ಬೆಂಗಳೂರು, ಡಿ.5: ಇಬ್ಬರು ಹುಡುಗಿಯರಿಗೆ ಫ್ಲ್ಯಾಟ್‌ನಲ್ಲಿ ರಾತ್ರಿ ತಂಗಲು ಅವಕಾಶ ನೀಡಿದ ಬ್ಯಾಚುಲರ್ ಯುವಕನೊಬ್ಬನಿಗೆ ಹೌಸಿಂಗ್ ಸೊಸೈಟಿಯಿಂದ ಭಾರಿ ದಂಡ ವಿಧಿಸಿರುವ ಘಟನೆ ನಗರದಲ್ಲಿ (Bengaluru News) ನಡೆದಿದೆ. ಈ ಬಗ್ಗೆ ಯುವಕ ಸಾಮಾಜಿಕ ಜಾಲತಾಣ ರೆಡಿಟ್‌ನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ಯುವಕನೊಬ್ಬ ತನ್ನ ಫ್ಲ್ಯಾಟ್‌ಮೇಟ್ ಒಬ್ಬರ ಜತೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ಅ.31ರಂದು ರಾತ್ರಿ ಈತನ ಫ್ಲ್ಯಾಟ್‌ನಲ್ಲಿ ಇಬ್ಬರು ಹುಡುಗಿಯರು ತಂಗಿದ್ದರು. ಇದರಿಂದಲೇ ಯುವಕ ಸಮಸ್ಯೆ ಎದುರಿಸುವಂತಾಗಿದೆ. ಯುವಕನ ಫ್ಲ್ಯಾಟ್‌ನಲ್ಲಿ ಯುವತಿಯರು ಇದ್ದರು ಎಂಬ ವಿಚಾರ ಹೌಸಿಂಗ್ ಸೊಸೈಟಿಗೆ ಗೊತ್ತಾಗಿದೆ. ಹೀಗಾಗಿ ನಿಯಮ ಉಲ್ಲಂಘಿಸಲಾಗಿದೆ ಎಂದು 5000 ರೂ. ಫೈನ್ ವಿಧಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಇನ್‌ವಾಯ್ಸ್‌ನಲ್ಲಿ ʼಫ್ಲ್ಯಾಟ್‌ನಲ್ಲಿ ರಾತ್ರಿಯಿಡೀ ಇಬ್ಬರು ಹುಡುಗಿಯರು ತಂಗಿದ್ದರುʼ ಎಂದು ಬರೆಯಲಾಗಿದೆ.
ತನ್ನ ಫ್ಲ್ಯಾಟ್‌ನಲ್ಲಿ ಇಬ್ಬರು ಹುಡುಗಿಯರು ಇದ್ದಿದ್ದಕ್ಕೆ ಸೊಸೈಟಿಯು ಭಾರಿ ದಂಡ ವಿಧಿಸಿರುವುದು ಅನ್ಯಾಯ ಎಂದು ಯುವಕ ಅಸಮಾಧಾನ ಹೊರಹಾಕಿದ್ದಾನೆ. ನಮ್ಮ ಸೊಸೈಟಿಯಲ್ಲಿ ರಾತ್ರಿ ವೇಳೆ ಅತಿಥಿಗಳನ್ನು ಇಟ್ಟುಕೊಳ್ಳಬಾರದು ಎಂಬ ನಿಯಮವಿದೆ. ಆದರೆ, ಈ ರೂಲ್, ಫ್ಯಾಮಿಲಿ ಇರುವವರಿಗೆ ಅನ್ವಯಿಸಲ್ಲ. ನಾನು ಕೂಡ ಎಲ್ಲರಂತೆ ನಿರ್ವಹಣೆ ವೆಚ್ಚ ಸಲ್ಲಿಸುತ್ತೇನೆ, ನಮಗೆ ಮಾತ್ರ ತಾರತಮ್ಯ ಮಾಡುವುದು ಯಾಕೆ? ಕನಿಷ್ಠಪಕ್ಷ ಒಂದು ಬಾರಿ ಎಚ್ಚರಿಸದೆಯೇ ಜುಲ್ಮಾನೆ ವಿಧಿಸಿದ್ದಾರೆ ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ.
Unfair Treatment of Bachelors in Society. Is there anything we can do to get fair treatment?
byu/_NoGod_ inbangalore
ಅಮ್ಮನ ಮಡಿಲಲ್ಲಿ ಮಲಗಬೇಕು ಎಂದು ಶಾಲೆಯಲ್ಲಿ ಕಣ್ಣೀರಿಟ್ಟ ಪುಟ್ಟ ಮಗು!
ಈ ಪೋಸ್ಟ್ ವೈರಲ್ ಆಗಿದ್ದರಿಂದ ಹಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬಹುತೇಕರು ಹೌಸಿಂಗ್ ಸೊಸೈಟಿ ವರ್ತನೆಯನ್ನು ಖಂಡಿಸಿದ್ದು, ಕೂಡಲೇ ಫ್ಲ್ಯಾಟ್ ಖಾಲಿ ಮಾಡಿ ಎಂದು ಯುವಕನಿಗೆ ಸಲಹೆ ನೀಡಿದ್ದಾರೆ. ಇದು ನಮ್ಮ ದೇಶದಲ್ಲಿರುವ ಸಾಂಸ್ಕೃತಿಕ ಸಮಸ್ಯೆ ಎಂದು ಒಬ್ಬರು ಹೇಳಿದ್ದು, ಮತ್ತೊಬ್ಬರು, ಇದು ಕಾನೂನುಬಾಹಿರ, ಕೋರ್ಟ್‌ಗೆ ಹೋಗಬಹುದು ಎಂದು ತಿಳಿಸಿದ್ದಾರೆ. ಆದರೆ, ತನ್ನ ಫ್ಲ್ಯಾಟ್‌ಮೇಟ್ ಈಗಾಗಲೇ ದಂಡ ಪಾವತಿಸಿದ್ದಾನೆ ಎಂದು ಯುವಕ ಹೇಳಿಕೊಂಡಿದ್ದಾನೆ.