ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru Mass Murder: ಬೆಂಗಳೂರು ಹತ್ಯಾಕಾಂಡ; ಮಗಳ ಬ್ರೈನ್ ವಾಶ್ ಮಾಡಿ ಕೃತ್ಯಕ್ಕೆ ಬಳಸಿಕೊಂಡಿದ್ದ ತಂದೆ!

ಬೆಂಗಳೂರು ಭೀಕರ ಹತ್ಯಾಕಾಂಡದ ಬಗ್ಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ಕೊಲೆಗೆ ಕಾರಣ ಇನ್ನೂ ಸಂಪೂರ್ಣವಾಗಿ ಗೊತ್ತಾಗಿಲ್ಲ, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ನಡುವೆ ಆರೋಪಿಯ ಬಗ್ಗೆ ಹಲವು ಶಾಕಿಂಕ್‌ ವಿಚಾರಗಳು ಬಯಲಾಗುತ್ತಿವೆ.

ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಬೆಚ್ಚಿಬೀಳಿಸಿರುವ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ (Bengaluru Mass Murder) ಆಘಾತಕಾರಿ ವಿಚಾರಗಳು ಒಂದೊಂದೇ ಹೊರಬರುತ್ತಿವೆ. ಪತ್ನಿಯ ಕುಟುಂಬದವರನ್ನು ಒಬ್ಬೊಬ್ಬರನ್ನೇ ಮನೆಗೆ ಕರೆಸಿಕೊಂಡು ಕ್ರೂರವಾಗಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಕ್ಯಾಬ್ ಚಾಲಕ ಇಂದುಶೇಖರ್ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಶಾಕಿಂಗ್‌ ಸಂಗತಿ ಬೆಳಕಿಗೆ ಬಂದಿದೆ.

ಆರೋಪಿ ಇಂದುಕುಮಾರ್‌ಯ ಮಗಳೇ ಈ ಕೃತ್ಯಕ್ಕೆ ಸಹಾಯ ಮಾಡಿದ್ದಾಳೆ ಎನ್ನುವ ವಿಚಾರ ಗೊತ್ತಾಗಿದೆ. ಕುಟುಂಬದವರ ಹತ್ಯೆ ಮಾಡಲು ಮಗಳಿಗೆ ಆರೋಪಿ ಬ್ರೈನ್‌ ವಾಶ್‌ ಮಾಡಿದ್ದ. ಇವರು ಇರೋತನಕ ನಾವು ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ ಎಂದು ಮಗಳಿಗೆ ಆರೋಪಿ ಹೇಳುತ್ತಿದ್ದ. ಆತನ ಎಲ್ಲಾ ಮಾತುಗಳನ್ನು ಪುತ್ರಿ ಒಪ್ಪಿಕೊಂಡಿದ್ದಳು. ಅಲ್ಲದೆ ತಾಯಿಯ ಕುಟುಂಬದವರಿಗೆ ಕರೆ ಮಾಡಿ ಮನೆಗೆ ಕರೆಸಲು ಸಹಾಯ ಮಾಡಿದ್ದಳು. ಹೀಗಾಗಿ ಮಗಳನ್ನು ಬಿಟ್ಟು ಎಲ್ಲರನ್ನೂ ಆರೋಪಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿದ ಬಳಿಕ ಅವರುಗಳ ಮೊಬೈಲ್‌ಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದರಿಂದ ಪೊಲೀಸರಿಗೆ ಸುಲಭವಾಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ನಳಿನಿ (ಆರೋಪಿಯ ಪತ್ನಿ ಸುನಿತಾಳ ನಾದಿನಿ) ನಾಪತ್ತೆಯಾಗಿರುವ ಬಗ್ಗೆ ಆಕೆಯ ತಾಯಿ ದೂರು ನೀಡಿದಾಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ರಾಜಾಜಿನಗರ ಠಾಣೆ ಪೊಲೀಸರು ಮೊದಲು ನಳಿನಿ ಬಳಸುತ್ತಿದ್ದ ಮೊಬೈಲನ್ನು ಟ್ರೇಸ್‌‍ ಮಾಡಿದ್ದಾರೆ.

ಆಗ ಪೊಲೀಸರಿಗೆ ಮೊದಲು ಆ ಲೊಕೇಶನ್‌ ತೋರಿಸಿದ್ದೇ ಬಾಷ್ಯಂ ಸರ್ಕಲ್‌ ಬಳಿಯ ಆರೋಪಿ ಇಂದುಶೇಖರ್‌ ಮನೆ ವಿಳಾಸ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ದಾವಿಸಿ ಮನೆಯೊಳಗೆ ಕುಳಿತಿದ್ದ ಆರೋಪಿ ಇಂದುಶೇಖರ್‌ನನ್ನು ವಿಚಾರಿಸಿದಾಗ ಮೊದಲು ತಡಬಡಾಯಿಸಿದ್ದಾನೆ. ಪೊಲೀಸರು ತಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಆತ ಏಳು ಮಂದಿಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದನ್ನು ಕೇಳಿ ಪೊಲೀಸರೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಇನ್ನು ಘಟನೆ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಹಠಾತ್ ಕೃತ್ಯವಲ್ಲ, ಕ್ಯಾಬ್ ಚಾಲಕ ಪೂರ್ವ ಸಂಚು ನಡೆಸಿಯೇ ಮಾಡಿದ ಕುಕೃತ್ಯವೆಂದು ಕಂಡುಬರುತ್ತಿದೆ. ಕೊಲೆಗೆ ಕಾರಣ ಇನ್ನೂ ಸಂಪೂರ್ಣವಾಗಿ ಗೊತ್ತಾಗಿಲ್ಲ, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದರು.

ಬೆಂಗಳೂರಲ್ಲಿ ಭೀಕರ ಹತ್ಯಾಕಾಂಡ: ಪತ್ನಿ ಮೇಲಿನ ದ್ವೇಷಕ್ಕೆ ಒಂದೇ ಕುಟುಂಬದ 7 ಜನರನ್ನು ಕೊಂದ ವ್ಯಕ್ತಿ

ಹತ್ಯೆ ಮಾಡಿರುವ ಕ್ಯಾಬ್ ಚಾಲಕನ ಮನಸ್ಥಿತಿ ಸರಿಯಿರಲಿಲ್ಲ, ಆತನ ಮನೆಯವರ ಜತೆ ವರ್ತನೆ ಸರಿಯಿರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇಷ್ಟೊಂದು ಭೀಕರವಾಗಿ ಹತ್ಯೆ ಮಾಡಿರುವ ವ್ಯಕ್ತಿ ತನ್ನ ಪತ್ನಿಯ ಕುಟುಂಬಸ್ಥರನ್ನು ಮಾತ್ರ ಹತ್ಯೆ ಮಾಡಿದ್ದಾನೆ. ತನ್ನ ಮಗಳನ್ನು ಬ್ರೈನ್ ವಾಶ್ ಮಾಡಿ ಕೃತ್ಯಕ್ಕೆ ಸಹಕರಿಸಲು ಪ್ರೋತ್ಸಾಹ ನೀಡಿದ್ದಾನೆಂದು ತಿಳಿದುಬಂದಿದೆ. ಆತನ ಮಗಳಿಗೆ ಕೇವಲ 16-17 ವರ್ಷ ಇರಬಹುದು. ಪ್ರಾಥಮಿಕ ತನಿಖೆಯಲ್ಲಿ ಆರೋಪಿಯ ಮನಸ್ಥಿತಿ ಸರಿಯಿಲ್ಲದಿರುವುದು ಮತ್ತು ಕುಟುಂಬದ ಸದಸ್ಯರೊಂದಿಗೆ ಉತ್ತಮ ವರ್ತನೆ ಇಲ್ಲದಿರುವುದು ತಿಳಿದುಬಂದಿದೆ ಎಂದರು.