ಬೆಂಗಳೂರು, ಫೆ.06: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ಪ್ರಯಾಣದ ದರಗಳಲ್ಲಿ ಸಣ್ಣ ಬದಲಾವಣೆಗಳನ್ನು (Namma Metro fare hike) ಮಾಡಿದೆ. ಈ ಹೊಸ ದರಗಳು ಫೆಬ್ರವರಿ 9ರಿಂದ ಜಾರಿಗೆ ಬರಲಿವೆ. ಭವಿಷ್ಯದಲ್ಲಿ ಒಂದೇ ಬಾರಿಗೆ ದೊಡ್ಡ ಮೊತ್ತದ ದರ ಹೆಚ್ಚಳ ಮಾಡಿ ಸಡನ್ ಶಾಕ್ ಕೊಡೋ ಬದಲು , ಪ್ರತಿ ವರ್ಷ ಸಣ್ಣ ಪ್ರಮಾಣದಲ್ಲಿ ಬೆಲೆಯಲ್ಲಿ ಕೊಂಚ ಹೆಚ್ಚು-ಕಮ್ಮಿ ಮಾಡುತ್ತಾ ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳೋಕೆ ಇದು ಅವಶ್ಯಕ ಎಂಬುದು ಸರ್ಕಾರದ ಅಭಿಪ್ರಾಯ.
ಜೊತೆಗೆ ಮೇಂಟೇನೆನ್ಸ್ ಕಾರಣವನ್ನೂ ಕೂಡ ಸರ್ಕಾರ ನೀಡಿ ದರ ಹೆಚ್ಚಿಗೆ ಮಾಡಲು ಈ ನಿರ್ಧಾರ ಕೈಗೊಂಡಿದೆ. ದರಗಳು ಕನಿಷ್ಠ ₹1 ರಿಂದ ಗರಿಷ್ಠ ₹5 ರಷ್ಟು ಹೆಚ್ಚಾಗಿವೆ. ಅಂದರೆ ಮೊದಲು ನೀವು ಬನಶಂಕರಿಯಿಂದ ಜಯನಗರಕ್ಕೆ ಹೋಗಬೇಕಿದ್ದರೆ ಈಗ ಕೊಡಬೇಕಾದ ದುಡ್ಡಿಗಿಂತ ಒಂದು ರೂಪಾಯಿ ಹೆಚ್ಚು ಕೊಡಬೇಕು. ಅಂದ್ರೆ ಮೊದಲು 20 ರೂ. ಕೊಡುತ್ತಿದ್ದರೆ ಈಗ 21 ರೂ. ಕೊಡಬೇಕು.
ಮೊದಲು 1 ಕಿ.ಮೀ ಪ್ರಯಾಣದ ದರಕ್ಕೆ 10 ರೂಪಾಯಿ ಇತ್ತು, ಅದೀಗ 1 ರೂಪಾಯಿ ಹೆಚ್ಚಾಗಿದೆ. ಹೀಗಾಗಿ ಹೊಸ ಕನಿಷ್ಟ ಬೆಲೆ 11 ರೂ. ಹಾಗೆಯೇ ಹೊಸ ಗರಿಷ್ಠ ಬೆಲೆ 5 ರೂ. ಹೆಚ್ಚಾಗಿ 95 ರೂಪಾಯಿ ಆಗಿದೆ. ಸ್ಮಾರ್ಟ್ ಕಾರ್ಡ್ ಮತ್ತು ಡಿಜಿಟಲ್ ಪಾವತಿಗಳಿಗೆ ಇರುವ ರಿಯಾಯಿತಿಗಳು (ಪೀಕ್ ಮತ್ತು ಪೀಕ್ ಅಲ್ಲದ ಸಮಯಗಳಲ್ಲಿ) ಮೊದಲಿನಂತೆಯೇ ಮುಂದುವರಿಯುತ್ತವೆ. 0.2 ಕಿಲೋಮೀಟರ್ ಪ್ರಯಾಣಕ್ಕೆ ಒಂದು ರೂಪಾಯಿ ಹೆಚ್ಚಳ, 2 ರಿಂದ 4 ಕಿ.ಮೀ ಪ್ರಯಾಣಕ್ಕೂ 1 ರೂಪಾಯಿ ಹೆಚ್ಚಳದೊಂದಿಗೆ ಪ್ರಯಾಣ ದರ ಕ್ರಮವಾಗಿ 11, 21 ರೂಪಾಯಿ ಆಗಲಿದೆ.
Namma Metro ticket price hike: ಬೆಂಗಳೂರಿಗರಿಗೆ ಮತ್ತೆ ಬರೆ, ನಮ್ಮ ಮೆಟ್ರೋ ಪ್ರಯಾಣ ದರ ಶೇ.5 ಹೆಚ್ಚಳ
4-6 ಕಿ.ಮೀ ಪ್ರಯಾಣಕ್ಕೆ ಈ ಮೊದಲು 30 ರೂ. ದರವಿತ್ತು ಅದೀಗ 32 ರೂ. ಆಗಲಿದೆ, 6-8 ಕಿ.ಮೀ ಪ್ರಯಾಣಕ್ಕೆ ಈ ಮೊದಲು 40 ರೂ. ಇತ್ತು ಈಗ 42 ರೂ. ತಲುಪಲಿದೆ. 8-10 ಕಿ.ಮೀ ಪ್ರಯಾಣಕ್ಕೆ 50 ರೂಪಾಯಿ ದರ ಈ ಹಿಂದೆ ಇತ್ತು ಅದೀಗ 53 ರೂ. ಆಗಲಿದೆ, ಹಾಗೆಯೇ 10-12 ಕಿ.ಮೀ ಪ್ರಯಾಣಕ್ಕೆ 60 ರೂ. ಇತ್ತು ಅದೀಗ 63 ರೂ. ಆಗಲಿದೆ.
15-20 ಕಿ. ಮೀ ಮೊದಲು 70 ರೂ.ಅಲ್ಲಿ ತಲುಪುತ್ತಿದ್ದೆವು. ಇದೀಗ ಅದರ ಬೆಲೆ 74 ಆಗಲಿದೆ, 20 ರಿಂದ 25 ಕಿ.ಮೀಗೆ ಮೊದಲಿದ್ದ 80 ರೂ ದರ 84 ಕ್ಕೆ ಜಂಪ್ ಆಗಲಿದೆ. 25-30 ಕಿ.ಮೀ ಪ್ರಯಾಣಕ್ಕೆ ಈಗ ಪ್ರಯಾಣಿಕ ಭರ್ತಿ 95 ರೂಪಾಯಿ ಭರಿಸಬೇಕಿದೆ. ಇದರ ಜೊತೆಗೆ ಸ್ಮಾರ್ಟ್ ಕಾರ್ಡ್ ಬಳಸುವವರಿಗೆ ಯಾವುದೇ ರೀತಿ ಬೆಲೆ ಏರಿಕೆ ಹೊಡೆತ ತಟ್ಟಿಲ್ಲ, ಮತ್ತೂ ಪೀಕ್ ಸಮಯದಲ್ಲಿ 5% ಹಾಗೆಯೇ ಪೀಕ್ ಅಲ್ಲದ ಸಮಯದಲ್ಲಿ 10% ಹಾಗೆಯೇ ಭಾನುವಾರ ಹಾಗೂ 3 ರಾಷ್ಟ್ರೀಯ ರಜಾದಿನದಲ್ಲೂ 10% ರಿಯಾಯಿತಿ ಸಿಗುತ್ತದೆ.
Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಇಂದಿನಿಂದ ಅನ್‌ಲಿಮಿಟೆಡ್ ಪಾಸ್
ಆದರೆ ಪ್ರವಾಸಿಗರ ದಿನದ ಓಡಾಟದ ಕಾರ್ಡ್‌ಗಳು ತುಟ್ಟಿಯಾಗಿವೆ. ಮೊದಲು ಒಂದು ದಿನದ ಓಡಾಟದ ಕಾರ್ಡ್ 300 ರೂ.ಗೆ ಸಿಗುತ್ತಿತ್ತು. ಈಗ 13 ರೂ. ಹೆಚ್ಚಾಗಿ 313 ರೂ. ತಲುಪಿದೆ. ಹಾಗೆಯೇ ಮೂರು ದಿನದ ಕಾರ್ಡ್ 600 ರೂ. ಇದ್ದದ್ದು 628 ರೂ ಆಗಿದೆ. ಐದು ದಿನದ ಕಾರ್ಡ್ ಬೆಲೆ 900 ರೂ. ಇದ್ದದ್ದು 943 ರೂ. ಆಗಿದೆ! ಅದರ ಜೊತೆ ಮೊಬೈಲ್ ಕ್ಯೂ ಆರ್ ಗಳೂ ಕೂಡ ದುಬಾರಿಯಾಗಿದ್ದು 1 ದಿನದ ಮೊಬೈಲ್ ಕ್ಯೂ ಆರ್ 250 ರಿಂದ 263ಕ್ಕೆ, 3 ದಿನದ ಮೊಬೈಲ್ ಕ್ಯೂ ಆರ್ 550ರಿಂದ 578 ಕ್ಕೆ ಹಾಗೆಯೇ ಐದು ದಿನಗಳ ಮೊಬೈಲ್ ಕ್ಯೂ ಆರ್ 850ರಿಂದ 893ಕ್ಕೆ ತಲುಪಿದೆ.