ಬೆಂಗಳೂರು, ನ. 28: ನಗರದ ಬಸವನಗುಡಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ನವೆಂಬರ್ 29, 30ರ ಎರಡು ದಿನ ಏಕವ್ಯಕ್ತಿ ತಾಳಮದ್ದಲೆ ಏರ್ಪಡಿಸಲಾಗಿದೆ. ನ. 29ರ ಸಂಜೆ 6 ಗಂಟೆಗೆ ʼಕಪಿಕುಲ ಸಾರ್ವಭೌಮʼ ಏಕವ್ಯಕ್ತಿ ತಾಳಮದ್ದಲೆ ನಡೆಯಲಿದೆ. ಕಲಾವಿದರಾದ ದಿವಾಕರ ಹೆಗಡೆ ಕೆರೆಹೊಂಡ, ಅನಂತ ಹೆಗಡೆ ದಂತಳಿಗೆ, ಎ.ಪಿ. ಫಾಟಕ್ ಕಾರ್ಕಳ ನಡೆಸಿಕೊಡಲಿದ್ದಾರೆ.
ನ. 30ರ ಸಂಜೆ 6 ಗಂಟೆಗೆ ʼಲೋಕ ರಾವಣʼ ಏಕವ್ಯಕ್ತಿ ತಾಳಮದ್ದಲೆ ನಡೆಯಲಿದೆ. ಕಲಾವಿದರಾದ ದಿವಾಕರ ಹೆಗಡೆ ಕೆರೆಹೊಂಡ, ಅನಂತ ಹೆಗಡೆ ದಂತಳಿಗೆ, ಎ.ಪಿ. ಫಾಟಕ್ ಕಾರ್ಕಳ ನಡೆಸಿಕೊಡಲಿದ್ದಾರೆ.