SPARSH Hospital: ಬೆಂಗಳೂರಿನಲ್ಲಿ ಸ್ಪರ್ಶ್ ಆಸ್ಪತ್ರೆಯಿಂದ ಸ್ತನ ಕ್ಯಾನ್ಸರ್ ಜಾಗೃತಿ ನಡಿಗೆ
Breast cancer awareness: ಸ್ತನ ಕ್ಯಾನ್ಸರ್ ಜಾಗೃತಿ ಸಪ್ತಾಹದ ಅಂಗವಾಗಿ ಹೆಣ್ಣೂರು ರಸ್ತೆಯ ಸ್ಪರ್ಶ್ ಆಸ್ಪತ್ರೆ ಆವರಣದಲ್ಲಿ ಆರಂಭಗೊಂಡ ಜಾಥಾಗೆ ಚಿತ್ರ ನಟಿ ಪ್ರೇಮಾ ಚಾಲನೆ ನೀಡಿದರು. ಗುಲಾಬಿ ಬಣ್ಣದ ಧಿರಿಸು ತೊಟ್ಟ ಮಹಿಳೆಯರು, ವೈದ್ಯರು, ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿಗಳು ಸ್ತನ ಕ್ಯಾನ್ಸರ್ ಕುರಿತಾದ ಘೋಷವಾಕ್ಯಗಳ ಫಲಕ ಹಿಡಿದುಕೊಂಡು ಉತ್ತರ ಬೆಂಗಳೂರಿನ ಹೆಣ್ಣೂರು ಸುತ್ತ ಮುತ್ತ ಜಾಗೃತಿ ಮೂಡಿಸಿದರು.

-

ಬೆಂಗಳೂರು, ಅಕ್ಟೋಬರ್ 19: ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಬೃಹತ್ ಕಾಲ್ನಡಿಗೆ ಜಾಥಾವನ್ನು ಹೆಣ್ಣೂರು ಸ್ಪರ್ಶ್ ಆಸ್ಪತ್ರೆ (SPARSH Hospital) ಆಯೋಜಿಸಿತ್ತು. ಸ್ತನ ಕ್ಯಾನ್ಸರ್‌ನಿಂದ (Breast cancer awareness ) ಗುಣಮುಖರಾದ ನೂರಾರು ಮಹಿಳೆಯರು ಸೇರಿದಂತೆ 1500ಕ್ಕೂ ಹೆಚ್ಚು ಮಂದಿ 5 ಕಿ.ಮೀ. ನಡಿಗೆ ಜಾಥಾದಲ್ಲಿ (walkathon 5k) ಪಾಲ್ಗೊಂಡು ಸ್ತನ ಕ್ಯಾನ್ಸರ್ ಕುರಿತಾಗಿ ಆರಂಭದಲ್ಲೇ ರೋಗ ಪರೀಕ್ಷೆ ಹಾಗೂ ರೋಗಪತ್ತೆ ಮೂಲಕ ಸ್ತನ ಕ್ಯಾನ್ಸರ್ ನಿಂದ ಪಾರಾಗಬಹುದು ಎಂಬ ಸಂದೇಶ ಸಾರಿದರು.
ಸ್ತನ ಕ್ಯಾನ್ಸರ್ ಜಾಗೃತಿ ಸಪ್ತಾಹದ ಅಂಗವಾಗಿ ಹೆಣ್ಣೂರು ರಸ್ತೆಯ ಸ್ಪರ್ಶ್ ಆಸ್ಪತ್ರೆ ಆವರಣದಲ್ಲಿ ಆರಂಭಗೊಂಡ ಜಾಥಾಗೆ ಚಿತ್ರ ನಟಿ ಪ್ರೇಮಾ ಚಾಲನೆ ನೀಡಿದರು. ಗುಲಾಬಿ ಬಣ್ಣದ ಧಿರಿಸು ತೊಟ್ಟ ಮಹಿಳೆಯರು, ವೈದ್ಯರು, ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿಗಳು ಸ್ತನ ಕ್ಯಾನ್ಸರ್ ಕುರಿತಾದ ಘೋಷವಾಕ್ಯಗಳ ಫಲಕ ಹಿಡಿದುಕೊಂಡು ಉತ್ತರ ಬೆಂಗಳೂರಿನ ಹೆಣ್ಣೂರು ಸುತ್ತ ಮುತ್ತ ಜಾಗೃತಿ ಮೂಡಿಸಿದರು.

ಚಿತ್ರ ನಟಿ ಪ್ರೇಮಾ ಮಾತನಾಡಿ ಪ್ರತಿಯೊಬ್ಬ ಮಹಿಳೆಯೂ ಸ್ತನ ಕ್ಯಾನ್ಸರ್ ಕುರಿತಾದ ಭಯರಹಿತವಾದ ಜೀವನ ನಡೆಸುವ ನಿಟ್ಟಿನಲ್ಲಿ ಜಾಗೃತಿ ಮತ್ತು ಆರೋಗ್ಯ ತಪಾಸಣೆ ಅತಿ ಮುಖ್ಯವಾಗುತ್ತದೆ ಎಂದರು.
ಸ್ತನ ಕ್ಯಾನ್ಸರ್ ತಜ್ಞೆ ಮತ್ತು ಶಸ್ತ್ರಚಿಕಿತ್ಸಕಿ ಡಾ. ಕಣ್ಮಣಿ ಗೋವಿಂದರಾವ್ ತೇಲ್ಕರ್ ಮಾತನಾಡಿ ಸ್ತನ ಕ್ಯಾನ್ಸರ್ ಆರಂಭದ ಹಂತದಲ್ಲಿ ಪತ್ತೆ ಮಾಡಿದಲ್ಲಿ ಚಿಕಿತ್ಸೆ ಮೂಲಕ ಗುಣಮುಖರಾಗಬಹುದು. ಆದರೆ ಮಹಿಳೆಯರಲ್ಲಿ ಹಿಂಜರಿಕೆ ಮತ್ತು ಮಿಥ್ಯ ಕಲ್ಪನೆಗಳು ಸಕಾಲದಲ್ಲಿ ರೋಗ ಪತ್ತೆಯಾಗದೇ ಇರುವುದಕ್ಕೆ ಕಾರಣವಾಗುತ್ತದೆ. ಇಂಥಹ ಜಾಗೃತಿ ಜಾಥಾದ ಮೂಲಕ ಮಹಿಳೆಯರ ಹಿಂಜರಿಕೆ, ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಬಹುದು. ಸ್ತನ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಮೂಲಕ ಮಹಿಳೆಯರು ಈ ಕುರಿತು ಮಾತನಾಡುವಂತೆ ಮಾಡಬಹುದು ಎಂದರು.
ಈ ಸುದ್ದಿಯನ್ನೂ ಓದಿ | Viral News: ಇದು ನನ್ನ ಕೊನೆಯ ದೀಪಾವಳಿ...! ಕ್ಯಾನ್ಸರ್ ಪೀಡಿತ ಯುವಕನ ಹೃದಯವಿದ್ರಾವಕ ಪೋಸ್ಟ್
ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟ ಆಸ್ಪತ್ರೆ ಗಳಲ್ಲಾಗದೇ ಮನೆಗಳಲ್ಲೇ ಆರಂಭವಾಗಬೇಕು. ಶಾಲೆ, ಕಾಲೇಜು ಹಾಗೂ ಸಮುದಾಯಗಳಲ್ಲೂ ಈ ಕುರಿತು ಮಾತನಾಡುವಂತಾಗಬೇಕು ಎಂದು ಸಮಲೋಚಕಿ ಮತ್ತು ರೇಡಿಯೇಶನ್ ಆಂಕಾಲಜಿ ವಿಭಾಗದ ಡಾ.ಪಿ.ಸಸಿಕಲಾ ಹೇಳಿದರು.
ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.