ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೋದಿ ಪ್ರಧಾನಿಯಾದ ನಂತರ 165 ಲಕ್ಷ ಕೋಟಿ ಸಾಲ ಮಾಡಿದ್ದಾರೆ: ಸಿಎಂ ಕಿಡಿ

Karnataka budget session 2026: ಗ್ಯಾರಂಟಿಗಳಿಂದ ಸಾಲ ಹೆಚ್ಚಿದೆ ಎಂದು ಟೀಕಿಸಲಾಗಿದೆ. ಇದುವರೆಗೆ 1.31 ಲಕ್ಷ ಕೋಟಿ ಗ್ಯಾರಂಟಿಗಳಿಗೆ ವೆಚ್ಚ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರ, ಜನಕಲ್ಯಾಣ ಯೋಜನೆಗಳಿಗೆ ವರ್ಷದಿಂದ ವರ್ಷಕ್ಕೆ ಅನುದಾನ ಕಡಿಮೆ ಮಾಡಿದೆ. ಆದರೆ ನಮ್ಮ ಸರ್ಕಾರ ಗ್ಯಾರಂಟಿಗಳಿಗೆ ಪ್ರತಿ ವರ್ಷ ಒಂದೇ ರೀತಿಯಲ್ಲಿ ಅನುದಾನ ನೀಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ.

ಬೆಂಗಳೂರು: ಸಾಲದ ಮೇಲೆ ಸರ್ಕಾರ ನಡೆಯುತ್ತಿದೆ ಎಂಬ ಟೀಕೆ ವಿಪಕ್ಷಗಳಿಂದ ಬಂದಿದೆ. ಆದರೆ ನಮ್ಮ ಸರ್ಕಾರ 1.32 ಲಕ್ಷ ಕೋಟಿ ಸಾಲ ಮಾಡಿದ್ದು, ಬಜೆಟ್ ಗಾತ್ರ 4,48,0004 ಕೋಟಿ ಇದ್ದಾಗ ಸಾಲದ ಬಜೆಟ್ ಹೇಗೆ ಆಗಲು ಸಾಧ್ಯ. ಸಾಲದ ಮೇಲೆ ಸರ್ಕಾರ ನಡೆಯುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ವಿಧಾನಸಭೆಯಲ್ಲಿ ರಾಜ್ಯ ಬಜೆಟ್‌ ಕುರಿತ ಚರ್ಚೆ ವೇಳೆ ಸಿಎಂ ಬುಧವಾರ ಮಾತನಾಡಿದ್ದು, ಯಾವುದೇ ರಾಜ್ಯ ಅಥವಾ ದೇಶವಾಗಲಿ ಸಾಲ ಮಾಡದಿರಲು ಸಾಧ್ಯವಿಲ್ಲ, ಸಮಾಜ ಕಲ್ಯಾಣ ಹಾಗೂ ಅಭಿವೃದ್ಧಿಗಾಗಿ ಸಾಲ ಮಾಡಬೇಕು. ಸರ್ಕಾರ ಸಾಲವನ್ನು ನಿಯಮದ ಮಿತಿಯೊಳಗೆ ಮಾಡಲಾಗಿದೆ. ರಾಜ್ಯದ ಸಾಲದ ಮೊತ್ತ 8,24,000 ಕೋಟಿ ರೂ.ಗಳಷ್ಟಿದೆ.

2008 ರಿಂದ 2013 ರವರೆಗೆ ಇದ್ದ ಬಿಜೆಪಿಯೂ ಸಾಲ ಮಾಡಿದೆ. ಐದು ವರ್ಷಕ್ಕೊಮ್ಮೆ ಸಾಲ ದುಪ್ಪಟ್ಟು ಆಗುತ್ತದೆ. ಮೋದಿಯವರು ಪ್ರಧಾನಿಯಾದ ನಂತರ 165 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜಿಡಿಪಿ ಬೆಳವಣಿಗೆಯಲ್ಲಿ ರಾಜ್ಯಕ್ಕಿಂತ ದೇಶ ಕಡಿಮೆ ಇದೆ. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳು, ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದು, ಅದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಗ್ಯಾರಂಟಿಗಳಿಂದ ಸಾಲ ಹೆಚ್ಚಿದೆ ಎಂದು ಟೀಕಿಸಲಾಗಿದೆ. ಇದುವರೆಗೆ 1.31 ಲಕ್ಷ ಕೋಟಿ ಗ್ಯಾರಂಟಿಗಳಿಗೆ ವೆಚ್ಚ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರ, ಜನಕಲ್ಯಾಣ ಯೋಜನೆಗಳಿಗೆ ವರ್ಷದಿಂದ ವರ್ಷಕ್ಕೆ ಅನುದಾನ ಕಡಿಮೆ ಮಾಡಿದೆ. ಆದರೆ ನಮ್ಮ ಸರ್ಕಾರ ಗ್ಯಾರಂಟಿಗಳಿಗೆ ಪ್ರತಿ ವರ್ಷ ಒಂದೇ ರೀತಿಯಲ್ಲಿ ಅನುದಾನ ನೀಡಿದ್ದೇವೆ. ಯುವನಿಧಿಯಡಿ 600 ಕೋಟಿ ರೂ. ಮೀಸಲಿಡಲಾಗಿದ್ದು, ಈ ಯೋಜನೆಯನ್ನು ಖಂಡಿತವಾಗಿಯೂ ಸ್ಥಗಿತಗೊಳಿಸಿಲ್ಲ.

ನಮ್ಮ ಬಜೆಟ್ ರಿವಿನ್ಯೂ ಡಿಫಿಸಿಟ್ ಆಗಿದೆ. 2026-27ರ ಬಜೆಟ್ ನ್ನು ರೆವಿನ್ಯೂ ಸರ್ಪ್ಲಸ್ ಮಾಡಬೇಕೆಂಬ ಇಚ್ಛೆಯಿದ್ದರೂ, ಕೇಂದ್ರಸರ್ಕಾರದ ಅಸಹಕಾರದಿಂದ ಅದು ಸಾಧ್ಯವಾಗಲಿಲ್ಲ. ರಾಜ್ಯದ ಜಿಎಸ್ ಟಿ ಯಲ್ಲಿ 10% ಬೆಳವಣಿಗೆಯಿತ್ತು, ಆದರೆ ಕೇಂದ್ರಸರ್ಕಾರ, ಜಿಎಸ್ಟಿ ದರವನ್ನು ಕಡಿತಗೊಳಿಸಿದ್ದರಿಂದ , ಜಿಎಸ್ ಟಿ ಬೆಳವಣಿಗೆ 4% ಗೆ ಕುಸಿಯಿತು. ದೇಶದ ಏಳು ರಾಜ್ಯಗಳು ಕೇಂದ್ರದ ಈ ನೀತಿಯನ್ನು ವಿರೋಧಿಸಿ, ಪರಿಹಾರ ಕೇಳಿದ್ದೇವೆ.

ಜಿಎಸ್ ಟಿ ಜಾರಿಯಾದ ನಂತರದಿಂದ 2023-24ರವೆಗೆ ಕೇಂದ್ರ , ಪರಿಹಾರವನ್ನು ನೀಡಿದ್ದು, ನಂತರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ, ಈ ಪರಿಹಾರ ನೀಡಲಾಗಿಲ್ಲ. ಇದರಿಂದ ರಾಜ್ಯದ ಬೊಕ್ಕಸಕ್ಕೆ 10 ಸಾವಿರ ಕಡಿಮೆಯಾಗಿ, 2026-27 ರಲ್ಲಿ 15 ಸಾವಿರ ಕೋಟಿ ನಷ್ಟವಾಗಲಿದೆ. ಕೇಂದ್ರ ಈ ಧೋರಣೆಯಿಂದ ರಾಜ್ಯಕ್ಕೆ ನಷ್ಟವುಂಟಾಗಿದೆ.

ಬಿಜೆಪಿಯವರ ಕಾಲಾವಧಿಯಲ್ಲಿ ಬಿಬಿಎಂಪಿಗೆ ನಾಲ್ಕು ವರ್ಷದಲ್ಲಿ 10435 ಕೋಟಿ ನೀಡಿದೆ. ನಮ್ಮ ಸರ್ಕಾರ ನಾಲ್ಕು ವರ್ಷದಲ್ಲಿ ಒಟ್ಟು 20200 ಕೋಟಿ ನೀಡಿದೆ. ಶಿಕ್ಷಣಕ್ಕೆ 65000 ಕೋಟಿ ಖರ್ಚು ಮಾಡಲಾಗಿದ್ದು, 2026-27 ರಲ್ಲಿ 72,386 ಕೋಟಿ ಇಡಲಾಗಿದೆ. ಆದ್ದರಿಂದ ನಮ್ಮ ಸರ್ಕಾರ ಗ್ಯಾರಂಟಿ ಮತ್ತು ಅಭಿವೃದ್ದಿಗೆ ವೆಚ್ಚ ಮಾಡುತ್ತಿದ್ದು, ಬಿಜೆಪಿಯವರು ಈ ಬಗ್ಗೆ ಅಪಪ್ರಚಾರ ಮಾಡುವುದು ತಪ್ಪು.

ಸಾಮಾಜಿಕ ಭದ್ರತೆಯ ಯೋಜನೆಗಳಿಗೆ 10,600 ಕೋಟಿ ಗೆ ಮೀಸಲಿಟ್ಟಿದ್ದೇವೆ. ಸಮಾಜದ ಎಲ್ಲ ಅಶಕ್ತರಿಗೆ ಶಕ್ತಿ ತುಂಬಲಾಗುತ್ತಿದೆ. ಬಿಜೆಪಿಯು ಟಿಕಲ್ ಡೌನ್ ಎಕಾನಮಿನಲ್ಲಿ ನಂಬಿಕೆಯಿರಿಸಿದೆ, ನಮ್ಮದು ಯೂನಿವರ್ಸಲ್ ಬೇಸಿಕ್ ಇನ್ಕಂ ಹಾಗೂ ಬೇಡಿಕೆಯ ಆರ್ಥಿಕ ತತ್ವ ಆಧರಿಸಿದೆ. ಬುದ್ಧನ ಕರುಣೆ, ಅಂಬೇಡ್ಕರ್ ಸಾಮಾಜಿಕ ನ್ಯಾಯವನ್ನು ನಮ್ಮ ಬಜೆಟ್ ಆಧರಿಸಿದೆ. ಆದ್ದರಿಂದ ಈ ಬಾರಿಯ ಬಜೆಟ್ ಅಭಿವೃದ್ಧಿಪರ ಹಾಗೂ ಅಭಿವೃದ್ಧಿಪರ ಹಾಗೂ ಜನಪರ ಬಜೆಟ್ ಆಗಿದೆ, ವಿರೋಧಪಕ್ಷದವರು ಕೇವಲ ರಾಜಕೀಯಕ್ಕಾಗಿ ವಿರೋಧ ಮಾಡಬಾರದು ಎಂದರು.