ಬೆಂಗಳೂರು, ಜು.7: 66/11 ಕೆ.ವಿ ಹೆಣ್ಣೂರು ರೋಡ್ ಉಪ-ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜುಲೈ 9ರಂದು ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಹೆಣ್ಣೂರು ಬಂಡೆ, ಸಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್, ಕೆ. ನಾರಾಯಣಪುರ, ಆಶಾ ಟೌನ್‌ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‌ಶಿಪ್, ನಾಗರಗಿರಿ ಟೌನ್‌ಶಿಪ್, ಕೆ. ನಾರಾಯಣಪುರ ಕ್ರಾಸ್, ಬಿ.ಡಿ.ಎಸ್. ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿ.ಎಸ್.ಐ. ಗೇಟ್, ಬೈರತಿ ಕ್ರಾಸ್, ಬೈರತಿ ಗ್ರಾಮ, ಎವರ್‌ಗ್ರೀನ್ ಲೇಔಟ್, ಕನಕಶ್ರೀ ಲೇಔಟ್, ಗೆದ್ದಲಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್ಮೆಂಟ್, ಹಿರೇಮಠ ಲೇಔಟ್, ಟ್ರಿನಿಟಿ ಫಾರ್ಚೂನ್, ಮೈ ಕೇರ್ ಶಾಲೆ, ಬಿ.ಎಚ್.ಕೆ. ಇಂಡಸ್ಟ್ರೀಸ್, ಜಾನಕಿರಾಮ್ ಲೇಔಟ್, ವಡ್ಡರಪಾಳ್ಯ, ಅನುಗ್ರಹ ಲೇಔಟ್, ಕಾವೇರಿ ಲೇಔಟ್, ಆತ್ಮ ವಿದ್ಯಾ ನಗರ, ಕೆ.ಆರ್.ಸಿ., ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಮ್ ಎನ್‌ಕ್ಲೇವ್, ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಆಂಧ್ರ ಕಾಲೋನಿ, ಮಂಜುನಾಥ ನಗರ, ಹೊರಮಾವು, ಅಗರ ಗ್ರಾಮ, ಪಾತಾಳಮ್ಮ ದೇವಸ್ಥಾನ, ಎ.ಕೆ.ಆರ್. ಶಾಲೆ, ನ್ಯೂ ಮಿಲೇನಿಯಂ ಶಾಲೆ, ಲಕ್ಕಮ್ಮ ಲೇಔಟ್, ಪ್ರಕಾಶ್ ಗಾರ್ಡನ್ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಜುಲೈ ತಿಂಗಳಿನಲ್ಲಿ ಗ್ರಾಹಕರಿಗೆ ಬೆಸ್ಕಾಂನಿಂದ ಸರಾಸರಿ ಬಿಲ್
ಬೆಂಗಳೂರು: ಗೃಹ ಜ್ಯೋತಿ (Gruha Jyothi Scheme) ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯಕ್ಕೆ ಬೆಸ್ಕಾಂ (BESCOM) ಮೀಟರ್ ರೀಡರ್‌ಗಳು ನಿಯೋಜನೆಗೊಂಡಿರುವುದರಿಂದ ಜುಲೈ ತಿಂಗಳ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ, ಗ್ರಾಹಕರಿಗೆ ಸರಾಸರಿ (Average Bills) ಬಿಲ್‌ಗಳನ್ನು ನೀಡಲಾಗುತ್ತದೆ. ಜುಲೈ ತಿಂಗಳ ಬಿಲ್ಲಿಂಗ್ ಅವಧಿಯಲ್ಲಿ ಗ್ರಾಹಕರಿಗೆ ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧಾರದ ಮೇಲೆ ಸರಾಸರಿ ಬಿಲ್ ನೀಡಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.
ಆದರೆ ಎಚ್‌ಟಿ ಗ್ರಾಹಕರು, 40 HP ಮತ್ತು ಅದಕ್ಕಿಂತ ಹೆಚ್ಚಿನ ಮಂಜೂರಾದ ಲೋಡ್ ಹೊಂದಿರುವ ಲೋ ಟೆನ್ಷನ್ (LT) ಗ್ರಾಹಕರು, ಸೋಲಾರ್ ರೂಫ್ಟಾಪ್ (SRTPV) ಗ್ರಾಹಕರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರಿಗೆ ನೈಜ ಮೀಟರ್ ರೀಡಿಂಗ್ ಆಧಾರದ ಮೇಲೆ ಬಿಲ್ ನೀಡಲಾಗುವುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಜುಲೈ ತಿಂಗಳ ಸರಾಸರಿ ಬಿಲ್‌ಗಳನ್ನು ಗ್ರಾಹಕರಿಗೆ ಎಸ್‌ಎಂಎಸ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗುವುದು. ಗೃಹ ಬಳಕೆದಾರರಿಗೆ ಆಗಸ್ಟ್ ತಿಂಗಳಿನಿಂದ ಯಥಾಪ್ರಕಾರ ನಿಯಮಿತ ಮೀಟರ್ ರೀಡಿಂಗ್ ಮತ್ತು ನೈಜ ವಿದ್ಯುತ್ ಬಳಕೆಯ ಆಧಾರದಮೇಲೆ ಬಿಲ್ ನೀಡಲಾಗುವುದು. ಸರಾಸರಿ ಬಿಲ್ಲಿಂಗ್ ಅವಧಿಯಲ್ಲಿನ ವ್ಯತ್ಯಾಸದ ಯೂನಿಟ್‌ಗಳನ್ನು, ನೈಜ ಮೀಟರ್ ರೀಡಿಂಗ್ ಆರಂಭವಾದ ನಂತರ ಮುಂದಿನ ಬಿಲ್ಗಳಲ್ಲಿ ಸೂಕ್ತವಾಗಿ ಹೊಂದಾಣಿಕೆ ಮಾಡಲಾಗುವುದು.
ಗ್ರಾಹಕರು ಜುಲೈ ಬಿಲ್‌ನ ಪಾವತಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಪಾವತಿ ವಿಧಾನಗಳನ್ನು(ಉಪ ವಿಭಾಗದ ನಗದು ಕೌಂಟರ್‌ಗಳು, ಬೆಸ್ಕಾಂ ವೆಬ್‌ಸೈಟ್, ಬೆಸ್ಕಾಂ ಮಿತ್ರ ಆಪ್ ಹಾಗೂ ಥರ್ಡ್ ಪಾರ್ಟಿ ಆಪ್) ಬಳಸಿಕೊಳ್ಳಬಹುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.