ಬೆಂಗಳೂರು: ಬಿಗ್‌ಬಾಸ್ ವಿನ್ನರ್, ನಟ ಪ್ರಥಮ್ (Actor Pratham) ಮೇಲೆ ದೊಡ್ಡಬಳ್ಳಾಪುರದಲ್ಲಿ ಹಲ್ಲೆ ನಡೆದಿದೆ ಎನ್ನಲಾಗಿತ್ತು. ಈ ಬಗ್ಗೆ ಪ್ರಥಮ್ ಹಾಗೂ ಜಗದೀಶ್ ನಡುವಿನ ಫೋನ್ ಸಂಭಾಷಣೆಯ ಆಡಿಯೊ ಇದೀಗ ವೈರಲ್ ಆಗಿದೆ. ದೊಡ್ಡಬಳ್ಳಾಪುರದಲ್ಲಿ ತಮ್ಮ ಮೇಲೆ ಹಲ್ಲೆ ನಡೆದಿದ್ದು ನಿಜ ಎಂದು ಆಡಿಯೊದಲ್ಲಿ ಪ್ರಥಮ್ ಹೇಳಿದ್ದಾರೆ. ಆದರೆ, ಖಾಸಗಿ ಸಂಭಾಷಣೆಯ ಈ ಆಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರಿಂದ ಲಾಯರ್ ಜಗದೀಶ್ ವಿರುದ್ಧ ಪ್ರಥಮ್ ಅಸಮಾಧಾನ ಹೊರಹಾಕಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಖಾಸಗಿ ಸಂಭಾಷಣೆಯ ಆಡಿಯೊ ವೈರಲ್ ಆಗಿದ್ದರಿಂದ ಈ ಕುರಿತು ಪ್ರಥಮ್ ಪೋಸ್ಟ್ ಹಂಚಿಕೊಂಡಿದ್ದಾರೆ. “ನನ್ನಲ್ಲಿ ಒಳ್ಳೇತನ ಇರೋದಕ್ಕೆ 4 ದಿನದಿಂದ ಕೇಸ್ ಬಗ್ಗೆ ಎಲ್ಲೂ ಹೊರಗೆ ಮಾತಾಡಿಲ್ಲ. ನನ್ನಿಂದ ಯಾರಿಗೂ ತೊಂದರೆ ಆಗಬಾರದು ಅಂತ. ಆದರೂ ಬಲವಂತ ಮಾಡಿ ಮಾತಾಡಿಸಿ ಅದನ್ನು, ಆಡಿಯೋ ರೆಕಾರ್ಡ್ ಮಾಡಿದ್ರೆ ನಾನೇನು ಹೇಳಲಿ ಹೇಳಿ? ವೆಪನ್ ತೋರಿಸಿ ಕೊಲೆ ಬೆದರಿಕೆ ಹಾಕಿದವರನ್ನು ಸುಮ್ಮನೆ ಬಿಡೋ ಮಾತೇ ಇಲ್ಲ” ಎಂದು ಪ್ರಥಮ್ ಬರೆದುಕೊಂಡಿದ್ದಾರೆ.
ಆಡಿಯೊ ಬಗ್ಗೆ ಸ್ಪಷ್ಟನೆ, 4 ದಿನಗಳ ಹಿಂದೆ ಈ ಘಟನೆ ನಡೆದಿದ್ದು ನಿಜ, ನನ್ನ ಕೆಲಸದಲ್ಲಿ ನಾನು ಬ್ಯುಸಿ ಇದ್ದೆ. ಜಗದೀಶ್‌ರವರು ಫೋನ್ ಮಾಡುತ್ತಲೇ ಇದ್ರು ಅಂತ ಮಾತಾಡಿದೆ. ಅದನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಬೇಕಿರಲಿಲ್ಲ. ನಾನು ಹೇಗೆ ಎಚ್ಚರಿಕೆಯಿಂದ ಇರಬೇಕೆಂದು ತಿಳಿದಿದೆ. ನಂಬಿಕೆ ಇಟ್ಟು ಮಾತಾಡಿದಾಗ ರೆಕಾರ್ಡ್ ಮಾಡಿ ಹಾಕಿದರಿಂದ ಇನ್ಮೇಲೆ ಹೇಗೆ ನಂಬೋದು ಹೇಳಿ? ಎಂದು ಪ್ರಥಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದು ಪ್ರಥಮ್ ತಿಳಿಸಿದ್ದಾರೆ.
ಆಡಿಯೋದಲ್ಲಿ ಏನಿದೆ?
ದೊಡ್ಡಬಳ್ಳಾಪುರದಲ್ಲಿ ನಡೆದ ಗಲಾಟೆ ವಿಚಾರ ಮಾತನಾಡಲು ಪ್ರಥಮ್‌ಗೆ ಲಾಯರ್ ಜಗದೀಶ್ ಫೋನ್ ಮಾಡಿದ್ದಾರೆ. ಈ ವೇಳೆ ಮಾತನಾಡಿರುವ ಪ್ರಥಮ್, ನಾನು ಮಾತನಾಡುವ ಯಾವುದೇ ವಿಷಯ ಬಹಿರಂಗವಾಗಬಾರದು, ಎಂದು ಹೇಳುತ್ತಲೇ, ದೊಡ್ಡಬಳ್ಳಾಪುರ ದೇವಸ್ಥಾನದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ನನ್ನನ್ನು ದೇವಸ್ಥಾನವೊಂದರ ಪೂಜೆ ಕರೆದರು. ಹಾಗಾಗಿ ಹೋಗಿದ್ದೆ. ಅಲ್ಲಿ ಹೋದ ಮೇಲೆ ಈ ರೀತಿ ಆಯಿತು ಎಂದು ಹೇಳಿದ್ದಾರೆ.
ಬಾಸ್ ಬಗ್ಗೆ ಏನೋ ಮಾತಾಡ್ದೆ ಎಂದು ಅವಾಜ್ ಹಾಕಿದರು. ಯಾವಾಗ ಏನು? ಅಂದೆ. ಹೋದ ವರ್ಷ ಮಾತನಾಡಿದ್ದು ಅಂದರು. ನಾನು ಸರಿಯಾಗಿ ವಿಡಿಯೊ ನೋಡಿ ಆಮೇಲೆ ಮಾತಾಡಿ ಅಂದೆ. ನೋಡ ನೋಡುತ್ತಲೇ ಡ್ಯಾಗರ್ ತೆಗೆದ್ರು, ಚುಚ್ಚಿ ಬಿಡ್ತೀವಿ ಎಂದು ಹೆದರಿಸಿದರು. ಬಾಸ್ ಬಗ್ಗೆ ಮಾತನಾಡಬೇಡ. ರಕ್ಷಕ್ ಕೂಡ ಅಲ್ಲೇ ಇದ್ದ. ನನ್ನ ಸಿನಿಮಾ ಬಿಡುಗಡೆಯಾಗಬೇಕಿದೆ. ಹಾಗಾಗಿ ನಾನು ದೂರು ನೀಡಲು ಮುಂದಾಗಲಿಲ್ಲ ಎಂದು ಪ್ರಥಮ್ ಹೇಳಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿರುವ ಲಾಯರ್ ಜಗದೀಶ್, ಇಷ್ಟೆಲ್ಲಾ ಆದರೂ ನೀನು ಯಾಕೆ ಪ್ರತಿಕ್ರಿಯಿಸಿಲ್ಲ. ಪೊಲೀಸ್ ಠಾಣೆಯಲ್ಲಿ ಯಾಕೆ ದೂರು ನೀಡಲಿಲ್ಲ ಎಂದು ಕೇಳಿದ್ದಾರೆ. ಅಲ್ಲದೆ ಘಟನೆ ವೇಳೆ ರಕ್ಷಕ್ ಬುಲೆಟ್ ಕೂಡ ಅಲ್ಲೇ ಆ ರೌಡಿಗಳ ಜತೆ ಇದ್ದ. ರಕ್ಷಕ್ ಸಹವಾಸ ಸರಿಯಿಲ್ಲ ಎಂದು ಹೇಳಿರುವುದು ಆಡಿಯೊದಲ್ಲಿದೆ.
ಈ ಸುದ್ದಿಯನ್ನೂ ಓದಿ | Illegal auto-rickshaws: ಅನಧಿಕೃತ ಆಟೋಗಳ ನಟ್ಟು ಬೋಲ್ಟು ಟೈಟ್ ಮಾಡಿ; ಸರ್ಕಾರಕ್ಕೆ ಲಾಯರ್ ಜಗದೀಶ್ ಆಗ್ರಹ