ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Girish Mattannavar: ಧರ್ಮಸ್ಥಳ ಸಾಮೂಹಿಕ ವಿವಾಹದ ಬಗ್ಗೆ ಅವಹೇಳನ; ಗಿರೀಶ್ ಮಟ್ಟಣ್ಣನವರ್‌ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

Dharmasthala Case: ಇತ್ತೀಚೆಗೆ ರೌಡಿಶೀಟರ್‌ನ ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿದ್ದ ಹಿನ್ನೆಲೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಗಿರೀಶ್‌ ಮಟ್ಟಣ್ಣನವರ್‌ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಮತ್ತೊಂದು ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತೆ ಕಾವೇರಿ ಕೇದಾರನಾಥ್ ಅವರ ನೇತೃತ್ವದಲ್ಲಿ ದೂರು ನೀಡಲಾಗಿದೆ.

ಗಿರೀಶ್ ಮಟ್ಟಣ್ಣನವರ್‌ಗೆ ಮತ್ತೊಂದು ಸಂಕಷ್ಟ; ಮಹಿಳಾ ಆಯೋಗಕ್ಕೆ ದೂರು

-

Prabhakara R Prabhakara R Aug 29, 2025 5:05 PM

ದಕ್ಷಿಣ ಕನ್ನಡ: ಸೌಜನ್ಯಾಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಧರ್ಮಸ್ಥಳದ ಸಾಮೂಹಿಕ ವಿವಾಹದ ಬಗ್ಗೆ ಗಿರೀಶ್‌ ಮಟ್ಟಣ್ಣನವರ್‌ (Girish Mattannavar) ನೀಡಿರುವ ಹೇಳಿಕೆಯಿಂದ ಹೆಣ್ಣು ಮಕ್ಕಳ ಗೌರವಕ್ಕೆ ಧಕ್ಕೆ ತಂದಿದೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.

ಗಿರೀಶ್ ಮಟ್ಟಣ್ಣನವರ್‌ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಕಾವೇರಿ ಕೇದಾರನಾಥ್ ಅವರ ನೇತೃತ್ವದಲ್ಲಿ ದೂರು ನೀಡಲಾಗಿದೆ. ಈ ಬಗ್ಗೆ ಕಾವೇರಿ ಕೇದಾರನಾಥ್ ಮಾತನಾಡಿ, ಧರ್ಮಸ್ಥಳದಲ್ಲಿ ಮದುವೆಯಾಗುವ ಹೆಣ್ಣು ಮಕ್ಕಳ ಬಗ್ಗೆ ಗಿರೀಶ್ ಮಟ್ಟಣ್ಣವರ್ ಹೀನವಾಗಿ ಮಾತನಾಡಿದ್ದಾರೆ. 'ಧರ್ಮಸ್ಥಳದಲ್ಲಿ ಲಕ್ಷಾಂತರ ಜೋಡಿಗಳು ವಿವಾಹವಾಗಿ ಸುಖಕರ ಜೀವನ ನಡೆಸುತ್ತಿದ್ದಾರೆ. ಬಡವರು ಮಾತ್ರವಲ್ಲ, ಅನೇಕ ಭಕ್ತರು ಹರಕೆ ಹೊತ್ತು ಇಲ್ಲಿ ಮದುವೆಯಾಗುತ್ತಾರೆ. ಆದರೆ, ಮಟ್ಟಣ್ಣನವರ್ ಈ ಮದುವೆಗಳ ಬಗ್ಗೆ ಮತ್ತು ಅಲ್ಲಿ ಮದುವೆಯಾದ ಮಹಿಳೆಯರ ಬಗ್ಗೆ ಹೀನವಾಗಿ ಮತ್ತು ಅವರ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಇಡೀ ಭಕ್ತ ಸಮೂಹಕ್ಕೆ ನೋವುಂಟು ಮಾಡಿದೆ' ಎಂದು ತಿಳಿಸಿದರು.

ಮಹಿಳಾ ಭಕ್ತರು ದೂರಿನೊಂದಿಗೆ, ಗಿರೀಶ್ ಮಟ್ಟೆಣ್ಣವರ್ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ವೀಡಿಯೊ ತುಣುಕನ್ನು ಕೂಡ ಮಹಿಳಾ ಆಯೋಗಕ್ಕೆ ಒದಗಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Dharmasthala: ಧರ್ಮಸ್ಥಳ ಸಂಚುಕೋರರಿಗೆ ಸೋಲು ಸನಾತನ ಧರ್ಮಕ್ಕೆ ಗೆಲುವು : ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಆಶಯ

ಇದಕ್ಕೂ ಮೊದಲು ರೌಡಿಶೀಟರ್‌ನ ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿದ್ದ ಹಿನ್ನೆಲೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮಟ್ಟಣ್ಣನವರ್‌ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಮಟ್ಟಣ್ಣನವರ್‌ಗೆ ಮತ್ತೊಂದು ದೂರು ದಾಖಲಾಗಿದೆ.