ಬೆಂಗಳೂರು, ಮಾ.11: ಬೆಂಗಳೂರಿನಲ್ಲಿರುವ ಆಸ್ಟ್ರೇಲಿಯನ್ ಕೌನ್ಸುಲೇಟ್ ಜನರಲ್ ಕಚೇರಿಯ ಕೌನ್ಸಿಲ್ ಜನರಲ್ ಹಿಲರಿ ಮ್ಯಾಕ್ ಗೀಚಿ ಮತ್ತು ಉಪ ಕೌನ್ಸಿಲ್ ಹ್ಯಾರೀಟ್ ಅವರನ್ನೊಳಗೊಂಡ ನಿಯೋಗ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ, ಮಾತುಕತೆ ನಡೆಸಿತು.
ಇದೇ ವೇಳೆ ಸಚಿವೆಯೊಂದಿಗೆ ಉಭಯ ದೇಶಗಳ ನಡುವಿನ ಹಲವು ವಿಚಾರಗಳನ್ನು ಚರ್ಚೆ ನಡೆಸಲಾಯಿತು. ಕರ್ನಾಟಕದಲ್ಲಿ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ಹಂಚಿಕೊಂಡರು.
ಸುಮಾರು 30 ನಿಮಿಷಗಳ ಕಾಲ ಆಸ್ಟ್ರೇಲಿಯಾ ನಿಯೋಗ ಸಚಿವರೊಂದಿಗೆ ಚರ್ಚೆ ನಡೆಸಿತು. ಬೆಂಗಳೂರಿನಲ್ಲಿರುವ ಆಸ್ಟ್ರೇಲಿಯನ್ ಕೌನ್ಸುಲೇಟ್ ಜನರಲ್ ಕಚೇರಿಗೆ ಭೇಟಿ ನೀಡುವಂತೆ ನಿಯೋಗದ ಸದಸ್ಯರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಹ್ವಾನ ನೀಡಿದರು. ಬಳಿಕ ಆಸ್ಟ್ರೇಲಿಯಾ ನಿಯೋಗದ ಸದಸ್ಯರನ್ನು ಸಚಿವೆ ಸನ್ಮಾನಿಸಿದರು.
ಇನ್ನೆರಡು ತಿಂಗಳಲ್ಲಿ ಉದ್ಯೋಗಿನಿ ಯೋಜನೆಯ ಸಹಾಯ ಧನ ಬಿಡುಗಡೆ; ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಘೋಷಣೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್ ಉಪಸ್ಥಿತರಿದ್ದರು.