ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sting Operation: ಎಚ್‌.ಡಿ. ಕುಮಾರಸ್ವಾಮಿ ನಿವಾಸದಲ್ಲಿ ಮೊಬೈಲ್‌ ಎಕ್ಸ್‌ಚೇಂಜ್‌; ಸ್ಟಿಂಗ್ ವಿಡಿಯೊ ಅಪ್‌ಲೋಡ್‌ ಮಾಡಿದ್ದು ಯಾರೆಂದು ಹೇಳಿದ ಪೊಲೀಸ್​ ಕಮಿಷನರ್!

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಬೆಂಗಳೂರು ನಗರ ಪೊಲೀಸ್ ಇಲಾಖೆ ಮತ್ತಷ್ಟು ತೀವ್ರಗೊಳಿಸಿದೆ. ಕೇಸ್‌ ಕುರಿತು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲೇ ಮೊಬೈಲ್ ಫೋನ್ ಎಕ್ಸ್‌ಚೇಂಜ್ ಆಗಿದೆ ಎಂಬ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ.

ಬೆಂಗಳೂರು: ಸ್ಟಿಂಗ್ ಆಪರೇಷನ್ ಪ್ರಕರಣದ (Sting Operation) ತನಿಖೆಯ ಬಗ್ಗೆ ಬೆಂಗಳೂರು ನಗರ ಪೊಲೀಸ್​ ಕಮಿಷನರ್ ​​ಸೀಮಂತ್​ ಕುಮಾರ್​ ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸೀಮಂತ್​ ಕುಮಾರ್​ ಸಿಂಗ್ ಅವರು, ವಿಡಿಯೊ ಅಪ್‌ಲೋಡ್ ಮಾಡಿರುವುದು ಯಾರು ಎಂಬುವುದು ಗೊತ್ತಾಗಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲಿ ಮೊಬೈಲ್‌ ಎಕ್ಸ್‌ಚೇಂಜ್‌ ಆಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿಳಾಸದಲ್ಲಿ ಆರೋಪಿ ರಿತೇಶ್ ಪಾಂಡೆ ಇದ್ದರು. ಪ್ರಜ್ವಲ್ ಪ್ರಸಾದ್ ಅವರ ಸೂಚನೆ ಮೇರೆಗೆ ವಿಡಿಯೊ ಅಪ್‌ಲೋಡ್ ಆಗಿದೆ. ರಿತೀಶ್ - ಪ್ರಜ್ವಲ್ ಪ್ರಸಾದ್ ನಡುವೆ ಹಣ ವರ್ಗಾವಣೆ ಆಗಿದೆ. ಅವರ ಬಂಧನದ ಬಳಿಕ ಬೇರೆ ಬೇರೆಯವರ ಪಾತ್ರದ ಬಗ್ಗೆ ಗೊತ್ತಾಗಲಿದೆ. ಪ್ರಜ್ವಲ್ ಪ್ರಸಾದ್ ಅವರ ಬಂಧನ ಬಳಿಕ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಪ್ರಜ್ವಲ್ ಪ್ರಸಾದ್ ಖರೀದಿ ಮಾಡಿರುವ ಮೊಬೈಲ್‌ನಲ್ಲಿ ರಿತೇಶ್‌ ಪಾಂಡೆ ವಿಡಿಯೊ ಅಪ್‌ಲೋಡ್ ಮಾಡಿದ್ದಾನೆ. ಅಪ್‌ಲೋಡ್ ಮಾಡಲು ಹೇಳಿದವರು ಯಾರು ಅಂತ ತನಿಖೆ ಮಾಡಲಾಗುತ್ತಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ನಿವಾಸದಲ್ಲಿ ಮೊಬೈಲ್ ಎಕ್ಸ್​ಚೇಂಜ್​ ಆಗಿದೆ. ಅದಕ್ಕೆ ಪೂರಕವಾದ ದಾಖಲೆಗಳು ಈಗಾಗಲೇ ಸಿಕ್ಕಿದೆ. ಮೊಬೈಲ್ ಖರೀದಿ ಮಾಡಿರೋ ಅಂಗಡಿಯ ಸಿಸಿಟಿವಿ ಕೂಡ ಸಿಕ್ಕಿದೆ. ಮುಂದೆ ಮಹಜರು ಪ್ರಕ್ರಿಯೆಗಳನ್ನು ಮಾಡಲಾಗುವುದು, ಈಗ ತನಿಖೆ ಹಂತದಲ್ಲಿ ಇದೆ, ಏನೂ ಹೇಳಲು ಆಗಲ್ಲ ಎಂದು ತಿಳಿಸಿದ್ದಾರೆ.

ಸದ್ಯ ಪ್ರಜ್ವಲ್ ಪ್ರಸಾದ್ ಹಾಗೂ ವಿನೋದ್ ಶರ್ಮಾ ನಾಪತ್ತೆ ಆಗಿದ್ದಾರೆ. ಇಬ್ಬರಿಗಾಗಿ ಹುಡುಕಾಟ ಮಾಡಲಾಗುತ್ತಿದೆ. ರಿತೇಶ್ ಪಾಂಡೆ ಹೇಳಿಕೆ ಮೇಲೆ ಸತ್ಯಾಂಶ ಏನು ಎಂದು ತನಿಖೆ ಮಾಡುತ್ತೇವೆ. ಯಾರ ಸೂಚನೆಯಂತೆ ವಿಡಿಯೊ ಅಪ್‌ಲೋಡ್‌ ಮಾಡಲಾಯಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

MLA Swaroop Prakash: ಕಮಿಷನ್‌ಗೆ ಬೇಡಿಕೆ ವಿಡಿಯೊ ವೈರಲ್‌; ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್‌ಗೆ ಪಕ್ಷದ ವರಿಷ್ಠರಿಂದ ನೋಟಿಸ್‌

ಪ್ರಜ್ವಲ್ ಪ್ರಸಾದ್ ಎಂಬುವರು ಕೇಂದ್ರ ಸಚಿವ ಎಚ್​​.ಡಿ. ಕುಮಾರಸ್ವಾಮಿ ಪಿಆರ್​ಒ ಆಗಿದ್ದರು. ಮೊಬೈಲ್ ಫೋನ್ ಕುಮಾರಸ್ವಾಮಿ ನಿವಾಸದಲ್ಲಿ ನೀಡಿದ್ದರು ಎಂದು ವಿಚಾರಣೆ ವೇಳೆ ರಿತೇಶ್ ಪಾಂಡೆ ಬಾಯಿಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಕರಣ ಸಂಬಂಧ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಮನೆ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.