ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Namma Mtero: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಬಲ್‌ ಖುಷಿ ಸುದ್ದಿ

2026ರ ಅಂತ್ಯದ ಒಳಗೆ ಈಗಾಗಲೇ ಸೇವೆ ಒದಗಿಸುತ್ತಿರುವ ಹಸಿರು, ಗುಲಾಬಿ ಮತ್ತು ಹಳದಿ ಮಾರ್ಗಗಳ ಜೊತೆ ಮತ್ತೆರಡು ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸಂಚಾರದಿಂದ ನಗರದ ಟ್ರಾಫಿಕ್​​ ಸಮಸ್ಯೆಗೆ ಬಹುತೇಕ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಿದೆ. ಪಿಂಕ್​ ಮತ್ತು ಬ್ಲೂ ಲೈನ್​​ಗಳಲ್ಲಿ ಮೆಟ್ರೋ ರೈಲುಗಳು ವಾಣಿಜ್ಯ ಸಂಚಾರ ನಡೆಸಲಿವೆ. ಮೇ ತಿಂಗಳಿನಲ್ಲಿ ಪಿಂಕ್ ಲೈನ್ ಮೊದಲ ಹಂತ ಓಪನ್ ಆದರೆ, ಡಿಸೆಂಬರ್​​ ವೇಳೆಗೆ ಬ್ಲ್ಯೂ ಲೈನ್​​ನ ಮೊದಲ ಹಂತವೂ ಕಾರ್ಯಾಚರಣೆ ಆರಂಭಿಸಲಿದೆ.

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಬಲ್‌ ಖುಷಿ ಸುದ್ದಿ

ನಮ್ಮ ಮೆಟ್ರೋ -

ಹರೀಶ್‌ ಕೇರ
ಹರೀಶ್‌ ಕೇರ Jan 6, 2026 8:04 AM

ಬೆಂಗಳೂರು, ಜ06: ಕೊರೊನಾ ಬಳಿಕ ಕೊಂಚ ಇಳಿಕೆಯಾಗಿದ್ದ ಬೆಂಗಳೂರಿನ (Bengaluru) ಟ್ರಾಫಿಕ್​​ ಸಮಸ್ಯೆ ಈಗ ಮತ್ತೆ ಹಳೆಯ ಸ್ಥಿತಿಗೆ ಮರಳಿದೆ. ಪ್ರತಿದಿನ ವಾಹನ ದಟ್ಟಣೆ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಿರುವ ಸಿಲಿಕಾನ್​ ಸಿಟಿ ಮಂದಿಗೆ ನಮ್ಮ ಮೆಟ್ರೋ (Namma Metro) ಗುಡ್​​ನ್ಯೂಸ್​​ ಕೊಟ್ಟಿದ್ದು, ಒಂದಲ್ಲ ಎರಡು ಹೊಸ ಮಾರ್ಗಗಳು ಈ ವರ್ಷದಿಂದಲೇ ಕಾರ್ಯಾರಂಭ ಮಾಡಲಿವೆ. ಈಗಾಗಲೇ ಸೇವೆ ಒದಗಿಸುತ್ತಿರುವ ಹಸಿರು, ಗುಲಾಬಿ ಮತ್ತು ಹಳದಿ ಮಾರ್ಗಗಳ ಜೊತೆ ಮತ್ತೆರಡು ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸಂಚಾರದಿಂದ ನಗರದ ಟ್ರಾಫಿಕ್​​ (Bengaluru traffic) ಸಮಸ್ಯೆಗೆ ಬಹುತೇಕ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಿದೆ.

ಯಾವೆಲ್ಲ ಹೊಸ ಮಾರ್ಗ ಓಪನ್​?

2026ರ ಅಂತ್ಯದ ಒಳಗೆ ಪಿಂಕ್​ ಮತ್ತು ಬ್ಲೂ ಲೈನ್​​ಗಳಲ್ಲಿ ಮೆಟ್ರೋ ರೈಲುಗಳು ವಾಣಿಜ್ಯ ಸಂಚಾರ ನಡೆಸಲಿವೆ. ಮೇ ತಿಂಗಳಿನಲ್ಲಿ ಪಿಂಕ್ ಲೈನ್ ಮೊದಲ ಹಂತ ಓಪನ್ ಆದರೆ, ಡಿಸೆಂಬರ್​​ ವೇಳೆಗೆ ಬ್ಲ್ಯೂ ಲೈನ್​​ನ ಮೊದಲ ಹಂತವೂ ಕಾರ್ಯಾಚರಣೆ ಆರಂಭಿಸಲಿದೆ. ಕಾಳೇನ ಅಗ್ರಹಾರ ಟು ನಾಗವಾರ ಸಂಪರ್ಕಿಸುವ ಪಿಂಕ್ ಲೈನ್​​ 21.25 ಕಿ.ಮೀ. ವಿಸ್ತೀರ್ಣವಿದ್ದು, ಆ ಪೈಕಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 7.5 ಕಿ.ಮೀ.ಯ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್​​ಗಳು ಮೇನಲ್ಲಿ ಓಪನ್ ಆಗಲಿದೆ. ನವೆಂಬರ್​​ನಲ್ಲಿ ತಾವರೆಕೆರೆ ಟು ನಾಗವಾರ 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್​​ಗಳ ಕಾರ್ಯಾಚರಣೆ ಶುರುವಾಗಲಿದೆ. ಪಿಂಕ್ ಲೈನ್​​ಗಾಗಿ ಈಗಾಗಲೇ BEMLನಿಂದ ಒಂದು ಡ್ರೈವರ್ಲೆಸ್ ರೈಲು ಕೂಡ ಬಂದಿದೆ.

ಬ್ಲೂ ಲೈನ್​​ನ ಸಿಲ್ಕ್ ಬೋರ್ಡ್ ಟು ಕೆ.ಆರ್.ಪುರಂ ಮಾರ್ಗ ಈ ವರ್ಷ ಡಿಸೆಂಬರ್​​ ವೇಳೆಗೆ ಓಪನ್ ಆಗಲಿದೆ. ಇದು 17.75 ಕಿ.ಮೀ. ಮಾರ್ಗದಲ್ಲಿ, 13 ಸ್ಟೇಷನ್​​ಗಳಿವೆ. ನೀಲಿ ಮಾರ್ಗವು ಒಟ್ಟು 58.19 ಕಿ.ಮೀ. ವಿಸ್ತೀರ್ಣವಿದ್ದು, ಮೊದಲ ಹಂತ 2026ರ ವರ್ಷಾಂತ್ಯದ ವೇಳೆಗೆ ಕಾರ್ಯಾರಂಭವಾದರೆ, 2027ರಲ್ಲಿ ಎರಡನೇ ಹಂತ ಓಪನ್​​ ಆಗಲಿದೆ. ಈ ಎರಡು ಮಾರ್ಗಗಳು ಕಾರ್ಯಾಚರಣೆ ಆರಂಭಿಸಿದರೆ ನಗರದ ಟ್ರಾಫಿಕ್ ಇಳಿಕೆಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಮೆಟ್ರೋ ಪ್ರಯಾಣಿಕರು ಕೂಡ ಅಭಿಪ್ರಾಯಪಟ್ಟಿದ್ದಾರೆ.

Metro to Chikkaballapur: ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ತರುವ ಕನಸು – 2033ರೊಳಗೆ ಯೋಜನೆ ಪೂರ್ಣ ಸಾಧ್ಯತೆ: ಶಾಸಕ ಪ್ರದೀಪ್ ಈಶ್ವರ್ ವಿಶ್ವಾಸ