ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rajyotsava Award 2026: 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್‌

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿರುವ ಸಾಧಕರಿಗೆ ಸರ್ಕಾರ ಹಾಗೂ ರಾಜ್ಯದ ಜನರ ಪರವಾಗಿ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 71 ಸಾಧಕರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು (Rajyotsava Award 2026) ಸಿಎಂ ಡಿ.ಕೆ.ಶಿವಕುಮಾರ್‌ ಅವರು ಭಾನುವಾರ ಪ್ರದಾನ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಪ್ರತಿ ವರ್ಷವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಸಂಪ್ರದಾಯವನ್ನು ಸರ್ಕಾರವು ಅನುಸರಿಸಿಕೊಂಡು ಬಂದಿರುತ್ತದೆ. ಅದರಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 71 ಸಾಧಕರಿಗೆ 2026ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ನಗದನ್ನು ಒಳಗೊಂಡಿದೆ.



ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಜಾನಪದ ಕ್ಷೇತ್ರ

ದಾವಲಸಾಬ ಅತ್ತಾರ (ಕೊಪ್ಪಳ)
ಗೌರಮ್ಮ (ಚಾಮರಾಜನಗರ)
ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ)
ಎ.ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ)
ಈರಣ್ಣ ರುದ್ರಾಕ್ಷಿ (ರಾಯಚೂರು)
ಶಿವಲಿಂಗಪ್ಪ ಎಂ. (ಕೊಪ್ಪಳ)
ಸುರೇಶ ರಾಮಚಂದ್ರ ಜೋಶಿ (ವಿಜಯಪುರ)

ಸಂಗೀತ ಕ್ಷೇತ್ರ

ಡಾ. ಸಿ.ಎ. ಶ್ರೀಧರ್ (ಮೈಸೂರು)
ಡಾ. ಎ. ನಾರಾಯಣ ಸ್ವಾಮಿ (ಹಾಸನ)
ವಿ. ಮುರಳಿ (ಬೆಂಗಳೂರು ಗ್ರಾಮಾಂತರ)

ನೃತ್ಯ ಕ್ಷೇತ್ರ

ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ)

ಚಲನಚಿತ್ರ / ಕಿರುತೆರೆ

ಕೆ. ವೆಂಕಟರಮಣ (ಬಾಬಾಜಿ) (ಧಾರವಾಡ)
ಅಶೋಕ್ - ಹಿರಿಯ ನಟ (ಬೆಂಗಳೂರು ಗ್ರಾಮಾಂತರ)
ಕೆ.ಎಸ್. ರವೀಂದ್ರನಾಥ್ (ಬೆಂಗಳೂರು ನಗರ)

ಯಕ್ಷಗಾನ

ಗೋಪಾಲ ಗಾಣಿಗ (ಉಡುಪಿ)

ಬಯಲಾಟ

ಹುಲಿಗೆಮ್ಮ (ಬಳ್ಳಾರಿ)

ರಂಗಭೂಮಿ ಕ್ಷೇತ್ರ

ಡಿ. ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ (ಬೆಂಗಳೂರು ಗ್ರಾಮಾಂತರ)
ಕೆ. ಜಯಲಕ್ಷ್ಮಿ ಪಾಟೀಲ್ (ಧಾರವಾಡ)
ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ)
ಕೆ.ಆರ್. ಸುಮತಿ (ಮೈಸೂರು)
ಹೆಚ್.ವಿ. ಪುಟ್ಟವೀರಪ್ಪ (ಬೆಂಗಳೂರು ದಕ್ಷಿಣ)
ಹೊನ್ನ ನಾಯಕ (ಮೈಸೂರು)

ಶಿಲ್ಪಕಲೆ

ಜಿ.ಬಿ. ಹಂಸಾನಂದ ಆಚಾರ್ಯ (ವಿಜಯನಗರ)
ಕಾಡಪ್ಪ ಪರಶುರಾಮ ಗಾಡಿವಡ್ಡರ್ (ಬೆಳಗಾವಿ)

ಚಿತ್ರಕಲೆ

ಶ್ರೀ ಸಿ.ಬಿ. ಸೋಮಶೆಟ್ಟಿ (ಬೀದರ್)

ಕರಕುಶಲ

ಶಾಂತಾಬಾಯಿ (ಬೀದರ್)

ಕೃಷಿ ಕ್ಷೇತ್ರ

ಹೆಚ್.ಕೆ. ಶ್ರೀಕಂಠು (ಬೆಂಗಳೂರು ದಕ್ಷಿಣ)
ಬಿ.ಎ. ಚನ್ನಪ್ಪಗೌಡ (ಬೆಂಗಳೂರು)

ಪರಿಸರ ಕ್ಷೇತ್ರ

ಡಾ. ಸ್ವಾಮಿ ಆನಂದ್ ಆರ್. (ಮೈಸೂರು)

ವಿಜ್ಞಾನ ಮತ್ತು ತಂತ್ರಜ್ಞಾನ

ಪ್ರೊ. ರಾಜಾಸಾಬ್ ಎ.ಎಚ್. (ಕಲಬುರಗಿ)
ಡಾ. ರಾಜಶೇಖರ ಮೂರ್ತಿ (ಹೊರದೇಶ - ಕೆನಡಾ)

ಮಾಧ್ಯಮ ಕ್ಷೇತ್ರ

ಡಿ. ಉಮಾಪತಿ - ಹಿರಿಯ ಪತ್ರಕರ್ತರು (ಚಿತ್ರದುರ್ಗ)
ಎಂ.ಪಿ. ಸುಶೀಲ (ಬೆಂಗಳೂರು ನಗರ)

ಮಾಧ್ಯಮ / ಛಾಯಾಚಿತ್ರ

ವಿಶ್ವನಾಥ್ ಸುವರ್ಣ (ದಕ್ಷಿಣ ಕನ್ನಡ)

ಸಂಕೀರ್ಣ ಕ್ಷೇತ್ರ

ರುಕ್ಮಿಣಿ ಬಾಯಿ ನಾಗಪ್ಪ ವಾಪ್ಕರ್ (ಬಾಗಲಕೋಟೆ)
ಡಾ. ಡಿ.ಎಸ್. ಚೌಗಲೆ (ಬೆಳಗಾವಿ)
ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ (ಬೆಂಗಳೂರು)
ರವಿ ಪ್ರವೀಣ್ ನೊರೊನ್ಹಾ (ಬೆಂಗಳೂರು)
ಎಂ.ಆರ್. ಜೈಶಂಕರ್ (ಚಿಕ್ಕಮಗಳೂರು)
ಪ್ರಸಾದ್ ಬಿದ್ದಪ್ಪ - ಫ್ಯಾಷನ್ ತಜ್ಞ (ಕೊಡಗು)
ವಾಸಪ್ಪ ಯಲ್ಲಪ್ಪ ಕುಸುಗೂರ (ಹಾವೇರಿ)
ಜಿ.ಯು.ಭಟ್‌, ಹಿರಿಯ ಪತ್ರಕರ್ತ (ಉತ್ತರ ಕನ್ನಡ)

ಸಂಕೀರ್ಣ / ವಾಸ್ತುಶಾಸ್ತ್ರ

ಬಿ.ಪಿ. ಆರಾಧ್ಯ (ಬೆಂಗಳೂರು ದಕ್ಷಿಣ)

ಸಮಾಜ ಸೇವೆ

ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಶಿವಯೋಗಿ (ಗದಗ)
ಬಸವರಾಜು (ಮಂಡ್ಯ)
ಕಾಗೋಡು ತಿಮ್ಮಪ್ಪ - ಹಿರಿಯ ರಾಜಕೀಯ ಧುರೀಣ (ಶಿವಮೊಗ್ಗ)
ಡಾ. ಎಸ್.ಎಂ. ಎಲಿ (ದಾವಣಗೆರೆ)
ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ)
ಕೃಷ್ಣೇಗೌಡ ಬಿನ್ ವೆಂಕಟರಾಯಪ್ಪ (ಚಿಕ್ಕಬಳ್ಳಾಪುರ)
ಎ.ಸಿ. ಭಂಡಾರಿ - ಅಖಿಲ ಭಾರತ ತುಳು ಒಕ್ಕೂಟ (ದಕ್ಷಿಣ ಕನ್ನಡ)
ಗುರಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ)

ವೈದ್ಯಕೀಯ ಕ್ಷೇತ್ರ

ಡಾ. ವಿಜಯೇಂದ್ರ ಹೊನ್ನೂರಪ್ಪ (ಬೆಂಗಳೂರು)
ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ (ಬೆಳಗಾವಿ)

ಆಡಳಿತ ಕ್ಷೇತ್ರ

ತೆರೆಸಾ ಭಟ್ಟಾಚಾರ್ಯ - ಮಾಜಿ ಮುಖ್ಯ ಕಾರ್ಯದರ್ಶಿ (ಬೆಂಗಳೂರು ನಗರ)
ಡಾ. ಕೆ.ಎಸ್. ಸೋಮಶೇಖರ್ (ನವದೆಹಲಿ)

ಎಂಜಿನಿಯರಿಂಗ್ ಕ್ಷೇತ್ರ

ಡಾ. ಕೆ.ಎನ್. ವೆಂಕಟ್ ಕೃಷ್ಣಾರಾವ್ (ಚಿಕ್ಕಬಳ್ಳಾಪುರ)

ಸಾಹಿತ್ಯ ಕ್ಷೇತ್ರ

ಡಾ. ಇಂದಿರಾ ಹೆಗ್ಗಡೆ (ದಕ್ಷಿಣ ಕನ್ನಡ)
ವೀರಹನುಮಾನ್ (ರಾಯಚೂರು)
ಪ್ರೊ. ನಾರಾಯಣಘಟ್ಟ (ನಾಹೋಂ) (ತುಮಕೂರು)
ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ (ಚಿಕ್ಕಮಗಳೂರು)
ಡಾ. ಕರಿಗೌಡ ಬೀಚನಹಳ್ಳಿ (ತುಮಕೂರು)
ಡಾ. ಸಿದ್ಧರಾಮ ಹೊನ್ಕಲ್ (ಯಾದಗಿರಿ)

ಶಿಕ್ಷಣ ಕ್ಷೇತ್ರ

ಡಾ. ಫಾ|| ಜೋಸೆಫ್ ಸಿ.ಸಿ. - ಉಪಕುಲಪತಿಗಳು, ಕ್ರೈಸ್ಟ್ ವಿಶ್ವವಿದ್ಯಾಲಯ (ಬೆಂಗಳೂರು ನಗರ)
ಶಾಂತಪ್ಪ ಪಂ ದಶವಂತ (ವಿಜಯಪುರ)
ಸಂಗೀತಾ ಎನ್. ಕಟ್ಟೀಮನಿ (ಕಲಬುರಗಿ)
ಪ್ರೊ. ಎನ್.ಎಸ್. ರಂಗರಾಜು (ಮೈಸೂರು)

ನ್ಯಾಯಾಂಗ ಕ್ಷೇತ್ರ

ಬಿ.ವಿ. ಆಚಾರ್ಯ - ಹಿರಿಯ ನ್ಯಾಯವಾದಿಗಳು (ಉಡುಪಿ)

ಹೊರನಾಡು / ಹೊರದೇಶ

ರಮೇಶ್ ಆರ್. ಗೌಡ - ಮಾಜಿ ಅಧ್ಯಕ್ಷರು, ಅಕ್ಕ (ಅಮೆರಿಕ)

ಕ್ರೀಡಾ ಕ್ಷೇತ್ರ

ಶ್ರೀ ಎ.ವಿ. ರವಿ (ಜಿಮ್ ರವಿ) - ದೇಹದಾರ್ಢ್ಯ ಪಟು (ಕೋಲಾರ)
ಡಾ. ಎ.ಬಿ. ಸುಬ್ಬಯ್ಯ - ಹಾಕಿ ದಿಗ್ಗಜ (ಕೊಡಗು)
ಎಂ. ಗಿರೀಶ್ (ಬೆಂಗಳೂರು)