Celebrity Saree Fashion: ಹಿರಿಯ ನಟ ಶ್ರೀನಾಥ್ ಪತ್ನಿ ಗೀತಾ ಸೀರೆ ಪ್ರೇಮ
Celebrity Saree Fashion: ಹಿರಿಯ ನಟ ಶ್ರೀನಾಥ್ ಅವರ ಪತ್ನಿ ಗೀತಾ ಅವರಿಗೆ ಮೊದಲಿನಿಂದಲೂ ಸೀರೆಗಳೆಂದರೆ ಬಲು ಪ್ರೀತಿ. ಅವರ ಕಲೆಕ್ಷನ್‌ನಲ್ಲಿ ವೈವಿಧ್ಯಮಯ ಸೀರೆಗಳಿವೆ. ಈ ಬಗ್ಗೆ ವಿಶ್ವವಾಣಿ ನ್ಯೂಸ್‌ನೊಂದಿಗೆ ನಡೆಸಿದ ಸಂದರ್ಶನದಲ್ಲಿ ಅವರು ಸೀರೆ ಪ್ರೇಮಿಗಳಿಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.
ಸಂದರ್ಶನ: ಶೀಲಾ ಸಿ. ಶೆಟ್ಟಿ
ಕನ್ನಡ ಚಲನಚಿತ್ರ ಹಿರಿಯ ನಟ ಶ್ರೀನಾಥ್ (Srinath) ಅವರ ಪತ್ನಿ ಗೀತಾ (Celebrity Saree Fashion) ಅವರಿಗೆ ಮೊದಲಿನಿಂದಲೂ ಸೀರೆಗಳೆಂದರೇ ಬಲು ಪ್ರೀತಿಯಂತೆ. ಚಿಕ್ಕ ವಯಸ್ಸಿನಿಂದಲೂ ಸೀರೆ ಉಡುತ್ತಿರುವ ಅವರ ಬಳಿ ಸರಿ ಸುಮಾರು 800 ಸೀರೆಗಳಿವೆ. ಒಂದೊಂದು ಸೀರೆಯು ಒಂದೊಂದು ಬಗೆಯದ್ದಾಗಿದೆ. ತಮ್ಮ ಸೀರೆ ಕಲೆಕ್ಷನ್, ಸೀರೆ ಲವ್ ಹಾಗೂ ಸೀರೆ ಸಂರಕ್ಷಣೆ ಬಗ್ಗೆ ಗೀತಾ ಶ್ರೀನಾಥ್ (Geetha Srinath) ಅವರು ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.
ವಿಶ್ವವಾಣಿ ನ್ಯೂಸ್: ಇಷ್ಟೊಂದು ವೈವಿಧ್ಯಮಯ ಸೀರೆಗಳ ಕಲೆಕ್ಷನ್ ನಿಮ್ಮ ಬಳಿ ಇದೆಯಲ್ಲ! ಹೇಗೆ?
ಗೀತಾ ಶ್ರೀನಾಥ್: ನಮ್ಮಮ್ಮ ಸೀರೆ ಮಾರಾಟ ಮಾಡುವ ಬಿಸ್‌ನೆಸ್ ಮಾಡುತ್ತಿದ್ದರು. ಅವರ ಬಳಿ ಸೀರೆಗಳನ್ನು ಕೊಳ್ಳಲು ಮಹಿಳೆಯರು ಬರುತ್ತಿದ್ದರು. ಆಗ ಅವರಿಗೆಲ್ಲಾ ನಾನೇ ಮಾಡೆಲ್‌ನಂತೆ ತೋರಿಸುತ್ತಾ ವಿವರಿಸುತ್ತಿದ್ದೆ. ಆಗಿನಿಂದ ನನ್ನ ಬಳಿ ಸೇರಿದ ಸೀರೆಗಳ ಸಂಖ್ಯೆ ಇದೀಗ 800 ದಾಟಿದೆ.
ವಿಶ್ವವಾಣಿ ನ್ಯೂಸ್: ಕೋವಿಡ್ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮನೆಯಲ್ಲೇ ಕ್ಯಾಟ್ ವಾಕ್ ಮಾಡುತ್ತಾ ಸೀರೆ ಬಗ್ಗೆ ವಿವರಿಸುತ್ತಿದ್ದೀರಲ್ಲ? ಕಾರಣವೇನು?
ಗೀತಾ ಶ್ರೀನಾಥ್: ಹೌದು. ಮನೆಯಲ್ಲೆ ಕ್ಯಾಟ್ ವಾಕ್ ಮಾಡುತ್ತಾ, ನನ್ನ ಬಳಿಯಿದ್ದ ಒಂದೊಂದು ಸೀರೆಯ ಬಗ್ಗೆಯೂ ವಿವರಿಸುತ್ತಿದ್ದೆ. ಇದು ಸಾಕಷ್ಟು ಮಹಿಳೆಯರಿಗೆ ಸಹಕಾರಿಯಾಯಿತು. ನಿಮಗೆ ಗೊತ್ತೆ? ಪತಿ ಶ್ರೀನಾಥ್ ಅವರೇ ಈ ವಿಡಿಯೊ ಮಾಡುತ್ತಿದ್ದರು.
ವಿಶ್ವವಾಣಿ ನ್ಯೂಸ್: ನಿಮ್ಮ ಫೇವರೇಟ್ ಸೀರೆಗಳ ಲಿಸ್ಟ್‌ಗಳಲ್ಲಿ ಏನೇನಿದೆ?
ಗೀತಾ ಶ್ರೀನಾಥ್: ನಮ್ಮಮ್ಮ ಸೀಮಂತಕ್ಕೆ ನೀಡಿದ ಸೀರೆ, ನಟ, ಪತಿ ಶ್ರೀನಾಥ್ ನೀಡಿದ ಹಾಫ್ ವೈಟ್ ಸೀರೆ, ರೆಡ್ ಬಾಟಲ್ ಗ್ರೀನ್ ಕಾಂಬಿನೇಷನ್‌ನ ಸೀರೆ ಇಂದಿಗೂ ನನ್ನ ಫೇವರೇಟ್ ಲಿಸ್ಟ್‌ನಲ್ಲಿವೆ.
ವಿಶ್ವವಾಣಿ ನ್ಯೂಸ್: ನಿಮ್ಮ ಯೂನಿಕ್ ಸೀರೆ ಸ್ಟೈಲಿಂಗ್ ಏನು?
ಗೀತಾ ಶ್ರೀನಾಥ್: ಸದಾ ಸಿಂಗಲ್ ಪಲ್ಲು ಹಾಕುತ್ತೇನೆ.
ವಿಶ್ವವಾಣಿ ನ್ಯೂಸ್: ಸೀರೆ ಪ್ರಿಯರಿಗೆ ನೀವು ನೀಡುವ ಸಲಹೆಗಳೇನು?
ಗೀತಾ ಶ್ರೀನಾಥ್:
* ರೇಷ್ಮೆ ಸೀರೆಗಳಿಗೆ ಸೇಮ್ ಬ್ಲೌಸ್ ಧರಿಸುವುದಕ್ಕಿಂತ ಮಿಕ್ಸ್ ಮ್ಯಾಚ್ ಮಾಡಿದಲ್ಲಿ ಡಿಫರೆಂಟ್ ಆಗಿ ಕಾಣಿಸುತ್ತದೆ.
* ಸೀರೆಗಳನ್ನು ನಿಮ್ಮ ಸ್ಕಿನ್ ಟೋನ್‌ಗೆ ತಕ್ಕಂತೆ ಆಯ್ಕೆ ಮಾಡಿ.
* ಸೀರೆ ಉಟ್ಟಾಗ ಕ್ಯಾರಿ ಸರಿಯಾಗಿ ಮಾಡುವುದು ಮುಖ್ಯ.
* ಹಳೆಯ ಸೀರೆಗಳನ್ನು ಆಕರ್ಷಕವಾಗಿ ಡ್ರೇಪ್ ಮಾಡುವುದರಿಂದ ಅಂದವಾಗಿ ಕಾಣಿಸಬಹುದು.
* ಗುಣಮಟ್ಟದ ಸೀರೆಗಳು ಬಹುಕಾಲ ಬಾಳಿಕೆ ಬರುತ್ತವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)