ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Cauvery water: ಬೆಂಗಳೂರಿಗರೇ, ಕಾವೇರಿ ನೀರು ಪೋಲು ಮಾಡಿದರೆ ಬೀಳುತ್ತೆ ರೂ.5000 ದಂಡ!

ಎಲ್ಲೆಲ್ಲಿ ಅಗತ್ಯವಿದೆಯೋ ಆ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪ್ಲ್ಯಾನ್‌ ಕೂಡ ಜಲಮಂಡಳಿ ಮಾಡಿಕೊಂಡಿದೆ. ಕಾವೇರಿ ನೀರಿನಲ್ಲಿ ಬೈಕ್, ಕಾರು ತೊಳೆಯೋದು, ನೀರನ್ನ ಬೇಕಾಬಿಟ್ಟಿ ಪೋಲು ಮಾಡಿದರೆ ಜಲಮಂಡಳಿ ದಂಡ ಹಾಕಲು ಕೂಡ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ವೀಕ್ಷಕರು ಮತ್ತು ಬ್ಲೂಫೋರ್ಸ್‌ ಕೂಡ ಕಾರ್ಯಾಚರಣೆ ಮಾಡಲಿದೆ.

ಕುಡಿಯುವ ನೀರು

ಬೆಂಗಳೂರು, ಫೆ.12: ವಾತಾವರಣದಲ್ಲಿ ಬಿಸಿಲಿನ ಝಳ ಏರುತ್ತಿದೆ. ಮಾರ್ಚ್‌ನಿಂದ ಬೇಸಿಗೆ (Summer) ಶುರುವಾಗಲಿದ್ದು, ಈ ಕಾಲದಲ್ಲಿ ನೀರಿನ ಆಭಾವ ರಾಜಧಾನಿಯ (Bengaluru) ಹಲವು ಪ್ರದೇಶಗಳಲ್ಲಿಆಗುವುದು ಸಾಮಾನ್ಯ. ಮೇ ತಿಂಗಳಲ್ಲಿ ಇದು ಹಾಹಾಕಾರದ ರೂಪ ತಾಳಬಹುದು. ಆದರೆ ಈ ಸಲ ಬೆಂಗಳೂರಿನ ಜನರಿಗೆ ಬೇಸಿಗೆಯಲ್ಲಿ ಕಾವೇರಿ ಕುಡಿಯುವ ನೀರಿನ (Drinking Water) ಅಭಾವ ಆಗದಂತೆ ಜಲಮಂಡಳಿ ಮುನ್ನೆಚ್ಚರಿಕೆ ವಹಿಸಿದೆ. ಜೊತೆಗೆ, ಬೇಸಿಗೆಯಲ್ಲಿ ಕಾವೇರಿ ನೀರು (Cauvery water) ಪೋಲು ಮಾಡಿದರೆ ರೂ. 5000 ದಂಡ ವಿಧಿಸಲಾಗುತ್ತೆ ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ.

ಬೆಂಗಳೂರು ಜಲಮಂಡಳಿ (Bengaluru Water Board) ಬೇಸಿಗೆ ಕಾಲದಲ್ಲಿ ಆಗುವ ನೀರಿನ ಸಮಸ್ಯೆಯನ್ನ ಬಗೆಹರಿಸಲು ಈಗಾಗಲೇ ಅಧಿಕಾರಿಗಳ ಸಭೆ ಮಾಡಿದ್ದು, ನೀರಿನ ಸಮಸ್ಯೆ ಆಗುವ ಭಾಗದಲ್ಲಿ ಟ್ಯಾಂಕರ್‌ ವ್ಯವಸ್ಥೆ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ. ಹೀಗಾಗಿ, ನೀರಿನ ಆಭಾವ ಆಗುವುದು ಅನುಮಾನ, ಒಂದು ವೇಳೆ ಆದರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಜಲಮಂಡಳಿ ಮುಂದಾಗಿದೆ.

ಬೆಂಗಳೂರಿಗೆ ಕುಡಿಯುವ ನೀರನ್ನ ಒದಗಿಸುವ ಕಾವೇರಿ ನೀರು ಸದ್ಯ ಕೆಆರ್‌ಎಸ್‌ನಲ್ಲಿ 54 ಟಿಎಂಸಿ ನೀರು ಇದೆ. ಜುಲೈವರೆಗೆ ಬೆಂಗಳೂರಿಗೆ 14 ಟಿಎಂಸಿ ನೀರು ಸಾಕಾಗುತ್ತೆ. ಆದರೆ ಇಡೀ ಬೆಂಗಳೂರಿಗೆ ಕಾವೇರಿಯ ಜೊತೆಗೆ ಬೋರ್‌ವೆಲ್ ನೀರು ಕೂಡ ಬಹಳ ಪ್ರಮುಖ ಪಾತ್ರ ವಹಿಸಿದ್ದು, ಬೋರ್‌ವೆಲ್‌ನಲ್ಲಿ ಬೇಸಿಗೆಯಲ್ಲಿ ನೀರು ಕಡಿಮೆಯಾಗೋದು ನಿಶ್ವಿತ. ಕಳೆದ ವರ್ಷದಿಂದ ಜಲಮಂಡಳಿಯೇ ಸಂಪೂರ್ಣವಾಗಿ ಬೋರ್ವೆಲ್‌ಗಳ ನಿರ್ವಹಣೆ ಮಾಡುತ್ತಿದ್ದು, ಅಂತರ್ಜಲ ಕುಸಿಯದಂತೆ ಕ್ರಮ ಕೈಗೊಂಡಿದೆ.

Cauvery Aarti: ವಾರದಲ್ಲಿ ಮೂರು ದಿನ ಕಾವೇರಿ ಆರತಿ: ಡಿ.ಕೆ. ಶಿವಕುಮಾರ್

ಈ ಬಾರಿಯೂ ಅದೇ ರೀತಿ ಎಲ್ಲೆಲ್ಲಿ ಅಗತ್ಯವಿದೆಯೋ ಆ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪ್ಲ್ಯಾನ್‌ ಕೂಡ ಜಲಮಂಡಳಿ ಮಾಡಿಕೊಂಡಿದೆ. ಕಾವೇರಿ ನೀರಿನಲ್ಲಿ ಬೈಕ್, ಕಾರು ತೊಳೆಯೋದು, ನೀರನ್ನ ಬೇಕಾಬಿಟ್ಟಿ ಪೋಲು ಮಾಡಿದರೆ ಜಲಮಂಡಳಿ ದಂಡ ಹಾಕಲು ಕೂಡ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ವೀಕ್ಷಕರು ಮತ್ತು ಬ್ಲೂಫೋರ್ಸ್‌ ಕೂಡ ಕಾರ್ಯಾಚರಣೆ ಮಾಡಲಿದೆ. ಜನರು ಜೀವ ಜಲವನ್ನು ವ್ಯರ್ಥ ಮಾಡದೇ ಸರಿಯಾಗಿ ಬಳಕೆ ಮಾಡಿದರೆ ಜಲಕ್ಷಾಮವಾಗೋದು ಕಡಿಮೆ, ಜೊತೆಗೆ ದಂಡ ಕಟ್ಟುವ ಪ್ರಮೇಯವೂ ಬರಲ್ಲ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Karnataka Assembly Session: ಕಾವೇರಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಮೆಟ್ರೋ ವಿಸ್ತರಣೆ, ಹೊಸ ರಸ್ತೆ ಜಾಲಗಳ ವಿವರ ಕೊಟ್ಟ ಡಿಕೆಶಿ

ಹರೀಶ್‌ ಕೇರ

View all posts by this author