ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dasara 2026: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಅ.12ರಿಂದ 17ರವರೆಗೆ ದಸರಾ ಸಂಭ್ರಮ; ವಾರಪೂರ್ತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

Dasara 2026 At Bengaluru Airport: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ 12ರಿಂದ 17ರವರೆಗೆ ನಾಡಹಬ್ಬ ದಸರಾವನ್ನು ಸಾಂಸ್ಕೃತಿಕ ಸಂಭ್ರಮದೊಂದಿಗೆ ಆಚರಿಸಲಾಗುತ್ತಿದೆ. ನಿಲ್ದಾಣದ ವಿವಿಧ ಭಾಗಗಳಲ್ಲಿ ನೇರ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಕಲಾ ಸ್ಥಾಪನೆ, ಹಬ್ಬದ ಅನುಭವಗಳು ಮತ್ತು ಸಂವಾದಾತ್ಮಕ ಚಟುವಟಿಕೆಗಳ ಮೂಲಕ ಕರ್ನಾಟಕದ ಕಲೆ, ಸಂಪ್ರದಾಯ ಮತ್ತು ಪರಂಪರೆಯನ್ನು ಜೀವಂತಗೊಳಿಸಲಾಗುತ್ತದೆ.

ಬೆಂಗಳೂರು, ಅ.10: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (Kempegowda International Airport) ಕರ್ನಾಟಕದ ಹೆಮ್ಮೆಯ ನಾಡಹಬ್ಬ ದಸರಾವನ್ನು ಅಕ್ಟೋಬರ್ 12ರಿಂದ 17ರವರೆಗೆ ವಾರಪೂರ್ತಿ ಸಾಂಸ್ಕೃತಿಕ ಸಂಭ್ರಮದೊಂದಿಗೆ ಆಚರಿಸಲು ಸಜ್ಜಾಗಿದೆ. ಬೆಂಗಳೂರಿನಿಂದ ಜಗತ್ತಿನತ್ತ ತೆರೆಯುವ ಪ್ರವೇಶದ್ವಾರವಾಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ರಾಜ್ಯದ ಸಂಪ್ರದಾಯ, ಕಥೆ ಮತ್ತು ಸೃಜನಾತ್ಮಕ ಪರಂಪರೆಯ ಅನುಭವವನ್ನು ಪ್ರಯಾಣಿಕರಿಗೆ ನೀಡಲು ಮುಂದಾಗಿದೆ.

ವಿಮಾನ ನಿಲ್ದಾಣದ ವಿವಿಧ ಭಾಗಗಳಲ್ಲಿ ನೇರ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಕಲಾ ಸ್ಥಾಪನೆ, ಹಬ್ಬದ ಅನುಭವಗಳು ಮತ್ತು ಸಂವಾದಾತ್ಮಕ ಚಟುವಟಿಕೆಗಳ ಮೂಲಕ ಕರ್ನಾಟಕದ ಕಲೆ, ಸಂಪ್ರದಾಯ ಮತ್ತು ಪರಂಪರೆಯನ್ನು ಜೀವಂತಗೊಳಿಸಲಾಗುತ್ತದೆ.

ಈ ವರ್ಷದ ಆಚರಣೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಕೇವಲ ಪ್ರದರ್ಶಿಸುವುದಷ್ಟೇ ಅಲ್ಲದೆ, ನಮ್ಮ ಸಂಸ್ಕೃತಿಯನ್ನು ಅನುಭವಿಸುವುದರತ್ತ ಗಮನಹರಿಸಿದೆ. ಪ್ರತಿಯೊಂದು ಚಟುವಟಿಕೆಯೂ ಕರ್ನಾಟಕದ ನೈಜ ಕಲೆ ಹಾಗೂ ಕರಕುಶಲ ಪರಂಪರೆಯನ್ನು ಆಧರಿಸಿದ್ದು, ಪ್ರಯಾಣಿಕರು ಅದರ ಹಿಂದಿರುವ ಕಥೆ, ಕೌಶಲ್ಯ ಮತ್ತು ಸಂಪ್ರದಾಯಗಳನ್ನು ಹತ್ತಿರದಿಂದ ಅರಿತುಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಈ ಮೂಲಕ ವಿಮಾನ ನಿಲ್ದಾಣವು ಕೇವಲ ಹಬ್ಬದ ಅಲಂಕಾರದ ಸ್ಥಳವಾಗಿರದೆ, ಕರ್ನಾಟಕದ ಜೀವಂತ ಪರಂಪರೆಯನ್ನು ಪ್ರಯಾಣಿಕರ ಪಯಣದ ಭಾಗವನ್ನಾಗಿ ಮಾಡಲಿದೆ.

Bengaluru News

ಈ ಕುರಿತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್‌)ನ ಮುಖ್ಯ ಮಾರುಕಟ್ಟೆ ಅಧಿಕಾರಿ ಶಾಲಿನಿ ರಾವ್ ಮಾತನಾಡಿ, “ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಗೆ ಬರುವ ಪ್ರತಿಯೊಬ್ಬ ಪ್ರಯಾಣಿಕರೂ ಕರ್ನಾಟಕದ ಆತ್ಮೀಯತೆ, ಸಂಸ್ಕೃತಿ ಮತ್ತು ನೈಜ ಮನೋಭಾವವನ್ನು ಅನುಭವಿಸಬೇಕು ಎಂಬುದು ನಮ್ಮ ನಂಬಿಕೆ. ಇದೇ ನಂಬಿಕೆ ನಮ್ಮ ನಾಡಹಬ್ಬ ದಸರಾ ಆಚರಣೆಯ ಹೃದಯವಾಗಿದೆ. ಸಂಗೀತ, ನೃತ್ಯ, ಗೊಂಬೆಯಾಟ, ಸಾಂಪ್ರದಾಯಿಕ ಆಟಗಳು ಮತ್ತು ವಿಶೇಷವಾಗಿ ಆಯ್ಕೆ ಮಾಡಲಾದ ಪಾಕಶೈಲಿ ಅನುಭವಗಳ ಮೂಲಕ ರಾಜ್ಯದ ಶ್ರೀಮಂತ ಪರಂಪರೆಯನ್ನು ಜೀವಂತಗೊಳಿಸುತ್ತಿದ್ದೇವೆ. ಅಕ್ಟೋಬರ್ 12ರಿಂದ 17ರವರೆಗೆ ಪ್ರಯಾಣಿಕರು, ಸಂದರ್ಶಕರು, ಪಾಲುದಾರರು ಮತ್ತು ಬೆಂಗಳೂರಿನ ಜನರು ಆರು ದಿನಗಳ ಕಾಲ ಕರ್ನಾಟಕದ ಸಂಸ್ಕೃತಿಯ ಅನೇಕ ರೂಪಗಳನ್ನು ಅನುಭವಿಸಬಹುದು. ಈ ಅನುಭವಗಳ ಮೂಲಕ ಸಂತೋಷ, ಹೊಸ ಅನ್ವೇಷಣೆ ಮತ್ತು ಸಂಪರ್ಕದ ಕ್ಷಣಗಳನ್ನು ಸೃಷ್ಟಿಸುವುದು ನಮ್ಮ ಉದ್ದೇಶ. ನಮ್ಮ ರಾಜ್ಯದ ಆತ್ಮವನ್ನು ಅನುಭವಿಸಿ ಪ್ರತಿಯೊಬ್ಬರೂ ಇಲ್ಲಿ ಆತ್ಮೀಯವಾಗಿ ಸ್ವಾಗತಿಸಲ್ಪಟ್ಟ ಭಾವನೆ ಪಡೆಯಬೇಕು. ಪ್ರಯಾಣ ಸ್ಥಳೀಯ ಸಂಸ್ಕೃತಿಯನ್ನು ಭೇಟಿಯಾದಾಗ, ಅದು ದೀರ್ಘಕಾಲ ಉಳಿಯುವ ನೆನಪುಗಳನ್ನು ಸೃಷ್ಟಿಸುತ್ತದೆ ಮತ್ತು ‘Feels Like BLR’ ಎನ್ನುವ ನೈಜ ಸೇರಿದ ಭಾವನೆಯನ್ನು ನೀಡುತ್ತದೆ ಎಂದರು.

ಕರ್ನಾಟಕದ ಆಹಾರ, ಕಲೆ ಮತ್ತು ಕರಕುಶಲ ಪರಂಪರೆಯ ಸಂಭ್ರಮ

ಈ ಆಚರಣೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ, ಅಕ್ಟೋಬರ್ 12ರಿಂದ 17ರವರೆಗೆ ಟರ್ಮಿನಲ್ 2 ಆಗಮನ ಮುಂಭಾಗದಲ್ಲಿ ದಸರಾ ಗೊಂಬೆ ಪ್ರದರ್ಶನ ನಡೆಯಲಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಖ್ಯಾತ ಗೊಂಬೆಯಾಟ ಕಲಾವಿದೆ ಅನುಪಮಾ ಹೊಸಕೆರೆ ಈ ಪ್ರದರ್ಶನವನ್ನು ವಿಶೇಷವಾಗಿ ರೂಪಿಸಲಿದ್ದಾರೆ. ಹಬ್ಬದ ಗೊಂಬೆಗಳನ್ನು ಅಲಂಕರಿಸುವ ಪರಂಪರೆಯಾದ ಗೊಂಬೆ ಹಬ್ಬದ ಸಂಪ್ರದಾಯವನ್ನು ಮರುಜೀವಂತಗೊಳಿಸುವ ಈ ಪ್ರದರ್ಶನ, ಗೊಂಬೆಗಳ ಹಿಂದಿರುವ ಕಥೆಗಳು, ಸಂಪ್ರದಾಯಗಳು ಮತ್ತು ಅವುಗಳ ಮಹತ್ವವನ್ನು ಪ್ರಯಾಣಿಕರಿಗೆ ಪರಿಚಯಿಸಲಿದೆ.

ಕರ್ನಾಟಕದ ಗೊಂಬೆಯಾಟ ಪರಂಪರೆಯೂ ದಸರಾ ಸಂಭ್ರಮದಲ್ಲಿ ಜೀವಂತವಾಗಲಿದೆ. ಒಂಬತ್ತನೇ ತಲೆಮಾರಿನ ಗೊಂಬೆಯಾಟ ಕಲಾವಿದ ಗುಂಡುರಾಜು ಮತ್ತು ಅವರ ತಂಡ ಅಕ್ಟೋಬರ್ 16ರಂದು ಸಂಜೆ 6 ರಿಂದ 8ರವರೆಗೆ ಟರ್ಮಿನಲ್ 2 ಆಗಮನ ಮುಂಭಾಗದಲ್ಲಿ ತೊಗಲು ಗೊಂಬೆಯಾಟ ಪ್ರದರ್ಶಿಸಲಿದ್ದಾರೆ.

ಟರ್ಮಿನಲ್ 1 ಮತ್ತು ಟರ್ಮಿನಲ್ 2ರಲ್ಲಿ ಪ್ರಯಾಣಿಕರು ಕರ್ನಾಟಕದ ಕರಕುಶಲ ಪರಂಪರೆಯನ್ನು ನೇರವಾಗಿ ಅನುಭವಿಸುವ ಅವಕಾಶವೂ ಇರಲಿದೆ. ಚನ್ನಪಟ್ಟಣ ಅನುಭವ ಕೇಂದ್ರದಲ್ಲಿ ಸಾಂಪ್ರದಾಯಿಕ ಲ್ಯಾಕರ್ ಲೇಪಿತ ಮರದ ಆಟಿಕೆಗಳಿಗೆ ಬಣ್ಣ ಹಚ್ಚುವ ಚಟುವಟಿಕೆ ಇರಲಿದ್ದು, ಟೆರಾಕೋಟಾ ಅನುಭವ ಕೇಂದ್ರದಲ್ಲಿ ರಾಜ್ಯದ ಮಣ್ಣಿನ ಕಲಾ ಪರಂಪರೆಯಿಂದ ಪ್ರೇರಿತ ಮೂರ್ತಿಗಳಿಗೆ ಬಣ್ಣ ಹಚ್ಚುವ ಅನುಭವ ಸಿಗಲಿದೆ. ಇದರ ಜತೆಗೆ, ಕವಡೆ ರೂಪಿಸಿರುವ ಸಾಂಪ್ರದಾಯಿಕ ಆಟಗಳ ವಲಯದಲ್ಲಿ ಕರ್ನಾಟಕದ ಜನಪ್ರಿಯ ಆಟಗಳಾದ ಹುಲಿ-ಕುರಿ, ಸಾಲು ಆಟ, ಅಳಗುಳಿಮನೆ, ಚೌಕಾಬಾರ ಮತ್ತು ಸ್ಪೈರಲ್ ಸ್ನೇಕ್ಸ್ ಅಂಡ್ ಲ್ಯಾಡರ್ಸ್ ಸೇರಿರಲಿವೆ.

Bengaluru Airport

ಕರ್ನಾಟಕದ ಕಲಾ ಪರಂಪರೆಯ ಮೇಲಿನ ಈ ಒತ್ತು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ವಿಶಾಲ ಕಲೆ ಮತ್ತು ಸಂಸ್ಕೃತಿ ಕಾರ್ಯಕ್ರಮದ ಮುಂದುವರಿದ ಭಾಗವಾಗಿದೆ. ಪ್ರಯಾಣಿಕರ ದೈನಂದಿನ ಅನುಭವಕ್ಕೆ ಸ್ಥಳೀಯ ಕಲಾರೂಪಗಳನ್ನು ಪರಿಚಯಿಸುವುದು ಇದರ ಉದ್ದೇಶವಾಗಿದೆ.

ಚನ್ನಪಟ್ಟಣದ ಆಟಿಕೆ ತಯಾರಿಕಾ ಪರಂಪರೆಯಿಂದ ಪ್ರೇರಿತವಾದ Flights of Wonder, ಟೆರಾಕೋಟಾ ರೂಪಗಳಿಂದ ಪ್ರೇರಣೆ ಪಡೆದ Find Me a Love Song ಮತ್ತು Khora ಸೇರಿದಂತೆ ಹಲವು ಕಲಾಕೃತಿಗಳು ಈ ಕಾರ್ಯಕ್ರಮದ ಭಾಗವಾಗಿವೆ. ಜತೆಗೆ, ಕರ್ನಾಟಕದ ಸಾಂಪ್ರದಾಯಿಕ ಬೋರ್ಡ್ ಆಟಗಳು ಮತ್ತು ಮೈಸೂರು ಮಹಾರಾಜರು ರೂಪಿಸಿದ ಆಟಗಳಿಂದ ಪ್ರೇರಿತವಾದ ಯಯಾತಿ ಗೋಡ್ಬೋಲೆ ಅವರ 12 ನೆಲದ ಕಲಾ ವಿನ್ಯಾಸಗಳು ಕೂಡ ವಿಮಾನ ನಿಲ್ದಾಣದ ಕಲಾ ಅನುಭವದ ಭಾಗವಾಗಿವೆ.

ಈ ಸಾಂಸ್ಕೃತಿಕ ಅಭಿವ್ಯಕ್ತಿ ವಿಮಾನ ನಿಲ್ದಾಣದ ವಿಶಾಲ ವಾತಾವರಣದಲ್ಲಿಯೂ ಪ್ರತಿಬಿಂಬಿಸಲಿದ್ದು, ಕರ್ನಾಟಕ ಶೈಲಿಯಿಂದ ಪ್ರೇರಿತ ಸಸ್ಯ ಅಲಂಕಾರಗಳು, ದಸರಾ ಛತ್ರಿಗಳು, ಚಿಹ್ನೆಗಳು ಮತ್ತು ವಿಶೇಷ ಸ್ಥಾಪನೆಗಳು ಇರಲಿವೆ. ಜತೆಗೆ ಬೆಂಗಳೂರು ಡ್ಯೂಟಿ ಫ್ರೀ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ಅಲಂಕರಿಸಲಾದ ಆನೆ ವಿಶೇಷ ಆಕರ್ಷಣೆಯಾಗಲಿದೆ. ಇದೇ ವೇಳೆ ಸಂಪೂರ್ಣ ಮಹಿಳಾ ಕಲಾವಿದರ ಡೊಳ್ಳು ಕುಣಿತ ಪ್ರದರ್ಶನವೂ ನಡೆಯಲಿದೆ.

ಕರ್ನಾಟಕದ ಪಾಕಪರಂಪರೆಯೂ ಸಂಭ್ರಮದ ಭಾಗ‌

ದಸರಾ ಆಚರಣೆ ಕರ್ನಾಟಕದ ಪಾಕಶೈಲಿಗೂ ವಿಸ್ತರಿಸಲಿದ್ದು, ಖ್ಯಾತ ಶೆಫ್ ರಣವೀರ್ ಬ್ರಾರ್ ಮತ್ತು 080 ಲೌಂಜ್‌ಗಳು ಸಹಯೋಗದಲ್ಲಿ “ಎ ದಸರಾ ಚಾಲೆಂಜ್‌. ಎ ಕರ್ನಾಟಕ ಆನ್ಸರ್‌.” ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಉಪಕ್ರಮದಡಿ, ಕನ್ನಡಿಗರು ತಮಗೆ ಅತ್ಯಂತ ಹೆಮ್ಮೆಯಿರುವ ದಸರಾ ವಿಶೇಷ ಅಡುಗೆ ವಿಧಾನವನ್ನು ಹಂಚಿಕೊಳ್ಳಲು ಶೆಫ್ ಆಹ್ವಾನಿಸಲಿದ್ದಾರೆ. ಆಯ್ಕೆಯಾದ ವಿಜೇತ ಅಡುಗೆ ವಿಧಾನವನ್ನು 080 ಲೌಂಜ್‌ಗಳ ಶೆಫ್‌ಗಳು ಮರುಸೃಷ್ಟಿಸಿ, ದಸರಾ ದಿನವಾದ ಅಕ್ಟೋಬರ್ 20ರಂದು ಭಾಗವಹಿಸುವ 080 ಲೌಂಜ್‌ಗಳಲ್ಲಿ ಪ್ರಯಾಣಿಕರಿಗೆ ನೀಡಲಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ವಿಶಾಲ ಫೀಲ್‌ ಲೈಕ್‌ ಬಿಎಲ್‌ಆರ್‌ ಅಭಿಯಾನದ ಭಾಗವಾಗಿ, ಈ ದಸರಾ ಸಂಭ್ರಮವು ಕರ್ನಾಟಕದ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರಯಾಣಿಕರ ಅನುಭವದೊಂದಿಗೆ ಒಂದಾಗಿಸಲಿದೆ. ಬೆಂಗಳೂರು, ಭಾರತದ ಇತರ ಭಾಗಗಳು ಮತ್ತು ಜಗತ್ತಿನ ನಾನಾ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕರ್ನಾಟಕದ ಪ್ರವೇಶದ್ವಾರದಲ್ಲೇ ರಾಜ್ಯದ ಜೀವಂತ ಸಂಸ್ಕೃತಿಯ ಪರಿಚಯ ಸಿಗಲಿದೆ.

Dasara Celebration

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ ಕಣ್ತುಂಬಿಕೊಳ್ಳಬಹುದಾದ 5 ವಿಶೇಷತೆಗಳು

ದಸರಾ ಹಬ್ಬದ ಸಂಭ್ರಮವನ್ನು ಪ್ರಯಾಣಿಕರಿಗೆ ಮತ್ತಷ್ಟು ವಿಶೇಷವಾಗಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್ 2ರಲ್ಲಿ ಕಲೆ, ಸಂಸ್ಕೃತಿ ಹಾಗೂ ವಿವಿಧ ಮನರಂಜನಾ ಅನುಭವಗಳನ್ನು ಒಗ್ಗೂಡಿಸಲು ವೇದಿಕೆ ಸಿದ್ಧಪಡಿಸಿವೆ.

ಈ ಬಾರಿಯ ದಸರಾ ಹಬ್ಬದ ಪ್ರಯುಕ್ತ ಕರ್ನಾಟಕದ ಸಾಂಪ್ರದಾಯಿಕ ದಸರಾ ಗೊಂಬೆ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಟರ್ಮಿನಲ್ ಒಳಗಿನ ಮನರಂಜನಾ ಚಟುವಟಿಕೆಗಳು ಪ್ರಯಾಣಿಕರನ್ನು ಸೆಳೆಯಲಿವೆ. ಜತೆಗೆ, ಕಲಾ ಲೋಕದಲ್ಲಿ ಲಭ್ಯವಿರುವ ಕರ್ನಾಟಕದ ವಿಶಿಷ್ಟ ಸ್ಮರಣಿಕೆಗಳನ್ನು ಖರೀದಿಸುವ ಮೂಲಕ ಪ್ರಯಾಣಿಕರು ತಮ್ಮ ಪ್ರಯಾಣದ ನೆನಪಾಗಿ ಕರ್ನಾಟಕದ ಒಂದು ಭಾಗವನ್ನು ತಮ್ಮೊಂದಿಗೆ ಕೊಂಡೊಯ್ಯಬಹುದಾಗಿದೆ.

ಹೊಸದನ್ನು ಅನ್ವೇಷಿಸಲು ಬಯಸುವವರಾಗಿರಲಿ, ಹಬ್ಬದ ವಿಶೇಷ ತಿಂಡಿಯನ್ನು ಸವಿಯಲು ಇಚ್ಛಿಸುವವರಾಗಿರಲಿ, ಆತ್ಮೀಯರಿಗೆ ವಿಶೇಷ ಉಡುಗೊರೆ ಖರೀದಿಸಲು ಆಸಕ್ತಿ ತೋರಿಸುವವರಾಗಲಿ ಅಥವಾ ಸುಂದರ ಛಾಯಾಚಿತ್ರಕ್ಕೆ ಸೂಕ್ತವಾದ ಸ್ಥಳ ಹುಡುಕುವವರಾಗಿರಲಿ.. ಎಲ್ಲರಿಗೂ ಹೊಂದುವಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ದಸರಾ ಸಂಭ್ರಮವನ್ನು ಜೀವಂತಗೊಳಿಸುವ ಹಲವು ಅನುಭವಗಳು ದೊರೆಯಲಿವೆ.

ಈ ಸಂಭ್ರಮವು ಕೇವಲ ವಿಮಾನ ಪ್ರಯಾಣಿಕರಿಗೆ ಮಾತ್ರ ಸೀಮಿತವಾಗಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ವಿಮಾನ ಪ್ರಯಾಣದ ಟಿಕೆಟ್ ಅಗತ್ಯವಿಲ್ಲ. ಎಲ್ಲರೂ ಈ ಅನುಭವಗಳನ್ನು ಆನಂದಿಸಬಹುದಾಗಿದ್ದು, ಪ್ರಯಾಣಿಕರು, ಸಂದರ್ಶಕರು ಮತ್ತು ಬೆಂಗಳೂರಿನ ಜನರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹಬ್ಬದ ತಾಣವಾಗಿ ರೂಪುಗೊಳ್ಳಲಿದೆ.

ಈ ದಸರಾ ಹಬ್ಬದ ಪ್ರಯುಕ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರುನಲ್ಲಿ ಅನುಭವಿಸಬಹುದಾದ 5 ವಿಶೇಷ ಆಕರ್ಷಣೆಗಳು ಇಲ್ಲಿವೆ.

ಕರ್ನಾಟಕದ ದಸರಾ ಗೊಂಬೆಗಳ ವೈಭವ ಕಣ್ತುಂಬಿಕೊಳ್ಳಿ

ಕರ್ನಾಟಕದ ಸಾಂಪ್ರದಾಯಿಕ ಗೊಂಬೆ ಪ್ರದರ್ಶನವಾದ ದಸರಾ ಗೊಂಬೆ ಸಂಪ್ರದಾಯವನ್ನು ಟರ್ಮಿನಲ್ 1 ಮತ್ತು ಟರ್ಮಿನಲ್ 2ರಲ್ಲಿ ವಿಶೇಷವಾಗಿ ಗೊಂಬೆ ಪ್ರದರ್ಶನಗಳನ್ನು ಇಡಲಾಗಿದೆ.

ಟರ್ಮಿನಲ್ 2ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಖ್ಯಾತ ಗೊಂಬೆಯಾಟ ಕಲಾವಿದೆ ಅನುಪಮಾ ಹೊಸಕೆರೆ ಅವರ ವಿಶೇಷ ಪ್ರದರ್ಶನವು ಈ ಸಂಪ್ರದಾಯಕ್ಕೆ ಜೀವ ತುಂಬಲಿದೆ. ದಸರಾ ಗೊಂಬೆ ಪದ್ಧತಿಯ ಹಿಂದೆ ಇರುವ ಕಥೆಗಳು, ಪಾತ್ರಗಳು ಮತ್ತು ಕರಕುಶಲ ಕೌಶಲ್ಯವನ್ನು ಪ್ರಯಾಣಿಕರು ಹತ್ತಿರದಿಂದ ಅರಿಯಲು ಇದು ಅವಕಾಶ ನೀಡಲಿದೆ.

ಈ ದಸರಾ ಗೊಂಬೆ ಅನುಭವವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಕರ್ನಾಟಕದ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಸಂಭ್ರಮಕ್ಕೆ ಮತ್ತೊಂದು ವಿಶೇಷ ಆಯಾಮ ನೀಡುತ್ತಿದ್ದು, ಸಾಂಪ್ರದಾಯಿಕ ಸಾಂಸ್ಕೃತಿಕ ಅನುಭವವನ್ನು ಪ್ರಯಾಣದ ಭಾಗವನ್ನಾಗಿ ಮಾಡುತ್ತಿದೆ.

ಸ್ಥಳ: ಟರ್ಮಿನಲ್ 1 ಮತ್ತು ಟರ್ಮಿನಲ್ 2

ದಿನಾಂಕ: ಅಕ್ಟೋಬರ್ 12ರಿಂದ 21ರವರೆಗೆ

ಸಮಯ: ದಿನವಿಡೀ.

Kempegowda Airport

ಕರ್ನಾಟಕದ ಕರಕುಶಲ ಪರಂಪರೆಯನ್ನು ನೇರ ಅನುಭವಿಸಿ

ಈ ದಸರಾ, ಪ್ರಯಾಣಿಕರು ಕರ್ನಾಟಕದ ಕರಕುಶಲ ಪರಂಪರೆಯನ್ನು ಕೇವಲ ನೋಡುವುದಷ್ಟೇ ಅಲ್ಲದೇ ಅದನ್ನು ಸ್ವತಃ ಅನುಭವಿಸುವ ಅವಕಾಶವನ್ನೂ ಪಡೆಯಲಿದ್ದಾರೆ. ಟರ್ಮಿನಲ್ 1 ಮತ್ತು ಟರ್ಮಿನಲ್ 2ರಲ್ಲಿ ವಿಶೇಷ ಸಂವಹನಾತ್ಮಕ ವಲಯಗಳನ್ನು ರೂಪಿಸಲಾಗಿದ್ದು, ಇಲ್ಲಿ ಪ್ರಯಾಣಿಕರು ಚನ್ನಪಟ್ಟಣದ ಗೊಂಬೆಗಳು ಮತ್ತು ಟೆರಾಕೋಟಾ ಮೂರ್ತಿಗಳಿಗೆ ಬಣ್ಣ ಹಚ್ಚುವ ಸಾಂಪ್ರದಾಯಿಕ ವಿಧಾನವನ್ನು ಕಲಿಯಬಹುದು. ಇದರ ಮೂಲಕ ರಾಜ್ಯದ ಎರಡು ವಿಶಿಷ್ಟ ಕರಕುಶಲ ಪರಂಪರೆಗಳನ್ನು ಹತ್ತಿರದಿಂದ ಅರಿಯುವ ಅವಕಾಶ ಸಿಗಲಿದೆ.

ಈ ಅನುಭವವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ವಿಶಾಲ ಕಲೆ ಮತ್ತು ಸಂಸ್ಕೃತಿ ಕಾರ್ಯಕ್ರಮದ ಭಾಗವಾಗಿದೆ. ಜತೆಗೆ, ಪ್ರಯಾಣಿಕರು ಚೌಕಾಬಾರ, ಪಗಡೆ, ಸಾಲು ಆಟ, ಅಳಗುಳಿಮನೆ, ಆಡು ಹುಲಿ/ಹಸು ಚಿರತೆಯಂತಹ ಕರ್ನಾಟಕದ ಸಾಂಪ್ರದಾಯಿಕ ಬೋರ್ಡ್ ಆಟಗಳನ್ನು ಆಡಬಹುದಾಗಿದೆ. ಇವು ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನೋಟವನ್ನು ನೀಡಲಿವೆ.

ಈ ಅನುಭವವು ಮೈಸೂರು ಮಹಾರಾಜರು ರೂಪಿಸಿದ ಬೋರ್ಡ್ ಆಟಗಳಿಂದ ಪ್ರೇರಿತವಾದ ಯಯಾತಿ ಗೋಡ್ಬೋಲೆ ಅವರ 12 ನೆಲದ ಕಲಾ ವಿನ್ಯಾಸಗಳಿಗೆ ಸಲ್ಲಿಸುವ ಗೌರವವೂ ಆಗಿದೆ.

ಸ್ಥಳ: ಟರ್ಮಿನಲ್ 1 ಮತ್ತು ಟರ್ಮಿನಲ್ 2 – ಭದ್ರತಾ ಪರಿಶೀಲನೆ ನಂತರದ ಪ್ರದೇಶ / ಬೋರ್ಡಿಂಗ್ ಕಡೆಗೆ

ದಿನಾಂಕ: ಅಕ್ಟೋಬರ್12ರಿಂದ17ರವರೆಗೆ

ಸಮಯ: ಬೆಳಿಗ್ಗೆ 10 ಗಂಟೆಯಿಂದ.

ಕರ್ನಾಟಕದ ಜನಪದ ಮತ್ತು ಶಾಸ್ತ್ರೀಯ ಕಲೆಯ ಲಯವನ್ನು ಅನುಭವಿಸಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಕರ್ನಾಟಕದ ಶ್ರೀಮಂತ ಕಲೆಗಳ ಪ್ರದರ್ಶನ ಕೇಂದ್ರಬಿಂದುವಾಗಿವೆ. ಆರು ದಿನಗಳ ಕಾಲ ಕರ್ನಾಟಕ ಸಂಗೀತ, ಶಾಸ್ತ್ರೀಯ ನೃತ್ಯ, ಗೊಂಬೆಯಾಟ, ಭರತನಾಟ್ಯ ಮತ್ತು ಯಕ್ಷಗಾನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಈ ಕಲಾ ಸರಣಿಯಲ್ಲಿ ಕರ್ನಾಟಕ ಸಂಗೀತ ಗಾಯನ ಕಚೇರಿ, ಸಂಪೂರ್ಣ ಮಹಿಳಾ ವಾದ್ಯವೃಂದ, ಒಡೆಯರ್ ವೈಭವ, ಒಂಬತ್ತನೇ ತಲೆಮಾರಿನ ಪ್ರಸಿದ್ಧ ಗೊಂಬೆಯಾಟ ಕಲಾವಿದ ಗುಂಡುರಾಜು ಮತ್ತು ತಂಡದ ತೊಗಲು ಗೊಂಬೆಯಾಟ, ಶಾಸ್ತ್ರೀಯ ವೈಯಲಿನ್, ಮಂಡೋಲಿನ್ ಮತ್ತು ವೀಣಾ ವಾದನ, ಭರತನಾಟ್ಯ ಹಾಗೂ ಸಂಪೂರ್ಣ ಮಹಿಳಾ ಕಲಾವಿದರ ಯಕ್ಷಗಾನ ಪ್ರದರ್ಶನ ಸೇರಿವೆ. ಈ ಕಾರ್ಯಕ್ರಮಗಳ ಮೂಲಕ ಪ್ರಯಾಣಿಕರು ಕರ್ನಾಟಕದ ಸಂಗೀತ, ನೃತ್ಯ ಮತ್ತು ಜನಪದ ಕಲಾ ಪರಂಪರೆಯ ವೈಭವವನ್ನು ವಿಮಾನ ನಿಲ್ದಾಣದಲ್ಲೇ ಅನುಭವಿಸಬಹುದು.

ಸ್ಥಳ: ಟಿ2 ಫೋರ್ಟ್ಕೋರ್ಟ್

ದಿನಾಂಕ: ಅಕ್ಟೋಬರ್ 12 ರಿಂದ 17ರವರೆಗೆ

ಸಮಯ: ಸಂಜೆ 6 ರಿಂದ 8 ಗಂಟೆವರೆಗೆ.

ಪ್ರಯಾಣಿಕರು ಅಕ್ಟೋಬರ್ 12 ಮತ್ತು 13ರ ಬೆಳಗ್ಗೆ ಟರ್ಮಿನಲ್ 2ರ ಕರ್ಬ್‌ಸೈಡ್ ಪ್ರದೇಶದಲ್ಲಿ ನೇರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಇದರಿಂದ ಪ್ರಯಾಣಿಕರು ಟರ್ಮಿನಲ್‌ಗೆ ಪ್ರವೇಶಿಸುವ ಮೊದಲುವೇ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅನುಭವ ಪಡೆಯಬಹುದು.

ಹಬ್ಬದ ಸಂಭ್ರಮದಲ್ಲಿ ವಿಶೇಷ ಫೋಟೋ ಕ್ಷಣಗಳನ್ನು ಸೆರೆಹಿಡಿಯಿರಿ

ಪ್ರಯಾಣದ ವಿವಿಧ ಹಂತಗಳಲ್ಲಿ ಮೈಸೂರು ಶೈಲಿಯಿಂದ ಪ್ರೇರಿತ ರಾಜಛತ್ರಿಗಳು, ಕರ್ನಾಟಕದ ವೈಶಿಷ್ಟ್ಯವನ್ನು ಪ್ರತಿಬಿಂಬಿಸುವ ಅಲಂಕಾರಿಕ ಅಂಶಗಳು ಪ್ರಯಾಣಿಕರನ್ನು ಆಕರ್ಷಿಸಲಿವೆ. ಇವು ಫೋಟೋ ತೆಗೆದುಕೊಳ್ಳಲು ಸೂಕ್ತವಾದ ಹಲವು ಸುಂದರ ಕ್ಷಣಗಳನ್ನು ಸೃಷ್ಟಿಸಲಿವೆ. ಡ್ಯೂಟಿ ಫ್ರೀ ಪ್ರದೇಶದಲ್ಲಿ ಸಾಂಪ್ರದಾಯಿಕ ವೇಷಭೂಷಣದಲ್ಲಿರುವ ಆನೆಯ ಪ್ರತಿರೂಪ ಮತ್ತೊಂದು ವಿಶೇಷ ಆಕರ್ಷಣೆಯಾಗಿದ್ದು, ಕರ್ನಾಟಕದ ಸಾಂಸ್ಕೃತಿಕ ವೈಶಿಷ್ಟ್ಯಕ್ಕೆ ಮತ್ತಷ್ಟು ಮೆರುಗು ನೀಡಲಿದೆ.

ಈ ಹಬ್ಬದ ಅಲಂಕಾರಿಕ ಸ್ಥಾಪನೆಗಳು ಪ್ರಯಾಣಿಕರಿಗೆ ಕ್ಷಣಕಾಲ ನಿಲ್ಲಲು, ಹೊಸದನ್ನು ಕಂಡುಕೊಳ್ಳಲು ಮತ್ತು ದಸರಾ ಸಂಭ್ರಮವನ್ನು ನೆನಪಿನ ಚಿತ್ರಗಳಾಗಿ ಸೆರೆಹಿಡಿಯಲು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತವೆ.

ಸ್ಥಳ: ಟಿ1 ಮತ್ತು ಟಿ2, ಡ್ಯೂಟಿ ಫ್ರೀ ಸ್ಥಳಗಳಲ್ಲಿ

ಯಾವಾಗ: ಅಕ್ಟೋಬರ್ 12 ರಿಂದ 17ರವರೆಗೆ.

Udupi Uchila Dasara 2026: ಉಡುಪಿ ಉಚ್ಚಿಲ ದಸರಾ-2026: ಅ.11ರಿಂದ 21ರವರೆಗೆ ವೈಭವದ ಸಂಭ್ರಮ

ಕರ್ನಾಟಕ ಹಬ್ಬದ ವಿಶೇಷ ಸ್ಮರಣಿಕೆಯನ್ನು ಆಯ್ಕೆ ಮಾಡಿಕೊಳ್ಳಿ

ಪ್ರಯಾಣ ಮುಗಿದರೂ ಈ ಅನುಭವ ಅಲ್ಲಿಗೇ ಮುಗಿಯಬೇಕೆಂದಿಲ್ಲ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿನ ಕಲಾ ಲೋಕದಲ್ಲಿ ಪ್ರಯಾಣಿಕರು ಕರುನಾಡಿನ ಸಂಸ್ಕೃತಿಯಿಂದ ಪ್ರೇರಿತಗೊಂಡ ಉತ್ಪನ್ನಗಳು ಮತ್ತು ಸ್ಮರಣಿಕೆಗಳನ್ನು ಕಾಣಬಹುದು. ಇದರ ಮೂಲಕ ನಗರದ ನೆನಪಿನ ಒಂದು ತುಣುಕನ್ನು ತಮ್ಮೊಂದಿಗೆ ಕೊಂಡೊಯ್ಯುವ ಅವಕಾಶ ಸಿಗುತ್ತದೆ.

ಇದು ವಿಮಾನ ನಿಲ್ದಾಣದ ಅನುಭವಕ್ಕೆ ಮತ್ತೊಂದು ವಿಶೇಷ ಆಯಾಮ ನೀಡುತ್ತಿದ್ದು, ಬೆಂಗಳೂರು ನಗರವನ್ನು ಅರಿಯುವುದರಿಂದ ಹಿಡಿದು ಅದರ ನೆನಪಿನ ಒಂದು ಭಾಗವನ್ನು ತಮ್ಮೊಂದಿಗೆ ಕೊಂಡೊಯ್ಯುವವರೆಗಿನ ಪ್ರಯಾಣವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸುತ್ತದೆ.

ಸ್ಥಳ: ಕಲಾಲೋಕ, ಟಿ2 ದೇಶೀಯ ನಿರ್ಗಮನ ವಿಭಾಗ, ಬಿಎಲ್‌ಆರ್ ವಿಮಾನ ನಿಲ್ದಾಣ

ಯಾವಾಗ: ಅಕ್ಟೋಬರ್ ತಿಂಗಳಾದ್ಯಂತ.