ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Art exhibition: ನ. 30ರಿಂದ ಡಿ. 2ರವರೆಗೆ ಬೆಂಗಳೂರಿನಲ್ಲಿ ಕಲಾಸೃಷ್ಟಿ ಆರ್ಟ್ ಸ್ಟುಡಿಯೋದಿಂದ ಚಿತ್ರಕಲಾ ಪ್ರದರ್ಶನ

ಕಲಾಸೃಷ್ಟಿ ಆರ್ಟ್ ಸ್ಟುಡಿಯೋದಿಂದ ಎಂಟು ವಿಶಿಷ್ಟ ಹಾಗೂ ವೈವಿಧ್ಯಮಯ ಕಲಾವಿದರ ಕುಂಚದಿಂದ ಅರಳಿರುವ ಕಲಾಕೃತಿಗಳ ಪ್ರದರ್ಶನವನ್ನು ನವೆಂಬರ್ 30ರಿಂದ ಡಿಸೆಂಬರ್ 2ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಬೆಂಗಳೂರಿನ ಕುಮಾರಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು: ಕಲಾಸೃಷ್ಟಿ ಆರ್ಟ್ ಸ್ಟುಡಿಯೋ ಎಂಟು ವಿಶಿಷ್ಟ ಹಾಗೂ ವೈವಿಧ್ಯಮಯ ಕಲಾವಿದರನ್ನು ಒಂದೇ ವೇದಿಕೆಯಡಿ ತಂದಿದ್ದು, ಇಲ್ಲಿ ವಿಭಿನ್ನ ಸಂಸ್ಕೃತಿಗಳ ಕಲಾವಿದರು ಅಕ್ರಿಲಿಕ್, ಆಯಿಲ್, ಜಲವರ್ಣ (ವಾಟರ್ ಕಲರ್), ಇಂಕ್ ಮತ್ತು ಮಿಶ್ರ ಮಾಧ್ಯಮಗಳಲ್ಲಿ (ಮಿಕ್ಸ್ಡ್ ಮೀಡಿಯಾ) ವಿವಿಧ ವಿಷಯಗಳ ಕುರಿತಾದ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ನವೆಂಬರ್ 30ರಿಂದ ಡಿಸೆಂಬರ್ 2ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕುಮಾರಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ (CKP) ಕಲಾಕೃತಿಗಳ ಪ್ರದರ್ಶನ (Art exhibition) ಹಮ್ಮಿಕೊಳ್ಳಲಾಗಿದೆ.

Art exhibition  (1)

ಸಿದ್ಧ ಉತ್ತರಗಳನ್ನು ನೀಡುವ ಬದಲು, ಈ ಕಲಾಕೃತಿಗಳನ್ನು ವೀಕ್ಷಿಸಿದಾಗ ನೋಡುಗರು ಸಂತೋಷ, ಉತ್ಸಾಹ ಮತ್ತು ಮುಕ್ತ ಅಭಿವ್ಯಕ್ತಿಯ ಭಾವನೆಯೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಈ ಚಿತ್ರಕಲಾ ಪ್ರದರ್ಶನವು ಆಹ್ವಾನಿಸುತ್ತದೆ.

Art exhibition  (2)