ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel- Hamas: ಒಪ್ಪಂದಕ್ಕೆ ಟ್ರಂಪ್ ಕರೆ ನೀಡಿದ ಕೆಲವೇ ಗಂಟೆಗಳಲ್ಲಿ ಇಸ್ರೇಲ್‌ನಿಂದ ಮತ್ತೆ ದಾಳಿ ; ಗಾಜಾದಲ್ಲಿ 6 ಸಾವು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಮಾಸ್‌ ಹಾಗೂ ಇಸ್ರೇಲ್‌ ಕದನ ವಿರಾಮದ ಕುರಿತು ಮಾತನಾಡಿ ಕೆಲವೇ ಗಂಟೆಗಳ ಬಳಿಕ ಇಸ್ರೇಲ್‌ ಗಾಜಾದ (Gaaza) ಮೇಲೆ ದಾಳಿ ನಡೆಸಿದೆ. ಗಾಜಾ ನಗರದ ಮನೆಯೊಂದರಲ್ಲಿ ನಡೆದ ಒಂದು ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದರೆ, ದಕ್ಷಿಣದ ಖಾನ್ ಯೂನಿಸ್‌ನಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಮತ್ತೆ ಗಾಜಾದ ಮೇಲೆ ದಾಳಿ ಮಾಡಿದ ಇಸ್ರೇಲ್‌

-

Vishakha Bhat Vishakha Bhat Oct 4, 2025 3:54 PM

ಗಾಜಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump) ಹಮಾಸ್‌ ಹಾಗೂ ಇಸ್ರೇಲ್‌ ಕದನ ವಿರಾಮದ ಕುರಿತು ಮಾತನಾಡಿ ಕೆಲವೇ ಗಂಟೆಗಳ ಬಳಿಕ ಇಸ್ರೇಲ್‌ ಗಾಜಾದ (Israel- Hamas) ಮೇಲೆ ದಾಳಿ ನಡೆಸಿದೆ. ಯುದ್ಧವನ್ನು ಕೊನೆಗೊಳಿಸುವ ಅಮೆರಿಕದ ಯೋಜನೆಯಲ್ಲಿ ಕೆಲವು ಇತರ ಷರತ್ತುಗಳನ್ನು ಒಪ್ಪಿಕೊಂಡ ನಂತರ, ಇಸ್ರೇಲ್ ಶನಿವಾರ ಗಾಜಾದ ಮೇಲೆ ದಾಳಿ ಮಾಡಿತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾ ಪಟ್ಟಿಯಾದ್ಯಂತ ಇಸ್ರೇಲಿ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಗಾಜಾ ನಗರದ ಮನೆಯೊಂದರಲ್ಲಿ ನಡೆದ ಒಂದು ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದರೆ, ದಕ್ಷಿಣದ ಖಾನ್ ಯೂನಿಸ್‌ನಲ್ಲಿ ನಡೆದ ಇನ್ನೊಂದು ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಕಾರ್ಯಕರ್ತರು ಮತ್ತು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧವನ್ನು ಕೊನೆಗೊಳಿಸುವ ಅಮೆರಿಕದ ಯೋಜನೆಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಇತರ ಕೆಲವು ಷರತ್ತುಗಳನ್ನು ಹಮಾಸ್ ಒಪ್ಪಿಕೊಂಡ ನಂತರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಇಸ್ರೇಲ್‌ಗೆ ಗಾಜಾ ಮೇಲೆ ಬಾಂಬ್ ದಾಳಿ ಮಾಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಹೇಳಿದ್ದರು. ಆದರೆ ಇದೀಗ ಮತ್ತೆ ದಾಳಿ ಪ್ರಾರಂಭವಾಗಿದೆ.

ಈ ಸುದ್ದಿಯನ್ನೂ ಓದಿ: Israel- Hamas: ಇಸ್ರೇಲ್‌- ಹಮಾಸ್‌ ಕದನ ವಿರಾಮ ಫಿಕ್ಸ್‌? ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿಗೆ

ತಕ್ಷಣವೇ ಮಧ್ಯವರ್ತಿಗಳ ಮೂಲಕ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧ ಎಂದು ಹಮಾಸ್‌ ಉಗ್ರರು ತಿಳಿಸಿದ್ದರು. ಹಮಾಸ್ ಹೇಳಿಕೆಯ ನಂತರ, ಡೊನಾಲ್ಡ್ ಟ್ರಂಪ್ ಇಸ್ರೇಲ್ ಅನ್ನು ಗಾಜಾದಲ್ಲಿ ತನ್ನ ಬಾಂಬ್ ದಾಳಿ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಕೇಳಿಕೊಂಡರು. ಅಷ್ಟೇ ಅಲ್ಲದೇ ಹಮಾಸ್‌ ಕದನ ವಿರಾಮದ ಮಾತುಕತೆಗೆ ಒಪ್ಪಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಹಮಾಸ್ ಬಿಡುಗಡೆ ಮಾಡಿದ ಹೇಳಿಕೆಯ ಆಧಾರದ ಮೇಲೆ, ಅವರು ಶಾಶ್ವತ ಶಾಂತಿಗೆ ಸಿದ್ಧರಾಗಿದ್ದಾರೆ ಎಂದು ನಾನು ನಂಬುತ್ತೇನೆ. ಇಸ್ರೇಲ್ ಗಾಜಾದ ಮೇಲೆ ಬಾಂಬ್ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು, ಇದರಿಂದ ನಾವು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಹೊರಗೆ ತರಬಹುದು ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದರು.

ಆದರೆ ಇದೀಗ ಮತ್ತೆ ದಾಳಿ ಮುಂದುವರಿದಿದೆ. ಇಸ್ರೇಲ್‌ ಹಾಗೂ ಹಮಾಸ್‌ ನಡುವೆ ಶಾಂತಿ ಒಪ್ಪಂದವನ್ನು ಏರ್ಪಡಿಸಲು ಶ್ರಮಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಶ್ಲಾಘಿಸಿದ್ದರು.