ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fire Accident: ಪ್ಲಾಸ್ಟಿಕ್‌ ಮ್ಯಾಟ್‌ ಅಂಗಡಿಯಲ್ಲಿ ಅಗ್ನಿ ದುರಂತ, ಒಬ್ಬ ಸಾವು

Bengaluru: ಪ್ಲಾಸ್ಟಿಕ್‌ ಅಂಗಡಿಯೊಳಗೆ ರಾತ್ರಿ ಕೆಲಸಗಾರರು ಮಲಗಿ ನಿದ್ರಿಸಿರುವಾಗ ಬೆಂಕಿ ಹೊತ್ತಿಕೊಂಡಿದೆ. ತೀವ್ರ ದಹನಕಾರಿ ವಸ್ತುಗಳು ಅಂಗಡಿಯಲ್ಲಿ ಇದ್ದುದರಿಂದ ಬೆಂಕಿ ಶೀಘ್ರವಾಗಿ ವ್ಯಾಪಿಸಿದೆ. ಮಾಹಿತಿ ದೊರೆತ ಕೂಡಲೆ ಘಟನಾ ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಕಾರ್ಯನಿರತವಾಗಿವೆ.

ಪ್ಲಾಸ್ಟಿಕ್‌ ಮ್ಯಾಟ್‌ ಅಂಗಡಿಯಲ್ಲಿ ಅಗ್ನಿ ದುರಂತ, ಒಬ್ಬ ಸಾವು

ಹರೀಶ್‌ ಕೇರ ಹರೀಶ್‌ ಕೇರ Aug 16, 2025 9:36 AM

ಬೆಂಗಳೂರು: ಇಂದು ಬೆಂಗಳೂರಲ್ಲಿ (Bengaluru) ನಸುಕಿನ ಜಾವ 3:30ಕ್ಕೆ ಭೀಕರವಾದ ಅಗ್ನಿ ಅವಘಡ (Fire Accident) ಸಂಭವಿಸಿದ್ದು, ಒಬ್ಬ ಸಜೀವ ದಹನಗೊಂಡಿದ್ದಾನೆ. ಬೆಂಗಳೂರಿನ ನಗರತ್ ಪೇಟೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಮೂವರು ಅಂಗಡಿಯೊಳಗೆ ಸಿಲುಕಿರುವ ಅಥವಾ ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ನಗರತ್ ಪೇಟೆಯ ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಈ ಅಗ್ನಿ ಅವಘಡ ತಡರಾತ್ರಿ ಸಂಭವಿಸಿದ್ದು, ಅಂಗಡಿಯೊಳಗೆ ನಿದ್ರಿಸಿದ್ದ ಐದಕ್ಕೂ ಹೆಚ್ಚು ಕೆಲಸಗಾರರು ಇದರಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಪ್ಲಾಸ್ಟಿಕ್‌ ಅಂಗಡಿಯೊಳಗೆ ರಾತ್ರಿ ಕೆಲಸಗಾರರು ಮಲಗಿ ನಿದ್ರಿಸಿರುವಾಗ ಬೆಂಕಿ ಹೊತ್ತಿಕೊಂಡಿದೆ. ತೀವ್ರ ದಹನಕಾರಿ ವಸ್ತುಗಳು ಅಂಗಡಿಯಲ್ಲಿ ಇದ್ದುದರಿಂದ ಬೆಂಕಿ ಶೀಘ್ರವಾಗಿ ವ್ಯಾಪಿಸಿದೆ. ಮಾಹಿತಿ ದೊರೆತ ಕೂಡಲೆ ಘಟನಾ ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಕಾರ್ಯನಿರತವಾಗಿವೆ. ಮೃತಪಟ್ಟವರ ವಿವರಗಳು ದೊರೆತಿಲ್ಲ. ಅಂಗಡಿ ಮಾಲಿಕರನ್ನು ಪತ್ತೆ ಹಚ್ಚಲಾಗುತ್ತಿದೆ. ಶಾರ್ಟ್‌ ಸರ್ಕಿಟ್‌ನಿಂದ ಹೀಗಾಗಿರಬಹುದು ಎನ್ನಲಾಗಿದ್ದು, ಸುರಕ್ಷತಾ ಕ್ರಮಗಳ ಗೈರುಹಾಜರಿಯ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.

ಫ್ರಿಡ್ಜ್‌ ಸ್ಫೋಟ, ಹಾನಿಗೀಡಾದ ಮನೆಗಳ ದುರಸ್ತಿಗೆ ಸೂಚನೆ

ಬೆಂಗಳೂರು: ಸಿಲಿಂಡರ್ ಸ್ಫೋಟದಲ್ಲಿ ಹಾನಿಗೀಡಾಗಿರುವ ಮನೆಗಳನ್ನು ಕೂಡಲೇ ದುರಸ್ತಿ ಮಾಡಿಕೊಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ. ಅವಘಡದಲ್ಲಿ ಒಬ್ಬ ಬಾಲಕ ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಆಡುಗೋಡಿ ಬಳಿಯ ಚಿನ್ನಯ್ಯನ ಪಾಳ್ಯದಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದ ಬಗ್ಗೆ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.

ದುರದೃಷ್ಟಕರ ಘಟನೆ ನಡೆದಿದೆ. ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟವಾಗಿರಬಹುದು ಎಂದು ಕಂಡುಬಂದಿದೆ. ಪೊಲೀಸರು ಹಾಗೂ ಬಿಬಿಎಂಪಿಯವರ ವರದಿಯೂ ಕೂಡ ಅದೇ ಹೇಳಿದೆ. ಇಲ್ಲಿನ ಜನ ಸಣ್ಣ ಸಣ್ಣ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಕಸ್ತೂರಮ್ಮ ಅವರಿಗೆ ಸುಟ್ಟ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನರಸಮ್ಮ, ಫಾತಿಮಾ, ಪ್ರಮೀಳಾ (38), ರಾಜೇಶ್ (40), ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮುಬಾರಕ್ ಎಂಬ ಬಾಲಕ ತೀರಿಕೊಂಡಿದ್ದಾನೆ. ಸಬ್ರಿನಾ ಬಾನು, ಕಯಾಲಾ, ಇಂದಿರಾಗಾಂಧಿ ಆಸ್ಪತ್ರೆಯಲ್ಲಿದ್ದು, ಸುಬ್ರಮಣಿ (62 ವರ್ಷ) ಅಗಡಿ ಆಸ್ಪತ್ರೆ, ಶೇಖಾ, ನಜೀದುಲ್ಲಾ,(37 ವರ್ಷ) ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮುಖ್ಯಮಂತ್ರಿಗಳು ವಿವರಿಸಿದರು.

ಇದನ್ನೂ ಓದಿ: Cylinder Blast: ಬೆಂಗಳೂರು ಸಿಲಿಂಡರ್ ಬ್ಲಾಸ್ಟ್ ಪ್ರಕರಣಕ್ಕೆ ತಿರುವು; ಫ್ರಿಡ್ಜ್ ಸ್ಫೋಟಗೊಂಡು ಅವಘಡ!