Bengaluru News: ಇಂದು ಸಂಜೆ ʻಪರಮ್ ಕಲ್ಚರ್ʼ ನಿಂದ 'ವಂದೇ ಮಾತರಂ' ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ
Bengaluru News: 79ನೇ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ʻಪರಮ್ ಕಲ್ಚರ್ʼ ವತಿಯಿಂದ ಪರಂಪರಾ ಸರಣಿಯ 07ನೇ ಕಾರ್ಯಕ್ರಮ 'ವಂದೇ ಮಾತರಂ' ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವು ಆ.14 ರಂದು ಗುರುವಾರ ಸಂಜೆ 6.30ಕ್ಕೆ ಬೆಂಗಳೂರು ನಗರದ ಎನ್.ಆರ್. ಕಾಲೋನಿಯ ಡಾ.ಸಿ. ಅಶ್ವತ್ಥ್ ಕಲಾಭವನದಲ್ಲಿ ಜರುಗಲಿದೆ.


ಬೆಂಗಳೂರು: 79ನೇ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ʻಪರಮ್ ಕಲ್ಚರ್ʼವತಿಯಿಂದ ಪರಂಪರಾ ಸರಣಿಯ 07ನೇ ಕಾರ್ಯಕ್ರಮ 'ವಂದೇ ಮಾತರಂ' ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವು ಆ.14 ರಂದು ಗುರುವಾರ ಸಂಜೆ 6.30ಕ್ಕೆ ಬೆಂಗಳೂರು ನಗರದ (Bengaluru News) ಎನ್.ಆರ್. ಕಾಲೋನಿಯ ಡಾ.ಸಿ. ಅಶ್ವತ್ಥ್ ಕಲಾಭವನದಲ್ಲಿ ಜರುಗಲಿದೆ.
ಶಂಕರ ಶಾನುಭೋಗ್ ಅವರ ತಂಡದಿಂದ ದೇಶಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಲಿದೆ. ಸಹಗಾಯನದಲ್ಲಿ ಮೇಘನಾ ಹಳಿಯಾಳ, ಕೀಬೋರ್ಡ್‌ನಲ್ಲಿ ಕೃಷ್ಣ ಉಡುಪ, ತಬಲಾದಲ್ಲಿ ಸುದತ್ತ ಎಲ್ ಶ್ರೀಪಾದ್, ಕೊಳಲಿನಲ್ಲಿ ರಮೇಶ್ ಕುಮಾರ್ ಜಿ.ಎಲ್., ರಿದಂ ಪ್ಯಾಡ್ಸ್‌ನಲ್ಲಿ ಪದ್ಮನಾಭ ಕಾಮತ್ ಹಾಗೂ ಢೋಲಕ್‌ನಲ್ಲಿ ಲೋಕೇಶ್ ಆರ್. ಅವರು ಸಹಕರಿಸಲಿದ್ದಾರೆ
ಆತ್ಮೀಯರಿಗೆ ಪ್ರೀತಿಯಿಂದ ಪತ್ರ ಬರೆಯಿರಿ
ಗಾಯನದ ಜತೆಯಲ್ಲಿ, ಪತ್ರ ಬರೆಯುವ ಕಲೆಯನ್ನು ಪುನಃ ನೆನಪಿಸುವ ಸಲುವಾಗಿ, ಇಂಡಿಯಾ ಪೋಸ್ಟ್‌ನ ಸಹಯೋಗದೊಂದಿಗೆ, ನಮ್ಮಲ್ಲಿನ ಕಲಾವಿದರೇ ರಚಿಸಿದ ಚಿತ್ರಗಳನ್ನೊಳಗೊಂಡ ಅಂಚೆ ಪತ್ರಗಳ ಪ್ರದರ್ಶನ, ಮಾರಾಟವೂ ಇರುತ್ತದೆ. ಇದರಲ್ಲಿ ತಮ್ಮ ಆತ್ಮೀಯರಿಗೆ ಸಂದೇಶವನ್ನು ಬರೆದು ಕಳುಹಿಸುವ ವ್ಯವಸ್ಥೆಯೂ ಇರುತ್ತದೆ. ಸಂಜೆ 5.30ಕ್ಕೆ ಪತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ ಇರಲಿದೆ ಎಂದು ತಿಳಿಸಿದೆ.
ಏನಿದು ಪರಂಪರಾ?
ʼಪರಮ್ ಕಲ್ಚರ್ʼ ಪ್ರಸ್ತುತಪಡಿಸುವ 'ಪರಂಪರಾ' ಸರಣಿ ಬಹು ಜನಪ್ರಿಯವಾಗಿರುವಂತಹ ಕಾರ್ಯಕ್ರಮ. ಈಗಾಗಲೇ ನಡೆದಿರುವ ಪ್ರತಿಯೊಂದರ ವಿಷಯವಸ್ತುವೂ ವಿಭಿನ್ನವಾಗಿದ್ದು, ಪ್ರೇಕ್ಷಕರಿಂದಲೂ ಕಲಾವಿದರಿಂದಲೂ ಪ್ರಶಂಸಿಸಲ್ಪಟ್ಟಿದೆ. ಕರ್ನಾಟಕ ಹಾಗೂ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಸೇರಿ ಭರತನಾಟ್ಯ, ಚಿತ್ರಕಲಾ ಪ್ರದರ್ಶನ ಇವೆಲ್ಲ ಕಾರ್ಯಕ್ರಮಗಳ ಜತೆಗೆ, 'ವೀರ ಸಂನ್ಯಾಸಿಯ ಆತ್ಮಗೀತೆ' ಎಂಬ ಅದ್ಭುತವಾದ ಮಲ್ಟಿಮೀಡಿಯಾ ಪ್ರೊಡಕ್ಷನ್ ಕೂಡ ಪರಂಪರಾ ಸರಣಿಯಲ್ಲಿ ಪ್ರದರ್ಶಿಸಲ್ಪಟ್ಟಿದೆ ಎಂದು ಪರಮ್ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Independence Day: ಸಾರ್ವಜನಿಕರೇ, ನೀವೂ ಈಗ ರಾಜಭವನ ವೀಕ್ಷಿಸಬಹುದು!