ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರು ಟ್ರಾಫಿಕ್‌ಗೆ ಸ್ವಲ್ಪ ರಿಲೀಫ್‌, ನೈಸ್ ರಸ್ತೆ- ದೀಪಾಂಜಲಿ ನಗರ ಲಿಂಕ್‌ ರೋಡ್ ಪ್ರಾಯೋಗಿಕ ಸಂಚಾರ ಶುರು

ಸುಮಾರು 1.5 ಕಿಮೀ ಉದ್ದದ ಈ ನಾಲ್ಕು ಪಥದ ರಸ್ತೆ ದೀಪಾಂಜಲಿ ನಗರದಿಂದ ಹೊಸಕೆರೆಹಳ್ಳಿ ಭಾಗದವರೆಗೆ ಸಂಪರ್ಕ ಕಲ್ಪಿಸುತ್ತದೆ. ಮೈಸೂರು ರಸ್ತೆ ಮತ್ತು ಕೆಂಗೇರಿ ಭಾಗದಲ್ಲಿ ಭಾರೀ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದ ವಾಹನ ಸವಾರರಿಗೆ ಈ ಲಿಂಕ್ ರಸ್ತೆ ದೊಡ್ಡ ಮಟ್ಟದ ಪರಿಹಾರ ನೀಡಲಿದೆ. ನೇರ ಹಾಗೂ ಸಿಗ್ನಲ್-ರಹಿತ ಸಂಚಾರಕ್ಕೆ ಅವಕಾಶ ಸಿಗುವುದರಿಂದ ಸಂಚಾರ ಸುಗಮವಾಗಲಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.24: ಬೆಂಗಳೂರಿನ (Bengaluru) ಮೈಸೂರು ರಸ್ತೆ (Mysore road) ವಾಹನ ಸವಾರರಿಗೆ ಸಿಹಿ ಸುದ್ದಿ ಇಲ್ಲಿದೆ. ನೈಸ್ ರಸ್ತೆಯ (NICE Road) ಸಂಪರ್ಕವನ್ನು ಸುಧಾರಿಸುವ, ದೀಪಾಂಜಲಿ ನಗರ ವರೆಗಿನ ಹೊಸ ಲಿಂಕ್ ರಸ್ತೆ (Link road) ಪ್ರಾಯೋಗಿಕ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹೊಸದಾಗಿ ನಿರ್ಮಿಸಿರುವ ಸುಮಾರು 1.5 ಕಿಮೀ ಉದ್ದದ ಈ ನಾಲ್ಕು ಪಥದ ರಸ್ತೆ ದೀಪಾಂಜಲಿ ನಗರದಿಂದ ಹೊಸಕೆರೆಹಳ್ಳಿ ಭಾಗದವರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗವು ಬನಶಂಕರಿ 6ನೇ ಹಂತ, ಕನಕಪುರ ರಸ್ತೆ ಹಾಗೂ ಚಲ್ಲಘಟ್ಟ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಿಗೆ ಸುಲಭ ಸಂಪರ್ಕ ಒದಗಿಸುತ್ತದೆ.

ಈ ಹೊಸ ಲಿಂಕ್ ರಸ್ತೆಯಿಂದ ವಾಹನ ಸವಾರರಿಗೆ ದೊಡ್ಡ ಮಟ್ಟದ ಸಮಯ ಉಳಿತಾಯವಾಗಲಿದೆ. ವಿಶೇಷವಾಗಿ ಮೈಸೂರು ರಸ್ತೆಯತ್ತ ಸಂಚರಿಸುವವರಿಗೆ ಸುಮಾರು 15ರಿಂದ 20 ನಿಮಿಷಗಳವರೆಗೆ ಸಮಯ ಉಳಿಯಲಿದೆ ಎಂದು ಅಂದಾಜಿಸಲಾಗಿದೆ.

ಮೈಸೂರು ರಸ್ತೆ, ಕೆಂಗೇರಿ ಟ್ರಾಫಿಕ್‌ಗೆ ಪರಿಹಾರ

ಇದಕ್ಕೂ ಮೊದಲು ಮೈಸೂರು ರಸ್ತೆ ಮತ್ತು ಕೆಂಗೇರಿ ಭಾಗದಲ್ಲಿ ಭಾರೀ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದ ವಾಹನ ಸವಾರರಿಗೆ ಈ ಲಿಂಕ್ ರಸ್ತೆ ದೊಡ್ಡ ಮಟ್ಟದ ಪರಿಹಾರ ನೀಡಲಿದೆ. ನೇರ ಹಾಗೂ ಸಿಗ್ನಲ್-ರಹಿತ ಸಂಚಾರಕ್ಕೆ ಅವಕಾಶ ಸಿಗುವುದರಿಂದ ಸಂಚಾರ ಸುಗಮವಾಗಲಿದೆ.

ದೀಪಾಂಜಲಿ ನಗರ ನೈಸ್ ರಸ್ತೆಯ ಪ್ರಮುಖ ಸಂಪರ್ಕ ಮಾರ್ಗಗಳು

ದೀಪಾಂಜಲಿ ನಗರ

ಹೊಸಕೆರೆಹಳ್ಳಿ

ಬನಶಂಕರಿ 6ನೇ ಹಂತ

ಕನಕಪುರ ರಸ್ತೆ

ಚಲ್ಲಘಟ್ಟ

MLA B.N. Ravikumar: ದಿಬ್ಬೂರಹಳ್ಳಿ–ತಿಮ್ಮಸಂದ್ರ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಬಿ.ಎನ್. ರವಿಕುಮಾರ್

ದೀಪಾಂಜಲಿ ನಗರ ನೈಸ್ ರಸ್ತೆಯಿಂದ ಈ ಪ್ರದೇಶಗಳಿಗೆ ಸಂಪರ್ಕ ಸುಲಭವಾಗಲಿದೆ. ಅಷ್ಟೇ ಅಲ್ಲದೆ, ಹೊಸೂರು, ಎಲೆಕ್ಟ್ರಾನಿಕ್ ಸಿಟಿ ಹಾಗೂ ತುಮಕೂರು ರಸ್ತೆಯಂತಹ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕೂಡ ಮತ್ತಷ್ಟು ಸುಲಭವಾಗಲಿದೆ.

ಶೀಘ್ರದಲ್ಲೇ ಲೋಕಾರ್ಪಣೆ

ಪ್ರಸ್ತುತ ಪ್ರಾಯೋಗಿಕ ಸಂಚಾರಕ್ಕೆ ಮಾತ್ರ ತೆರೆಯಲಾಗಿರುವ ಈ ರಸ್ತೆ, ಶೀಘ್ರದಲ್ಲೇ ಸಂಪೂರ್ಣವಾಗಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಹೊಸ ರಸ್ತೆ ಅಭಿವೃದ್ಧಿಯಿಂದ ನಗರದ ಪಶ್ಚಿಮ ಭಾಗದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ. ನೈಸ್ ರಸ್ತೆಯ ಈ ವಿಸ್ತರಣೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಪ್ರಮುಖ ಹೆಜ್ಜೆಯಾಗಲಿದೆ.

ರಸ್ತೆ ಕಾಮಗಾರಿ ಮಾಡುವಾಗ ಎಡವಟ್ಟು: ಮಾರ್ಗ ಮಧ್ಯದಲ್ಲೇ ಉಳಿದ ಹ್ಯಾಂಡ್ ಪಂಪ್

ಹರೀಶ್‌ ಕೇರ

View all posts by this author