ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kerala techie Sharanya found: ಕೇರಳ ಮೂಲದ ಶರಣ್ಯ ಪತ್ತೆ: ಕೊಡಗಿನ ಮಲೆಕುಡಿಯ ಬುಡಕಟ್ಟು ಜನರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅಭಿನಂದನೆ

ಕೊಡಗಿನ ತಡಿಯಂಡಮೊಳ್ ಅರಣ್ಯದಲ್ಲಿ ಚಾರಣ ಮಾಡುವಾಗ ನಾಪತ್ತೆಯಾಗಿದ್ದ ಕೇರಳ ಮೂಲದ ಟೆಕ್ಕಿ ಶರಣ್ಯ ಅವರ ತಾಯಿಯ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಂದಿಸಿದ್ದು, ಯುವತಿ ಪತ್ತೆಗಾಗಿ ನಡೆಯುತ್ತಿದ್ದ ಕಾರ್ಯಾಚರಣೆ ತೀವ್ರಗೊಳಿಸುವಂತೆ ರಾಜ್ಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ನಂತರ ಶರಣ್ಯ ಅವರನ್ನು ಭಾನುವಾರ ಸಂಜೆ ಪತ್ತೆ ಮಾಡಲಾಗಿದೆ.

ಮಲೆಕುಡಿಯ ಬುಡಕಟ್ಟು ಜನರೊಂದಿಗೆ ಶರಣ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಶರಣ್ಯ ತಾಯಿ ಮನವಿ ಸಲ್ಲಿಕೆ.

ತಿರುವನಂತಪುರ, ಏ.06: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಯುವತಿ ಶರಣ್ಯ (Kerala techie Sharanya found) ಭಾನುವಾರ ಪತ್ತೆಯಾಗಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಅರಣ್ಯದಲ್ಲಿ ದಾರಿ ತಪ್ಪಿ ನಾಪತ್ತೆಯಾಗಿದ್ದ ಯುವತಿ ಪತ್ತೆಗಾಗಿ ಎಎನ್‌ಎಫ್, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಬುಡಕಟ್ಟು ಜನರ ತಂಡದಿಂದ ಹುಡುಕಾಟ ನಡೆಸಿ, ಯುವತಿಯನ್ನು ರಕ್ಷಣೆ ಮಾಡಲಾಗಿತ್ತು. ಇನ್ನು ಈ ಕಾರ್ಯಾಚರಣೆಯಲ್ಲಿ ಯುವತಿಯನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಲೆಕುಡಿಯ ಬುಡುಕಟ್ಟು ಜನರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ (DCM DK Shivakumar) ಅವರು ಡಿಸಿಎಂ ಅಭಿನಂದನೆ ಸಲ್ಲಿಸಿದ್ದಾರೆ.

ಶರಣ್ಯ ತಾಯಿ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಂದನೆ

_Kerala techie Sharanya

ಕೊಡಗಿನ ತಡಿಯಂಡಮೊಳ್ ಅರಣ್ಯದಲ್ಲಿ ಚಾರಣ ಮಾಡುವಾಗ ನಾಪತ್ತೆಯಾಗಿದ್ದ ಕೇರಳ ಮೂಲದ ಟೆಕ್ಕಿ ಶರಣ್ಯ ಅವರ ತಾಯಿಯ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಂದಿಸಿದ್ದು, ಈಕೆಯ ಪತ್ತೆಗಾಗಿ ನಡೆಯುತ್ತಿದ್ದ ಕಾರ್ಯಾಚರಣೆ ತೀವ್ರಗೊಳಿಸುವಂತೆ ರಾಜ್ಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ನಂತರ ಶರಣ್ಯ ಅವರನ್ನು ಭಾನುವಾರ ಸಂಜೆ ಪತ್ತೆ ಮಾಡಲಾಗಿದೆ.

ಸದ್ಯ ಕೇರಳ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ಡಿ.ಕೆ. ಶಿವಕುಮಾರ್ ಅವರನ್ನು ಶರಣ್ಯ ಅವರ ತಾಯಿ ಒರ್ಕಟ್ಟೇರಿಯಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರದ ವೇಳೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ತಮ್ಮ ಮಗಳ ನಾಪತ್ತೆ ವಿಚಾರವನ್ನು ತಿಳಿಸಿದ್ದರು. ವೇದಿಕೆಯಿಂದಲೇ ರಾಜ್ಯದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕಾರ್ಯಾಚರಣೆ ಮಾಹಿತಿ ಪಡೆದ ಶಿವಕುಮಾರ್ ಅವರು, ಕಾರ್ಯಾಚರಣೆ ತೀವ್ರಗೊಳಿಸುವಂತೆ ಸೂಚನೆ ನೀಡಿದ್ದರು.

ತಡಿಯಂಡಮೋಳ್‌ನಲ್ಲಿ ನಾಪತ್ತೆಯಾಗಿದ್ದ ಯುವತಿ ಪತ್ತೆ, ಡ್ರೋನ್‌ಗೂ ಸಿಗದಾಕೆ ಮಲೆಕುಡಿಯರಿಗೆ ಸಿಕ್ಕಿದಳು!

ತಿರುವನಂತಪುರದಲ್ಲಿ ಡಿಕೆಶಿ ಸುದ್ದಿಗೋಷ್ಠಿ

ಶರಣ್ಯ ಪತ್ತೆಯಾಗಿರುವ ವಿಚಾರವಾಗಿ ತಿರುವನಂತಪುರದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಮಾತನಾಡಿದ್ದು, “ಕಳೆದ ಎರಡು ದಿನಗಳಿಂದ ಕೇರಳಂನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ. ನೆನ್ನೆ ಮಧ್ಯಾಹ್ನ ಪ್ರಚಾರ ಮಾಡುವಾಗ ಕೊಡಗಿನ ಅರಣ್ಯದಲ್ಲಿ ಟ್ರೆಕಿಂಗ್‌ಗೆ ತೆರಳಿ ನಾಪತ್ತೆಯಾಗಿದ್ದ ಶರಣ್ಯ ಅವರ ತಾಯಿ ನನ್ನನ್ನು ಭೇಟಿ ಮಾಡಿ ಆಕೆಯ ಪತ್ತೆಗೆ ಮನವಿ ಸಲ್ಲಿಸಿದ್ದರು.

ನಾನು ತಕ್ಷಣವೇ ವೇದಿಕೆಯಲ್ಲೇ ನಮ್ಮ ರಾಜ್ಯದ ಅಧಿಕಾರಿಗಳು ಹಾಗೂ ಬುಡಕಟ್ಟು ನಾಯಕರನ್ನು ಸಂಪರ್ಕ ಮಾಡಿದೆ. ನೆನ್ನೆ ಬೆಳಗ್ಗೆ ಕೂಡ ಮಾಧ್ಯಮ ಸ್ನೇಹಿತರು ಈ ವಿಚಾರವಾಗಿ ನನಗೆ ಪ್ರಶ್ನೆ ಮಾಡಿದ್ದರು. ದೇವರ ನಾಡಿನಲ್ಲಿ ನಾನಿದ್ದು, ಅಯ್ಯಪ್ಪಸ್ವಾಮಿ ಹಾಗೂ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ನಮ್ಮ ಅರಣ್ಯ ಅಧಿಕಾರಿಗಳು, ಪೊಲೀಸರು ಹಾಗೂ ಬುಡಕಟ್ಟು ಜನರು ಸೇರಿ ಸುಮಾರು 170ಕ್ಕೂ ಜನರ ತಂಡ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿ, ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದ್ದ ಶರಣ್ಯ ಅವರನ್ನು ಪತ್ತೆ ಮಾಡಿದ್ದಾರೆ. ಒಂದು ದಿನ ಧಾರಾಕಾರ ಮಳೆಯ ನಡುವೆ ಊಟವಿಲ್ಲದೆ, ಕೇವಲ ನೀರು ಸೇವಿಸುತ್ತಾ ಕಾಲ ಕಳೆದಿದ್ದಾರೆ. ಕಾಡಿ‌ನಲ್ಲಿ ಸಿಲುಕಿದ್ದ ಈ ಹುಡುಗಿ ಬಹಳ ಧೈರ್ಯವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ನೆನ್ನೆ ಸಂಜೆಯೇ ಈಕೆಯ ಪತ್ತೆಯಾದ ಸುದ್ದಿ ಬಂದಿದ್ದು, ಈ ವಿಚಾರವನ್ನು ಬಹಳ ಸಂತೋಷದಿಂದ ಹಂಚಿಕೊಳ್ಳುತ್ತಿರುವೆ. ಈಕೆಯ ಪತ್ತೆಗೆ ಸಹಕರಿಸಿದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದ್ದಾರೆ.