Viral News: ಇದು ನನ್ನ ಕೊನೆಯ ದೀಪಾವಳಿ...! ಕ್ಯಾನ್ಸರ್ ಪೀಡಿತ ಯುವಕನ ಹೃದಯವಿದ್ರಾವಕ ಪೋಸ್ಟ್
Cancer Patient: ಕೊಲೊರೆಕ್ಟಲ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ 21 ವರ್ಷದ ಯುವಕನೊಬ್ಬ ಇದು ನನ್ನ ಕೊನೆಯ ದೀಪಾವಳಿ ಎಂದು ಹೃದಯವಿದ್ರಾವಕ ಪೋಸ್ಟ್‌ವೊಂದನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ. ಭಾವನಾತ್ಮಕವಾದ ಈ ಪೋಸ್ಟ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ದುಃಖ ವ್ಯಕ್ತಪಡಿಸುತ್ತಿದ್ದಾರೆ.

-

ಬೆಂಗಳೂರು: ಕ್ಯಾನ್ಸರ್ (cancer) ಗೆದ್ದಿದೆ ಹುಡುಗರೇ.. ಎಂದು ರೆಡ್ಡಿಟ್ ನಲ್ಲಿ (reddit post) ಯುವಕನೊಬ್ಬ ಹೇಳಿಕೊಂಡಿದ್ದು ಭಾವನಾತ್ಮಕವಾದ ಈ ಪೋಸ್ಟ್ ಗೆ ಸಾಮಾಜಿಕ ಮಾಧ್ಯಮದಲ್ಲಿ (social media) ಅನೇಕರು ದುಃಖ ವ್ಯಕ್ತಪಡಿಸುತ್ತಿದ್ದಾರೆ. ದೀಪಾವಳಿಗೆ ಮುನ್ನ ನಾಲ್ಕನೇ ಹಂತದ ಕೊಲೊರೆಕ್ಟಲ್ ಕ್ಯಾನ್ಸರ್ (Stage 4 colorectal cancer) ವಿರುದ್ಧ ಹೋರಾಡುತ್ತಿರುವ 21 ವರ್ಷದ ಭಾರತೀಯನೊಬ್ಬ ಇನ್ನು ಯಾವುದೇ ಚಿಕಿತ್ಸೆ ಇಲ್ಲ ಎಂದು ಹೇಳಿ ಸಾಮಾಜಿಕ ಮಾಧ್ಯಮವಾದ ರೆಡ್ಡಿಟ್ ಭಾವನಾತ್ಮಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾನೆ. ಇದು ಭಾರಿ ವೈರಲ್ (Viral News) ಆಗಿದೆ.
2023ರಲ್ಲಿ ಕ್ಯಾನ್ಸರ್ ಇರುವುದು ಗೊತ್ತಾದ ಬಳಿಕ ತಿಂಗಳ ಕಾಲ ಕೀಮೋಥೆರಪಿ, ನೋವಿನಿಂದ ಕೂಡಿದ ಆಸ್ಪತ್ರೆಯಲ್ಲಿನ ವಾಸ್ತವ್ಯ, ಕ್ಷಣಿಕ ಭರವಸೆಯ ಕ್ಷಣಗಳ ಬಳಿಕ ಇದೀಗ ವೈದ್ಯರು ಚಿಕಿತ್ಸಾ ಆಯ್ಕೆಗಳಿಲ್ಲವೆಂದು ಹೇಳಿದ್ದಾರೆ ಎಂಬುದಾಗಿ ಯುವಕ ಹೇಳಿಕೊಂಡಿದ್ದಾನೆ. ಮುಂದಿನ ವರ್ಷದ ದೀಪಾವಳಿ ತನ್ನಿಂದ ನೋಡಲು ಸಾಧ್ಯವಾಗದೇ ಇರಬಹುದು. ಈ ಬಾರಿ ತನ್ನ ಕೊನೆಯ ದೀಪಾವಳಿ ಆಗಿರಬಹುದು ಎಂದು ಯುವಕ ಹೇಳಿಕೊಂಡಿದ್ದಾನೆ.
ದೀಪಾವಳಿ ಸಮೀಪಿಸುತ್ತಿದ್ದಂತೆ ಯುವಕ ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಈ ಭಾವನಾತ್ಮಕ ಪೋಸ್ಟ್ ಅನೇಕರ ಕಣ್ಣಲ್ಲಿ ನೀರು ತರಿಸಿದೆ. ಯುವಕ ತನ್ನ ಸಂದೇಶದಲ್ಲಿ ದೀಪಾವಳಿ ಶೀಘ್ರದಲ್ಲೇ ಬರಲಿದೆ. ಬೀದಿಗಳಲ್ಲಿ ದೀಪಗಳು ಈಗಾಗಲೇ ಉರಿಯುತ್ತಿವೆ. ಅವೆಲ್ಲವನ್ನು ನಾನು ಕೊನೆಯ ಬಾರಿಗೆ ನೋಡುತ್ತೇನೆ ಎಂದು ತಿಳಿಯುವುದು ಕಷ್ಟ. ನಗು, ದೀಪಗಳು ಮತ್ತು ಶಬ್ದವನ್ನು ನಾನು ಕಳೆದುಕೊಳ್ಳುತ್ತೇನೆ. ನನ್ನದು ನಿಧಾನವಾಗಿ ಮುಗಿಯುತ್ತಿರುವಾಗ ಜೀವನವು ಮುಂದುವರಿಯುವುದನ್ನು ನೋಡುವುದು ವಿಚಿತ್ರವೆನಿಸುತ್ತದೆ .
ಪ್ರಪಂಚವನ್ನು ಸುತ್ತಿರುವುದು, ಸಣ್ಣ ವ್ಯವಹಾರವನ್ನು ಪ್ರಾರಂಭಿಸಿರುವುದು, ನಾಯಿಯನ್ನು ದತ್ತು ತೆಗೆದುಕೊಂಡಿರುವುದು.. ಹೀಗೆ ಈಡೇರದ ಕನಸುಗಳ ಬಗ್ಗೆ ದುಃಖವನ್ನು ಹಂಚಿಕೊಂಡಿರುವ ಯುವಕ ಸೀಮಿತ ಸಮಯದ ವಾಸ್ತವವನ್ನು ಎದುರಿಸುವಾಗ ಪ್ರತಿಯೊಂದು ಯೋಜನೆಯೂ ಈಗ ಮರೆಯಾಗುತ್ತಿರುವ ಬಯಕೆಯಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾನೆ.
ಮರೆಯಾಗುವ ಮೊದಲು ತನ್ನ ಈ ಒಂದು ಗುರುತು ಬಿಟ್ಟು ಹೋಗುವುದಾಗಿ ಯುವಕ ಹೇಳಿಕೊಂಡಿದ್ದಾನೆ. ಇದನ್ನು ಓದಿದ ಅನೇಕ ರೆಡ್ಡಿಟ್ ಬಳಕೆದಾರರು ದುಃಖವನ್ನು ವ್ಯಕ್ತಪಡಿಸಿದ್ದಾರೆ. ಭಾರಿ ವೈರಲ್ ಆಗಿರುವ ಈ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ.
ಕೆಲವರು ಸಹಾನುಭೂತಿ ವ್ಯಕ್ತಪಡಿಸಿದ್ದು, ಇನ್ನು ಕೆಲವರು ಯುವಕನಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಉಳಿದ ದಿನಗಳಲ್ಲಿ ಶಾಂತಿ ಮತ್ತು ಸಂತೋಷವನ್ನು ಕಂಡುಕೊಳ್ಳಲು ಪ್ರಾರ್ಥಿಸುವುದಾಗಿ ಅನೇಕರು ಹೇಳಿದರು. ಅನೇಕರು ಪ್ರಾರ್ಥನೆ, ಸಾಂತ್ವನ ಹೇಳಿದರು.
ಒಬ್ಬರು ಕಾಮೆಂಟ್ ನಲ್ಲಿ ಪವಾಡವಾಗಲಿ ಎಂದು ನಾನು ಆಶಿಸುತ್ತೇನೆ. ದಿನಗಳು ಚಿಕ್ಕದಾಗಿದ್ದರೂ ಶಾಂತಿ ಸಿಗಲಿ. ದೀರ್ಘ ನಡಿಗೆಗಳನ್ನು ಮಾಡಿ, ಸಂಗೀತವನ್ನು ಆಲಿಸಿ, ಸೂರ್ಯಾಸ್ತಗಳನ್ನು ವೀಕ್ಷಿಸಿ, ಸಾಧ್ಯವಿರುವ ಎಲ್ಲ ರೀತಿಯಲ್ಲಿ ಉಳಿದಿರುವುದನ್ನು ಆನಂದಿಸಿ ಎಂದು ಹೇಳಿದ್ದಾರೆ.
ಇನ್ನೊಬ್ಬರು.. ನನಗೆ ಕನಸುಗಳಿದ್ದವು, ನಿಮಗೆ ತಿಳಿದಿದೆಯೇ? ಎಂದು ಬರೆದಿರುವ ನಿಮ್ಮ ಸಾಲುಗಳು ನನ್ನನ್ನು ಸಂಪೂರ್ಣವಾಗಿ ಮುರಿದುಬಿಟ್ಟಿತು. ನೀವು ಹೆಚ್ಚಿನ ಜನರು ಇರುವುದಕ್ಕಿಂತ ಬಲಶಾಲಿ ಎಂದು ಹೇಳಿದರು.
ಮತ್ತೊಬ್ಬರು, ನೀವು ಪದಗಳಿಂದ ವಿವರಿಸುವುದಕ್ಕಿಂತ ಹೆಚ್ಚಿನ ಧೈರ್ಯವನ್ನು ತೋರಿಸಿದ್ದೀರಿ. ಪ್ರತಿದಿನ ನಿಮಗೆ ಬೆಳಕು ಮತ್ತು ಸಾಂತ್ವನವನ್ನು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ. ಅನೇಕರು ಜೀವನವು ನಿಜವಾಗಿಯೂ ಎಷ್ಟು ಕ್ಷಣಿಕವಾಗಿದೆ ಎಂಬುದನ್ನು ನೆನಪಿಸುತ್ತದೆ ಎಂದು ಹೇಳಿದರು. ಸಾಮಾನ್ಯವಾಗಿ ಲಘುವಾಗಿ ಪರಿಗಣಿಸುವ ಕ್ಷಣಗಳ ಪ್ರಬಲ ಕರೆ ಇದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Vote theft Case: ಮತಗಳ್ಳತನ ಪ್ರಕರಣ: ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ ಹಲವರ ಮನೆ ಮೇಲೆ ಎಸ್ಐಟಿ ದಾಳಿ
ವಿಶ್ವಾದ್ಯಂತ ಯುವಜನರಲ್ಲಿ ಕ್ಯಾನ್ಸರ್ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾದ ಕೊಲೊರೆಕ್ಟಲ್ ಕ್ಯಾನ್ಸರ್ 30 ವರ್ಷದೊಳಗಿನ ಪ್ರಕರಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಆರಂಭಿಕ ಪತ್ತೆ ಬದುಕುಳಿಯುವಿಕೆಯ ಪ್ರಮಾಣವನ್ನು ಸುಧಾರಿಸುತ್ತದೆ ಎನ್ನುತ್ತದೆ.