ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bangalore University: ಕಳೆದ ಆರು ತಿಂಗಳಿಂದ ಮುಂದೂಡಿಕೆಯಾಗಿದ್ದ ಬೆಂಗಳೂರು ವಿವಿ ಪಿಎಚ್.ಡಿ ಪ್ರವೇಶ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ; ಆಗಸ್ಟ್ 3, 4ರಂದು ಸಂದರ್ಶನ

Bangalore University PhD admission: ಬೆಂಗಳೂರು ವಿವಿ ಪಿಎಚ್‌.ಡಿ ಪ್ರವೇಶಕ್ಕೆ ಬೇರೆ ಬೇರೆ ಕಾರಣಗಳಿಂದಾಗಿ ಎರಡು ಬಾರಿ ಅಧಿಸೂಚನೆ ರದ್ದಾಗಿತ್ತು. ಮೂರನೇ ಬಾರಿ ಹೊರಡಿಸಿದ್ದ ಅಧಿಸೂಚನೆ ಪ್ರಕ್ರಿಯೆ ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಆಕಾಂಕ್ಷಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕಳೆದ ಆರು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರು ವಿಶ್ವವಿದ್ಯಾಲಯದ (Bangalore University) ಪಿಎಚ್.ಡಿ ಪ್ರವೇಶ ಪ್ರಕ್ರಿಯೆ ಅಂತಿಮಘಟ್ಟ ತಲುಪಿದ್ದು, ಆಗಸ್ಟ್ 3 ಮತ್ತು 4ರಂದು ಸಂದರ್ಶನದ ದಿನಾಂಕ ನಿಗದಿಯಾಗಿರುವುದಕ್ಕೆ ಆಕಾಂಕ್ಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ

ಬೆಂಗಳೂರು ವಿಶ್ವವಿದ್ಯಾಲಯದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ನಿಕಾಯದ 36 ವಿಷಯಗಳ ಒಟ್ಟು 384 ಪಿಎಚ್.ಡಿ ಸೀಟುಗಳಿಗೆ ಕಳೆದ ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ಕೋರ್ಸ್‌ವರ್ಕ್ ಕೂಡ ಮುಗಿಯುತ್ತಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಎರಡು ಬಾರಿ ಅಧಿಸೂಚನೆ ರದ್ದಾಗಿತ್ತು. ಮೂರನೇ ಬಾರಿ ಹೊರಡಿಸಿದ್ದ ಅಧಿಸೂಚನೆ ಪ್ರಕ್ರಿಯೆ ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಆಕಾಂಕ್ಷಿಗಳು ಸಂತಸಗೊಂಡಿದ್ದಾರೆ.

ನೂತನ ಕುಲಪತಿಗಳಿಗೆ ಮೆಚ್ಚುಗೆ:

ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ನೇಮಕವಾಗಿರುವ ಪ್ರೊ.ಶಿವರಾಜು ಅವರು ವಿಶ್ವವಿದ್ಯಾಲಯದ ಎಲ್ಲಾ ಕಾರ್ಯಗಳಿಗೆ ವೇಗ ನೀಡಿದ್ದಾರೆ ಎಂಬ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ಬೆಂಗಳೂರು ವಿವಿಯ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಮತ್ತು ಪ್ರವೇಶ ಪ್ರಕ್ರಿಯೆಗಳು ನಡೆಯುವಾಗ ಕುಲಪತಿಗಳು ವಿಳಂಬ ಧೋರಣೆ ಅನುಸರಿಸುತ್ತಾರೆ ಎಂಬ ಆರೋಪವಿತ್ತು. ಆದರೆ ಇದೀಗ ನೂತನ ಕುಲಪತಿ ಪ್ರೊ. ಶಿವರಾಜ್ ಅವರ ಕಾರ್ಯಕ್ಕೆ ವಿವಿಯ ಬೋಧಕ ವೃಂದ ಮತ್ತು ವಿದ್ಯಾರ್ಥಿ ವಲಯದಲ್ಲಿ ‌ಮೆಚ್ಚುಗೆ ವ್ಯಕ್ತವಾಗಿದೆ.