ಬೆಂಗಳೂರು, ನ.20: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11 ಕೆ.ವಿ ಕೆ.ಎಚ್.ಬಿ. ಉಪ-ಕೇಂದ್ರ ವ್ಯಾಪ್ತಿಯ ಹಲವೆಡೆ ನ.21ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಗಳವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ಶಿವನಹಳ್ಳಿ, ಶ್ರೀನಿಧಿ ಲೇಔಟ್, ಬಿ.ಡಬ್ಲ್ಯೂ.ಎಸ್.ಎಸ್.ಬಿ, ಪುಟ್ಟೇನಹಳ್ಳಿ, ಸಿಆರ್ಪಿಎಫ್, ರಾಮಗೊಂಡನಹಳ್ಳಿ, ಐ.ವಿ.ಆರ್.ಐ., ಶಿರ್ಕ್ ಅಪಾರ್ಟ್ಮೆಂಟ್, ಬಿ.ಎಂ.ಎಸ್ ಹಾಸ್ಟೆಲ್, 5ನೇ ಹಂತ ಯಲಹಂಕ ಹೊಸ ಪಟ್ಟಣ ಅನಂತಪುರ, ಪುಟ್ಟೇನಹಳ್ಳಿ, ಸಿಆರ್ಪಿಎಫ್, ಸುರದೇನಪುರ, ಸದ್ನಹಳ್ಳಿ, ಇಸ್ರೋ ಲೇಔಟ್, ಎಲ್ಬಿಎಸ್ ನಗರ, ವೈಎನ್ಕೆ, ಎ, ಬಿ, ಸೆಕ್ಟರ್ ಆವಲಹಳ್ಳಿ, ಎಸ್.ಎನ್. ಹಳ್ಳಿ, ರಾಜನಕುಂಟೆ, ಹೊನ್ನೇನಹಳ್ಳಿ, ನಾಗೇನಹಳ್ಳಿ, ಎ.ವಿ.ಪುರ, ಮಾರಸಂದ್ರ, ಸಿಲ್ವರ್ ಓಕ್, ನೆಲಕುಂಟೆ, ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಈ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯ
66/11 ಕೆ.ವಿ ಪ್ಲಾಟಿನಂಸಿಟಿ ಉಪ-ಕೇಂದ್ರ ವ್ಯಾಪ್ತಿಯ ಹಲವೆಡೆ ನ.21ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ4 ಗಂಟೆಗಳವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು
ರಿಲಯನ್ಸ್ ಇಂಡಸ್ಟ್ರೀಸ್, ಕುರ್ಲಾನ್, ಸಿಕೆಎ, ಅಲಿಸ್ಡಾ, ಜೈಭರ್ತ್ ಇಂಡಸ್ಟ್ರೀಸ್ ಏರಿಯಾ, ಟಾಟಾ ಅಕೆವಲ್, ಕಾರ್ಲೆ, ಪ್ರೊಫೆಷನಲ್-ಕ್ಲೋಥಿಂಗ್, ರಾಘವೇಂದ್ರ ಲೇಔಟ್, ಆರ್ಎನ್ಎಸ್ ಮೋಟಾರ್, ಮುನೇಶ್ವರ ನಗರ, ವೈಷ್ಣವಿ ನಕ್ಷತ್ರ ಅಪಾರ್ಟ್ಮೆಂಟ್, ಲೆಫ್ಟಿನೆಂಟ್ ಕಾರ್ಲೆ, ಮುನೇಶ್ವರ ನಗರ, HMT ರಸ್ತೆ, ಪ್ಲಾಟಿನಂಸಿಟಿ ಅಪಾರ್ಟ್ಮೆಂಟ್, BFW, NTRO, ಜಲ ಸೌಧ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.