ಬೆಂಗಳೂರು: ಬರಗಾಲದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ಸಿಕ್ಕಿದೆ. ಅನ್ನದಾತರ ಕಷ್ಟಕ್ಕೆ ಸ್ಪಂದಿಸಲು ಈ ಮೊದಲು ಸರ್ಕಾರ 2500 ರೂಪಾಯಿ ಪರಿಹಾರ ಘೋಷಿಸಿತ್ತು. ಇದೀಗ 1 ಎಕರೆಗೆ 5 ಸಾವಿರ ಪರಿಹಾರ (Karnataka Drought) ನೀಡುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಘೋಷಣೆ ಮಾಡಿದ್ದಾರೆ. ಅಲ್ಲದೆ ಸರ್ಕಾರದಿಂದ ಪರಿಹಾರದ ಹಣ ಬಿಡುಗಡೆ ಮಾಡಿದ್ದು, ನೇರವಾಗಿ ರೈತರ ಖಾತೆಗೆ ಹಣ ಜಮಾ ಆಗಲಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬರ ಪರಿಹಾರದ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ. ನಮ್ಮ ಇಷ್ಟು ವರ್ಷದ ಅನುಭವದಲ್ಲಿ, ಇಷ್ಟು ಬರಗಾಲ ಯಾವತ್ತೂ ಕಂಡಿರಲಿಲ್ಲ. 57 ಲಕ್ಷ ಹೆಕ್ಟೇರ್ಗಳಲ್ಲಿ ಬರ ಪರಿಣಾಮದಿಂದ ರೈತರು ಕಂಗೆಟ್ಟಿದ್ದಾರೆ. 226 ತಾಲೂಕುಗಳಲ್ಲಿ ಬರ ಇದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಪರಿಹಾರ ಘೋಷಣೆ ಆಗಿದೆ. ಈ ಹಿಂದೆ 2,500 ರೂ. ಇದ್ದ ಬರ ಪರಿಹಾರದ ಮೊತ್ತವನ್ನು 5,000 ರೂ.ಗೆ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
ಈಗಾಗಲೇ ನಮ್ಮ ಮನವಿ ಮೇರೆಗೆ ಕೇಂದ್ರ ತಂಡ ಬಂದು ಪರಿಶೀಲನೆ ಮಾಡಿ ಹೋಗಿದೆ. ಈ ಬಗ್ಗೆ ಚರ್ಚೆಗೆ ಎರಡು ದಿನ ವಿಶೇಷವಾಗಿ ಅಧಿವೇಶನ ನಡೆಸಿದ್ದೆವು. ರಾಜ್ಯದಲ್ಲಿ ಬರಗಾಲದಿಂದ 62 ಸಾವಿರ ಕೋಟಿ ನಷ್ಟ ಆಗಿದೆ. 22,400 ಕೋಟಿ ಕೊಡಬೇಕು ಎಂದು ಕೇಂದ್ರಕ್ಕೂ ಮನವಿ ಮಾಡಿದ್ದೇವೆ. ಜತೆಗೆ ಸರ್ವ ಪಕ್ಷ ನಿಯೋಗದ ಮೂಲಕ ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇವೆ. ರಾಜ್ಯ ಸರ್ಕಾರ ಕೂಡ 2500 ರೂ. ಘೋಷಣೆ ಮಾಡಿತ್ತು. ಇದೀಗ 1 ಎಕರೆಗೆ ರೈತರಿಗೆ 5 ಸಾವಿರ ಬರ ಪರಿಹಾರ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.
ನಾವು 2500 ರೂಪಾಯಿ ಬರ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ಸರ್ಕಾರದಿಂದ 1250 ಕೋಟಿ ಹಣ ಹಾಕುತ್ತಿದ್ದೇವೆ. ಡಿಬಿಟಿ ಮೂಲಕ ರೈತರ ಅಕೌಂಟ್ಗೆ ನೇರವಾಗಿ ಪರಿಹಾರ ತಲುಪಲಿದೆ. ದೀಪಾವಳಿ ಬರುತ್ತಿದೆ, ಮುಂದಿನ ದಿನಗಳಲ್ಲಿ ಇನ್ನೂ 2500 ಕೊಡುತ್ತೇವೆ. ಒಟ್ಟಾರೆ ಎಕರೆಗೆ 5000 ಕೊಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪ್ರತಿ ಟನ್ ಕಬ್ಬಿಗೆ 3,600 ದರ ರೂ. ನಿಗದಿ; ಸಚಿವ ಸತೀಶ್ ಜಾರಕಿಹೊಳಿ ಘೋಷಣೆ
ಪ್ರತಿ ರೈತನಿಗೆ ಗರಿಷ್ಠ 2 ಎಕರೆಗಷ್ಟೇ ಹಣ ನೀಡಲಾಗುತ್ತದೆ. ಈಗ 2500 ಕೊಡುತ್ತೇವೆ. ಮುಂದಿನ ದಿನಗಳಲ್ಲಿ ಎರಡನೇ ಕಂತಿನ ಹಣವನ್ನು ದೀಪಾವಳಿ ಬಳಿಕ ಹಾಕುತ್ತೇವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 1 ಎಕರೆ ಇದ್ದರೆ 5 ಸಾವಿರ ರೂ. ಹಾಗೂ 2 ಎಕರೆ ಇದ್ದರೆ 10 ಸಾವಿರ ರೂ. ನೀಡುವುದಾಗಿ ಸಿಎಂ ತಿಳಿಸಿದ್ದಾರೆ