ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru Toll Hike: ಬೆಂಗಳೂರು ವಾಹನ ಸವಾರರಿಗೆ ಬೆಲೆ ಏರಿಕೆ ಶಾಕ್‌; ನೈಸ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ ಟೋಲ್‌ ದರ ಭಾರಿ ಹೆಚ್ಚಳ!

‌ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಟೋಲ್ ದರ ಏರಿಕೆಯಿಂದ ಪ್ರತಿದಿನ ಈ ಮಾರ್ಗಗಳಲ್ಲಿ ಸಂಚರಿಸುವ ಐಟಿ ಉದ್ಯೋಗಿಗಳು, ಖಾಸಗಿ ವಾಹನ ಸವಾರರು ಹಾಗೂ ವಾಣಿಜ್ಯ ವಾಹನಗಳ ಮಾಲೀಕರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ಇದಕ್ಕೆ ಸಾರ್ವಜನಿಕರಿಂದ ಅಸಮಾಧಾನವೂ ವ್ಯಕ್ತವಾಗುತ್ತಿದೆ.

ನಂದಿ ಇನ್‌ಫ್ರಾಸ್ಟ್ರ‌ಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (NICE), ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯ ವಿವಿಧ ಹಂತಗಳ ಟೋಲ್ ದರವನ್ನು ಪರಿಷ್ಕರಿಸಿದೆ. ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರೆಗಿನ ಸಂಪೂರ್ಣ ಪೆರಿಫೆರಲ್ ರಸ್ತೆಯಲ್ಲಿ ಚಲಿಸುವ ಕಾರುಗಳಿಗೆ ಸೆಕ್ಷನ್ ವಾರು ನಿಗದಿಪಡಿಸಲಾದ ದರ ಪಟ್ಟಿ ಇಲ್ಲಿದೆ.

ನೈಸ್ ರಸ್ತೆಯಲ್ಲಿ ಕಾರುಗಳ ಪರಿಷ್ಕೃತ ಟೋಲ್ ದರ:

  • ಹೊಸೂರು ರಸ್ತೆ – ಬನ್ನೇರುಘಟ್ಟ ರಸ್ತೆ: 72 ರೂ.
  • ಬನ್ನೇರುಘಟ್ಟ ರಸ್ತೆ – ಕನಕಪುರ ರಸ್ತೆ: 53 ರೂ.
  • ಕನಕಪುರ ರಸ್ತೆ – ಕ್ಲೋವರ್‌ಲೀಫ್ ಜಂಕ್ಷನ್: 39 ರೂ.
  • ಕ್ಲೋವರ್‌ಲೀಫ್ ಜಂಕ್ಷನ್ – ಮೈಸೂರು ರಸ್ತೆ: 36 ರೂ.
  • ಮೈಸೂರು ರಸ್ತೆ – ಮಾಗಡಿ ರಸ್ತೆ: 77 ರೂ.
  • ಮಾಗಡಿ ರಸ್ತೆ – ತುಮಕೂರು ರಸ್ತೆ: 61 ರೂ.
  • ಲಿಂಕ್ ರಸ್ತೆ (Link Road): 83 ರೂ.

ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಹೊಸ ದರ:

ಬೆಂಗಳೂರು ಎಲಿವೇಟೆಡ್ ಟೋಲ್ವೇ ಪ್ರೈವೇಟ್ ಲಿಮಿಟೆಡ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾರ್ಗಸೂಚಿಗಳ ಅನ್ವಯ ಮಾರ್ಚ್ 31, 2026 ರ ಸಗಟು ಬೆಲೆ ಸೂಚ್ಯಂಕವನ್ನು ಆಧರಿಸಿ ಟೋಲ್ ದರ ಹೆಚ್ಚಿಸಿದೆ. ಈ ದರಗಳು ಜೂನ್ 30, 2027 ರವರೆಗೆ ಜಾರಿಯಲ್ಲಿರಲಿವೆ. ಇನ್ಮುಂದೆ ಕಾರುಗಳು ಸಿಂಗಲ್ ಜರ್ನಿಗೆ 65 ರೂ. (ಹಿಂದಿನ ದರ 60 ರೂ.) ಹಾಗೂ ಮಲ್ಟಿಪಲ್ ಜರ್ನಿಗೆ 100 ರೂ. ಪಾವತಿಸಬೇಕು.

ಸಿಂಗಲ್ ಜರ್ನಿ

ವಾಹನದ ವರ್ಗ ಸಿಂಗಲ್ ಜರ್ನಿ ಮಲ್ಟಿಪಲ್ ಜರ್ನಿ ಮಾಸಿಕ ಪಾಸ್
ದ್ವಿಚಕ್ರ ವಾಹನ (ಟೂ-ವೀಲರ್) 25 ರೂ. 40 ರೂ. 785 ರೂ.
ಕಾರು / ಜೀಪ್ / ವ್ಯಾನ್ 65 ರೂ. 100 ರೂ. 1,960 ರೂ.
ಲಘು ವಾಣಿಜ್ಯ ವಾಹನ / ಮಿನಿ ಬಸ್ 90 ರೂ. 135 ರೂ. 2,745 ರೂ.
ಬಸ್ / ಟ್ರಕ್ 185 ರೂ. 275 ರೂ. 5,495 ರೂ.
ಮಲ್ಟಿ-ಆಕ್ಸಲ್ ವಾಹನ (MAV) 365 ರೂ. 550 ರೂ. 10,985 ರೂ.

ಅತ್ತಿಬೆಲೆ ಟೋಲ್ ಪ್ಲಾಜಾ ಪರಿಷ್ಕೃತ ದರಗಳು:

ತಮಿಳುನಾಡು ಗಡಿಭಾಗಕ್ಕೆ ಸಂಪರ್ಕ ಕಲ್ಪಿಸುವ ಹೊಸೂರು ರಸ್ತೆಯ ಅತ್ತಿಬೆಲೆ ಟೋಲ್‌ನಲ್ಲೂ ದರ ಏರಿಕೆಯಾಗಿದೆ. ಆದರೆ, ಎಂದಿನಂತೆ ದ್ವಿಚಕ್ರ ವಾಹನಗಳಿಗೆ ಅತ್ತಿಬೆಲೆಯಲ್ಲಿ ಟೋಲ್ ವಿನಾಯಿತಿ ಮುಂದುವರಿದಿದೆ.

ವಾಹನದ ವರ್ಗ ಸಿಂಗಲ್ ಜರ್ನಿ ಮಲ್ಟಿಪಲ್ ಜರ್ನಿ ಮಂತ್ಲಿ ಪಾಸ್
ಕಾರು / ಜೀಪ್ / ವ್ಯಾನ್ 40 ರೂ. 60 ರೂ. 1,175 ರೂ.
ಲಘು ವಾಣಿಜ್ಯ ವಾಹನ / ಮಿನಿ ಬಸ್ 65 ರೂ. 100 ರೂ. 1,960 ರೂ.
ಬಸ್ / ಟ್ರಕ್ 130 ರೂ. 195 ರೂ. 3,925 ರೂ.
ಮಲ್ಟಿ-ಆಕ್ಸಲ್ ವಾಹನ (MAV) 275 ರೂ. 410 ರೂ. 8,240 ರೂ.