Samskarotsava: ಆ. 31ರಂದು ಮಲ್ಲೇಶ್ವರದಲ್ಲಿ ಅಖಿಲ ಹವ್ಯಕ ಮಹಾಸಭಾದಿಂದ ʼಸಂಸ್ಕಾರೋತ್ಸವʼ
Shri Akhila Havyaka Mahasabha: ಸನಾತನ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ, ಜನಮಾನಸದಲ್ಲಿ ಜಾಗೃತಗೊಳಿಸುವ ಸಲುವಾಗಿ ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ 'ಸಂಸ್ಕಾರೋತ್ಸವ' ಆಯೋಜಿಸಲಾಗಿದೆ. ಕಾರ್ಯಕ್ರಮವು ಆ. ಆ.31ರಂದು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆವರೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆಯಲಿದೆ.

-

ಬೆಂಗಳೂರು: ಸನಾತನ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ, ಜನಮಾನಸದಲ್ಲಿ ಜಾಗೃತಗೊಳಿಸುವ ಸಲುವಾಗಿ ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ (Shri Akhila Havyaka Mahasabha) ಆಚಾರ-ವಿಚಾರ, ಆಹಾರ-ವಿಹಾರ, ಸಂಸ್ಕೃತಿ- ಸಂಸ್ಕಾರಗಳ ಕುರಿತಾಗಿ ವೈವಿಧ್ಯಮಯ 'ಸಂಸ್ಕಾರೋತ್ಸವ'ವನ್ನು (Samskarotsava) ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಆ.31ರ ಭಾನುವಾರದಂದು ಆಯೋಜಿಸಲಾಗಿದೆ.
ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಪಂಡಿತ್ ವಿನಾಯಕ ತೊರವಿ, ಹರಿಪ್ರಸಾದ್ ಪೆರಿಯಪ್ಪು ಅಭ್ಯಾಗತರಾಗಿ ಭಾಗವಹಿಸಲಿದ್ದು, ಡಾ.ಗಿರಿಧರ ಕಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಗೂ ಇದೇ ಸಭೆಯಲ್ಲಿ ಕಳೆದ ಡಿಸೆಂಬರ್'ನಲ್ಲಿ ನಡೆದ ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸ್ಮರಣಸಂಚಿಕೆ ʼಸಹಸ್ರಚಂದ್ರʼ ಲೋಕಾರ್ಪಣೆಯಾಗಲಿದೆ.

ಸಂಸ್ಕಾರ ದರ್ಶನ ಕಾರ್ಯಕ್ರಮದಲ್ಲಿ ಶ್ರೀಶ್ರೀ ನಿರ್ಭಯಾನಾಂದ ಸ್ವಾಮಿಜಿ, ಶತಾವಧಾನಿ ಡಾ. ಆರ್ ಗಣೇಶ್, ಚಕ್ರವರ್ತಿ ಸೂಲಿಬೆಲೆ, ದೇವೇಂದ್ರ ಬೆಳೆಯೂರು, ವಿದ್ವಾನ್ ರಾಮಕೃಷ್ಣ ಭಟ್ಟ ಕೂಟೇಲು, ವಿದ್ವಾನ್ ಜಗದೀಶ ಶರ್ಮಾ ಸಂಪ, ಡಾ. ಭರತ್ ಚಂದ್ರ, ಕೂರ್ಗಿ ಶಂಕರನಾರಾಯಣ ಉಪಾಧ್ಯಾಯ, ವಿದ್ವಾನ್ ಕೆ.ಎಲ್ ಶ್ರೀನಿವಾಸನ್, ಮೋಹನ ಭಾಸ್ಕರ ಹೆಗಡೆ, ರೂಪಾ ಗುರುರಾಜ್ ಹಾಗೂ ಪ್ರೋ. ಶಲ್ವಪಿಳ್ಳೈ ಅಯ್ಯಂಗಾರ್ ಮುಂತಾದವರು ವಿವಿಧ ಸಂಸ್ಕಾರಗಳ ಕುರಿತಾಗಿ ಉಪನ್ಯಾಸ ನೀಡಲಿದ್ದಾರೆ.
ಕಲಾ ಸಂಸ್ಕಾರದ ಭಾಗವಾಗಿ ಯಕ್ಷ ಸಂಸ್ಕಾರ ಪ್ರದರ್ಶನ ಹಾಗೂ ವಿಶಿಷ್ಟವಾದ ಸಂಸ್ಕಾರ ಸ್ವರ ಚಿತ್ತಾರ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕೂ ಪೂರ್ವದಲ್ಲಿ 108 ಮಾತೆಯರಿಂದ ಕುಂಕುಮಾರ್ಚನೆ, 108 ವೈದಿಕರಿಂದ ರುದ್ರಾಭಿಷೇಕ , ಶಂಕರ ಪಲ್ಲಕ್ಕಿ ಉತ್ಸವ, ಸಿದ್ದಿವಿನಾಯಕ ದೇವರಿಗೆ ರಂಗಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳೂ ನಡೆಯಲಿವೆ.

ಸಮಾರೋಪ ಸಮಾರಂಭ:
ಬೆಳಗ್ಗೆ 08 ರಿಂದ ರಾತ್ರಿ 08 ವರೆಗೆ ನಡೆಯುವ ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ರವಿ ಹೆಗಡೆ, ಪ್ರೋ. ಎಂ.ಕೆ. ಶ್ರೀಧರ್ ಹಾಗೂ ಎಸ್. ರಘುನಾಥ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಭಾರತೀಯ ಸಂಸ್ಕೃತಿ -ಸಂಸ್ಕಾರಗಳ ಕುರಿತಾದ ಈ ಅಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹವ್ಯಕ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ. ವೇಣು ವಿಘ್ನೇಶ್ ಸಂಪ ಆಹ್ವಾನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | ನೃತ್ಯ ಮತ್ತು ಕಲಾ ಕ್ಷೇತ್ರದ 25 ಕಲಾವಿದರಿಗೆ ಪ್ರಶಸ್ತಿ ಪ್ರದಾನ