ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru metro fare hike: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್‌; ಟಿಕೆಟ್‌ ದರ ಶೇ.12ರಷ್ಟು ಏರಿಕೆಗೆ ಬಿಎಂಆರ್‌ಸಿಎಲ್ ಪ್ರಸ್ತಾಪ!

Bengaluru metro fare Hike: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಬಿಎಂಆರ್‌ಸಿಎಲ್‌ನಿಂದ ಸಲ್ಲಿಸಲಾದ ಪರಿಷ್ಕೃತ ವಿಸ್ತೃತ ಯೋಜನಾ ವರದಿಯಲ್ಲಿ ದರ ಏರಿಕೆಯ ಹೊಸ ಲೆಕ್ಕಾಚಾರವನ್ನು ಉಲ್ಲೇಖಿಸಲಾಗಿದೆ. 3 'ಎ' ಹಂತದ ಮಾರ್ಗದ ಕಾಮಗಾರಿಯನ್ನು 2033ಕ್ಕೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.

ನಮ್ಮ ಮೆಟ್ರೋ ರೈಲು

ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಶಾಕ್ ನೀಡಿದ್ದು, ಮೂರು ವರ್ಷಗಳಿಗೊಮ್ಮೆ ಟಿಕೆಟ್‌ ದರ ಶೇ.12ರಷ್ಟು ಏರಿಕೆ ಮಾಡುವ ಬಗ್ಗೆ ಪ್ರಸ್ತಾಪಿಸಿದೆ. ಪ್ರತಿ ವರ್ಷ ಶೇ.5ರಷ್ಟು ಮೆಟ್ರೋ ಟಿಕೆಟ್ ದರವನ್ನ ಏರಿಕೆ ಮಾಡಲು ದರ ಪರಿಷ್ಕರಣಾ ಸಮತಿ ಶಿಫಾರಸು ಮಾಡಿದೆ. ಆದರೆ ಇದೀಗ ಬಿಎಂಆರ್‌ಸಿಎಲ್ ಹೊಸ ಮಾದರಿಯಲ್ಲಿ ದರ ಏರಿಕೆ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.

ನಮ್ಮ ಮೆಟ್ರೋ ಸರ್ಜಾಪುರದಿಂದ ಹೆಬ್ಬಾಳ ಮಾರ್ಗದ ಡಿಪಿಆರ್ ಸಲ್ಲಿಕೆ ಮಾಡಿದೆ. ಇದರ ಜತೆಗೆ ಹೊಸ ಮಾದರಿಯಲ್ಲಿ ಒಂದು ವರ್ಷದ ಬದಲು ಮೂರು ವರ್ಷಕ್ಕೊಮ್ಮೆ ದರ ಏರಿಕೆ ಮಾಡುವ ಪ್ರಸ್ತಾಪವನ್ನೂ ಮುಂದಿಟ್ಟಿದೆ. 2033ರ ವೇಳೆಗೆ ಕಾಮಗಾರಿ ಮುಗಿಯಲಿದ್ದು, ಆ ವೇಳೆಗೆ ಹೊಸ ಮಾದರಿಯಲ್ಲಿ ಮೂರು ವರ್ಷಗಳಿಗೆ ಒಮ್ಮೆ ಶೇ.12 ದರ ಏರಿಕೆ ಮಾಡಿದರೆ ಈಗಿರುವ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವ ಅಂದಾಜಿನ ಲೆಕ್ಕಚಾರವನ್ನು ಉಲ್ಲೇಖ ಮಾಡಿದೆ.

ಈ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದರೆ ಬಳಿಕ ಇದನ್ನು ದರ ಪರಿಷ್ಕರಣಾ ಸಮಿತಿಯೂ ಪರಿಶೀಲನೆ ಮಾಡಬೇಕಿದೆ. ಬಳಿಕವಷ್ಟೇ ಗ್ರೀನ್ ಸಿಗ್ನಲ್ ಸಿಗಲಿದೆ. ಅಂತಿಮ ನಿರ್ಧಾರ ದರ ಪರಿಷ್ಕರಣೆ ಸಮಿತಿಯದ್ದೇ ಆಗಿರಲಿದೆ.

SIR: 2002ರ ವಿವರ ಕಡ್ಡಾಯವಲ್ಲ; ಮಹತ್ವದ ಮಾಹಿತಿ ಹಂಚಿಕೊಂಡ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಲಾದ ಪರಿಷ್ಕೃತ ವಿಸ್ತೃತ ಯೋಜನಾ ವರದಿಯಲ್ಲಿ 3 'ಎ' ಹಂತದ ಮಾರ್ಗದ ಕಾಮಗಾರಿಯನ್ನು 2033ಕ್ಕೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಆ ವೇಳೆಗೆ ದರ ಏರಿಕೆ ಕುರಿತು ಪ್ರಸ್ತಾಪಿಸಿರುವ ನಮ್ಮ ಮೆಟ್ರೋ , ಪ್ರತಿ ವರ್ಷ ಶೇ.5ರಷ್ಟು ದರ ಏರಿಕೆ ಮಾಡುವ ಬದಲು 2-3 ವರ್ಷಕ್ಕೆ ಪ್ರತ್ಯೇಕವಾಗಿ ದರ ಏರಿಕೆ ಮಾಡಿದಲ್ಲಿ 3 'ಎ' ಹಂತದ ಮಾರ್ಗದಿಂದ ಆರ್ಥಿಕ ಆಂತರಿಕ ಆದಾಯ ದರ ಎಷ್ಟು ಬರಬಹುದು, ಇದರಿಂದ ಲಾಭ ಹಾಗೂ ನಷ್ಟವೆಷ್ಟು ಎಂಬುದನ್ನು ಲೆಕ್ಕಾಚಾರ ಮಾಡಿದೆ.