ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರಿ ಮಳೆಗೆ ಬೆಂಗಳೂರು ತತ್ತರ; ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯಲ್ಲಿದ್ದಾಗಲೇ ಕುಸಿದ ಕಾಂಪೌಂಡ್‌

Bengaluru Rains: ಸಿಲಿಕಾನ್ ಸಿಟಿ ಬೆಂಗಳೂರು ಬುಧವಾರ (ಏಪ್ರಿಲ್‌ 29) ಸಂಜೆ ಸುರಿದ ಮಳೆಗೆ ತತ್ತರಿಸಿದೆ. ಸಿಎಂ ಅಧಿಕೃತ ನಿವಾಸ 'ಕಾವೇರಿ'ಯ ಕಾಂಪೌಂಡ್‌ ಮೇಲೆ ಭಾರಿ ಗಾಳಿಗೆ ಬೃಹತ್ ಮರವೊಂದು ಉರುಳಿ ಬಿದ್ದು ಜಖಂಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾಗಲೇ ಈ ಅನಾಹುತ ಸಂಭವಿಸಿದ್ದು, ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.

ಮುಖ್ಯಮಂತ್ರಿ ನಿವಾಸದ ಕಾಂಪೌಂಡ್‌ ಮೇಲೆ ಕುಸಿದ ಮರ ತೆರವು ಕಾರ್ಯಾಚರಣೆ

ಬೆಂಗಳೂರು, ಏ. 30: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ (ಏಪ್ರಿಲ್‌ 29) ಸಂಜೆ ಸುರಿದ ಧಾರಾಕಾರ ಮಳೆಗೆ ಇಳೆ ತಂಪಾಗುವ ಜತೆಗೆ ಒಂದಷ್ಟು ಅನಾಹುತ ಸೃಷ್ಟಿಯಾಗಿದೆ (Bengaluru Rains). ಅನಿರೀಕ್ಷಿತ ಮಳೆಗೆ ನಗರವಾಸಿಗಳು ಕಕ್ಕಾಬಿಕ್ಕಿಯಾಗಿದ್ದು, ಹಲವೆಡೆ ಅನಾಹುತಗಳ ಸರಮಾಲೆಯೇ ಕಂಡು ಬಂದಿದೆ. ಮಳೆ ಸಂಬಂಧಿತ ದುರಂತದಿಂದ ಸುಮಾರು 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ರಣ ಮಳೆಗೆ ಬೆಂಗಳೂರಿನಂತಹ ಬೆಂಗಳೂರೇ ನಲುಗಿಹೋಗಿದೆ. ಜನ ಸಾಮಾನ್ಯರಿಗೆ ಮಾತ್ರವಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೂ ಮಳೆಯ ಪರಿಣಾಮ ತಟ್ಟಿದೆ. ಹೌದು, ಸಿಎಂ ಅಧಿಕೃತ ನಿವಾಸ 'ಕಾವೇರಿ'ಯ ಕಾಂಪೌಂಡ್‌ ಮೇಲೆ ಭಾರಿ ಗಾಳಿಗೆ ಬೃಹತ್ ಮರವೊಂದು ಉರುಳಿ ಬಿದ್ದು ಜಖಂಗೊಂಡಿದೆ.

ಸಿಎಂ ನಿವಾಸವಿರುವ ಕುಮಾರಕೃಪಾ ರಸ್ತೆಯ ಉದ್ದಕ್ಕೂ ಸಾಲು ಸಾಲು ಮರಗಳು ಉರುಳಿವೆ. ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರಗಳನ್ನು ತೆರವುಗೊಳಿಸಲು ಬಿಬಿಎಂಪಿ ಮತ್ತು ಜಿಬಿಎ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸದ್ಯ ʼಕಾವೇರಿʼ ನಿವಾಸದ ಕಾಂಪೌಂಡ್‌ ಮೇಲಿನ ಕೊಂಬೆಗಳನ್ನು ಸರಿಸಲಾಗುತ್ತಿದೆ. ಮುಖ್ಯಮಂತ್ರಿ ಮನೆಯಲ್ಲಿದ್ದಾಗಲೇ ನಿವಾಸದ ಪಕ್ಕದ ಗೋಡೆ ಮೇಲೆ ಅಳವಡಿಸಲಾಗಿದ್ದ ಕಬ್ಬಿಣದ ವಾಲ್‌ಗಳು ಏಕಾಏಕಿ ಕುಸಿದು ಬಿದ್ದಿವೆ. ಭಾರಿ ಗಾಳಿ ಮಳೆಗೆ ಮರದ ಬೃಹತ್ ಕೊಂಬೆಗಳು ಕಾಂಪೌಂಡ್ ಮೇಲೆ ಉರುಳಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಇಂದು ರಾಜ್ಯದ 29 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಅಬ್ಬರಿಸಲಿದೆ ಗುಡುಗು ಸಹಿತ ಮಳೆ!

ಬೆಂಗಳೂರಿನಲ್ಲಿ 10 ಬಲಿ

ಒಂದೇ ಮಳೆಗೆ ಬೆಂಗಳೂರಿನಲ್ಲಿ 10 ಮಂದಿ ಬಲಿಯಾಗಿದ್ದು, ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆಯ ಕಾಂಪೌಂಡ್‌ ಗೋಡೆ ಕುಸಿದ ನಂತರ ನಡೆದ ದುರಂತದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿದೆ. ಬೌರಿಂಗ್‌ ಆಸ್ಪತ್ರೆ ದುರಂತದಲ್ಲಿ ಮೃತರಾದವರನ್ನು ಮಾಯಾ (51), ಮುಬಿನ್‌ ತಾಜ್‌ (49), ತಬೀನ್‌ ತಾಜ್‌ (47), ಸಿಜಿ (47), ಅಜು (35), ಸಾಜಿದ್‌ (20), ಪ್ರೀತಿ (5), ಸೈಯದ್‌ ಎಂದು ಗುರುತಿಸಲಾಗಿದೆ. ಇನ್ನು ವಿದ್ಯುತ್‌ ಸ್ಪರ್ಶಿಸಿ ರಘು (35) ಮತ್ತು ಶೀಟ್‌ ಬಿದ್ದು ಮಂಜು (35) ಅಸುನೀಗಿದ್ದಾರೆ.

ಪರಿಹಾರ ಧನ ಘೋಷಣೆ

ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಕೇಂದ್ರ ಸರ್ಕಾರದಿಂದ ಮೃತರು ಹಾಗೂ ಗಾಯಾಳುಗಳಿಗೆ 2 ಲಕ್ಷ ರುಪಾಯಿ ಪರಿಹಾರ ಘೋಷಿಸಲಾಗಿದೆ. ಇನ್ನು ರಾಜ್ಯ ಸರ್ಕಾರದಿಂದ 5 ಲಕ್ಷ ರುಪಾಯಿ ಪರಿಹಾರ ಪ್ರಕಟಿಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author