ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shubhanshu Shukla: ಗಗನಯಾತ್ರಿ ಶುಭಾಂಶು ಶುಕ್ಲಾ ಬೆಂಗಳೂರಿಗೆ ಆಗಮನ; ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಆತ್ಮೀಯ ಸ್ವಾಗತ

ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಸಾಧಾರಣ ಸಾಧನೆ ಮೂಲಕ ಭಾರತದ ಬಾಹ್ಯಾಕಾಶ ಯಾನದಲ್ಲಿ ಹೊಸ ಮೈಲುಗಲ್ಲು ನೆಟ್ಟಿದ್ದು, ದೇಶದ ಯುವ ಪೀಳಿಗೆಗೆ ಕನಸುಗಳನ್ನು ನನಸಾಗಿಸಲು ಸ್ಫೂರ್ತಿಯಾಗಿದ್ದಾರೆ. ಅವರ ಬಾಹ್ಯಾಕಾಶ ಯಾನವು ನಮ್ಮೆಲ್ಲರಿಗೂ ಕನಸಿನ ನಕ್ಷತ್ರಗಳನ್ನು ಇನ್ನಷ್ಟು ಹತ್ತಿರ ತಂದಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಗಗನಯಾತ್ರಿ ಶುಭಾಂಶು ಶುಕ್ಲಾ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಆತ್ಮೀಯ ಸ್ವಾಗತ

-

Prabhakara R Prabhakara R Aug 29, 2025 9:44 PM

ಬೆಂಗಳೂರು: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ ಮೊದಲ ಭಾರತೀಯರಾಗಿ ಇತಿಹಾಸ ನಿರ್ಮಿಸಿದ್ದ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಅವರು ಬೆಂಗಳೂರಿಗೆ ಶುಕ್ರವಾರ ಆಗಮಿಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಅವರಿಗೆ ಏರ್ಪೋರ್ಟ್‌ ಅಧಿಕಾರಿಗಳು ಹೂ ಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಶುಭಾಂಶು ಶುಕ್ಲಾ ಅವರು ಅಸಾಧಾರಣ ಸಾಧನೆ ಮೂಲಕ ಭಾರತದ ಬಾಹ್ಯಾಕಾಶ ಯಾನದಲ್ಲಿ ಹೊಸ ಮೈಲುಗಲ್ಲು ನೆಟ್ಟಿದ್ದು, ದೇಶದ ಯುವ ಪೀಳಿಗೆಗೆ ಕನಸುಗಳನ್ನು ನನಸಾಗಿಸಲು ಸ್ಫೂರ್ತಿಯಾಗಿದ್ದಾರೆ. ಅವರ ಬಾಹ್ಯಾಕಾಶ ಯಾನವು ನಮ್ಮೆಲ್ಲರಿಗೂ ಕನಸಿನ ನಕ್ಷತ್ರಗಳನ್ನು ಇನ್ನಷ್ಟು ಹತ್ತಿರ ತಂದಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.



ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಅವರು ಭಾರತಕ್ಕೆ ಮರಳಿದ ಬಳಿಕ ಆ.17ಂದು ಪ್ರಧಾನಿ ಮೋದಿ (Narendra Modi) ಅವರನ್ನು ಭೇಟಿಯಾಗಿದ್ದರು. ದೆಹಲಿಯಲ್ಲಿರುವ ಪ್ರಧಾನ ಮಂತ್ರಿ ನಿವಾಸದಲ್ಲಿ ಶುಕ್ಲಾ ಶುಕ್ಲಾ ಅವರನ್ನು ಕೈಕುಲುಕಿ ಪ್ರೀತಿಯ ಅಪ್ಪುಗೆಯೊಂದಿಗೆ ಮೋದಿ ಸ್ವಾಗತ ಕೋರಿದ್ದರು. ಶುಕ್ಲಾ ಮೋದಿಗೆ ಆಕ್ಸಿಯಮ್ -4 ಮಿಷನ್ ಪ್ಯಾಚ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ವೇಳೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ತೆಗೆದ ಭೂಮಿಯ ಚಿತ್ರಗಳನ್ನು ತೋರಿಸಿದ್ದರು.

ಇತ್ತೀಚೆಗೆ ತವರೂರಿಗೆ ತೆರಳಿದ್ದ ಶುಭಾಂಶು ಶುಕ್ಲಾ (Shubhanshu Shukla) ಅವರನ್ನು ಉತ್ತರ ಪ್ರದೇಶದ ಲಖನೌನಲ್ಲಿ (Lucknow) ಅದ್ಧೂರಿಯಾಗಿ ಸ್ವಾಗತಿಸಲಾಗಿತ್ತು. ಅವರನ್ನು ಸ್ವಾಗತಿಸಲು ಸಾವಿರಾರು ಜನರು ಸೇರಿದ್ದರು. ಅವರಿಗೆ ವಿಮಾನ ನಿಲ್ದಾಣದಲ್ಲಿ (Airport) ಹೂವಿನ ದಳಗಳನ್ನು ಸುರಿಸಿ, ಡ್ರಮ್ ಬಾರಿಸಿ ಹೃದಯಸ್ಪರ್ಶಿ ಸ್ವಾಗತ ಕೋರಲಾಗಿತ್ತು.

ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮತ್ತು ಪರೀಕ್ಷಾ ಪೈಲಟ್ ಆಗಿರುವ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಭೇಟಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮೊದಲ ಗಗನಯಾತ್ರಿ ಎಂಬ ಖ್ಯಾತಿ ಪಡೆದಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತು ನಾಸಾದ ಜಂಟೀ ಯೋಜನೆಯಾ ಆಕ್ಸಿಯಂ ಮಿಷನ್ 4 (Axiom-4 mission) ನಾಲ್ವರು ಗಗನಯಾತ್ರಿಗಳಲ್ಲಿ ಒಬ್ಬರಾದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಜೂನ್ 25ರಂದು ಸ್ಪೇಸ್‌ಎಕ್ಸ್ ಡ್ರ್ಯಾಗನ್ ನೌಕೆಯಲ್ಲಿ ( SpaceX Dragon spacecraft ) ಬಾಹ್ಯಾಕಾಶಕ್ಕೆ ಹೋಗಿ, ಜುಲೈ 15 ರಂದು ಮರಳಿದ್ದರು. ಶುಭಾಂಶು ಸುಮಾರು 18 ದಿನ ಬಾಹ್ಯಾಕಾಶದಲ್ಲಿ ಕಳೆದು ಬಂದಿದ್ದಾರೆ.