Bengaluru News: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಜ. 24ಕ್ಕೆ ಜರ್ಮನಿಯ ಫ್ರೆಸೆನಿಯಸ್ ವಿವಿ ಬೆಂಗಳೂರಿನ ಅಬ್ರಾಡ್ ಎಜುಕೇಷನ್ ಕೌನ್ಸಿಲ್‌ಗೆ ಭೇಟಿ
Bengaluru News: ಜರ್ಮನಿಯ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಫ್ರೆಸೆನಿಯಸ್ ಯುನಿವರ್ಸಿಟಿ ಆಫ್ ಅಪ್ಲೈಯ್ಡ್ ಸೈನ್ಸ್, ಬೆಂಗಳೂರಿನ ಅಬ್ರಾಡ್ ಎಜುಕೇಷನ್ ಕೌನ್ಸಿಲ್ ಆ್ಯಂಡ್ ಇಮಿಗ್ರೇಷನ್ ಸರ್ವೀಸಸ್‌ಗೆ ಜ.24 ರಂದು ಭೇಟಿ ನೀಡುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು: ಜರ್ಮನಿಯ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಫ್ರೆಸೆನಿಯಸ್ ಯುನಿವರ್ಸಿಟಿ ಆಫ್ ಅಪ್ಲೈಯ್ಡ್ ಸೈನ್ಸ್ ಬೆಂಗಳೂರಿನ (Bengaluru News) ಅಬ್ರಾಡ್ ಎಜುಕೇಷನ್ ಕೌನ್ಸಿಲ್ ಆ್ಯಂಡ್ ಇಮಿಗ್ರೇಷನ್ ಸರ್ವೀಸಸ್‌ಗೆ ಜ. 24ರಂದು ಭೇಟಿ ನೀಡಲಿದೆ.
ಹೊರದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕು ಎನ್ನುವ ಆಸೆ ಹೊತ್ತಿರುವ ರಾಜ್ಯ ಹಾಗೂ ದೇಶದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ ಕಳೆದ 17 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಬ್ರಾಡ್ ಎಜುಕೇಷನ್ ಕೌನ್ಸಿಲ್‌ಗೆ, ಜ. 24ರಂದು ಫ್ರೆಸೆನಿಯಸ್ ವಿಶ್ವವಿದ್ಯಾಲಯದ ಆಫ್ ಅಪ್ಲೈಯ್ಡ್ ಸೈನ್ಸ್ ವಿಭಾಗ ಭೇಟಿ ನೀಡುತ್ತಿದೆ. ಈ ವೇಳೆ ಯುನಿವರ್ಸಿಟಿಯ ಹಿರಿಯ ಪ್ರಾಧ್ಯಾಪಕರು, ಸಿಬ್ಬಂದಿಯೊಂದಿಗೆ ಚರ್ಚಿಸಲು ಹಾಗೂ ವಿಶ್ವವಿದ್ಯಾಲಯದಲ್ಲಿರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆಯಲು ವಿದ್ಯಾರ್ಥಿಗಳು ಭೇಟಿ ನೀಡಬಹುದು ಎಂದು ಕೌನ್ಸಿಲ್ ತಿಳಿಸಿದೆ.
ಅಬ್ರಾಡ್ ಎಜುಕೇಷನ್ ಕೌನ್ಸಿಲ್ ಆ್ಯಂಡ್ ಇಮಿಗ್ರೇಷನ್ ಸರ್ವೀಸಸ್‌ಗೆ ಈವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಹೊರದೇಶದಲ್ಲಿ ವ್ಯಾಸಂಗ ಮಾಡಲು ಅಗತ್ಯ ಸಹಕಾರ, ವೀಸಾ ಸೇರಿದಂತೆ ವಿವಿಧ ರೀತಿಯ ನೆರವನ್ನು ನೀಡಿದೆ. ಇದೀಗ ಜರ್ಮನಿಯಲ್ಲಿ ಹೆಚ್ಚಿನ ವ್ಯಾಸಂಗ ಮಾಡಲು ಬಯಸುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಲು, ಫ್ರೆಸೆನಿಯಸ್ ವಿವಿಯೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದು ಸಂಸ್ಥೆ ತಿಳಿಸಿದೆ.
ಇತರ ದೇಶಗಳಿಗೆ ಹೋಲಿಸಿದರೆ ಜರ್ಮನಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಹಾಗೂ ಸವಲತ್ತುಗಳು ಲಭ್ಯ. ಅಬ್ರಾಡ್ ಎಜುಕೇಷನ್ ಕೌನ್ಸಿಲ್ ವತಿಯಿಂದಲೇ ಈಗಾಗಲೇ ನೂರಾರು ವಿದ್ಯಾರ್ಥಿಗಳಿಗೆ ಜರ್ಮನಿಯ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ನಡೆಸಲು ಅನುಕೂಲವಾಗುವಂತೆ ಸಹಾಯ ಮಾಡಲಾಗಿದೆ. ಆದ್ದರಿಂದ ಇದೀಗ 24ರಂದು ಆಗಮಿಸಲಿರುವ ಫ್ರೆಸೆನಿಯಸ್ ವಿಶ್ವವಿದ್ಯಾಲಯದ ಅವಕಾಶವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಕೌನ್ಸಿಲ್‌ನ ಸಂಸ್ಥಾಪಕ ನಿರ್ದೇಶಕಿ ಕವಿತಾ ಪ್ರಕಾಶ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ನೊಂದಣಿಗಾಗಿ 9945266118 ಸಂಪರ್ಕಿಸಬಹುದು.
ಈ ಸುದ್ದಿಯನ್ನೂ ಓದಿ | Central Bank of India Recruitment 2025: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದೆ 266 ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
ಜರ್ಮನಿ ಉನ್ನತ ವಿದ್ಯಾಭ್ಯಾಸಕ್ಕೆ ಹೇಳಿಮಾಡಿಸಿದ ಜಾಗ. ಅಲ್ಲಿರುವ ಸರ್ಕಾರಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ನೀಡುತ್ತಿವೆ. ಜರ್ಮನಿಯಲ್ಲಿ ಪದವಿ ಪಡೆದವರಿಗೆ ಅಲ್ಲಿಯೇ ಕೆಲಸ ಹುಡುಕಲು ಸಹಾಯವಾಗುವ ರೀತಿಯಲ್ಲಿ ವೀಸಾಗಳನ್ನು ನೀಡಲಾಗುತ್ತದೆ. ಆದ್ದರಿಂದ ನಮ್ಮ ಸಂಸ್ಥೆ ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅಬ್ರಾಡ್ ಎಜುಕೇಷನ್ ಆ್ಯಂಡ್ ಇಮಿಗ್ರೇಷನ್ ಕೌನ್ಸಿಲ್ ಸಂಸ್ಥಾಪಕ ನಿರ್ದೇಶಕಿ ಕವಿತಾ ಪ್ರಕಾಶ್ ತಿಳಿಸಿದ್ದಾರೆ.