ಮಹಿಳೆಯರಿಯಾಗಿ ಸಿದ್ಧಪಡಿಸಿರುವ ಕೈಗಡಿಯಾರಗಳ ಸಂಗ್ರಹ ʼಗ್ಲಿಮ್ಮರ್ಸ್ʼಅನ್ನು ಆಲಿಯಾ ಭಟ್ ಅವರ ಮೂಲಕ ಬಿಡುಗಡೆ ಮಾಡಿಸಿದ ಟೈಟನ್ ರಾಗಾ
ತಮ್ಮ ಬಾಳಿನ ಬೆಳಕನ್ನು ತಾವೇ ನಿರ್ಧರಿಸುವ ಮಹಿಳೆಯರನ್ನು ಈ ಕೈಗಡಿಯಾರಗಳ ಸಂಗ್ರಹವು ಬಹಳ ಸಂಭ್ರಮದಿಂದ ಕಾಣುತ್ತದೆ. ಇಂತಹ ಮಹಿಳೆಯರು ತಾವಿರುವ ಸ್ಥಳಕ್ಕೆ ಒಂದು ಹೊಸ ಅರ್ಥ ನೀಡುತ್ತಾರೆ. ಇದನ್ನು ಸಾರರೂಪಲ್ಲಿ ಹೇಳುವ ರೀತಿಯಲ್ಲಿ ಇದೆ ಅಭಿಯಾನದ ಅಡಿ ಶೀರ್ಷಿಕೆ. ʼಮಿನುಗುವ ಎಲ್ಲವೂ ನಮ್ಮದುʼ (all that glimmers, is us) ಎಂಬುದು ಶಕ್ತಿ, ವೈಯಕ್ತಿಕತೆ, ಬದುಕಿನ ಪ್ರತಿ ಆಯಾಮಗಳಲ್ಲಿಯೂ ಮಹಿಳೆಯರಲ್ಲಿ ಕಾಣುವ ಅಗಾಧ ಸಾಮರ್ಥ್ಯವನ್ನು ಇದು ಪ್ರತಿನಿಧಿಸುತ್ತದೆ.

-

ಬೆಂಗಳೂರು: ಜೀವನದಲ್ಲಿ ಕೆಲವು ಸಂದರ್ಭಗಳು ಎಂದಿಗೂ ಮರೆಯಲಾಗದ, ಚಿಕ್ಕ ಅವಧಿಯ ಬೆಳಕಿನೊಂದಿಗೆ ಶುರುವಾಗುತ್ತವೆ. ಜೊತೆಯಾಗಿ ನಗುವುದರಲ್ಲಿ ಸಿಗುವ ಭರವಸೆಯ ಭಾವನೆ, ಅನಿರೀಕ್ಷಿತವಾಗಿ ಸಿಗುವ ಒಳ್ಳೆಯತನ, ಆತ್ಮಾವಲೋಕನದಲ್ಲಿ ದಕ್ಕುವ ತಾಕತ್ತು… ಹೊಳೆಯುವ ಇಂತಹ ಕ್ಷಣಗಳು ನಮ್ಮಲ್ಲಿ ಭರವಸೆಯನ್ನು ಬೆಳೆಸುತ್ತವೆ, ನಮ್ಮ ವ್ಯಕ್ತಿತ್ವವನ್ನು ರೂಪಿಸುವ ನೆನಪುಗಳನ್ನು ಸೃಷ್ಟಿಸಿಕೊಡುತ್ತವೆ.
ಈ ಹಬ್ಬದ ಋತುವಿನಲ್ಲಿ ಟೈಟನ್ ರಾಗಾ, ʼರಾಗಾ ಗ್ಲಿಮ್ಮರ್ಸ್ʼ ಹೆಸರಿನ ಕೈಗಡಿಯಾರ ಬಿಡುಗಡೆ ಮಾಡಿದೆ. ಈ ಮೂಲಕ ಟೈಟನ್ ರಾಗಾ, ಈ ಮಾಂತ್ರಿಕ ಕ್ಷಣಗಳನ್ನು ಮರೆಯಲಾಗದ ವಿಶಿಷ್ಟ ಶೈಲಿಗಳನ್ನಾಗಿ ಪರಿವರ್ತಿಸುತ್ತಿದೆ. ಈ ಕೈಗಡಿಯಾರ ಸಂಗ್ರಹವು ಜೀವನದ ಬೆಳಕನ್ನು ಸಂಭ್ರಮ ದಿಂದ ಕಾಣುತ್ತದೆ, ಈ ಅಭಿಯಾನದ ಕೇಂದ್ರಭಾಗದಲ್ಲಿ ಇರುವುದು ಆಲಿಯಾ ಭಟ್. ಅವರು ʼರಾಗಾʼ ಸರಣಿಯ ರಾಯಭಾರಿ. ಆಲಿಯಾ ಅವರು ಆತ್ಮವಿಶ್ವಾಸ, ಚರಿಷ್ಮಾ, ಉತ್ಸಾಹ, ಸಂಭ್ರಮದ ಮೂರ್ತರೂಪ ಇದ್ದಂತೆ. ಅವರು ಈ ಅಸಾಮಾನ್ಯ ಕೈಗಡಿಯಾರಗಳ ಸಂಗ್ರಹವನ್ನು ಅನಾವರಣ ಮಾಡಿದ್ದಾರೆ.
ತಮ್ಮ ಬಾಳಿನ ಬೆಳಕನ್ನು ತಾವೇ ನಿರ್ಧರಿಸುವ ಮಹಿಳೆಯರನ್ನು ಈ ಕೈಗಡಿಯಾರಗಳ ಸಂಗ್ರಹವು ಬಹಳ ಸಂಭ್ರಮದಿಂದ ಕಾಣುತ್ತದೆ. ಇಂತಹ ಮಹಿಳೆಯರು ತಾವಿರುವ ಸ್ಥಳಕ್ಕೆ ಒಂದು ಹೊಸ ಅರ್ಥ ನೀಡುತ್ತಾರೆ. ಇದನ್ನು ಸಾರರೂಪಲ್ಲಿ ಹೇಳುವ ರೀತಿಯಲ್ಲಿ ಇದೆ ಅಭಿಯಾನದ ಅಡಿ ಶೀರ್ಷಿಕೆ. ʼಮಿನುಗುವ ಎಲ್ಲವೂ ನಮ್ಮದುʼ (all that glimmers, is us) ಎಂಬುದು ಶಕ್ತಿ, ವೈಯಕ್ತಿಕತೆ, ಬದುಕಿನ ಪ್ರತಿ ಆಯಾಮಗಳಲ್ಲಿಯೂ ಮಹಿಳೆಯರಲ್ಲಿ ಕಾಣುವ ಅಗಾಧ ಸಾಮರ್ಥ್ಯವನ್ನು ಇದು ಪ್ರತಿನಿಧಿಸುತ್ತದೆ.
ಇದನ್ನೂ ಓದಿ: Mohan Vishwa Column: ನಗರ ನಕ್ಸಲರ ಬಂಧನ ಯಾವಾಗ ?
ಬಹಳ ದಿಟ್ಟವಾಗಿ ಕಾಣಿಸುವ, ಮುಂದಿನ ಕಾಲದ ಫ್ಯಾಷನ್ ವಿನ್ಯಾಸವನ್ನು ಪ್ರತಿನಿಧಿಸುವ, ಮನಃಪೂರ್ವಕ ಆಯ್ಕೆಯ ಮೂಲಕ ಜೀವನದಲ್ಲಿ ಮಿನುಗುತಾರೆಯಂತೆ ಕಾಣಿಸುವ ಮಹಿಳೆಯ ರಿಯಾಗಿ ರೂಪಿಸಲಾಗಿರುವ ವಿನ್ಯಾಸ ಈ ʼರಾಗಾ ಗ್ಲಿಮ್ಮರ್ಸ್ʼ.
ರೇಡಿಯೆಂಟ್ ಹಾರ್ಡ್ ಹೆಸರಿನ ವಿನ್ಯಾಸದಲ್ಲಿ, ತಿರುಗಿಸಲು ಸಾಧ್ಯವಾಗುವ ಬೆಜೆಲ್ ಅಳವಡಿಸ ಲಾಗಿದೆ. ಇದರಲ್ಲಿ ಬಿಳಿ, ನೇರಿಳೆ, ಎಳೆಗೆಂಪು ಬಣ್ಣದ 216 ಅಮೂಲ್ಯ ಹರಳುಗಳು ಇವೆ. ಇದರ ಜೊತೆಯಲ್ಲಿ ಗುಲಾಬಿ ಚಿನ್ನದ ಬಣ್ಣದ ಪಟ್ಟಿ ಇದೆ. ಸ್ಪಷ್ಟವಾದ ಅಭಿವ್ಯಕ್ತಿಗಾಗಿ ಕೈಗಡಿಯಾರ ಧರಿಸುವ ಮಹಿಳೆಯರಿಯಾಗಿ ರಾಗಾ ಗ್ಲಿಮ್ಮರ್ಸ್ ಸರಣಿಯ ಕೈಗಡಿಯಾರಗಳನ್ನು ವಿನ್ಯಾಸ ಮಾಡಲಾಗಿದೆ. ಇವುಗಳನ್ನು ಸಮಕಾಲೀನ ವಿನ್ಯಾಸದ ಸೀರೆ ಅಥವಾ ಇತರ ಉಡುಪುಗಳ ಜೊತೆ ಧರಿಸಿದಾಗ, ಪ್ರತಿ ಕ್ಷಣವೂ ಮರೆಯಲಾಗದ ಸಂದರ್ಭವಾಗಿ ಬದಲಾವಣೆ ಕಾಣುತ್ತದೆ.
ʼಸೆಲೆಸ್ಟ್ ಬೊʼ ಹೆಸರಿನ ಕೈಗಡಿಯಾರವು ಸಾಂಪ್ರದಾಯಿಕವಾದ ʼಬೊ ಮೋಟಿಫ್” ವಿನ್ಯಾಸವನ್ನು ಬಳಕೆ ಮಾಡಿಕೊಂಡಿದೆ. ಇದರಲ್ಲಿ 274 ಅಮೂಲ್ಯ ಹರಳುಗಳನ್ನು ಬಳಸಲಾಗಿದೆ. ಇದು ಆಧುನಿಕತೆಯನ್ನೂ, ಸಂಪ್ರದಾಯವನ್ನೂ ಒಳಗೊಂಡಿರುವ ವಿನ್ಯಾಸ. ಹೀಗಾಗಿ ಇದು ಸಂಭ್ರಮ ವನ್ನೂ, ವಿಶಿಷ್ಟವಾದ ಶೈಲಿಯನ್ನೂ ಪ್ರತಿನಿಧಿಸುತ್ತದೆ. ಈ ವಿನ್ಯಾಸದ ಕೈಗಡಿಯಾರವು ಕೈಗಳಿಗೆ ಹೊಸ ಬಗೆಯ ಗ್ಲಾಮರ್‌ಅನ್ನು ತಂದುಕೊಡುತ್ತದೆ. ಈ ಮೂಲಕ ಪ್ರತಿಯೊಂದು ಹಬ್ಬದಲ್ಲಿಯೂ, ಇದನ್ನು ಧರಿಸಿದವರು ಲಕ್ಷಣವಾಗಿ ಕಾಣಿಸುವಂತೆ, ಕ್ಷಣಗಳು ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ.
ಸೀಕ್ರೆಟ್ ಅವರ್ ಹೆಸರಿನ ಕೈಗಡಿಯಾರವು ಪಕ್ಕಕ್ಕೆ ಜರುಗಿಸಲು ಸಾಧ್ಯವಾಗುವ ಚೌಕಾಕಾರದ ಕೇಸ್ ಒಳಗೊಂಡಿದೆ. ಕೇಸ್‌ನ ಪ್ರತಿ ಮುಖವೂ ಮಹತ್ವಾಕಾಂಕ್ಷೆ, ಸಾಹಸಮಯ ವ್ಯಕ್ತಿತ್ವ, ಸ್ವಯಂ ಅಭಿವ್ಯಕ್ತಿಯ ಬಯಕೆಯನ್ನು ಹೇಳುತ್ತವೆ. ಈ ಮೂಲಕ ಇದು ಭಿನ್ನ ಸಂಸ್ಕೃತಿಗಳಲ್ಲಿ ಜೀವನ ಸಾಗಿಸುವ ಮಹಿಳೆಯರಿಗೆ ಸೂಕ್ತವಾದ ವಿನ್ಯಾಸ ಆಗುತ್ತದೆ.
ಈ ಸಂಗ್ರಹವು ಬಹಳ ಭಿನ್ನವಾಗಿ ಕಾಣಿಸುವುದು ಇದರ ವಿನ್ಯಾಸದ ಶೈಲಿಯಿಂದಾಗಿ. ಇಲ್ಲಿ ಪ್ರತಿ ಕೈಗಡಿಯಾರ ಕೂಡ ಒಂದು ಆಭರಣದಂತೆ ಕಾಣುತ್ತದೆ. ಉನ್ನತವಾದ ಶೈಲಿಯ ಛಾಯಾಚಿತ್ರ ಗಳಿಂದ, ವಾಸ್ತುಶಿಲ್ಪದ ಕಲಾತ್ಮಕತೆಯಿಂದ ಪ್ರೇರಣೆ ಪಡೆದು ಈ ಶ್ರೇಣಿಯು ಬಿಲ್ಲಿನ ಆಕಾರದ ಕೇಸ್‌ಗಳನ್ನು ರೂಪಿಸಿದೆ. ಪ್ರತಿಯೊಂದು ವಿನ್ಯಾಸ ಕೂಡ ಪರಿಣಾಮ ಉಂಟುಮಾಡುವಂತೆ ಇದೆ, ಬಹಳ ಆಪ್ತವಾಗುವಂತೆ ಇದೆ. ಇವುಗಳನ್ನು ತಮ್ಮ ಅಸ್ಮಿತೆಯನ್ನು ಕೈಗಡಿಯಾರದ ಮೂಲಕ ಹೇಳಲು ಬಯಸುವ ಮಹಿಳೆಯರಿಯಾಗಿ ರೂಪಿಸಲಾಗಿದೆ.
ಈ ವಿನ್ಯಾಸದ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಟೈಟನ್ ಕಂಪನಿ ಲಿಮಿಟೆಡ್‌ನ ಟೈಟನ್ ಕೈಗಡಿಯಾರಗಳು ಹಾಗೂ ರಾಗಾದ ಮಾರುಕಟ್ಟೆ ವಿಭಾಗದ ಮುಖ್ಯಸ್ಥೆ ಅಪರ್ಣಾ ರವಿ ಅವರು “ರಾಗಾ ಗ್ಲಿಮ್ಮರ್ಸ್ ಮೂಲಕ ವಿನ್ಯಾಸ ಆಚೆಗೂ ಆಲೋಚಿಸಲು ನಾವು ಬಯಸಿದ್ದೆವು. ಯಾವ ಹಿಂಜರಿಕೆಗಳೂ ಇಲ್ಲದೆ ಸಂಭ್ರಮಿಸುವ ಮಹಿಳೆಯರ ಪ್ರಭೆ, ಭರವಸೆ ಮತ್ತು ಖುಷಿಯನ್ನು ಪ್ರತಿಬಿಂಬಿಸಲು ಬಯಸಿದ್ದೆವು. ಇಂತಹ ಮಹಿಳೆಯರು ತಾವು ಮಾಡುವ ಎಲ್ಲ ಕಾಳಜಿಯ ಕೆಲಸಗಳಲ್ಲೂ, ತಾವು ಬೆಳೆಸುವ ಎಲ್ಲ ಬಾಂಧವ್ಯಗಳಲ್ಲೂ, ಸಾಕಾರ ಮಾಡಿಕೊಳ್ಳಲು ಎಲ್ಲ ಕನಸುಗಳಲ್ಲೂ ತಮ್ಮ ಹೊಳಪನ್ನು ತೋರುತ್ತಾರೆ. ಈ ನಂಬಿಕೆಯೊಂದಿಗೆ ಗ್ಲಿಮ್ಮರ್ಸ್ ರೂಪಿಸಲಾಗಿದೆ. ಆಲಿಯಾ ಭಟ್ ಅವರು ಈ ಅಭಿಯಾನವನ್ನು ಮುನ್ನಡೆಸುವುದರೊಂದಿಗೆ, ಈ ಆಶಯವು ಬಹಳ ವಿಶ್ವಾಸದೊಂದಿಗೆ ಸಾಕಾರಗೊಂಡಿದೆ. ನಾವು ಹಬ್ಬಗಳ ಋತುವನ್ನು ಪ್ರವೇಶಿಸುತ್ತಿರುವಾಗ ಈ ವಿನ್ಯಾಸವು ವಿಶೇಷ ವಿನ್ಯಾಸಗಳ ಮಟ್ಟವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ರಾಗಾ ಮತು ಅದು ಪ್ರತಿನಿಧಿಸುವ ಮಹಿಳೆಯರ ನಡುವಿನ ಬಂಧವನ್ನು ಹೆಚ್ಚಿಸುತ್ತದೆ ಎಂದು ನಂಬಿದ್ದೇವೆ” ಎಂದು ಹೇಳಿದ್ದಾರೆ.
ಈ ಶ್ರೇಣಿಯ ಕೈಗಡಿಯಾರಗಳ ಬೆಲೆಯು ರೂ 8,395ರಿಂದ ಆರಂಭವಾಗಿ ರೂ 28,795ರವರೆಗೆ ಇದೆ.