿಗೆ ಕುತ್ತು ಎಂದು ಹೆದರುತ್ತಿದ್ದಾರೆ ಎಂದು ಆರೋಪಿ ದರ್ಶನ್ ಪರ ವಕೀಲರು ವಾದಿಸಿದರು. ವಾದ ಪ್ರತಿವಾದ ಆಲಿಸಿದ ಕೋರ್ಟ್ ಅಕ್ಟೋಬರ್ 9ಕ್ಕೆ ಆದೇಶ ಕಾಯ್ದಿರಿಸಿತು.

ಇದನ್ನೂ ಓದಿ: Actor Darshan: ಶಿಕ್ಷಕಿಗೆ ರೇಪ್‌ ಬೆದರಿಕೆ, ದರ್ಶನ್‌ ಅಭಿಮಾನಿಗಳ ಹೆಸರಿನ ಕೇಡಿಗಳ ವಿರುದ್ಧ ದೂರು ದಾಖಲು

ಹರೀಶ್‌ ಕೇರ

View all posts by this author