ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಕ್ಷಯಕಲ್ಪ ಫೌಂಡೇಶನ್ ನಿಂದ ಪ್ರೋಟೀನ್ ಯುಕ್ತ ಹಾಲು ಬಿಡುಗಡೆ; ಡೈರಿ ಉದ್ಯಮದಲ್ಲಿ ವಾರ್ಷಿಕ 550 ಕೋಟಿ ಆದಾಯ ನಿರೀಕ್ಷೆ

ಹಸುವಿನ ತಾಜಾ ಹಾಲಿನಿಂದ ಅಲ್ಟ್ರಾಫಿಲ್ಟ್ರೇಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿ 250 ಎಂ ಎಲ್ ಗೆ 25 ಗ್ರಾಂ ಪ್ರೋಟೀನ್ ಹೊಂದಿರುತ್ತದೆ. ಲ್ಯಾಕ್ಟೋಸ್ ಮುಕ್ತ ಆಗಿರುತ್ತದೆ. ಹಾಗು ಅಂಟಿಬಯೋಟಿಕ್ಸ್ ಸಂರಕ್ಷಕಗಳು ಮತ್ತು ಹೆಚ್ಚುವರಿ ಹಾರ್ಮೋನುಗಳಿಂದ ಮುಕ್ತವಾಗಿದೆ.

ಈ ಹೊಸ ಉತ್ಪನ್ನ, ಪ್ರೋಟೀನ್ ಮತ್ತು ಲ್ಯಾಕ್ಟೋಸ್-ಫ್ರೀ ಹಾಲು, ಆರೋಗ್ಯಕರ ಪ್ರೋಟೀನ್ ಬಯಸುವವರ ಬೇಡಿಕೆ ಈಡೇರಿಸಲಿದೆ.

ಬೆಂಗಳೂರು: ಭಾರತದ ಸಾವಯವ ಡೈರಿ ಉದ್ಯಮದಲ್ಲಿ ತನ್ನದೆಯಾದ ಮೈಲಿಗಲ್ಲು ಸ್ಥಾಪಿಸಿರುವ ಅಕ್ಷಯಕಲ್ಪ ಹೆಚ್ಚಿನ ಪ್ರೋಟೀನ್ ಯುಕ್ತ ಹಾಲನ್ನು ಪರಿಚಯಿಸುವುದಾಗಿ ಘೋಷಿಸಿದೆ. ನ. 3ರಿಂದ ಇದು ಗ್ರಾಹಕರಿಗೆ ಲಭ್ಯವಾಗಲಿದೆ. ಈಗಾಗಲೇ ಪ್ರೋಟೀನ್ ಪನ್ನೀರ್, ಕಡ್ಲೇಕಾಯಿ ,ರಾಗಿ ಆಧಾರಿತ ತಿಂಡಿಗಳನ್ನು ಪರಿಚಯಿಸಿರುವ ಅಕ್ಷಯಕಲ್ಪ ತನ್ನ ಹೈ-ಪ್ರೋಟೀನ್ ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಿದೆ.

ಈ ಹೊಸ ಉತ್ಪನ್ನವು ಭಾರತೀಯ ಗ್ರಾಹಕರಿಗೆ ಶುದ್ಧ, ಕ್ರಿಯಾತ್ಮಕ ಪೌಷ್ಟಿಕಾಂಶವನ್ನು ಲಭ್ಯ ವಾಗುವಂತೆ ಮಾಡುವ ಕಂಪನಿಯ ನಿರಂತರ ಪ್ರಯತ್ನಗಳ ಭಾಗವಾಗಿದೆ.

ಆಹಾರದಲ್ಲಿ ಪ್ರೋಟೀನ್, ಪೋಷಕಾಂಶಗಳ ಕೊರತೆ ಭಾರತದ ಅತಿ ದೊಡ್ಡ ಸವಾಲು. ಭಾರತೀಯ ಮಾರುಕಟ್ಟೆಯ ಸಂಶೋಧನಾ ಬ್ಯೂರೊ (ಐಎಂಆರ್ ಬಿ) ಪ್ರಕಾರ, ಸುಮಾರು ಶೇ.73ರಷ್ಟು ಭಾರತೀಯ ದೈನಂದಿನ ಆಹಾರದಲ್ಲಿ ಪ್ರೋಟೀನ್ ಕಡಿಮೆಯಿದ್ದು ಜನರಿಗೆ ಅದರ ಅರಿವಿನ ಕೊರತೆಯಿದೆ. ಈ ಹೊಸ ಉತ್ಪನ್ನವು ಆಧುನಿಕ ಜೀವನ ಶೈಲಿ ಜತೆಗೆ ನೈಸರ್ಗಿಕ ಮೂಲ ದಿಂದ ಶುದ್ಧ ಪ್ರೋಟೀನ್ ಹಾಲು ನೀಡುವ ಮೂಲಕ ಈ ಅಂತರವನ್ನು ನೀಗಿಸಲು ಪ್ರಯತ್ನಿಸು ತ್ತದೆ.

ಇದನ್ನೂ ಓದಿ: Bangalore News: ಇಂಡಿಯಾ ರೈಜಿಂಗ್ ಫೌಂಡೇಶನ್ ₹1000 ಕೋಟಿ ಮೊತ್ತದ ಲಾಭರಹಿತ R&D ಗ್ರಾಂಟ್ ನಿಧಿ ಘೋಷಣೆ

ಹಸುವಿನ ತಾಜಾ ಹಾಲಿನಿಂದ ಅಲ್ಟ್ರಾಫಿಲ್ಟ್ರೇಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿ 250 ಎಂ ಎಲ್ ಗೆ 25 ಗ್ರಾಂ ಪ್ರೋಟೀನ್ ಹೊಂದಿರುತ್ತದೆ. ಲ್ಯಾಕ್ಟೋಸ್ ಮುಕ್ತ ಆಗಿರುತ್ತದೆ. ಹಾಗು ಅಂಟಿಬಯೋಟಿಕ್ಸ್ ಸಂರಕ್ಷಕಗಳು ಮತ್ತು ಹೆಚ್ಚುವರಿ ಹಾರ್ಮೋನುಗಳಿಂದ ಮುಕ್ತವಾಗಿದೆ. ಇದು ಕರುಳಿಗೆ ಮೃದುವಾಗಿ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ಗ್ರಾಹಕರಿಗೆ ಪ್ಯಾಕ್‌ನಿಂದ ನೇರವಾಗಿ ಸೇವಿಸಬಹು ದಾದ ಅಥವಾ ಸ್ಮೂಥಿಗಳು, ಧಾನ್ಯಗಳು ಮತ್ತು ಪಾನೀಯಗಳಲ್ಲಿ ಬಳಸಬಹುದಾದ ಆರೋಗ್ಯಕರ ಆಯ್ಕೆಯನ್ನು ನೀಡುತ್ತದೆ.

ಬಗ್ಗೆ ಮಾತನಾಡಿದ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಶಶಿ ಕುಮಾರ್, 'ಪ್ರೋಟೀನ್ ಆರೋಗ್ಯಕ್ಕೆ ಅತ್ಯಂತ ನಿರ್ಣಾಯಕ ಪೋಷಕಾಂಶಗಳಲ್ಲಿ ಒಂದಾಗಿದೆ, ಆದರೂ ಹೆಚ್ಚಿನ ಭಾರತೀಯ ಆಹಾರಗಳಲ್ಲಿ ಬೇಕಾದಷ್ಟು ಪ್ರಮಾಣದಲ್ಲಿ ಇರುವುದಿಲ್ಲ. ನಮ್ಮ ಈ ಹೆಚ್ಚಿನ ಪ್ರೋಟೀನ್ ಹಾಲಿನ ಬಿಡುಗಡೆಯೊಂದಿಗೆ, ನಾವು ಸ್ವಚ್ಛ, ಕ್ರಿಯಾತ್ಮಕ ಪೋಷಣೆಗೆ ನಮ್ಮ ಬದ್ಧತೆ ಯನ್ನು ಬಲಪಡಿಸುತ್ತಿದ್ದೇವೆ. ಇದು ಪ್ರತಿ ಮನೆಗೂ ತಲುಪುವಂತೆ ಮಾಡಿ ಜನರ ದೈನಂದಿನ ಆಹಾರದ ಭಾಗವಾಗುವಂತೆ ಮಾಡುವುದು ನಮ್ಮ ಗುರಿ ' ಎಂದರು.

ಪ್ರೋಟೀನ್ ಪನೀರ್ ಬಿಡುಗಡೆಯ ಬಳಿಕ ಅಕ್ಷಯಕಲ್ಪ ಡೈರಿ ಉದ್ಯಮದಲ್ಲಿ ಹೊಸತನ ವನ್ನು ಪರಿಚಯಿಸಿದೆ. ಇವರ ಡೈರಿ ಶ್ರೇಣಿಯಲ್ಲಿ ಲ್ಯಾಕ್ಟೋಸ್-ಫ್ರೀ ಹಾಲು, ಮೊಸರು, ಪ್ರೋಟಿನ್ ಮೊಸರು ಮತ್ತು ಪ್ರೋಟೀನ್ ಪನೀರ್, ಕಡಲೆಕಾಯಿ ಮತ್ತು ರಾಗಿ ಸ್ನ್ಯಾಕ್ಸ್ ಸೇರಿಸಿದಂತೆ ಎಲ್ಲವೂ ಶುದ್ಧತೆ, ಸುರಕ್ಷತೆ ಮತ್ತು ವಿಜ್ಞಾನ ಬೆಂಬಲಿತ ಪೋಷಣೆಯ ಮೇಲೆ ಕೇಂದ್ರೀಕರಿಸಿ ಅಭಿವೃದ್ಧಿಪಡಿಸಲಾಗಿದೆ. 

ಕಳೆದ ಕೆಲವು ವರ್ಷಗಳಿಂದ, ಅಕ್ಷಯಕಲ್ಪ ಸಂಸ್ಥೆಯು ಸಾವಯವ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಶುದ್ಧ ಆಹಾರ ಉದ್ಯಮಗಳಲ್ಲಿ ಒಂದಾಗಿದೆ. ವರ್ಷಾಂತ್ಯದಲ್ಲಿ, ಕಂಪನಿಯು 550 ಕೋಟಿ ವಾರ್ಷಿಕ ಆದಾಯ ಗುರಿ ಮೀರಿಸುವ ನಿರೀಕ್ಷೆಯಿದೆ. ಗ್ರಾಹಕರ ಬೇಡಿಕೆ ಗೆ ಅನುಗುಣವಾಗಿ ಶೇ. 40% ರಷ್ಟು ವಾರ್ಷಿಕ ಬೆಳವಣಿಗೆ ಸಾಧಿಸಿದೆ. ಇಂದು, ಕರ್ನಾಟಕ, ತೆಲಂಗಾಣ ಮತ್ತು ತಮಿಳು ನಾಡುದಾದ್ಯಂತ 2,700 ಪ್ರಮಾಣಿತ ಸಾವಯವ ರೈತರೊಂದಿಗೆ ಕೈ ಜೋಡಿಸಿದೆ. ಇದು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ಗಳಲ್ಲಿ 3 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಗ್ರಾಹಕರಿಗೆ ತನ್ನ ನೇರ ವಿತರಣೆ ಗಳು, ತ್ವರಿತ ವಾಣಿಜ್ಯ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಸೇವೆ ಸಲ್ಲಿಸುತ್ತದೆ.

ಸಂಸ್ಥೆಯ ಬೆಳವಣಿಗೆಯು ರೈತರು ಹಾಗು ಅವರ ಸುಸ್ಥಿರ ಹೈನುಗಾರಿಕೆಯ ಮೇಲೆ ಕೇಂದ್ರೀಕರಿಸು ವುದರ ಮೇಲೆ ಆಧಾರಿತವಾಗಿದೆ. ಸಾವಯವ ಕೃಷಿ ಪದ್ಧತಿಗಳನ್ನು ಪೌಷ್ಟಿಕಾಂಶ ಮತ್ತು ಆಹಾರ ತಂತ್ರಜ್ಞಾನದಲ್ಲಿನ ನಾವೀನ್ಯತೆಯೊಂದಿಗೆ ಸಂಯೋಜಿಸುವ ಮೂಲಕ, ಅಕ್ಷಯಕಲ್ಪ ತನ್ನ ಗ್ರಾಹಕರು ಮತ್ತು ಉತ್ಪಾದಕರಿಬ್ಬರಿಗೂ ಪ್ರಯೋಜನಕಾರಿಯಾದ ಮಾದರಿಯನ್ನು ನಿರ್ಮಿಸುವು ದನ್ನು ಮುಂದುವರೆಸಿದೆ.

ಈ ಹೊಸ ಉತ್ಪನ್ನವು ನವೆಂಬರ್ 3, ರಿಂದ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಲ್ಲಿ ಲಭ್ಯ ವಾಗಲಿದೆ. ಹಾಗು ಅಕ್ಷಯಕಲ್ಪ ಅಪ್ಲಿಕೇಶನ್ ಮತ್ತು ಸ್ವಿಗ್ಗಿ ಮೂಲಕ ನವೆಂಬರ್ ತಿಂಗಳಿನಾದ್ಯಂತ ಪ್ರತ್ಯೇಕವಾಗಿ ಸಿಗುತ್ತದೆ. ಇದು ಡಿಸೆಂಬರ್ ನಲ್ಲಿ ಬಿಗ್ ಬಾಸ್ಕೆಟ್ ಬ್ಲಿಂಕಿಟ್, ಜೆಪ್ಟೊ , ಫಸ್ಟ್ ಕ್ಲಬ್ ಸೇರಿದಂತೆ ವಿವಿಧ ಈ ಕಾಮರ್ಸ್ ಅಪ್ಲಿಕೇಶನ್ ಗಳಲ್ಲಿ ಲಭ್ಯವಾಗಲಿದೆ.