ಬೆಂಗಳೂರು: ನೇಪಾಳವು (Nepal tour) ತನ್ನ ಅದ್ಭುತವಾದ ನೈಸರ್ಗಿಕ ಸೌಂದರ್ಯ ಮತ್ತು ಧಾರ್ಮಿಕ ಮಹತ್ವದ ತಾಣಗಳಿಗೆ ವಿಶ್ವವಿಖ್ಯಾತವಾಗಿದೆ. ರಾಜಧಾನಿಯಾದ ಕಠ್ಮಂಡು ಅಲ್ಲಿನ ಸಾಂಸ್ಕೃತಿಕ ಕೇಂದ್ರವೂ ಆಗಿದೆ. ಇದು ತನ್ನ ಪುರಾತನ ದೇವಾಲಯಗಳು, ಅರಮನೆಗಳು ಮತ್ತು ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪಶುಪತಿನಾಥ ದೇವಾಲಯ ಅತ್ಯಂತ ಪವಿತ್ರವಾದ ಶಿವನ ಕ್ಷೇತ್ರವಾಗಿದೆ. ಇದರ ಜೊತೆಗೆ ಬೌದ್ಧನಾಥ ಸ್ತೂಪ ಮತ್ತು ಸ್ವಯಂಭೂನಾಥ ಸ್ತೂಪಗಳು ಪ್ರಮುಖ ಆಕರ್ಷಣೆಗಳು.
ನೇಪಾಳದ ಭಕ್ತಪುರ 'ಭಕ್ತರ ನಗರ' ಎಂದೇ ಕರೆಯುತ್ತಾರೆ. ಈ ನಗರವು ಕಲೆ, ವಾಸ್ತುಶಿಲ್ಪ ಮತ್ತು ಮರದ ಕೆತ್ತನೆಗಳಿಗೆ ಪ್ರಸಿದ್ಧವಾಗಿದೆ. ಭಕ್ತಪುರ ದರ್ಬಾರ್ ಸ್ಕ್ವೇರ್ ಇಲ್ಲಿನ ಮುಖ್ಯ ಆಕರ್ಷಣೆಯಾಗಿದ್ದು, ಇಲ್ಲಿನ ದೇವಾಲಯಗಳು ಮತ್ತು ಪುರಾತನ ಕಟ್ಟಡಗಳು ನೇಪಾಳದ ಇತಿಹಾಸವನ್ನು ಸಾರುತ್ತವೆ.
ನೇಪಾಳದ ದೋಲೇಶ್ವರ ಮಹಾದೇವ ದೇವಾಲಯವು ಅತ್ಯಂತ ಪವಿತ್ರವಾದ ಶಿವನ ಕ್ಷೇತ್ರವಾಗಿದೆ. ಕೇದಾರನಾಥದ ತಲೆಯ ಭಾಗವು ಇಲ್ಲಿ ನೆಲೆಸಿದೆ ಎಂಬ ನಂಬಿಕೆ ಇದೆ. ಆದ್ದರಿಂದ ಇದು ಶಿವ ಭಕ್ತರಿಗೆ ಅತ್ಯಂತ ಮಹತ್ವದ ತಾಣವಾಗಿದೆ. ಪೋಖರಾ ಕೂಡ ನೇಪಾಳದ ಅತ್ಯಂತ ಸುಂದರ ಪ್ರವಾಸಿ ತಾಣ. ಇದು ಹಿಮಾಲಯದ ತಪ್ಪಲಿನಲ್ಲಿರುವ ಶಾಂತಿಯುತ ನಗರ. ಇಲ್ಲಿಂದ ಅನ್ನಪೂರ್ಣ ಪರ್ವತ ಶ್ರೇಣಿಯ ಅದ್ಭುತ ನೋಟವನ್ನು ಕಾಣಬಹುದು. ಫೇವಾ ಸರೋವರವು ಪೋಖರಾದಲ್ಲಿರುವ ಎರಡನೇ ಅತಿದೊಡ್ಡ ಸರೋವರ. ಇದರ ಮಧ್ಯಭಾಗದಲ್ಲಿ 'ತಾಲ್ ಬರಾಹಿ' ದೇವಿಯ ದೇವಾಲಯವಿದೆ. ಸರೋವರದಲ್ಲಿ ಬೋಟಿಂಗ್ ಮಾಡುವುದು ಪ್ರವಾಸಿಗರಿಗೆ ಅತ್ಯಂತ ಆಹ್ಲಾದಕರ ಅನುಭವ ನೀಡುತ್ತದೆ.
ನೇಪಾಳಕ್ಕೆ ತೆರಳಿದ ಬಳಿಕ ಮುಕ್ತಿನಾಥ ದರ್ಶನ ಮಾಡದಿದ್ದರೆ ಪ್ರವಾಸ ಅಪೂರ್ಣವಾಗುತ್ತದೆ ಎಂದರೆ ಅತಿಶಯವಲ್ಲ. ಇದು ಹಿಂದೂ ಮತ್ತು ಬೌದ್ಧರಿಗೆ ಅತ್ಯಂತ ಪವಿತ್ರವಾದ ಯಾತ್ರಾಸ್ಥಳ. ಮುಕ್ತಿನಾಥವನ್ನು 'ಮುಕ್ತಿ ಕ್ಷೇತ್ರ' ಎಂದು ಕರೆಯಲಾಗುತ್ತದೆ. ಇಲ್ಲಿರುವ ಪವಿತ್ರ ನೀರಿನ ಕಾರಂಜಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ತೊಳೆದುಹೋಗುತ್ತವೆ ಎಂಬ ನಂಬಿಕೆ ಇದೆ. ಇದು ಸಮುದ್ರ ಮಟ್ಟದಿಂದ ಸುಮಾರು 3,700 ಮೀಟರ್ ಎತ್ತರದಲ್ಲಿದೆ. ನೇಪಾಳದ ಮನೋಕಾಮನಾ ದೇವಿ ಮಂದಿರವು ಬೆಟ್ಟದ ಮೇಲಿದೆ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ದೇವತೆ ಎಂದು ಇಲ್ಲಿ ನಂಬಲಾಗಿದೆ. ಕ್ಯುರಿಂಟಾರ್‌ನಿಂದ ದೇವಾಲಯಕ್ಕೆ ಹೋಗಲು ಕೇಬಲ್ ಕಾರ್ ಸೌಲಭ್ಯವಿದೆ. ಇದು ಸುಂದರವಾದ ನದಿ ಕಣಿವೆಗಳ ಮೇಲೆ ಹಾದುಹೋಗುವ ಒಂದು ರೋಮಾಂಚಕಾರಿ ಪಯಣವಾಗಿದೆ.
ನೇಪಾಳದ ಜನಕಪುರವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕವಾಗಿ ಮಹತ್ವದ ತಾಣವಾಗಿದೆ. ರಾಮಾಯಣದ ಪ್ರಕಾರ, ಜನಕಪುರವು ಸೀತಾಮಾತೆಯ ಜನ್ಮಸ್ಥಳ. ಇದು ಹಿಂದೂಗಳ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ಪ್ರಾಚೀನ ಮಿಥಿಲಾ ರಾಜ್ಯದ ರಾಜಧಾನಿಯಾಗಿದ್ದ ಈ ನಗರವು ರಾಜ ಜನಕನ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿನ ಜಾನಕಿ ಮಂದಿರವನ್ನು ಸೀತಾಮಾತೆಗೆ ಸಮರ್ಪಿಸಲಾಗಿದೆ. ಭಾರತ ಮತ್ತು ನೇಪಾಳದ ನಡುವಿನ ನಂಟು ಕೇವಲ ಭೌಗೋಳಿಕ ಗಡಿಯಲ್ಲ, ಇದು ಸಾವಿರಾರು ವರ್ಷಗಳ ಹಳೆಯ ಇತಿಹಾಸ, ಸಂಸ್ಕೃತಿ, ಧರ್ಮ, ಮತ್ತು ಮಾನವೀಯ ಸಂಬಂಧಗಳ ಅಚಲವಾದ ಕೊಂಡಿಯಾಗಿದೆ. ಹಾಗಾದರೆ ತಡವೇಕೆ? ನಿಮಗಾಗಿ ಅಡಿಗಾಸ್ ಯಾತ್ರಾ (Adigas Yatra) ವಿಶೇಷ ನೇಪಾಳ ಯಾತ್ರೆಯನ್ನು ಆಯೋಜಿಸಿದೆ.
ದಕ್ಷಿಣ ಆಫ್ರಿಕಾಕ್ಕೆ ಅಡಿಗಾಸ್ ಯಾತ್ರಾ ಸೊಬಗಿನ ಯಾತ್ರೆ
ಅಡಿಗಾಸ್ ಯಾತ್ರಾದ ವಿಶೇಷತೆ ಏನೆಂದರೆ, ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುವುದು. 4 ಸ್ಟಾರ್ ಹೋಟೆಲ್ ಗಳಲ್ಲಿ ವಸತಿ , ಭಾರತೀಯ - ಅಂತಾರಾಷ್ಟ್ರೀಯ ಭೋಜನ, ಎಂಟ್ರಿ ಟಿಕೆಟ್, ಸ್ಥಳೀಯ ಪರ್ಮಿಟ್, ಟ್ಯಾಕ್ಸ್, ,ವಿಮೆ, ವೀಸಾ ವ್ಯವಸ್ಥೆ ಸೇರಿದಂತೆ ಸಮಗ್ರ ಅನುಕೂಲಗಳನ್ನು ಒದಗಿಸುತ್ತಾರೆ. ಹೀಗಾಗಿ ನೆಮ್ಮದಿಯ ಪ್ರವಾಸದ ಅದ್ಭುತ ಅನುಭವ ನಿಮ್ಮದಾಗುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ಕೂಡಲೇ ಅಡಿಗಾಸ್ ಯಾತ್ರಾವನ್ನು ಸಂಪರ್ಕಿಸಿ: 080-26616678/ 7022259008/ 9449478944. website : www.adigasyatra.com