ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Book Release: ಡಾ. ಶಾರದಾ ಚೈತ್ರ ಅವರ ‘ನಿಗಳ’ ಕಾದಂಬರಿ ಮಾರ್ಚ್‌ 21ಕ್ಕೆ ಲೋಕಾರ್ಪಣೆ

ಡಾ. ಶಾರದಾ ಚೈತ್ರ ಅವರ ಕಾದಂಬರಿ ‘ನಿಗಳ’ ಪುಸ್ತಕದ ಲೋಕಾರ್ಪಣೆ ಸಮಾರಂಭವು ಮಾ. 21ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರು ನಗರದ ಬಸವನಗುಡಿಯ ಎನ್‌.ಆರ್‌. ಕಾಲೋನಿಯಲ್ಲಿರುವ ಬಿ.ಎಂ.ಶ್ರೀ. ಕಲಾಭವನದಲ್ಲಿ ಜರುಗಲಿದೆ. ಶತಾವಧಾನಿ ಡಾ.ಆರ್‌. ಗಣೇಶ್‌ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.18: ಸ್ನೇಹ ಬುಕ್‌ ಹೌಸ್‌ ಪ್ರಕಾಶನದ, ಖ್ಯಾತ ವೈದ್ಯೆ ಡಾ. ಶಾರದಾ ಚೈತ್ರ (Dr. Sharada Chaitra) ಅವರ ಕಾದಂಬರಿ ‘ನಿಗಳ’ ಪುಸ್ತಕದ ಲೋಕಾರ್ಪಣೆ (Book Release) ಸಮಾರಂಭವು ಮಾ. 21ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರು ನಗರದ ಬಸವನಗುಡಿಯ ಎನ್‌.ಆರ್‌. ಕಾಲೋನಿಯಲ್ಲಿರುವ ಬಿ.ಎಂ.ಶ್ರೀ. ಕಲಾಭವನದಲ್ಲಿ ಜರುಗಲಿದೆ.

ಪದ್ಮಭೂಷಣ ಪುರಸ್ಕೃತ, ಶತಾವಧಾನಿ ಡಾ. ಆರ್‌.ಗಣೇಶ್‌ ಪುಸ್ತಕ ಲೋಕಾರ್ಪಣೆ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕಿ ಮೀರಾಬಾಯಿ ಫಡ್ಕೆ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ. ಮೋಹಿನಿ ಆಚಾರ್ಯ ಕಾರ್ಯಕ್ರಮದಲ್ಲಿ ಕಾದಂಬರಿಯ ಲೇಖಕಿ ಡಾ. ಶಾರದಾ ಚೈತ್ರ, ಸ್ನೇಹ ಬುಕ್‌ ಹೌಸ್‌ನ ಪ್ರಕಾಶಕ ಕೆ.ಬಿ. ಪರಶಿವಪ್ಪ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

2nd PUC Exam-2: ದ್ವಿತೀಯ ಪಿಯುಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ