ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್‌ ನ್ಯೂಸ್‌, ಟಿಕೆಟ್‌ ದರ ಏರಿಕೆ

2025ರ ಫೆಬ್ರವರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ದರಗಳನ್ನು ಭಾರಿ ಪ್ರಮಾಣದಲ್ಲಿ ಪರಿಷ್ಕರಿಸಿತ್ತು. ಕೆಲ ಮಾರ್ಗಗಳಲ್ಲಿ ಶೇ.71ರಷ್ಟು ದರ ಹೆಚ್ಚಿಸಿ ಒಂದು ವರ್ಷ ಇನ್ನೇನು ಕಳೆಯುತ್ತಿದೆ. ಈ ಹೊತ್ತಲ್ಲಿ ಬಿಎಂಆರ್​​ಸಿಎಲ್​​ ಮತ್ತೊಂದು ಶಾಕ್​​ ಕೊಡಲು ಮುಂದಾಗಿದೆ. ಈಗಾಗಲೇ ಬೆಂಗಳೂರಿನ ಮೆಟ್ರೋ ದರಗಳು ದುಬಾರಿ ಎನಿಸಿಕೊಂಡಿವೆ.

ನಮ್ಮ ಮೆಟ್ರೋ

ಬೆಂಗಳೂರು, ಜ.12: ನೀವು ನಮ್ಮ ಮೆಟ್ರೋದಲ್ಲಿ (Namma Metro) ಪ್ರತಿನಿತ್ಯ ಓಡಾಡುವವರಾದರೆ ಹೆಚ್ಚಿನ ದರ ನೀಡಲು ಸಿದ್ಧರಾಗಿ. ಫೆಬ್ರವರಿಯಿಂದ ನಮ್ಮ ಮೆಟ್ರೋ ರೈಲುಗಳ ಪ್ರಯಾಣ ದರ ಏರಿಕೆ (Ticket price hike) ಸಾಧ್ಯತೆ ಇದೆ. ಮೆಟ್ರೋ ಟಿಕೆಟ್​​ ದರವನ್ನು ಪ್ರತಿವರ್ಷ ಗರಿಷ್ಠ ಶೇ.5ರಷ್ಟು ಹೆಚ್ಚಿಸಲು ಫೇರ್​​ ಫಿಕ್ಸೇಶನ್​​ ಕಮಿಟಿ (FFC) ಶಿಫಾರಸ್ಸು ಮಾಡಿರುವ ಕಾರಣ, ದಿನನಿತ್ಯದ ಪ್ರಯಾಣಕ್ಕೆ ಮೆಟ್ರೋ ರೈಲು ಅವಲಂಬಿಸಿರುವವರಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ.

2025ರ ಫೆಬ್ರವರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ದರಗಳನ್ನು ಭಾರಿ ಪ್ರಮಾಣದಲ್ಲಿ ಪರಿಷ್ಕರಿಸಿತ್ತು. ಕೆಲ ಮಾರ್ಗಗಳಲ್ಲಿ ಶೇ.71ರಷ್ಟು ದರ ಹೆಚ್ಚಿಸಿ ಒಂದು ವರ್ಷ ಇನ್ನೇನು ಕಳೆಯುತ್ತಿದೆ. ಈ ಹೊತ್ತಲ್ಲಿ ಬಿಎಂಆರ್​​ಸಿಎಲ್​​ ಮತ್ತೊಂದು ಶಾಕ್​​ ಕೊಡಲು ಮುಂದಾಗಿದೆ. ಈಗಿರುವ ದರಗಳಿಂದಲೇ ನಮ್ಮ ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ವ್ಯವಸ್ಥೆ ಎನಿಸಿಕೊಂಡಿದೆ. ಈ ನಡುವೆ ಮತ್ತೆ ದರ ಏರಿಕೆಯಾದಲ್ಲಿ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಖಚಿತವೆನಿಸಿದೆ.

ಪ್ರತಿವರ್ಷ ನಮ್ಮ ಮೆಟ್ರೋ ರೈಲುಗಳ ಟಿಕೆಟ್​​ ದರ ಪರಿಷ್ಕರಣೆಗೆ ಪ್ರಯಾಣಿಕರಿಂದ ತಿವ್ರ ಆಕ್ಷೇಪ ವ್ಯಕ್ತವಾಗಿದೆ. ಮೆಟ್ರೋ ಪ್ರಯಾಣ ಅಗ್ಗವಾಗಿರಬೇಕು, ಐಷಾರಾಮಿ ಸೇವೆಯಾಗಬಾರದು ಎಂದು ದಿನನಿತ್ಯದ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಜನಸಂಖ್ಯೆ ಮಿತಿ ಮೀರಿರುವ ಬೆಂಗಳೂರಿಗೆ ಇನ್ನಷ್ಟು ಮೆಟ್ರೋ ರೈಲುಗಳು ಹಾಗೂ ಮಾರ್ಗಗಳ ಅಗತ್ಯವಿದೆ. ಆದರೆ ಹೊಸ ಮೆಟ್ರೋ ರೈಲು ಮಾರ್ಗಗಳ ನಿರ್ಮಾಣ ಆಮೆ ಗತಿಯಲ್ಲಿದೆ. ರೈಲುಗಳು ಸಾಮರ್ಥ್ಯಕ್ಕಿಂತ ಹೆಚ್ಚಾಗಿ ತುಂಬಿ ಓಡಾಡುತ್ತಿವೆ. ಹೀಗಾಗಿ ಇದು ಐಷಾರಾಮಿ ಸೇವೆಯಲ್ಲ ಎಂಬುದು ಪ್ರಯಾಣಿಕರ ಅಭಿಪ್ರಾಯ.

ಈಗಾಗಲೇ ಸುಮಾರು ಶೇ. 32ರಷ್ಟು ಹೆಚ್ಚುವರಿ ಹಣವನ್ನು ಪ್ರಯಾಣಿಕರು ಪಾವತಿಸುತ್ತಿದ್ದಾರೆ. ದುಬಾರಿ ದರಗಳನ್ನು ಮೌನವಾಗಿ ಒಪ್ಪಿಕೊಂಡ ಪರಿಣಾಮ ಮತ್ತೊಮ್ಮೆ ದರ ಏರಿಕೆಗೆ ಬಿಎಂಆರ್‌ಸಿಎಲ್‌ಗೆ ಧೈರ್ಯ ನೀಡುತ್ತಿದೆ ಎಂದು ಪ್ರಯಾಣಿಕರು ಕಿಡಿ ಕಾರಿದ್ದಾರೆ.

Namma Metro Pink Line: ನಮ್ಮ ಮೆಟ್ರೋ ಪಿಂಕ್‌ ಲೈನ್‌ನಲ್ಲಿ ಇಂದಿನಿಂದ ಪರೀಕ್ಷಾರ್ಥ ಸಂಚಾರ

ಹರೀಶ್‌ ಕೇರ

View all posts by this author