ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Prakash Raj: ರಾಮ ವಲಸೆ ಕಾರ್ಮಿಕ, ರಾವಣನ ತೋಟದ ಹಣ್ಣು ಕಿತ್ತು ತಿಂದ: ಪ್ರಕಾಶ್‌ ರಾಜ್‌ ಹೊಸ ರಾಮಾಯಣ

ಶ್ರೀ ರಾಮ ಮತ್ತು ಲಕ್ಷ್ಮಣರನ್ನು ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರಿಗೆ ಪ್ರಕಾಶ್ ರಾಜ್ ಹೋಲಿಸಿದ್ದಾರೆ. ಉತ್ತರ ಭಾರತದ ಕಾರ್ಮಿಕರಾದ ರಾಮ ಹಾಗೂ ಲಕ್ಷ್ಮಣರು ದಕ್ಷಿಣ ಭಾರತದ ರಾವಣದ ಮಾಲಿಕತ್ವದ ಜಮೀನಿಗೆ ಪ್ರವೇಶಿಸಿ, ಅಲ್ಲಿನ ಹಣ್ಣುಗಳನ್ನು ಕದ್ದು ತಿಂದರು ಎಂದಿದ್ದಾರೆ. ಇದು ಕೆಲವರಿಗೆ ಕೋಪ ತರಿಸಿದೆ.

ಪ್ರಕಾಶ್‌ ರಾಜ್

ಬೆಂಗಳೂರು, ಏ.17: ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಹಿಂದೂಗಳ (Hindu) ಪವಿತ್ರ ಮಹಾಕಾವ್ಯವಾದ ರಾಮಾಯಣ (Ramayana) ಹಾಗೂ ಶ್ರೀರಾಮನ (Sri Rama) ಬಗ್ಗೆ ವಿವಾದಾತ್ಮಕ (controversy) ಹೇಳಿಕೆ ನೀಡಿದ್ದಾರೆ. 'ತುಲಿಕಾ ಪಾಲಿಟಿಕ್ಸ್' ಅಥವಾ 'ವ್ಯಂಗ್ಯ ರಾಜಕೀಯ' ಎಂಬ ಭಾಷಣದ 106 ಸೆಕೆಂಡುಗಳ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲೀಗ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಏಪ್ರಿಲ್ 14 ರಂದು ಖಾಸಗಿ ವೇದಿಕೆಯಲ್ಲಿ ಪ್ರಕಾಶ್ ರಾಜ್ ಮಾತನಾಡಿದ್ದಾರೆ. ರಾಮ ಮತ್ತು ಲಕ್ಷ್ಮಣರನ್ನು ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರಿಗೆ ಪ್ರಕಾಶ್ ರಾಜ್ ಹೋಲಿಸಿದ್ದಾರೆ. ಉತ್ತರ ಭಾರತದ ಕಾರ್ಮಿಕರಾದ ರಾಮ ಹಾಗೂ ಲಕ್ಷ್ಮಣರು ದಕ್ಷಿಣ ಭಾರತದ ಒಂದು ಜಮೀನಿಗೆ ಪ್ರವೇಶಿಸಿ, ಅಲ್ಲಿನ ಹಣ್ಣುಗಳನ್ನು ಕದ್ದು ತಿಂದರು ಎಂದಿದ್ದಾರೆ. ಇನ್ನು ರಾವಣನನ್ನು ದಕ್ಷಿಣದ ತೋಟದ ಮಾಲೀಕ ಎಂದಿದ್ದಾರೆ.

ರಾಮ, ಲಕ್ಷ್ಮಣ ಹಾಗೂ ಸೀತೆ ದಕ್ಷಿಣ ಭಾರತಕ್ಕೆ ಬರುತ್ತಾರೆ. ಬಂದಾಗ ಲಕ್ಷ್ಮಣನಿಗೆ ಹಸಿವಾಗಿರುತ್ತದೆ. ಅಲ್ಲಿ ಹಣ್ಣಿನ ತೋಟ ಒಂದಿರುತ್ತದೆ. ಹೋಗಿ ಹಣ್ಣನ್ನು ತಿನ್ನೋಣ ಎಂದು ಲಕ್ಷ್ಮಣ ಹೇಳುತ್ತಾನೆ. ಎಲ್ಲರೂ ಹಣ್ಣು ತಿನ್ನುತ್ತಾರೆ. ಅಲ್ಲಿಗೆ ಬರುವ ಶೂರ್ಪನಖಿ, ಅಣ್ಣ ರಾವಣ ಯಾರೋ ಹಣ್ಣನ್ನು ತಿನ್ನುತ್ತಿದ್ದಾರೆ ಎನ್ನುತ್ತಾಳೆ. ಆಗ ರಾವಣ, ಅವರಿಗೆ ಹಸಿವಾಗಿದೆ ತಿನ್ನಲಿ ಎನ್ನುತ್ತಾನೆ. ಆ ಬಳಿಕ ರಾವಣ, ರಾಮನಲ್ಲಿ ಹಣ ಕೇಳುತ್ತಾನೆ. ರಾಮ ಇಲ್ಲ ಎನ್ನುತ್ತಾನೆ. 20 ಪರ್ಸೆಂಟ್ ಡಿಸ್ಕೌಂಟ್ ಕೊಡ್ತೀನಿ ಎಂದು ರಾವಣ ಹೇಳುತ್ತಾನೆ. ಹಣವೇ ಇಲ್ಲ ಎಂದ ಮೇಲೆ ಡಿಸ್ಕೌಂಟ್ ಕೊಟ್ಟು ಏನು ಪ್ರಯೋಜನ? ಅದೇ ರೀತಿ, ಹಿಂದಿ ಹೇರಿಕೆ ಮಾಡಬೇಡಿ. ಇಲ್ಲಿ ಬಂದು ನೀವು ಮಲಯಾಳಂ ಕಲಿಯಿರಿ. ನಾವು ಬೀಫ್ ಫೆಸ್ಟ್ ಮಾಡುತ್ತೇವೆ ಎಂದಿದ್ದಾರೆ ಪ್ರಕಾಶ್ ರಾಜ್.



ರಾವಣ ದಕ್ಷಿಣ ಭಾರತದ ಬುಡಕಟ್ಟು ಜನಾಂಗದವನಾಗಿದ್ದು, ಹಣ್ಣುಗಳ ಕಳ್ಳತನದ ಬಗ್ಗೆ ಅವನು ಪ್ರಶ್ನಿಸಿದಾಗ, ಅದು ದೊಡ್ಡ ವಿವಾದವಾಗಿ ಮಾರ್ಪಟ್ಟಿತು ಮತ್ತು ಅಂತಿಮವಾಗಿ ಹೋರಾಟ ನಡೆಯಿತು ಅಂತ ಪ್ರಕಾಶ್ ರಾಜ್ ಹೇಳಿದ್ದಾರೆ.

ಈ ಪೋಸ್ಟ್ ಏ.14 ರಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದೀಗ ವೈರಲ್ ಆಗಿದೆ. ಈ ಹೇಳಿಕೆಗಳು ಹಿಂದೂ ದೇವರುಗಳನ್ನು ವಿಡಂಬನಾತ್ಮಕವಾಗಿ ಅವಮಾನಿಸುವುದಲ್ಲದೆ, ಭಾರತದ ಉತ್ತರ ಮತ್ತು ದಕ್ಷಿಣ ಪ್ರದೇಶಗಳ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿವೆ ಮತ್ತು ಇದೆಲ್ಲವೂ ಪ್ರಕಾಶ್ ರಾಜ್ ಅವರ 'ವಿಭಜಕ ರಾಜಕೀಯ'ದ ಭಾಗವಾಗಿದೆ ಎಂದು ಹಿಂದೂ ಸಂಘಟನೆಗಳು ಟೀಕಿಸಿವೆ.

Prakash Raj: Spirit ಚಿತ್ರದಿಂದ ಪ್ರಕಾಶ್​ ರಾಜ್​ ಔಟ್ ಆಗಿದ್ದು ಹೌದಾ? ನಿಜಕ್ಕೂ ಆಗಿದ್ದೇನು?

ಪ್ರಕಾಶ್ ರಾಜ್ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲೂ ಕೆಲವರಿಂದ ಆಕ್ರೋಶ ವ್ಯಕ್ತವಾಗಿದೆ. ಪ್ರಕಾಶ್ ರಾಜ್ ತಮ್ಮ ಹೇಳಿಕೆಗಳ ಮೂಲಕ ಗೋಮಾಂಸ ತಿನ್ನುವವರನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಸಮಾಜದಲ್ಲಿ ಧಾರ್ಮಿಕ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಲವು ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ.

ಹರೀಶ್‌ ಕೇರ

View all posts by this author