ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದ್ದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರ ಶವಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ತಮಿಳುನಾಡಿನ ಸೇಲಂ ಎರಕ್ಕಾಡು ಪ್ರದೇಶದಲ್ಲಿ ಆರೋಪಿ ಇಂದುಶೇಖರ್ ಪತ್ನಿ ಸುನಿತಾ ಮತ್ತು ಅತ್ತೆ ರೂಪವತಿ ಶವಗಳು ದೊರೆತಿವೆ. ಇದರೊಂದಿಗೆ ಏಳು ಮಂದಿ ಪೈಕಿ ಮೂವರು ಮೃತದೇಹಗಳು ಸಿಕ್ಕಂತಾಗಿದೆ.
ಇದಕ್ಕೂ ಮೊದಲು, ಬಾಲಕ ಪುನೀತ್‌ನ ಮೃತದೇಹವು ನಂದಿಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು. ಇನ್ನುಳಿದ ನಾಲ್ಕು ಮೃತದೇಹಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಪತ್ತೆಯಾಗಿರುವ ಮೃತದೇಹಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ, ಕೈ ಕಾಲುಗಳನ್ನು ಮುರಿದು ಸೆಲ್ಲೋಟೇಪ್ ಸುತ್ತಿರುವುದು ಬೆಳಕಿಗೆ ಬಂದಿದೆ. ದುರ್ವಾಸನೆ ಬಾರದಂತೆ ರೋಸ್ ವಾಟರ್ ಸಿಂಪಡಿಸಿರುವುದು ಕೂಡ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.