#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bengaluru News: ಮುಕ್ತ ಚಿಂತನೆಗೆ ಅವಕಾಶ ನೀಡುವ ಏಕೈಕ ಧರ್ಮ ಸನಾತನ ಹಿಂದೂ ಧರ್ಮ: ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ

Bengaluru News: ವೈವಿಧ್ಯತೆ ಅಡಕವಾಗಿರುವ ಸಂಸ್ಕೃತಿಯ ಪ್ರಾಣವಿರುವುದೇ ಏಕತೆಯಲ್ಲಿ. ಒಗ್ಗಟ್ಟಾಗಿರುವ ಮೂಲಕ ಸಂಸ್ಕೃತಿಯ ಉಳಿವಿಗಾಗಿ, ಸಂಸ್ಕೃತಿಯ ಸಂರಕ್ಷಣೆಗಾಗಿ ಪ್ರಯತ್ನಿಸಬೇಕಾಗಿದೆ. ಮುಂದಿನ ತಲೆಮಾರಿಗಾಗಿ ಸಂಸ್ಕೃತಿಯನ್ನು, ಪರಂಪರೆಯನ್ನು ಕಾಪಿಟ್ಟುಕೊಳ್ಳುವ ಕೆಲಸವಾಗಬೇಕಾಗಿದೆ. ಸರ್ವರಿಗೂ ಮುಕ್ತ ಚಿಂತನೆಗೆ ಅವಕಾಶ ನೀಡುವ ಏಕೈಕ ಧರ್ಮ ಸನಾತನ ಹಿಂದೂ ಧರ್ಮ ಎಂದು ಹರಿಹರಪುರದ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದ್ದಾರೆ.

Bengaluru News: ಮುಕ್ತ ಚಿಂತನೆಗೆ ಅವಕಾಶ ನೀಡುವ ಏಕೈಕ ಧರ್ಮ ಸನಾತನ ಹಿಂದೂ ಧರ್ಮ: ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ

Profile Siddalinga Swamy Jan 24, 2025 9:29 PM

ಬೆಂಗಳೂರು, ಜ.24, 2025: ಸರ್ವರಿಗೂ ಮುಕ್ತಚಿಂತನೆಗೆ ಅವಕಾಶ ನೀಡುವ ಏಕೈಕ ಧರ್ಮ ಸನಾತನ ಹಿಂದೂ ಧರ್ಮ ಎಂದು ಹರಿಹರಪುರದ ಶ್ರೀಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು. ಶ್ರೀರಾಮಚಂದ್ರಾಪುರ ಮಠದ ಬೆಂಗಳೂರಿನ (Bengaluru News) ಶಾಖಾ ಮಠದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ವೈವಿಧ್ಯತೆ ಅಡಕವಾಗಿರುವ ಸಂಸ್ಕೃತಿಯ ಪ್ರಾಣವಿರುವುದೇ ಏಕತೆಯಲ್ಲಿ. ಒಗ್ಗಟ್ಟಾಗಿರುವ ಮೂಲಕ ಸಂಸ್ಕೃತಿಯ ಉಳಿವಿಗಾಗಿ, ಸಂಸ್ಕೃತಿಯ ಸಂರಕ್ಷಣೆಗಾಗಿ ಪ್ರಯತ್ನಿಸಬೇಕಾಗಿದೆ. ಮುಂದಿನ ತಲೆಮಾರಿಗಾಗಿ ಸಂಸ್ಕೃತಿಯನ್ನು, ಪರಂಪರೆಯನ್ನು ಕಾಪಿಟ್ಟುಕೊಳ್ಳುವ ಕೆಲಸವಾಗಬೇಕಾಗಿದೆ. ಸರ್ವರಿಗೂ ಮುಕ್ತಚಿಂತನೆಗೆ ಅವಕಾಶ ನೀಡುವ ಏಕೈಕ ಧರ್ಮ ಸನಾತನ ಹಿಂದೂ ಧರ್ಮ. ಸಧರ್ಮ ಪಾಲನೆಯ ಮೂಲಕ ಅಸ್ತಿತ್ವ ಉಳಿಸಿಕೊಂಡು ಸಮನ್ವತೆಯ ದೃಷ್ಟಿಕೋನವನ್ನಿಟ್ಟುಕೊಂಡು, ಸಮಷ್ಟಿಯ ಹಿತಚಿಂತನೆಯೊಂದಿಗೆ ಸಮಾಜದ ಏಳಿಗೆಗಾಗಿ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು.

21

ಎರಡು ಅದ್ವೈತ ಪೀಠಗಳು, ಎರಡು ಪೀಠಗಳು ಶ್ರೀಶಂಕರಭಗವತ್ಪಾದರಿಂದ ಸಂಸ್ಥಾಪಿಸಲ್ಪಟ್ಟಿದ್ದು, ಉಭಯ ಪೀಠಗಳಿಂದ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ತಲುಪಿಸುವ, ಸಂಸ್ಕೃತಿಯನ್ನು ಸಮೃದ್ಧಗೊಳಿಸುವ, ಸಧರ್ಮ ಪರಿಪಾಲನೆ ಮಾಡುವಂತೆ ಪ್ರೇರೇಪಿಸುವ ಸತ್ಕಾರ್ಯಗಳನ್ನು ಆಗಿದೆ, ಆಗುತ್ತಲಿವೆ ಎಂದು ಶ್ರೀಗಳು ಹೇಳಿದರು. ಭಾರತೀಯ ಸಂಸ್ಕೃತಿಯನ್ನು, ಭಾರತೀಯತೆಯನ್ನು ಮೂಲವಾಗಿರಿಸಿಕೊಂಡು ಶಿಕ್ಷಣ ನೀಡುತ್ತಿರುವ ಶ್ರೀರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶಿಕ್ಷಣ ಕ್ರಮವನ್ನು ಶ್ಲಾಘಿಸಿದರು.

ಈ ಸುದ್ದಿಯನ್ನೂ ಓದಿ | Mukesh Ambani : ರಿಲಯನ್ಸ್‌ ಮಹತ್ವದ ಯೋಜನೆ - ವಿಶ್ವದ ಅತಿದೊಡ್ಡ AI ಡೇಟಾ ಸೆಂಟರ್ ನಿರ್ಮಾಣ

ಶ್ರೀರಾಮಚಂದ್ರಾಪುರ ಮಠದ ಸಮ್ಮುಖ ಸರ್ವಧಿಕಾರಿ ಟಿ. ಮಡಿಯಾಲ್, ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ. ಎಲ್., ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಶ್ರೀಪರಿವಾರದ ಮಧು ಜಿ.ಕೆ., ಶ್ರೀರಾಮಾಶ್ರಮದ ಅಧ್ಯಕ್ಷ ರಮೇಶ ಹೆಗಡೆ ಕೋರಮಂಗಲ, ಶ್ರೀ ಅಖಿಲ ಹವ್ಯಕ ಮಹಾಸಭಾ ಪ್ರಧಾನ ಕಾರ್ಯದರ್ಶಿ ಸಿಎ ವೇಣು ವಿಘ್ನೇಶ್, ಹಿರಿಯ ವಕೀಲ ಡಾ. ಅರುಣ ಶ್ಯಾಮ, ಶ್ರೀಮಠದ ಪ್ರಮುಖರಾದ ವಿದ್ವಾನ್ ಜಗದೀಶ ಶರ್ಮಾ ಸಂಪ, ಆರ್. ಎಸ್. ಹೆಗಡೆ ಹರಗಿ, ಧರ್ಮಕರ್ಮ ವಿಭಾಗದ ರಾಮಕೃಷ್ಣ ಭಟ್ ಕೂಟೇಲು, ಶ್ರೀಮಠ ಅಂಗಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.